Ad Widget .

ಭಾರತ ದೇಣಿಗೆ ನೀಡಿದ್ದಲ್ಲ, ಸಾಲ ಕೊಟ್ಟಿದ್ದು- ಶ್ರೀಲಂಕಾ ಹೇಳಿಕೆ

ಸಮಗ್ರ ನ್ಯೂಸ್: ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ನಮಗೆ ಭಾರತ ನೀಡಿದ ಹಣಕಾಸಿನ ನೆರವು ದತ್ತಿ ದೇಣಿಗೆಗಳಲ್ಲ’ ಎಂದು ಶ್ರೀಲಂಕಾದ ಸಂಸತ್ತಿಗೆ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರು ತಿಳಿಸಿದ್ದಾರೆ. ಅಲ್ಲದೆ, ಈ ಹಣಕಾಸಿನ ನೆರವಿನ ಸಾಲವನ್ನು ಮರುಪಾವತಿಸಲೇಬೇಕು ಎಂದು ಹೇಳಿದ್ದಾರೆ.

Ad Widget . Ad Widget .

ಭಾರತದಿಂದ ನಾವು ಸಾಲದ ರೂಪದಲ್ಲಿ ₹31 ಸಾವಿರ ಕೋಟಿ ನೆರವು ಪಡೆದಿದ್ದೇವೆ. ಅಲ್ಲದೆ, ಇನ್ನೂ ಹೆಚ್ಚಿನ ಹಣಕಾಸಿನ ನೆರವು ನೀಡುವಂತೆ ಭಾರತಕ್ಕೆ ಕೋರಿದ್ದೆವು. ಆದರೆ, ಇಂಥ ಸಂದರ್ಭದಲ್ಲಿ ಭಾರತವೊಂದೇ ನಿರಂತರವಾಗಿ ನಮ್ಮ ನೆರವಿಗೆ ನಿಲ್ಲಲು ಸಾಧ್ಯವಿಲ್ಲ. ನಮಗೆ ಹಣಕಾಸಿನ ನೆರವು ನೀಡಲು ಭಾರತಕ್ಕೂ ಒಂದು ಮಿತಿ ಇದೆ. ಜೊತೆಗೆ ಈ ಸಾಲಗಳನ್ನು ತೀರಿಸಲು ನಾವು ಸಹ ಯೋಜನೆ ಹಾಕಿಕೊಳ್ಳಲೇಬೇಕಿದೆ. ಯಾಕೆಂದರೆ, ಇದು ದತ್ತಿ ದೇಣಿಗೆಯ ನೆರವು ಅಲ್ಲ’ ಎಂದು ತಿಳಿಸಿದರು.

Ad Widget . Ad Widget .

Leave a Comment

Your email address will not be published. Required fields are marked *