Ad Widget .

ಸುಳ್ಯ: ನ.ಪಂ. ಅನುದಾನದಲ್ಲಿ ನಿರ್ಮಿಸಿದ ಶೌಚಾಲಯ ಕಟ್ಟಡ ಧ್ವಂಸ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಅಂಬೇಡ್ಕರ್ ರಕ್ಷಣಾ ವೇದಿಕೆ ಆಗ್ರಹ

ಸಮಗ್ರ ನ್ಯೂಸ್: ಸುಳ್ಯ ಕಸಬಾ ಗ್ರಾಮದ ಬಂಗ್ಲೆಗುಡ್ಡೆ ಆದಿಮೊಗೇರ್ಕಳ ದೈವಸ್ಥಾನದ ರೆಕಾರ್ಡ್ ಜಾಗದಲ್ಲಿ ನ.ಪಂ ನಿಂದ ನಿರ್ಮಿಸಿದ ಶೌಚಾಲಯವನ್ನು ದ್ವಂಸ ಗೊಳಿಸಿದವರ ಮೇಲೆ ಕ್ರಮ ಕೈಗೊಳ್ಳಲು ಅಂಬೇಡ್ಕರ್ ರಕ್ಷಣಾ ವೇದಿಕೆ ಆಗ್ರಹಿಸಿದೆ.

Ad Widget . Ad Widget .

ವೇದಿಕೆ ಜಿಲ್ಲಾಧ್ಯಕ್ಷ ಪಿ.ಸುಂದರ ಪಾಟಾಜೆ ‘ ನಗರಪಂಚಾಯಿತಿ ನವರು ದೇವಸ್ಥಾನಕ್ಕೆ ರೆಕಾರ್ಡ್ ಆಗಿ ಇದ್ದಂತ ಜಾಗದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಿದ್ದಾರೆ. ಸಾರ್ವಜನಿಕ ಶೌಚಾಲಯ ಸರಕಾರಿ ಜಾಗದಲ್ಲಿ ನಿರ್ಮಾಣ ಮಾಡಬೇಕು ಮತ್ತು ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ನಿರ್ಮಾಣ ಮಾಡಬೇಕು ಮತ್ತು ಸರಕಾರದಿಂದ ಶೌಚಾಲಯ ನಿರ್ಮಾಣಕ್ಕೆ ಬಂದ ಮೂರುವರೆ ಲಕ್ಷ ರೂಗಳ ಅನುದಾನವನ್ನು ಯಾರಿಗೂ ಉಪಯೋಗ ಬಾರದ ಸ್ಥಳದಲ್ಲಿ ನಿರ್ಮಿಸಿ ಇವತ್ತುಆ ಶೌಚಾಲಯ ಕಟ್ಟಡವನ್ನು ಧಂಸ ಮಾಡಿದ್ದಾರೆ ಇದರ ಬಗ್ಗೆ ನಗರಪಂಚಾಯಿತಿ ನವರು ಯಾವುದೇ ಕ್ರಮ ಕೈಗೊಂಡಿಲ್ಲ.

Ad Widget . Ad Widget .

ಸಾರ್ವಜನಿಕರಿಂದ ಸಂಗ್ರಹ ಮಾಡಿದ ತೆರಿಗೆ ಹಣವನ್ನು ಈ ರೀತಿಯಾಗಿ ದುರುಪಯೋಗ ಮಾಡಿದ್ದಾರೆ ಆದ ಕಾರಣ ನಗರ ಪಂಚಾಯತ್ ಮುಖ್ಯ ಅಧಿಕಾರಿಯವರ ಮೇಲೆ ಮತ್ತು ನಗರ ಪಂಚಾಯತ್ ಅಧ್ಯಕ್ಷರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Leave a Comment

Your email address will not be published. Required fields are marked *