Ad Widget .

ಬಾಲಕಿಯನ್ನು ಗರ್ಭಿಣಿಯನ್ನಾಗಿಸಿದ 81ರ ವೃದ್ಧ| ಭ್ರೂಣದಲ್ಲಿನ ಡಿಎನ್ಎ ಪರೀಕ್ಷೆಯಿಂದ ಹೊರಬಿತ್ತು ಸತ್ಯ

ಸಮಗ್ರ ನ್ಯೂಸ್: ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿ, ಆಕೆಯನ್ನು ಗರ್ಭಿಣಿಯನ್ನಾಗಿಸಿದ ಪ್ರಕ ರಣಕ್ಕೆ ಸಂಬಂಧಿಸಿದಂತೆ ಕೇರಳದ ತ್ವರಿತಗತಿ ನ್ಯಾಯಾಲಯವು 66 ವರ್ಷದ ವ್ಯಕ್ತಿಯೊಬ್ಬರಿಗೆ 81 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿ ಆದೇಶಿಸಿದೆ.

Ad Widget . Ad Widget .

ಇದರ ಜತೆಗೆ ಅಪರಾಧಿಗೆ ₹ 2.2 ಲಕ್ಷ ದಂಡವನ್ನೂ ವಿಧಿಸಿ ಪೋಕ್ಸೊ ಪ್ರಕ ರಣಗಳ ವಿಶೇಷ ನ್ಯಾಯಾಧೀಶ ಟಿ.ಜಿ. ವರ್ಗೀಸ್‌ ಆದೇಶಿಸಿದ್ದಾರೆ. ಶಿಕ್ಷೆಯನ್ನು ಅಪರಾಧಿ ಏಕಕಾಲದಲ್ಲಿ ಅನುಭವಿಸಬೇಕಾಗಿದೆ. 2020ರ ಅಕ್ಟೋಬರ್‌ ನಲ್ಲಿ ಬಾಲಕಿ ಆಸ್ಪತ್ರೆಗೆ ದಾಖಲಾದಾಗ, ಆಕೆ ಗರ್ಭಿಣಿಯಾಗಿರುವ ವಿಷಯ ಗೊತ್ತಾಗಿದೆ. ಆಗ ಬಾಲಕಿಗೆ 15 ವರ್ಷ ವಾಗಿತ್ತು ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಹೇಳಿದರು.

Ad Widget . Ad Widget .

ಸಂತ್ರಸ್ತೆಯ ಹೇಳಿಕೆ ಮತ್ತು ಗರ್ಭಪಾತದ ಬಳಿಕ ಭ್ರೂಣದಿಂದ ಸಂಗ್ರಹಿಸಿದ ಡಿಎನ್‌ಎ ಪುರಾವೆಗಳ ಆಧಾರದ ಮೇಲೆ ವ್ಯಕ್ತಿಯನ್ನು ಅಪರಾಧಿ ಎಂದು ಘೋಷಿಸಲಾಗಿದೆ. ಈ ಪುರಾವೆಗಳು ಆ ವ್ಯಕ್ತಿಯು ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂಬುದನ್ನು ದೃಢಪಡಿಸಿವೆ ಎಂದು ಅವರು ತಿಳಿಸಿದರು.

Leave a Comment

Your email address will not be published. Required fields are marked *