Ad Widget .

ಸುಳ್ಯ: ಅನ್ಯಜಾತಿಯ ಯುವಕನ ಪ್ರೇಮಿಸಿ ಮದುವೆಯಾದ ಯುವವೈದ್ಯೆ| ವಶೀಕರಣ ಆರೋಪ ಮಾಡಿದ ಯುವತಿಯ ಪೋಷಕರು

ಸಮಗ್ರ ನ್ಯೂಸ್: ಯುವವೈದ್ಯೆಯೋರ್ವಳು ಅನ್ಯ ಜಾತಿಯ ಯುವಕನನ್ನು ಪ್ರೇಮಿಸಿ ಮದುವೆಯಾಗಿದ್ದು, ಯುವಕನ ಮೇಲೆ ವಶೀಕರಣದ ಆರೋಪ ಹೊರಿಸಿರುವ ಘಟನೆ ಸುಳ್ಯದಿಂದ ವರದಿಯಾಗಿದೆ.

Ad Widget . Ad Widget .

ತಾಲೂಕಿನ ಗ್ರಾಮ ಪಂಚಾಯತ್ ಪ್ರತಿನಿಧಿಯೋರ್ವರ ಮಗಳಾಗಿರುವ ಯುವತಿಯು ಕಾಂಞಂಗಾಡ್ ಮೂಲದ ಯುವಕನನ್ನು ಪ್ರೀತಿಸುತ್ತಿದ್ದು ಮನೆಯವರ ಒಪ್ಪಿಗೆ ಇಲ್ಲದ ಕಾರಣ ಇವರಿಬ್ಬರೂ ರಿಜಿಸ್ಟ್ರಾರ್ ವಿವಾಹವಾಗಿದ್ದಾರೆ.

Ad Widget . Ad Widget .

ಈ ಹಿಂದೆ ಹುಡುಗಿಯ ಮನೆಯವರು ಈಕೆಗಾಗಿ ಬೇರೆ ಹುಡುಗನ ಜೊತೆ ವಿವಾಹ ಗೊತ್ತುಮಾಡಿದ್ದು, ಇದು ಆಕೆಗೆ ಇಷ್ಟವಿರಲಿಲ್ಲ ಎನ್ನಲಾಗಿದೆ. ಇದೀಗ ವಿವಾಹವಾದ ಬಳಿಕವೂ ಪ್ರತಿಷ್ಟಿತ ಮನೆತನದವಳಾದ ಆಕೆಯನ್ನು ಮನೆಯವರು ಮನವೊಲಿಸಲು ಯತ್ನಿಸಿದರಾದರೂ ಆಕೆ ಒಪ್ಪದೇ ನಾವಿಬ್ಬರೂ ಪ್ರಾಯಪ್ರಬುದ್ಧರಾಗಿದ್ದು ಪರಸ್ಪರ ಪ್ರೇಮಿಸಿ ಕಾನೂನು ಪ್ರಕಾರ ವಿವಾಹವಾಗಿದ್ದೇವೆ. ಇದಕ್ಕೆ ಮನೆಯವರ ಬೆದರಿಕೆ ಇದೆ ಎಂದು ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದಾಳೆ.

ಯುವಕ ನನಗೆ ವಶೀಕರಣ ಮಾಡಿಲ್ಲ. ನಾವಿಬ್ಬರೂ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದು, ನಮ್ಮ ಬಗ್ಗೆ ಅಪಪ್ರಚಾರ ಮಾಡದೇ ಬದುಕಲು ಬಿಡಿ ಎಂದು ಆಕೆ ಸ್ಪಷ್ಟಪಡಿಸಿದ್ದಾಳೆ.

Leave a Comment

Your email address will not be published. Required fields are marked *