Ad Widget .

ಮಂಗಳೂರು: ಚಾಲಿ ಅಡಿಕೆ ಮಾರುಕಟ್ಟೆ ಕೊಂಚ ಚೇತರಿಕೆ| ಆಮದು ಸುಂಕ ಹೆಚ್ಚಳಕ್ಕೆ ಆಗ್ರಹ

ಸಮಗ್ರ ನ್ಯೂಸ್: ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಇಳಿಕೆಯ ಹಾದಿಯಲ್ಲಿ ಸಾಗುತ್ತಿದ್ದ ಹೊಸ ಅಡಿಕೆ ಧಾರಣೆಯಲ್ಲಿ ಕೊಂಚ ಚೇತರಿಕೆಯ ಲಕ್ಷಣ ಕಂಡು ಬಂದಿದೆ.

Ad Widget . Ad Widget .

ಅಡಿಕೆ ಸುಲಿದು ಮಾರಾಟ ಮಾಡುವ ಸಂದರ್ಭದಲ್ಲಿ ಏಕಾಏಕಿ ಧಾರಣೆ ಕುಸಿತ ಆಗಿರುವುದರಿಂದ ಬೆಳೆಗಾರರಿಗೆ ನಷ್ಟದ ಭೀತಿ ಉಂಟಾಗಿತ್ತು. ಆದರೆ ಇದೀಗ ಧಾರಣೆ ಏರಿಕೆಯತ್ತ ಮುಖ ಮಾಡಿದ್ದು ಇನ್ನಷ್ಟು ಹೆಚ್ಚಳದ ನಿರೀಕ್ಷೆ ಮೂಡಿಸಿದೆ.

Ad Widget . Ad Widget .

ಹೊರ ಮಾರುಕಟ್ಟೆಯಲ್ಲಿ ಮೇ ತಿಂಗಳಲ್ಲಿ 435-440 ರೂ. ತನಕ ಇದ್ದ ಧಾರಣೆ ಜೂನ್‌ ಮೊದಲ ವಾರದಲ್ಲಿ 400 ರೂ.ಗಿಂತ ಕೆಳಗೆ ಇಳಿದಿತ್ತು. ಅಂದರೆ 40 ರೂಗಳಷ್ಟು ಇಳಿಕೆ ಕಂಡಿತ್ತು. ಜೂ. 14ರಂದು ಹೊಸ ಅಡಿಕೆ ಧಾರಣೆ 410 ರೂ. ಇದ್ದರೆ, ಜೂ. 15ರಂದು 415 ರೂ. ತನಕ ಏರಿಕೆ ಕಂಡಿದೆ. ಹಳೆ ಅಡಿಕೆ ಧಾರಣೆಯು ಇಳಿಕೆ ಕಾಣದೆ ಮೊದಲಿನಂತೆ ಸ್ಥಿರವಾಗಿತ್ತು.

ಶ್ರೀಲಂಕಾ, ಮ್ಯಾನ್ಮಾರ್‌, ಬರ್ಮಾ ಮತ್ತಿತರ ದೇಶಗಳಿಂದ ಅಡಿಕೆ ಆಮದಾಗುವ ಕಾರಣ ಮಂಗಳೂರು ಚಾಲಿ ಅಡಿಕೆಗೆ ಬೇಡಿಕೆ ಕಡಿಮೆ ಆಗಿರುವುದು ದರ ಕುಸಿಯಲು ಕಾರಣ, ಆದುದರಿಂದ ಕೇಂದ್ರ ಸರಕಾರ ಆಮದು ಸುಂಕ ಹೆಚ್ಚಿಸಿ ವಿದೇಶದಿಂದ ಅಡಿಕೆ ಬರುವುದಕ್ಕೆ ಕಡಿವಾಣ ಹಾಕಿದರೆ ಅಡಿಕೆಗೆ ಬೇಡಿಕೆ ಹೆಚ್ಚಳಗೊಂಡು ಧಾರಣೆ 450 ರೂ. ದಾಟಬಹುದು ಎಂದು ಅಡಿಕೆ ವ್ಯಾಪಾರಸ್ಥರು ಹೇಳುತ್ತಾರೆ.

Leave a Comment

Your email address will not be published. Required fields are marked *