Ad Widget .

ಹೊಟ್ಟೆಪಾಡಿಗಾಗಿ ಸಾಬೂನು ಮಾರುತ್ತಿರುವ ಚತುರ್ಭಾಷಾ ನಟಿ ಐಶ್ವರ್ಯಾ ಭಾಸ್ಕರನ್|

ಸಮಗ್ರ ನ್ಯೂಸ್: ಅವಕಾಶದ ಕೊರತೆ ಕಾರಣದಿಂದ ಬದುಕಲು ಒಂದು ಕಾಲದಲ್ಲಿ ತಮಿಳು, ಮಲಯಾಳಂ, ತೆಲುಗು ಹಾಗೂ ಕನ್ನಡ ಚಿತ್ರರಂಗದ ಟಾಪ್ ಹೀರೊಗಳೊಂದಿಗೆ ಹೀರೊಯಿನ್ ಆಗಿ ನಟಿಸಿದ್ದ ಒಂದು ಕಾಲದ ಮೇರು ನಟಿ ಐಶ್ವರ್ಯಾ ಭಾಸ್ಕರನ್ ಹೊಟ್ಟೆಪಾಡಿಗೆ ಬೀದಿಗಳಲ್ಲಿ ಸಾಬೂನು ಮಾರುತ್ತಿದ್ದಾರೆ.

Ad Widget . Ad Widget .

ಒಂದು ಕಾಲಕ್ಕೆ ಇವರು ರಜಿನಿಕಾಂತ್ ಹಾಗೂ ಮೋಹನ್ ಲಾಲ್ ಜೊತೆ ಹೀರೊಯಿನ್ ಆಗಿ ನಟಿಸಿದ್ದ ಈಕೆಗೆ ಇಂದು ಈ ಪರಿಸ್ಥಿತಿ ಒದಗಿಬಂದಿದೆ.

Ad Widget . Ad Widget .

ಸಿನಿಮಾಗಳಲ್ಲಿ ಉತ್ತುಂಗಕ್ಕೇರಿದ ನಂತರ ಐಶ್ವರ್ಯಾ ಟಿವಿ ಧಾರಾವಾಹಿಗಳಲ್ಲೂ ಮಿಂಚಿದ್ದರು. ಆದರೆ, ದಿನಗಳೆದಂತೆ ಅವರಿಗೆ ಅವಕಾಶಗಳು ಕಡಿಮೆಯಾಗುತ್ತ ಕೊನೆಗೆ ನಿಂತೇ ಹೋದವು.

“ನನ್ನ ಬಳಿ ಕೆಲಸವಿಲ್ಲ, ಹಣವೂ ಇಲ್ಲ. ಸಾಬೂನು ಮಾರಿ ಬದುಕುತ್ತಿದ್ದೇನೆ. ನನಗೆ ಯಾವುದೇ ಸಾಲವೂ ಇಲ್ಲ. ನಾನು ಒಬ್ಬಂಟಿಯಾಗಿರುವೆ. ಮಗಳು ಮದುವೆಯಾದ ನಂತರ ದೂರವಾಗಿದ್ದಾಳೆ. ಯಾವುದೇ ಕೆಲಸವಾದರೂ ಸರಿ ಮಾಡುವೆ. ನಿಮ್ಮ ಸಂಸ್ಥೆಯಲ್ಲಿ ಒಂದು ಕೆಲಸ ಕೊಟ್ಟರೆ ಖುಷಿಯಿಂದ ಮಾಡುವೆ. ಶೌಚಾಲಯ ತೊಳೆದರೂ ಸರಿ, ಖುಷಿಯಿಂದಲೇ ಆ ಕೆಲಸವನ್ನೂ ಮಾಡುವೆ” ಎಂದು ಐಶ್ವರ್ಯಾ ಸಂದರ್ಶನದಲ್ಲಿ ಹೇಳಿದ್ದಾರೆ. ಮತ್ತೊಮ್ಮೆ ನಟಿಸಲು ಅವಕಾಶ ಸಿಕ್ಕರೆ ಅದಕ್ಕೆ ಸಿದ್ಧ ಎಂದು ನಟಿ ಐಶ್ವರ್ಯಾ ತಿಳಿಸಿದ್ದಾರೆ.

Leave a Comment

Your email address will not be published. Required fields are marked *