Ad Widget .

ರಾಜ್ಯದಲ್ಲಿ ಏರಿಕೆ ಕಂಡ ಕೊರೊನಾ ಪಾಸಿಟಿವಿಟಿ ದರ| ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ದರ ಶೇ.2.56ಕ್ಕೆ ಏರಿಕೆಯಾಗಿದ್ದು, ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಕೋವಿಡ್ ತಜ್ಞರ ಸಲಹಾ ಸಮಿತಿ ಸಲಹೆಯಂತೆ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ.

Ad Widget . Ad Widget .

ಆರೋಗ್ಯ ಆಯುಕ್ತ ಡಾ.ರಣದೀಪ್ ಮಾತನಾಡಿ, ಕೊರೊನಾ ಪ್ರಕರಣ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಆದರೆ ಆಸ್ಪತ್ರೆಗೆ ದಾಖಲೆಯಾಗುವವರ ಸಂಖ್ಯೆ ಕಡಿಮೆ ಇದೆ.ಮುಂದಿನ ದಿನಗಳಲ್ಲಿ ಸೋಂಕು ತ್ವರಿತ ಪತ್ತೆ ಹಾಗೂ ನಿಯಂತ್ರಣಕ್ಕಾಗಿ ಹೆಚ್ಚಿನ ಗಮನ ಹರಿಸುತ್ತಿದ್ದು, ಕೊರೊನಾ ಲಸಿಕಾಕರಣಕ್ಕೆ ಹೆಚ್ಚಿನ‌ ಒತ್ತು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

Ad Widget . Ad Widget .

ಕೊರೋನಾ ಶೀಘ್ರ ಪತ್ತೆಗೆ ಕೊರೋನಾ ಪರೀಕ್ಷೆ, ಐಸೋಲೇಶನ್ ಕಡೆಗೆ ಹೆಚ್ಚಿನ ಗಮನ ಹರಿಸಲಾಗುತ್ತದೆ. ಪ್ರಕರಣಗಳು ಹೆಚ್ಚಾಗದಂತೆ ಮುನ್ನೆಚ್ಚರಿಕೆ ಕ್ರಮ ಹಾಗೂ ಹೊಸ ರೂಪಾಂತರಿ ತ್ವರಿತ ಪತ್ತೆ ಕಾಲ ಕಾಲಕ್ಕೆ ಜೀನೋಮ್ ಪರೀಕ್ಷೆ ಮಾಡಲಾಗುತ್ತದೆ. ಅಂತಾರಾಷ್ಟ್ರೀಯ ಪ್ರಯಾಣಿಕರ ಸ್ಕ್ರೀನಿಂಗ್, ಪಾಸಿಟಿವ್ ಬಂದ ವ್ಯಕ್ತಿಯ ಮಾದರಿಯನ್ನು ಕಡ್ಡಾಯವಾಗಿ ಜೀನೋಮ್ ಪರೀಕ್ಷೆ ಒಳಪಡಿಸುವುದು ಹಾಗೂ ಸೋಂಕಿತ ವ್ಯಕ್ತಿಗೆ ಕಡ್ಡಾಯ ಕ್ವಾರಂಟೈನ್ ಒಳಪಡಿಸುವಂತೆ ಪರಿಷ್ಕೃತ ಮಾರ್ಗ ಹೊರಡಿಸಲಾಗಿದೆ.

ರಾಜ್ಯದ ಎಲ್ಲಾ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ದಾಖಲಾಗುವ ಐಎಲ್‌ಐ ಹಾಗೂ ಸಾರಿ ಪ್ರಕರಣಗಳನ್ನು ಆರೋಗ್ಯ ಇಲಾಖೆ ಗಮನಕ್ಕೆ ತರಬೇಕು. ಜತೆಗೆ ಕಡ್ಡಾಯವಾಗಿ ಆರ್ ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಬೇಕು. ಈ ವೇಳೆ ಸಿಟಿ ವ್ಯಾಲ್ಯೂವನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸುವಂತೆ, ಜತೆಗೆ ಸಮುದಾಯದಲ್ಲಿ ಸೋಂಕು ಹರಡದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ.

Leave a Comment

Your email address will not be published. Required fields are marked *