Ad Widget .

ಪುತ್ತೂರು:ಗೃಹರಕ್ಷಕ ಸಿಬ್ಬಂದಿ ಕುರಿತು ಮಾನಹಾನಿಕರ ವರದಿ ಪ್ರಕಟ| ಸುದ್ದಿಬಿಡುಗಡೆ ಸಂಪಾದಕ ಡಾ. ಯು.ಪಿ ಶಿವಾನಂದ ವಿರುದ್ದ ದೂರು‌ ದಾಖಲು

ಸಮಗ್ರ ನ್ಯೂಸ್: ಗೃಹರಕ್ಷಕದಳದ ಮಹಿಳಾ ಸಿಬ್ಬಂದಿ ಕುರಿತು ಮಾನಹಾನಿಕರ ವರದಿ ಪ್ರಕಟಿಸಿದ ಸುದ್ದಿ ಬಿಡುಗಡೆ ಸಂಪಾದಕ ಡಾ. ಯು.ಪಿ ಶಿವಾನಂದ ವಿರುದ್ದ ಪುತ್ತೂರು ಡಿವೈಎಸ್ ಪಿ ಗಾನ ಪಿ. ಕುಮಾರ್ ಗೆ ದೂರು ನೀಡಲಾಗಿದೆ. ಗೃಹರಕ್ಷಕ ದಳದ ಪುತ್ತೂರು ಘಟಕವು ಜೂ.16ರಂದು ದೂರು ನೀಡಿದ್ದು, ಸಿಬ್ಬಂದಿ ವಿರುದ್ದ ಮಾನಹಾನಿಕರವಾಗಿ, ಅವಹೇಳನಕಾರಿಯಾಗಿ ವರದಿ ಪ್ರಕಟಿಸಲಾಗಿದೆ, ಈ ಕುರಿತಂತೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಂತೆ ಮನವಿ ಮಾಡಲಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಪುತ್ತೂರಿನ ಭವನವೊಂದಕ್ಕೆ ಆ ಭವನದಲ್ಲಿ ಕಚೇರಿ ಹೊಂದಿರುವ ಪ್ರತಿಷ್ಠಿತ ವ್ಯಕ್ತಿಯೋರ್ವರು ಗೃಹರಕ್ಷಕ ದಳದ ಮಹಿಳಾ ಸಿಬ್ಬಂದಿಯನ್ನು ರಾತ್ರಿ ವೇಳೆ ಕರೆಸಿಕೊಂಡಿದ್ದಾರೆ ಎಂಬ ವರದಿ ಜೂ.15 ರಂದು ‘ಸುದ್ದಿ ಬಿಡುಗಡೆ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಈ ವರದಿಯಿಂದ ಸಿಬ್ಬಂದಿ ಘನತೆಗೆ ಕಪ್ಪುಚುಕ್ಕೆ ಉಂಟಾಗಿದ್ದು, ಗೃಹರಕ್ಷಕ ದಳದ ಎಲ್ಲಾ ಸಿಬ್ಬಂದಿಗೂ ಅವಮಾನವಾದಂತಾಗಿದೆ. ಅನಗತ್ಯ ಸುಳ್ಳು ಸುದ್ದಿ ಪ್ರಕಟಣೆಯಿಂದ ಮಾನನಷ್ಟ ಉಂಟಾಗಿದ್ದು, ಸಾರ್ವಜನಿಕವಾಗಿ ಗೃಹರಕ್ಷಕ ದಳದ ಸಿಬ್ಬಂದಿಯನ್ನು ಅನುಮಾನಾಸ್ಪದವಾಗಿ ನೋಡುವಂತಾಗಿದೆ. ಸಂಪೂರ್ಣ ಸುಳ್ಳಿನಿಂದ ವರದಿ ಕೂಡಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Ad Widget . Ad Widget . Ad Widget .

ದೂರು ಸ್ವೀಕರಿಸಿರುವ ಡಿವೈಎಸ್ಪಿ ಗಾನ ಪಿ.ಕುಮಾರ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು ಆರೋಪಿತ ವ್ಯಕ್ತಿಯನ್ನು ತನಿಖೆಗೆ ಒಳಪಡಿಸಲಾಗುವುದು ಎಂದಿದ್ದಾರೆ.

Leave a Comment

Your email address will not be published. Required fields are marked *