ವಿಧಾನಪರಿಷತ್ ಚುನಾವಣೆ| ಗೆದ್ದುಬೀಗಿದ ಕಾಂಗ್ರೆಸ್ ನ ಪ್ರಕಾಶ್ ಹುಕ್ಕೇರಿ

ಸಮಗ್ರ ನ್ಯೂಸ್: ವಾಯುವ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರರನ್ನು ಹಿಂದಿಕ್ಕಿ ಜಯಭೇರಿ ಬಾರಿಸಿದ್ದಾರೆ. ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಬಾಕಿಯಿದೆ.

Ad Widget ... ..

ಪ್ರಕಾಶ್ ಹುಕ್ಕೇರಿ ಮೊದಲ ಸುತ್ತಿನಲ್ಲಿ 1692 ಮತಗಳ ಮುನ್ನಡೆ ಕಾಯ್ದುಕೊಂಡಿದ್ದರು.2ನೇ ಸುತ್ತಿನಲ್ಲಿ 3400 ಮತಗಳನ್ನು ಪಡೆದಿದ್ದರು. ಪ್ರಸ್ತುತ ಮಾಹಿತಿಯ ಪ್ರಕಾರ ಹುಕ್ಕೇರಿ 10 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದು, 4 ಸಾವಿರಕ್ಕಿಂತ ಹೆಚ್ಚಿನ ಮತಗಳ ಮುನ್ನಡೆ ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಹಿಂದೆ ಎರಡು ಬಾರಿ ಗೆಲುವು ಸಾಧಿಸಿದ್ದ ಬಿಜೆಪಿಯ ಅರುಣ್‌ ಶಹಾಪುರ ಹೀನಾಯ ಸೋಲು ಕಂಡಿದ್ದಾರೆ.

Ad Widget

ವಿಧಾನ ಪರಿಷತ್‌ನ 4 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. 2 ಶಿಕ್ಷಕರ ಕ್ಷೇತ್ರ ಮತ್ತು 2 ಪದವೀದರರ ಕ್ಷೇತ್ರಗಳಿಗೆ ಜೂನ್‌ 13ರಂದು ಚುನಾವಣೆ ನಡೆದಿತ್ತು. ಬುಧವಾರ ಮತ ಎಣಿಕೆ ಕಾರ್ಯಕ್ರಮ ನಡೆಯುತ್ತಿದ್ದು, ವಾಯುವ್ಯ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್‌, ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

Leave a Comment

Your email address will not be published. Required fields are marked *