Ad Widget .

ಬೆಳ್ತಂಗಡಿ: ಶಿಕ್ಷಕಿ ಹೃದಯಾಘಾತದಿಂದ ಬೆಂಗಳೂರಿನಲ್ಲಿ ಮೃತ್ಯು

ಬೆಳ್ತಂಗಡಿ: ತಾಲೂಕಿನ ಕಾಯರ್ತಡ್ಕದ ದಿವ್ಯಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿ ಹೃದಯಾಘಾತದಿಂದ ಬೆಂಗಳೂರಿನಲ್ಲಿ ಮೃತಪಟ್ಟ ಘಟನೆ ಜೂ. 13ರಂದು ನಡೆದಿದೆ.

Ad Widget . Ad Widget .

ಕಳೆಂಜ ಗ್ರಾಮದ ಉದ್ರಾಜೆ ನಿವಾಸಿ, ಭಾರತಿ ಎಸ್‌. (42) ಮೃತರು. ಇವರು ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಿದ್ದಾಗ ಹೃದಯಾಘಾತ ಕ್ಕೊಳಗಾಗಿದ್ದರು. ತತ್‌ಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

Ad Widget . Ad Widget .

ಮೇಲಂತಬೆಟ್ಟು ಕಾಲೇಜಿನ ಉಪನ್ಯಾಸಕ ಡಾ| ಕುಶಾಲಪ್ಪ ಎಸ್‌. ಅವರ ಪತ್ನಿಯಾಗಿರುವ ಭಾರತಿ ಅವರು ಕಳೆದ 8 ವರ್ಷಗಳಿಂದ ಕಾಯರ್ತಡ್ಕದ ದಿವ್ಯಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಪತಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

Leave a Comment

Your email address will not be published. Required fields are marked *