Ad Widget .

ಮೈಸೂರು ಅರಮನೆ ಮತ್ತೆ ಖಾಸಗಿ ತೆಕ್ಕೆಗೆ!?

ಸಮಗ್ರ ನ್ಯೂಸ್: ಶತಮಾನೋತ್ಸವ ಆಚರಣೆಯ ಹೊಸ್ತಿಲಲ್ಲಿರುವ ಮೈಸೂರಿನ 2ನೇ ಅತಿ ದೊಡ್ಡ ಅರಮನೆ ಎಂದೇ ಹೇಳಲಾಗುವ ಲಲಿತ್‌ ಮಹಲ್‌ ಪ್ಯಾಲೇಸನ್ನು ಮತ್ತೆ ಖಾಸಗೀಕರಣಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.

Ad Widget . Ad Widget .

ಸಾಂಸ್ಕೃತಿಕ ನಗರಿ ಮೈಸೂರಿನ ಹೆಗ್ಗುರುತಾದ ಈ ಅರಮನೆ ರಾಜಾತಿಥ್ಯಕ್ಕೆ ಹೆಸರುವಾಸಿ. ಲಲಿತ್‌ ಮಹಲ್‌ ಹೋಟೆಲ್‌ ದೇಶ-ವಿದೇಶದ ಪ್ರವಾಸಿಗರಲ್ಲದೇ ರಾಜಕಾರಣಿಗಳು, ಸಿನಿಮಾ ಕಲಾವಿದರು ಸೇರಿ ರಾಜ್ಯದ ವಿವಿಧ ಭಾಗಗಳ ಗಣ್ಯರು ವಾಸ್ತವ್ಯಕ್ಕಾಗಿ ಇಲ್ಲಿಗೆ ಆಗಮಿಸುವುದು ವಾಡಿಕೆ. ಸದ್ಯಕ್ಕೆ ಅರಮನೆಯನ್ನು ಅರಣ್ಯ ವಸತಿ ಮತ್ತು ವಿಹಾರ ಧಾಮದಿಂದ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಾಗುತ್ತಿದೆ.

Ad Widget . Ad Widget .

ಮೈಸೂರು ನಗರದ 53 ಎಕರೆ ಪ್ರದೇಶದಲ್ಲಿ 3 ಎಕರೆ ವಿಸ್ತೀರ್ಣದಲ್ಲಿ ಈ ಅರಮನೆಯನ್ನು ಅಂದಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್‌ 1921ರಲ್ಲಿ ನಿರ್ಮಾಣ ಮಾಡಿದ್ದರು. ಸ್ವಾತಂತ್ರ್ಯ ನಂತರ ಸರ್ಕಾರದ ಅಧೀನಕ್ಕೆ ಒಳಪಟ್ಟಿದ್ದ ಈ ಅರಮನೆ 1974ರಲ್ಲಿ ಭಾರತ ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆ ತನ್ನ ಸುಪರ್ದಿಗೆ ಪಡೆದುಕೊಂಡಿತ್ತು. ನಂತರದ ವರ್ಷಗಳಲ್ಲಿ ತಾಜ್‌ ಹೋಟೆಲ್ಸ್‌ ಗ್ರೂಪ್‌ಗೆ ಗುತ್ತಿಗೆ ನೀಡಿತ್ತು.

ಬಳಿಕ ತಾಜ್‌ ಹೋಟೆಲ್ಸ್‌ ಗ್ರೂಪ್‌ ಅರಮನೆಯನ್ನು ಪಾರಂಪರಿಕ ಹೋಟೆಲ್‌ ಆಗಿ ಮಾರ್ಪಾಡು ಮಾಡಿ 2018ರವರೆಗೆ ನಿರ್ವಹಣೆ ಮಾಡಿತ್ತು. ನಂತರ ಭಾರತ ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆಯಿಂದ ರಾಜ್ಯ ಸರ್ಕಾರ ತನ್ನ ಸುಪರ್ದಿಗೆ ಪಡೆದುಕೊಂಡಿತ್ತು. 2018ರಿಂದ ಕರ್ನಾಟಕ ರಾಜ್ಯ ಅರಣ್ಯ ವಸತಿ ಮತ್ತು ವಿಹಾರ ಧಾಮ ಸಂಸ್ಥೆ ಈ ಅರಮನೆಯನ್ನು ನಿರ್ವಹಣೆ ಮಾಡುತ್ತಿದ್ದು, ಪ್ರತಿ ವರ್ಷ ಒಂದೂವರೆಯಿಂದ 2 ಕೊಟಿ ರೂ. ಆದಾಯ ಗಳಿಸುತ್ತಿದೆ.

ಹೀಗಿದ್ದರೂ ಪ್ರವಾಸೋದ್ಯಮ ಇಲಾಖೆ ನಿರ್ವಹಣೆ ನೆಪವೊಡ್ಡಿ ಪಾರಂಪರಿಕ ಹೋಟೆಲ್‌ (ಲಲಿತ್‌ ಮಹಲ್‌ ಪ್ಯಾಲೆಸ್‌)ನ್ನು ಖಾಸಗಿಕರಣ ಮಾಡಲು ಮುಂದಾಗಿದೆ. ಈಗಾಗಲೇ ಮುಖ್ಯ ಮಂತ್ರಿ ನೇತೃತ್ವದಲ್ಲಿ ಮೊದಲ ಸುತ್ತಿನ ಮಾತುಕತೆ ನಡೆದಿದ್ದು, ತಾಜ್‌ ಹೋಟೆಲ್ಸ್‌ ಗ್ರೂಪ್‌ಗೆ ಗುತ್ತಿಗೆ ನೀಡಲು ಚಿಂತನೆ ನಡೆದಿದೆ. ಈ ಬಗ್ಗೆ ಜೂ.14 ರಂದು (ಮಂಗಳವಾರ) ಮತ್ತೆ ಸಚಿವ ಸಂಪುಟ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಲಲಿತ್‌ ಮಹಲ್‌ ಹೋಟೆಲ್‌ನ್ನು ತಾಜ್‌ ಹೋಟೆಲ್ಸ್‌ ಗ್ರೂಪ್‌ಗೆ ನೀಡುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ಮೂಲಗಳು ತಿಳಿಸಿವೆ.

Leave a Comment

Your email address will not be published. Required fields are marked *