Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಮೇಷ ರಾಶಿ:
ಅಪೇಕ್ಷಿತ ಗುರಿ ತಲುಪಲು ನೇರ ಹಾಗೂ ದಿಟ್ಟ ನಡವಳಿಕೆಯು ಅತಿ ಅಗತ್ಯವಾಗಿರುತ್ತದೆ. ಆರ್ಥಿಕ ಸಂಕಷ್ಟಗಳು ಸ್ವಲ್ಪಮಟ್ಟಿಗೆ ದೂರವಾಗುತ್ತವೆ. ನಿಂತಿದ್ದ ಕೆಲವು ವ್ಯವಹಾರಗಳು ಪುನಃ ಆರಂಭಗೊಳ್ಳುತ್ತವೆ. ಒಟ್ಟುಗೂಡಿದ ವ್ಯವಹಾರಗಳಲ್ಲಿ ಆದಾಯ ಹೆಚ್ಚು ಬರುತ್ತದೆ. ಬಾಳಸಂಗಾತಿಯ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿರಿ. ಸಾಮಾಜಿಕ ಕಾರ್ಯಗಳ ವಿಷಯದಲ್ಲಿ ನಿಮ್ಮ ಒರಟುತನದಿಂದ ಇತರರಿಗೆ ಹೆಚ್ಚು ಬೇಸರವಾಗುವ ಸಾಧ್ಯತೆಯಿದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ಇರುತ್ತದೆ. ವಿದ್ಯಾರ್ಥಿಗಳಿಗೆ ಬೇಕಾದ ಆರ್ಥಿಕ ಸಹಾಯ ದೊರೆಯುತ್ತದೆ. ರೈತರಿಗೆ ಖುಷಿಕೊಡುವ ಸಂಗತಿಯೊಂದು ಕೇಳಿಬರುತ್ತದೆ. ನರಗಳ ದೌರ್ಬಲ್ಯದಿಂದ ಬಳಲುತ್ತಿರುವವರು ಹೆಚ್ಚಿನ ಎಚ್ಚರವಹಿಸಿರಿ.

Ad Widget . Ad Widget .

ವೃಷಭರಾಶಿ:
ದೊಡ್ಡ ದೊಡ್ಡ ಯೋಜನೆಗಳನ್ನು ಆರಂಭಿಸುವ ಮುನ್ನ ಸಾಕಷ್ಟು ವಿಚಾರ ಮಾಡಿರಿ. ಧನಾಗಮನವು ನಿರೀಕ್ಷೆಯಷ್ಟಿರುತ್ತದೆ. ಹಣಕಾಸಿನ ವಿಷಯದಲ್ಲಿ ಹೆಚ್ಚು ಎಚ್ಚರವಹಿಸಿರಿ. ಆರಂಭಿಸಿದ ಕೆಲವೊಂದು ಕೆಲಸಗಳಿಗೆ ಬಂಧುಗಳಿಂದ ವಿಘ್ನಗಳು ಎದುರಾಗಬಹುದು. ಕೆಲವರಿಗೆ ತಾಯಿಯ ಆರೋಗ್ಯಕ್ಕಾಗಿ ಹೆಚ್ಚು ಗಮನಕೊಡಲೇಬೇಕಾದ ಅನಿವಾರ್ಯವಿದೆ. ವಿದ್ಯಾರ್ಥಿಗಳಿಗೆ ಬಹಳ ಯಶಸ್ಸು ಸಿಗುವುದು. ಸಂಗಾತಿಯ ಆದಾಯದಲ್ಲಿ ಸಾಕಷ್ಟು ಹೆಚ್ಚಳ ಕಾಣಬಹುದು. ವೃತ್ತಿಯಲ್ಲಿ ಸ್ವಲ್ಪಮಟ್ಟಿನ ಗೋಜಲುಗಳನ್ನು ಕಾಣಬಹುದು. ಕೃಷಿ ಮಾರುಕಟ್ಟೆಯಲ್ಲಿ ವ್ಯವಹಾರವನ್ನು ಮಾಡುವವರ ಆದಾಯ ಹೆಚ್ಚುತ್ತದೆ. ವಿದೇಶಿ ವ್ಯವಹಾರ ಮಾಡುವವರಿಗೆ ಸ್ವಲ್ಪಮಟ್ಟಿನ ಹಿನ್ನಡೆ ಇರುತ್ತದೆ.

Ad Widget . Ad Widget .

ಮಿಥುನ ರಾಶಿ:
ನಿಮ್ಮ ಮಾತುಗಳಿಂದ ವೃಥಾ ಆರೋಪ ಎದುರಿಸುವ ಸಾಧ್ಯತೆ ಇದೆ. ಮಾತಿನ ಮೇಲೆ ಸಾಕಷ್ಟು ಹಿಡಿತ ಇರುವುದು ಒಳ್ಳೆಯದು. ಕುಟುಂಬದ ವ್ಯವಹಾರದಲ್ಲಿ ಒಡಹುಟ್ಟಿದವರಿಂದ ಮೋಸ ಹೋಗುವ ಸಾಧ್ಯತೆ ಇದೆ. ಧನಾದಾಯವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಕೆಲವೊಂದು ಆಪಾದನೆಗಳಿಂದ ಮುಕ್ತರಾಗಿ ಸಂತೋಷಪಡುವಿರಿ. ಪ್ರಾಚ್ಯ ವಸ್ತುಗಳ ಬಗ್ಗೆ ಸಂಶೋಧನೆ ಮಾಡುವವರಿಗೆ ಉತ್ತಮ ಫಲಿತಾಂಶಗಳು ಬರುತ್ತವೆ. ಕ್ರೀಡೆಯನ್ನು ವೃತ್ತಿಯಾಗಿ ಮಾಡಿಕೊಂಡವರಿಗೆ ಅಭಿವೃದ್ಧಿ ಇರುತ್ತದೆ. ಹೊಟ್ಟೆಗೆ ಸಂಬಂಧಪಟ್ಟ ತೊಂದರೆಗಳು ಬಾಧಿಸಬಹುದು. ಸಾವಯವ ಕೃಷಿ ಮಾಡುವವರಿಗೆ ಬಹಳಷ್ಟು ಉತ್ತೇಜನ ದೊರೆಯುತ್ತದೆ. ತಂದೆಯಿಂದ ಕೃಷಿಗೆ ಸಂಬಂಧಪಟ್ಟ ಮಾಹಿತಿಗಳು ದೊರೆಯುತ್ತವೆ.

ಕಟಕ ರಾಶಿ:
ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಗತಿಯನ್ನು ಕಾಣುವ ಕಾಲ. ಅವಿವಾಹಿತರಿಗೆ ಸಂಬಂಧ ಒದಗಿ ಬರುವ ಸಾಧ್ಯತೆ ಇದೆ. ನಿಮ್ಮ ಕಾರ್ಯಸ್ಥಳದಲ್ಲಿ ಸಣ್ಣ ಮಾತುಗಳಿಗೆ ಕಿವಿಗೊಡದೆ ನೀವು ಕಾರ್ಯದಲ್ಲಿ ಮುಂದುವರಿಯುವುದು ಒಳ್ಳೆಯದು. ಮೂಳೆಯ ತೊಂದರೆಗಳು ಬಾಧಿಸಬಹುದು. ಸಂಪನ್ಮೂಲಕ್ಕೆ ಅನುಗುಣವಾಗಿ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳುವುದು ಒಳಿತು. ಹಣದ ಒಳಹರಿವು ತೃಪ್ತಿಕರವಾಗಿರುತ್ತದೆ. ಗುರುಹಿರಿಯರಿಂದ ಸಾಕಷ್ಟು ಸಲಹೆ ಮತ್ತು ಮಾರ್ಗದರ್ಶನಗಳು ಒದಗಿಬರುತ್ತವೆ. ಆಸ್ತಿ ಹಂಚಿಕೆ ವಿಚಾರದಲ್ಲಿ ಗೊಂದಲಗಳು ಆಗಬಹುದು. ವಿದೇಶದಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ಆರ್ಥಿಕ ಪ್ರಗತಿ ಇರುತ್ತದೆ. ಸಿದ್ಧಪಡಿಸಿದ ಆಹಾರ ವಸ್ತುಗಳ ವ್ಯಾಪಾರವನ್ನು ಮಾಡುವವರಿಗೆ ವ್ಯವಹಾರ ವಿಸ್ತರಿಸುತ್ತದೆ.

ಸಿಂಹ ರಾಶಿ:
ನಿಮ್ಮ ಧಾರ್ಮಿಕ ನಡೆಯ ಬಗ್ಗೆ ಜನರು ಪ್ರಶ್ನಿಸಬಹುದು. ಆದ್ದರಿಂದ ಎಚ್ಚರಿಕೆಯ ನಡೆ ಇರಲಿ. ಉದ್ಯೋಗ ನಿಮಿತ್ತ ದೂರಪ್ರಯಾಣದ ಸಾಧ್ಯತೆಗಳಿವೆ. ಭೂಮಿಯ ವ್ಯವಹಾರವನ್ನು ಮಾಡುವವರಿಗೆ ಹೆಚ್ಚಿನ ಲಾಭ ವಿರುತ್ತದೆ. ಆದರೆ ಅದಕ್ಕೆ ಸಂಬಂಧಿಸಿದ ಕೆಲವು ಕೆಲಸಗಳು ನಿಧಾನವಾಗಬಹುದು. ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ಮಹಿಳೆಯರ ಆರೋಗ್ಯದಲ್ಲಿ ಚೇತರಿಕೆಯನ್ನು ಕಾಣಬಹುದು. ಸೋದರಿಯರ ವಿರೋಧವನ್ನು ಕುಟುಂಬದ ಕೆಲಸಕಾರ್ಯಗಳಲ್ಲಿ ಕಾಣಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಶ್ರದ್ಧೆ ಕಡಿಮೆಯಾಗಬಹುದು. ಹಣದ ಒಳಹರಿವು ಸಾಮಾನ್ಯಗತಿಯಲ್ಲಿ ಇರುತ್ತದೆ. ಸರ್ಕಾರಿ ಗುತ್ತಿಗೆಗಳನ್ನು ಮಾಡುವವರಿಗೆ ಹೆಚ್ಚಿನ ಗುತ್ತಿಗೆಗಳು ದೊರೆಯುತ್ತವೆ. ಆಭರಣವನ್ನು ರಫ್ತು ಮಾಡುವವರಿಗೆ ಹೆಚ್ಚಿನ ಯಶಸ್ಸು ದೊರೆಯುತ್ತದೆ.

ಕನ್ಯಾ ರಾಶಿ:
ಮನೋವೃತ್ತಿಯ ಮೇಲೆ ಹಿಡಿತವನ್ನು ಸಾಧಿಸಿ ನಿತ್ಯದ ಕಾರ್ಯಗಳನ್ನು ಮಾಡುವುದು ಒಳಿತು. ನಿಮ್ಮ ಸಂಗಾತಿಯ ಸಲಹೆಗಳು ನಿಮಗೆ ಸಾಕಷ್ಟು ಒಳಿತನ್ನು ತರುತ್ತವೆ. ಷೇರು ವ್ಯವಹಾರ ಮಾಡುವವರಿಗೆ ಹಿನ್ನಡೆ ಇರುತ್ತದೆ. ಗೃಹ ಅಲಂಕಾರ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ಅಭಿವೃದ್ಧಿ ಇರುತ್ತದೆ. ತಂದೆಯ ಸ್ವಂತ ವ್ಯಾಪಾರದಲ್ಲಿ ಪಾಲ್ಗೊಳ್ಳುವ ಅವಕಾಶ ಒದಗುತ್ತದೆ. ವಿದೇಶಿ ಸಾಲ ವ್ಯವಹಾರವನ್ನು ನಡೆಸುತ್ತಿರುವವರಿಗೆ ಹಿನ್ನಡೆ ಇರುತ್ತದೆ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ವಿವಾಹ ಆಕಾಂಕ್ಷಿಗಳಿಗೆ ಸಂಬಂಧಗಳು ಒದಗಿ ಬರುವ ಸಾಧ್ಯತೆಗಳಿವೆ. ಬಂಗಾರಕ್ಕೆ ಸಂಬಂಧಪಟ್ಟಂತೆ ಕಲಹಗಳು ಆಗಬಹುದು. ಬೀಜೋತ್ಪಾದನೆ ಮಾಡುವವರಿಗೆ ಬೇಡಿಕೆ ಹೆಚ್ಚಾಗುತ್ತದೆ. ರಕ್ತದ ಒತ್ತಡ ಅಥವಾ ಉಸಿರಾಟದ ತೊಂದರೆ ಇರುವವರು ಎಚ್ಚರ ವಹಿಸಿರಿ.

ತುಲಾ ರಾಶಿ:
ಕುಟುಂಬ ಸದಸ್ಯರೊಡನೆ ವಾಗ್ವಾದ ಮಾಡಿ ಎಲ್ಲರ ಬೇಸರಕ್ಕೆ ಕಾರಣರಾಗುವಿರಿ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಹರಿತವಾದ ಆಯುಧಗಳನ್ನು ಉಪಯೋಗಿಸುವಾಗ ಗಾಯಗಳಾಗಬಹುದು ಎಚ್ಚರ ವಹಿಸಿರಿ. ವಿದೇಶಕ್ಕೆ ಔಷಧಿಯನ್ನು ರಫ್ತು ಮಾಡುವವರ ವ್ಯವಹಾರಗಳು ವೃದ್ಧಿಸುತ್ತವೆ. ವ್ಯವಹಾರಗಳಲ್ಲಿ ಅನಿರೀಕ್ಷಿತ ತಿರುವುಗಳು ಬಂದು ಸ್ವಲ್ಪ ಮಟ್ಟಿನ ಹಿನ್ನಡೆಯನ್ನು ಕಾಣಬಹುದು. ವೃತ್ತಿಯ ಸ್ಥಳದಲ್ಲಿ ಕಿರಿಕಿರಿ ಹೆಚ್ಚಾಗಬಹುದು. ಸರ್ಕಾರಿ ಕೆಲಸಗಳು ಸರಾಗವಾಗಿ ನಡೆಯುತ್ತವೆ ಹಾಗೂ ಬರಬೇಕಾಗಿದ್ದ ಸಹಾಯಧನಗಳು ಒದಗಿಬರುತ್ತವೆ. ಗೃಹವಿನ್ಯಾಸಕಾರರಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ಕೀಲು ನೋವು ಹೆಚ್ಚು ಬಾಧಿಸಬಹುದು. ಮಕ್ಕಳಿಂದ ನಿಷ್ಠುರದ ಮಾತುಗಳು ಕೇಳಿಬರುತ್ತವೆ.

ವೃಶ್ಚಿಕ ರಾಶಿ:
ಧಾರ್ಮಿಕ ವಿಚಾರಗಳಲ್ಲಿ ಹೆಚ್ಚು ಆಸಕ್ತಿ ಮೂಡಿ ದೇವರ ಬಗ್ಗೆ ಒಲವು ಹೆಚ್ಚುವುದು. ಕ್ರೀಡಾ ಪಟುಗಳಿಗೆ ಉತ್ತಮ ಭವಿಷ್ಯ ದೊರೆಯುವ ಸಂದರ್ಭವಿದೆ. ಅಪರೂಪದ ಅವಕಾಶಗಳನ್ನು ಅನುಕೂಲಕ್ಕೆ ತಕ್ಕಂತೆ ಹೊಂದಿಸಿಕೊಂಡಲ್ಲಿ ಗೆಲುವು ನಿಮ್ಮದಾಗುತ್ತದೆ. ಉದರ ಸಂಬಂಧಿ ಕಾಯಿಲೆಗಳಿರುವವರು ತಜ್ಞರ ಸಲಹೆಗಳನ್ನು ಪಡೆಯುವುದು ಉತ್ತಮ. ನಿಮ್ಮ ಬುದ್ಧಿಮತ್ತೆಯಿಂದ ಮಾಡಿದ ಕೆಲಸಗಳಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯುವಿರಿ. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಸ್ತ್ರೀರೋಗ ತಜ್ಞರಿಗೆ ಬೇಡಿಕೆ ಹೆಚ್ಚುತ್ತದೆ. ತನ್ಮೂಲಕ ಆದಾಯವೂ ಹೆಚ್ಚುತ್ತದೆ. ಕುಟುಂಬದ ವ್ಯವಹಾರಗಳಲ್ಲಿ ಲಾಭವಿರುತ್ತದೆ. ತಂದೆಯಿಂದ ಸಾಂಪ್ರದಾಯಿಕ ಕೃಷಿಯ ಬಗ್ಗೆ ತಿಳುವಳಿಕೆ ಪಡೆಯಬಹುದು. ವೃತ್ತಿಯಲ್ಲಿದ್ದ ಶತ್ರುಗಳು ದೂರವಾಗುವರು.

ಧನಸ್ಸು ರಾಶಿ:
ನಿಮ್ಮ ಮುಂದಾಳತ್ವದ ಬಗ್ಗೆ ಎಲ್ಲರಿಂದ ಪ್ರಶಂಸೆಯ ಮಾತುಗಳು ಕೇಳಿಬರುತ್ತವೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶಸ್ಸು ಕಾಣುವ ಸಾಧ್ಯತೆ ಇದೆ. ವಾಹನ ಖರೀದಿಯ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರುವಿರಿ. ಪ್ರತಿಸ್ಪರ್ಧಿಗಳ ಸವಾಲನ್ನು ಸರಿಯಾಗಿ ಅವಲೋಕಿಸಿ ಎದುರುತ್ತರ ಕೊಡುವುದು ಉತ್ತಮ. ಹಣಕಾಸಿನ ವಿಚಾರದಲ್ಲಿ ಹೆಚ್ಚು ಜಾಗರೂಕತೆಯಿಂದ ಇರುವುದು ಖಂಡಿತ ಉತ್ತಮ. ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವತ್ತ ನಿಮ್ಮ ಗಮನವನ್ನು ಕೊಡುವಿರಿ. ವಿದೇಶದಲ್ಲಿ ಓದಬೇಕೆನ್ನುವವರಿಗೆ ಅವಕಾಶಗಳು ಒದಗುವ ಸಾಧ್ಯತೆಯಿದೆ. ನರದೌರ್ಬಲ್ಯ ಇರುವವರು ವಿಶ್ರಾಂತಿ ಹಾಗೂ ವೈದ್ಯರ ಮೊರೆ ಹೋಗಿರಿ. ಉದ್ದಿಮೆಯನ್ನು ನಡೆಸುತ್ತಿರುವವರಿಗೆ ಸರ್ಕಾರದ ಕಿರಿಕಿರಿ ತಲೆದೋರಬಹುದು. ಕೆಲಕಾಲದ ನಂತರ ಇವು ಕಡಿಮೆಯಾಗುತ್ತವೆ.

ಮಕರ ರಾಶಿ:
ಕೆಲಸಕಾರ್ಯಗಳಲ್ಲಿ ಹೊಸ ಉತ್ಸಾಹವನ್ನು ಕಾಣಬಹುದು. ರಾಜಕಾರಣಿಗಳು ತಮ್ಮ ಸ್ಥಾನಮಾನಕ್ಕಾಗಿ ಹಿರಿಯ ನಾಯಕರನ್ನು ಓಲೈಸುವರು. ದಿಢೀರ್‌ ನಿರ್ಧಾರಗಳಿಂದ ಕೆಲವು ಕೆಲಸಗಳು ನಿಧಾನವಾಗಬಹುದು. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಸ್ತ್ರೀಯರು ಹೊಂದಿರುವ ಆಸ್ತಿಗಳ ಮೇಲೆ ತಕರಾರು ಬರಬಹುದು. ವಿದ್ಯಾರ್ಥಿಗಳಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ಉದ್ಯೋಗ ಸ್ಥಳದಲ್ಲಿ ಇದ್ದ ಕಿರಿಕಿರಿ ದೂರವಾಗುತ್ತದೆ. ನಿಮ್ಮ ಹಿರಿಯರಿಂದ ಉತ್ತಮ ಮಾರ್ಗದರ್ಶನ ದೊರೆಯುತ್ತದೆ. ಯಾರಿಗೂ ಸಾಲ ಕೊಡುವುದು ಬೇಡ. ಜಾಮೀನು ನೀಡುವುದು ಖಂಡಿತ ಬೇಡ. ಕೆಲವೊಂದು ಬಾರಿ ಮಿತ್ರರ ಸಹಾಯದಿಂದ ಒತ್ತಡಗಳನ್ನು ನಿವಾರಣೆ ಮಾಡಿಕೊಳ್ಳುವಿರಿ. ಬಂಧುಗಳ ಆಸ್ತಿಯನ್ನು ಕೊಳ್ಳಬಹುದು.

ಕುಂಭ ರಾಶಿ:
ಕುಟುಂಬದವರೊಡನೆ ಧಾರ್ಮಿಕ ಸ್ಥಳಗಳನ್ನು ನೋಡುವ ಯೋಗವಿದೆ. ದೈನಂದಿನ ವ್ಯವಹಾರಗಳಲ್ಲಿ ಆಸಕ್ತಿ ಹೆಚ್ಚುತ್ತದೆ. ನಿಮ್ಮ ವ್ಯವಹಾರಗಳ ಗುಟ್ಟನ್ನು ಯಾರಿಗೂ ಹೇಳದಿರುವುದು ಬಹಳ ಉತ್ತಮ. ಸದ್ಯದಲ್ಲಿ ದೊಡ್ಡಮಟ್ಟದ ಹೂಡಿಕೆಗಳನ್ನು ಮಾಡದಿರುವುದು ಒಳಿತು. ವ್ಯವಹಾರದ ನಿಮಿತ್ತ ದೂರದ ಪ್ರದೇಶಗಳಿಗೆ ಹೋಗಿಬರುವಿರಿ. ಚಿಕ್ಕಮಕ್ಕಳ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆಯನ್ನು ಕಾಣಬಹುದು. ಆರ್ಥಿಕ ಸ್ಥಿತಿಯಲ್ಲಿ ಸ್ವಲ್ಪಮಟ್ಟಿನ ಚೇತರಿಕೆಯನ್ನು ಕಾಣಬಹುದು. ಬಹಳಷ್ಟು ದಿನದಿಂದ ಆಗದೆ ಕಾಡಿಸುತ್ತಿದ್ದ ಕೆಲಸವೊಂದು ಈಗ ಮುಗಿದು ಸಂತಸವೆನಿಸುತ್ತದೆ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಸರ್ಕಾರಿ ಕೆಲಸಗಳಲ್ಲಿ ಮುನ್ನಡೆಯನ್ನು ಕಾಣಬಹುದು. ಸ್ತ್ರೀಯರು ನಡೆಸುವ ವ್ಯವಹಾರಗಳಲ್ಲಿ ಹೆಚ್ಚು ಅಭಿವೃದ್ಧಿ ಇರುತ್ತದೆ.

ಮೀನ ರಾಶಿ:
ಸ್ವಯಂ ಉದ್ಯೋಗ ಮಾಡುವವರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ಕೆಲಸ ಕಾರ್ಯಗಳಲ್ಲಿ ಅಸಡ್ಡೆ ತೋರುವ ನೌಕರರು ಮೇಲಧಿಕಾರಿಗಳ ಅವಕೃಪೆಗೆ ಪಾತ್ರರಾಗುವ ಸಾಧ್ಯತೆ ಇದೆ. ಅನ್ಯರ ಅನಪೇಕ್ಷಿತ ಹಸ್ತಕ್ಷೇಪದಿಂದ ನಿಮ್ಮ ವ್ಯವಹಾರಗಳಲ್ಲಿ ವ್ಯತ್ಯಾಸ ಆಗಬಹುದು. ಯಾಂತ್ರಿಕ ತರಬೇತಿಯನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅತ್ಯಂತ ಮಹತ್ವದ ಕಾಲವಾಗಿರುತ್ತದೆ. ವಾಹನ ಚಲಾಯಿಸುವಾಗ ಹೆಚ್ಚಿನ ನಿಗಾ ಇರಲಿ. ಹಣಕಾಸಿನ ವ್ಯವಹಾರಗಳನ್ನು ಮಾಡುವುದು ನಷ್ಟಕ್ಕೆ ಕಾರಣವಾಗಬಹುದು. ಆರ್ಥಿಕ ಸ್ಥಿತಿಯು ಸಾಮಾನ್ಯವಾಗಿರುತ್ತದೆ. ಒಡವೆಗಳನ್ನು ಖರೀದಿ ಮಾಡಲು ಹೆಚ್ಚು ಆಸಕ್ತಿ ತೋರುವಿರಿ. ಚಿಕ್ಕಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿಯನ್ನು ಕಾಣಬಹುದು.

Leave a Comment

Your email address will not be published. Required fields are marked *