ತಾಯಿಗೆ ಚಾಕುವಿನಿಂದ ಇರಿದು ಪ್ರಿಯಕರನ ಜೊತೆ ಅಪ್ರಾಪ್ತ ಮಗಳು ಪರಾರಿ

ಸಮಗ್ರ ನ್ಯೂಸ್: ತನ್ನ ತಾಯಿಯನ್ನೇ ಚಾಕುವಿನಿಂದ ಇರಿದು ಅಪ್ತಾಪ್ತೆಯೊಬ್ಬಳು ತನ್ನ ಪ್ರೇಮಿಯೊಂದಿಗೆ ಪರಾರಿಯಾಗಿರುವ ಘಟನೆ ಧಾರವಾಡ ನಗರದಲ್ಲಿ ನಡೆದಿದೆ.

Ad Widget ... ..

ಕಳೆದ ರಾತ್ರಿ ಪ್ರಿಯಕರನ ಜೊತೆ ಸೇರಿ ತಾಯಿಗೆ ಇರಿದು ಬಾಲಕಿ ಪರಾರಿಯಾಗಿದ್ದಾಳೆ. ಕಳೆದ ವರ್ಷ ಇದೇ ಬಾಲಕಿ ವಿಚಾರವಾಗಿ ಪ್ರಿಯಕರ ಜೈಲು ಸೇರಿದ್ದ.ಪೋಕ್ಸೋ ಕಾಯ್ದೆ ಅಡಿ ಪ್ರಿಯಕರನನ್ನು ಬಂಧಿಸಲಾಗಿತ್ತು.

Ad Widget

ಆದರೆ ಏಪ್ರಿಲ್‌ನಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ. ಅಪ್ರಾಪ್ತೆ ಕೂಡಾ ಸಾಂತ್ವನ ಕೇಂದ್ರದಲ್ಲಿ ಇದ್ದಳು. ಮಗಳನ್ನು ಕಾಲೇಜಿಗೆ ಸೇರಿಸಲು ತಾಯಿ, ಮನೆಗೆ ವಾಪಸ್‌ ಕದೆರುಕೊಂಡು ಬಂದಿದ್ದರು.

ಕಳೆದ ರಾತ್ರಿ ಬಾಲಕಿ ಹಾಗೂ ಆಕೆಯ ಪ್ರೇಮಿ ಸೇರಿ ತಾಯಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಘಟನೆಯಲ್ಲಿ ಗಾಯಗೊಂಡ ತಾಯಿಯನ್ನು ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಧಾರವಾಡ ಉಪನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Comment

Your email address will not be published. Required fields are marked *