Ad Widget .

ಸುಳ್ಯ ಕಾಲೇಜು: ಐಆರ್‌ಸಿಎಂಡಿ ಶಿಕ್ಷಣ ಸಂಸ್ಥೆಯಿಂದ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಕಾರ‍್ಯಾಗಾರ

ಸುಳ್ಯ: ಸ.ಪ್ರ.ದ. ಕಾಲೇಜು, ಸುಳ್ಯ ಇಲ್ಲಿ ಐಆರ್‌ಸಿಎಂಡಿ ಶಿಕ್ಷಣ ಸಂಸ್ಥೆ ಮತ್ತು ಸ.ಪ್ರ.ದ. ಕಾಲೇಜು ಆಂತರಿಕ ಗುಣಮಟ್ಟ ಭರವಸಾ ಕೋಶ ವತಿಯಿಂದ ““MATHS SHORT CUT TRICKS & TIPS FOR COMPETITIVE EXAMS” ” ಎಂಬ ವಿಷಯದ ಬಗ್ಗೆ ತರಬೇತಿ ಕರ‍್ಯಾಗಾರ ಹಮ್ಮಿಕೊಳ್ಳಲಾಯಿತು.

Ad Widget . Ad Widget .


ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ. ಸತೀಶ್ ಕುಮಾರ್ ಕೆ. ಆರ್ ವಹಿಸಿದ್ದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಪುತ್ತೂರು ಮತ್ತು ಸುಳ್ಯ ಐಆರ್‌ಸಿಎಂಡಿ ಎಜ್ಯುಕೇಷನ್ ಸೆಂಟರ್‌ನ ಮುಖ್ಯಸ್ಥೆ ಶ್ರೀಮತಿ ಪ್ರಫುಲ್ಲಾ ಗಣೇಶ್ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಉದ್ಯೋಗ ಭರವಸಾ ಕೋಶ ಸಂಚಾಲಕರು ಹಾಗೂ ಗಣಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ. ಸುರೇಶ್ ಕುಮಾರ್ ಹೆಚ್ ಎಂ, ಐಕ್ಯುಎಸಿ ಸಂಚಾಲಕರು ಹಾಗೂ ರಾಜ್ಯಶಾಸ್ತ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಜಯಶ್ರೀ ಕೆ ಮತ್ತು ಗಣಿತ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಗಾಯತ್ರಿ .ಪಿ ಉಪಸ್ಥಿತರಿದ್ದರು.

Ad Widget . Ad Widget .

Leave a Comment

Your email address will not be published. Required fields are marked *