ಸುಳ್ಯದ ಶಾಂತಿನಗರದಲ್ಲಿ ನಿರ್ಮಾಣ ಹಂತದಲ್ಲಿರುವ ತಾಲೂಕು ಕ್ರೀಡಾಂಗಣದ ಮಣ್ಣು ಕುಸಿಯುವ ಜಾಗಕ್ಕೆ ಟಾರ್ಪಲ್ ಹೊದಿಕೆಯನ್ನು ಹಾಕಲಾಗಿದ್ದು, ಇದರ ವೀಕ್ಷಣೆಯನ್ನು ಇಂದು ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ ವೀಕ್ಷಣೆ ನಡೆಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಾದ ಸುಂದರ ಕೇನಾಜೆ, ಹಾಗೂ ನವನೀತ್ ಬೆಟ್ಟಂಪಾಡಿ ಸ್ಥಳ ಪರಿಶೀಲನೆಗೆ ಬಂದ ಅಧಿಕಾರಿ ಅವರೊಂದಿಗೆ ಕ್ರೀಡಾಂಗಣಕ್ಕೆ ಹೊದಿಸಿದ ಟಾರ್ಪಲ್ ಮೇಲ್ಭಾಗದಲ್ಲಿ ವಿಸ್ತೀರ್ಣ ಕಡಿಮೆಯಾಗಿದ್ದು ಇನ್ನು ಸ್ವಲ್ಪ ಹೆಚ್ಚಿಸುವಂತೆ ಕೇಳಿಕೊಂಡರು.
ಕ್ರೀಡಾಂಗಣದ ಮಣ್ಣು ತುಂಬಿರುವ ಜಾಗದ ಮೇಲ್ಭಾಗದಲ್ಲಿ ಮಳೆ ನೀರು ನಿಲ್ಲುವ ಸಾಧ್ಯತೆಯಿದ್ದು ಆ ಭಾಗಕ್ಕೆ ಪ್ಲಾಸ್ಟಿಕ್ ಟಾರ್ಪಲ್ ಹಾಕುವಂತೆ ಮನವಿ ಮಾಡಿಕೊಂಡರು.
ಇದಕ್ಕೆ ಸ್ಪಂದಿಸಿದ ರಾಜೇಂದ್ರ ಕಲ್ಬಾವಿ ಸ್ಥಳದಲ್ಲಿದ್ದ ಗುತ್ತಿಗೆದಾರರಿಗೆ ಸ್ಥಳೀಯರು ಹೇಳುವಂತೆ ಪ್ಲಾಸ್ಟಿಕ್ ಕವರ್ ಹಾಕುವಂತೆ ನಿರ್ದೇಶನ ನೀಡಿದರು.
ನಂತರ ಕ್ರೀಡಾಂಗಣದ ನೀರು ಹರಿದುಹೋಗುವ ಜಾಗಕ್ಕೆ ತೆರಳಿ ನೀರು ಸರಾಗವಾಗಿ ಸಾಗಲು ಈಗಿರುವ ಕಣಿಯ ದ್ವಾರವನ್ನು ವಿಸ್ತೀರ್ಣ ಗೊಳಿಸಿಕೊಡಲು ಗುತ್ತಿಗೆದಾರರಿಗೆ ಸಲಹೆ ನೀಡಿದರು.
ನಂತರ ಸುದ್ದಿಯೊಂದಿಗೆ ಮಾತನಾಡಿದ ಅವರು ಪ್ಲಾಸ್ಟಿಕ್ ಟಾರ್ಪಲ್ ಹೊದಿಕೆ ಕೇವಲ ಈ ಮಳೆಗಾಲ ಕಳೆಯುವ ಸಂದರ್ಭಕ್ಕೆ ಮಾತ್ರವಾಗಿದ್ದು, ಈ ಭಾಗದಲ್ಲಿ ತಡೆಗೋಡೆ ನಿರ್ಮಿಸುವ ಬಗ್ಗೆ ಎಲ್ಲಾ ಕಾರ್ಯ ಯೋಜನೆಯನ್ನು ರೂಪಿಸಲಾಗಿದೆ.
ಮಳೆಗಾಲ ಕಳೆದ ತಕ್ಷಣ ತಡೆಗೋಡೆ ನಿರ್ಮಿಸುವ ಕಾರ್ಯ ಆರಂಭವಾಗಲಿದೆ ಎಂದು ಹೇಳಿದರು.
ಸ್ಥಳೀಯ ನಿವಾಸಿಗಳಲ್ಲಿ ಆತಂಕ ದೂರ ಮಾಡುವ ದೃಷ್ಟಿಯಿಂದ ಆಗಾಗ ಬಂದು ಸ್ಥಳದ ಪರಿಶೀಲನೆ ಮಾಡುವುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಇಂಜಿನಿಯರ್ ಹರೀಶ್ ಮೆದು ಉಪಸ್ಥಿತರಿದ್ದರು.