ಪ್ರಚೋದನಕಾರಿ ಹೇಳಿಕೆ| ನೂಪುರ್ ಶರ್ಮಾ ಬಳಿಕ ಓವೈಸಿ ವಿರುದ್ದ ಕೇಸ್ ದಾಖಲು

ಸಮಗ್ರ ನ್ಯೂಸ್: ಪ್ರಚೋದನಕಾರಿ ಹೇಳಿಕೆಗಳನ್ನ ನೀಡಿದ ಆರೋಪದ ಮೇಲೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ದೆಹಲಿ ಸೈಬರ್‌ ಪೊಲೀಸ ಠಾಣೆಯಲ್ಲಿ ಎರಡು ಎಫ್‌ಐಆರ್‌ ದಾಖಲಿಸಲಾಗಿದೆ. ಇನ್ನು ಇದರೊಂದಿಗೆ, ಯತಿ ನರಸಿಂಗಾನಂದ್ ಹೆಸರನ್ನ ಸಹ ಎಫ್‌ಐಆರ್ ನಲ್ಲಿ ಸೇರಿಸಲಾಗಿದೆ.

Ad Widget ... ..

ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಸೇರಿದಂತೆ ಎಂಟು ಜನರ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಇಬ್ಬರ ಹೆಸರುಗಳನ್ನು ಸೇರಿಸಲಾಗಿದೆ.

Ad Widget

ವಾತಾವರಣವನ್ನು ಕಲುಷಿತಗೊಳಿಸಿದ ಪ್ರಕರಣದಲ್ಲಿ ದಾಖಲಾದ ಎರಡು ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಿಗೆ ನೋಟಿಸ್ ನೀಡಿದ್ದಾರೆ ಮತ್ತು ಅವರಿಂದ ಮಾಹಿತಿ ಕೋರಿದ್ದಾರೆ. ಇನ್ನು ವಾತಾವರಣವನ್ನು ಹಾಳುಮಾಡುವ ಅಂತಹ ಪೋಸ್ಟ್ಗಳನ್ನು ತಪ್ಪಿಸಲು ದೆಹಲಿ ಪೊಲೀಸರು ಮನವಿ ಮಾಡಿದ್ದಾರೆ.

Leave a Comment

Your email address will not be published. Required fields are marked *