ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಅಡ್ಕಾರು ಅನುದಾನಿತ ಶಾಲೆಯೊಂದರ ಅಧ್ಯಾಪಕರು ಪಡಿತರ ಕೇಂದ್ರದಲ್ಲಿ ಶಾಲೆಯ ಅಕ್ಕಿಯನ್ನು ಬದಲಾಯಿಸಲು ವಿದ್ಯಾರ್ಥಿಗಳನ್ನು ಬಳಸಿರುವ ವಿಡಿಯೋ ಚಿತ್ರಣ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ಈ ಕುರಿತು ಇಂದು ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ದೂರು ನೀಡಿದ್ದು ದೂರಿನಲ್ಲಿ ವಿದ್ಯಾರ್ಥಿಗಳನ್ನು ಅಕ್ಕಿ ಚೀಲ ಎತ್ತಲು ಬಳಸಿದ ಅಧ್ಯಾಪಕರು ಮತ್ತು ಸೊಸೈಟಿ ಸಿಬ್ಬಂದಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಉಲ್ಲೇಖಿಸಲಾಗಿದೆ.
ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಅಡ್ಕಾರು ವಿವೇಕಾನಂದ ಖಾಸಗಿ ಶಾಲೆಗೆ ಬಿಸಿಯೂಟಕ್ಕೆ ಎಂದು ತಂದಿರುವ ಅಕ್ಕಿ ಮೂಟೆಯನ್ನು ಸ್ಥಳೀಯವಾಗಿದ್ದ ಪಡಿತರ ಅಂಗಡಿಗೆ ವರ್ಗಾಯಿಸಲು ಶಾಲೆಯ ಎಚ್ ಎಂ ಜಯಪ್ರಕಾಶ್ ಎಂಬುವವರು ವಿದ್ಯಾರ್ಥಿಗಳನ್ನು ಅಕ್ಕಿ ಚೀಲ ಎತ್ತಲು ಬಳಸಿಕೊಂಡಿದ್ದಾರೆ. ಪೋಷಕರು ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಕಳುಹಿಸಿರುತ್ತಾರೆ. ಆದರೆ ಇಲ್ಲಿ ಚೀಲವನ್ನು ವಿದ್ಯಾರ್ಥಿಗಳಿಂದ ಎತ್ತಿಸುವುದು ಅಪರಾಧವಾಗಿರುತ್ತದೆ. ಹಾಗೂ ಇಂತಹ ಕೆಲಸಕ್ಕೆ ಕೂಲಿ ಕಾರ್ಮಿಕರನ್ನು ಬಳಸಬೇಕಾಗಿತ್ತು. ಅದನ್ನು ಬಿಟ್ಟು ಈ ರೀತಿ ಬಾಲಕರನ್ನು ಕೆಲಸಕ್ಕೆ ಬೆಳೆಸಿಕೊಳ್ಳುವುದು ಕಾನೂನಿನಲ್ಲಿ ಅಪರಾಧವಾಗಿರುತ್ತದೆ. ಆದ್ದರಿಂದ ಶಾಲೆಯ ಮುಖ್ಯೋಪಾಧ್ಯಾಯರಾದ ಜಯಪ್ರಕಾಶ್ ಮತ್ತು ಸೊಸೈಟಿಯ ಸಿಬ್ಬಂದಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.