Ad Widget .

ಪಿಯುಸಿ ಇತಿಹಾಸ ಪಠ್ಯ ಪರಿಷ್ಕರಣೆ ಇಲ್ಲ, ಹಿಂದಿನ ಪಠ್ಯವೇ ಯಥಾವತ್ ಬೋಧನೆ – ಬಿ.ಸಿ ನಾಗೇಶ್

ಬೆಂಗಳೂರು: ಶಾಲಾ ಪಠ್ಯಪುಸ್ತಕರ ಪರಿಷ್ಕರಣೆ ವಿವಾದದ ಬಳಿಕ, ಇದೀಗ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆ ಇಲ್ಲ, ಈ ಹಿಂದಿನ ಪಠ್ಯಪುಸ್ತಕವೇ ಯಥಾವತ್ತಾಗಿ ಇರಲಿದೆ ಎಂಬುದಾಗಿ ಸಚಿವ ಬಿ.ಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ವಿಧಾನಸೌಧದಲ್ಲಿ ಮಾತನಾಡಿದ ಅವರು, ಪಿಯು ಪಠ್ಯಪುಸ್ತಕ ಯಥಾವತ್ತಾಗಿ ಇರಲಿದೆ. ಪರಿಷ್ಕರಣೆ ಮಾಡಲ್ಲ. ಈಗ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ವಿಸರ್ಜನೆ ಮಾಡಲಾಗಿದೆ. ಅದ್ದರಿಂದ ಈ ಸಮಿತಿಯಿಂದ ಪರಿಷ್ಕರಣೆ ಮಾಡಿಸುವುದಿಲ್ಲ ಎಂದರು.

Ad Widget . Ad Widget . Ad Widget .

ದ್ವಿತೀಯ ಪಿಯುಸಿ ಅಧ್ಯಾಯ 4.2 ಹೊಸ ಧರ್ಮಗಳ ಉದಯದಲ್ಲಿ ಕೆಲ ಅಂಶಗಳ ಬಗ್ಗೆ ಆಕ್ಷೇಪಗಳಿದ್ದವು ಆ ಅಧ್ಯಾಯವನ್ನು ಪರಿಷ್ಕರಿಸುವ ಹೊಣೆಯನ್ನು ರೋಹಿತ್ ಚಕ್ರತೀರ್ಥಗೆ ನೀಡಲಾಗಿತ್ತು. ಆದರೆ ಸಮಿತಿ ಈಗಾಗಲೇ ವಿಸರ್ಜಿಸಲಾಗಿದೆ. ಹೀಗಾಗಿ ಪಿಯು ಪರಿಷ್ಕರಣಾ ಸಮಿತಿಯನ್ನೂ ವಿಸರ್ಜಿಸಿದಂತಾಗಿದೆ. ಅದರ ವರದಿಯನ್ನು ಪಡೆಯುತ್ತಿಲ್ಲ ಎಂದು ತಿಳಿಸಿದ್ದಾರೆ.

ಶಾಲಾ ಪಠ್ಯಪುಸ್ತಕ ಕುರಿತಂತೆ ಬರಗೂರು ಸಮಿತಿ ನೀಡಿದ್ದ ಬಸವಣ್ಣ ಪಠ್ಯವನ್ನು ಮುಂದುವರೆಸಲಾಗುತ್ತದೆ. ಅಂಬೇಡ್ಕರ್ ಪಠ್ಯ ಸೇರಿದಂತೆ ಇತರೆ ಲೋಪಗಳನ್ನು ಸರಿಪಡಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

Leave a Comment

Your email address will not be published. Required fields are marked *