ರಾಜಕೀಯದ ದೊಡ್ಮನೆಯಲ್ಲಿ ಸಂಭ್ರಮ| ನಿಖಿಲ್ ಪುತ್ರನಿಗೆ‌ ನೆರವೇರಿದ ನಾಮಕರಣ ಶಾಸ್ತ್ರ

ಸಮಗ್ರ ನ್ಯೂಸ್: ರಾಜಕೀಯ ಧುರೀಣ ದೇವೇಗೌಡರ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ಗೌಡರ ಮರಿ ಮೊಮ್ಮಗನಿಗೆ ನಾಮಕರಣ ಮಾಡಲಾಗಿದೆ.

Ad Widget ... ..

ಮಾಜಿ ಸಿಎಂ ಕುಮಾರಸ್ವಾಮಿ ಅವರ ಮಗ, ರಾಜಕೀಯ ಹಾಗೂ ಚಿತ್ರರಂಗ ಎರಡಲ್ಲೂ ಬ್ಯುಸಿ ಇರುವ ನಿಖಿಲ್ ಕುಮಾರಸ್ವಾಮಿ ಮಗನ ನಾಮಕರಣ ಶಾಸ್ತ್ರ ಇಂದು ನೆರವೇರಿದ್ದು ಅವ್ಯನ್ ದೇವ್ ಎಂದ ಹೆಸರಿಡಲಾಗಿದೆ.

Ad Widget

ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ನಾಮಕರಣ ಶಾಸ್ತ್ರ ಮಾಡಲಾಗಿದ್ದು, ಬೆಳಗ್ಗೆ 10:30 ರಿಂದ 12:20 ರವರೆಗೂ ನಡೆಯುವ ಶುಭ ಲಗ್ನದಲ್ಲಿ ನಾಮಕರಣ ಶಾಸ್ತ್ರ ನಡೆಯಿತು. ಇನ್ನು ಈ ಕಾರ್ಯಕ್ರಮದ ಜೊತೆ ಪ್ರಪೌತ್ರ ಜನನ ಶಾಂತಿ , ನಾಮಕರಣ, ಕನಕಾಭಿಷೇಕ ಕಾರ್ಯಕ್ರಮಗಳನ್ನು ಗೌಡರ ಕುಟುಂಬ ಹಮ್ಮಿಕೊಂಡಿದ್ದು, ಬಹಳ ಸರಳವಾಗಿ ಸಮಾರಂಭವನ್ನು ಮಾಡಲಾಗುತ್ತಿದೆ.

ರೇವತಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರ ಮಗನಿಗೆ ಸದ್ಯ 9 ತಿಂಗಳು ತುಂಬಿದ್ದು, ಈಗ ಅವ್ಯನ್ ದೇವ್ ಎಂದು ನಾಮಕರಣ ಮಾಡಲಾಗಿದೆ.

Leave a Comment

Your email address will not be published. Required fields are marked *