Ad Widget .

ಅತಿರಂಜನೆಯ ಸೆಕ್ಸ್ ಗಾಗಿ ವಯಾಗ್ರಾ ಬಳಸಿದ ಗಂಡ| ಜೀವನ ಪೂರ್ತಿ ಹಿಂಗೇ ಇರ್ತಾನೆ ಅಂದ ವೈದ್ಯರು| ಮುಂದೆ…

ಸಮಗ್ರ ನ್ಯೂಸ್: ಪತ್ನಿಗೆ ಅತಿಯಾದ ರೀತಿಯಲ್ಲಿ ಲೈಂಗಿಕ ತೃಪ್ತಿ ನೀಡಬಯಸಲು ಹೋಗಿ ಸ್ನೇಹಿತರ ಮಾತು ಕೇಳಿ ನವವಿವಾಹಿತನೊಬ್ಬ ಇದೀಗ ಜೀವನಪೂರ್ತಿ ಪೇಚಿಗೆ ಸಿಲುಕಿರುವ ಘಟನೆ ಉತ್ತರ ಪ್ರದೇಶದ ಲಖನೌನಲ್ಲಿ ನಡೆದಿದೆ.

Ad Widget . Ad Widget .

ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ವಯಾಗ್ರ ಮಾತ್ರೆ ಸೇವಿಸಿರುವ ಕಾರಣ, ಯುವಕನೊಬ್ಬ ತನ್ನ ಖಾಸಗಿ ಅಂಗದ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿ ಬಂದದ್ದೂ ಅಲ್ಲದೇ, ಇದೀಗ ಆತ ಜೀವನಪೂರ್ತಿ ನೋವು ಅನುಭವಿಸುವಂತಾಗಿದೆ.

Ad Widget . Ad Widget .

ಯುವಕನ ಮದುವೆ ಫಿಕ್ಸ್​ ಆದ ತಕ್ಷಣ ಈತನಿಗೆ ತನ್ನ ಪತ್ನಿಯನ್ನು ಅತಿಯಾದ ರೀತಿಯಲ್ಲಿ ತೃಪ್ತಿ ಪಡಿಸಬೇಕು ಎನ್ನಿಸಿದೆ. ಅದಕ್ಕಾಗಿ ಈತ ಸ್ನೇಹಿತರ ಸಲಹೆ ಕೇಳಿದ್ದಾನೆ. ಸ್ನೇಹಿತರ ಸಲಹೆ ಮೇರೆಗೆ ವಯಾಗ್ರ ಮಾತ್ರೆ ಸೇವಿಸಲು ಆರಂಭಿಸಿದ್ದ. ಆದರೆ ಅದರಲ್ಲಿ ಉಲ್ಲೇಖವಾಗಿರುವಂತೆ ಮತ್ತು ಸ್ನೇಹಿತರು ತಿಳಿಸಿರುವಷ್ಟು ಪ್ರಮಾಣದಲ್ಲಿ ಇದರ ಸೇವನೆ ಮಾಡುವ ಬದಲು ಅತಿಯಾದ ಮಾತ್ರೆ ಸೇವಿಸಿದ್ದಾನೆ.

ದಿನಕ್ಕೆ 200 ಮಿಲಿ ಗ್ರಾಂ ಕಡಿಮೆ ಪ್ರಮಾಣದ ಮಾತ್ರೆಯನ್ನು ಸೇವಿಸಲು ಸೂಚಿಸಲಾಗಿತ್ತು. ಆದರೆ ಅದರ ನಾಲ್ಕು ಪಟ್ಟು ಹೆಚ್ಚಿನ ಮಾತ್ರೆ ಸೇವಿಸಿದ್ದಾನೆ. ಇದರಿಂದಾಗಿ 20 ದಿನಗಳವರೆಗೆ ಈತನಿಗೆ ನಿಮಿರುವಿಕೆ ಕಡಿಮೆಯಾಗಲೇ ಇಲ್ಲ. ಈತನ ಕಾಟಕ್ಕೆ ಬೇಸತ್ತ ಪತ್ನಿ ಆತನನ್ನು ಬಿಟ್ಟು ತವರು ಮನೆ ಸೇರಿದಳು. ನಂತರ ಪತಿ ಕುಟುಂಬಸ್ಥರು ಆಕೆಯನ್ನು ಸಮಾಧಾನ ಪಡಿಸಿ ಮನೆಗೆ ಕರೆತಂದಿದ್ದಾರೆ.

ಆದರೆ ವಯಾಗ್ರದ ಹಿನ್ನೆಲೆಯಲ್ಲಿ ಯುವಕನಿಗೆ ತೀರಾ ಕಷ್ಟವಾಗಲು ಶುರುವಾಗಿದೆ. ಪತ್ನಿಗೆ ಈತನ ಹಿಂಸೆ ಸಹಿಸಲು ಕಷ್ಟವಾಗಿಬಿಟ್ಟಿದೆ. ನಂತರ ಎಲ್ಲರೂ ಕುಳಿತು ಸಮಾಲೋಚನೆ ಮಾಡಿದ ಬಳಿಕ ಯುವಕನನ್ನು ಆಸ್ಪತ್ರೆಗೆ ಸೇರಿಸಲಾಯಿತು. ನಾಲ್ಕು ಪಟ್ಟು ಹೆಚ್ಚಿಗೆ ಮಾತ್ರೆ ಸೇವಿಸಿದ್ದರಿಂದ ಅನಿವಾರ್ಯವಾಗಿ ಆತನ ಶಿಶ್ನದ ಶಸ್ತ್ರಚಿಕಿತ್ಸೆಯನ್ನು ಮಾಡಬೇಕಾಗಿ ಬಂತು.

ಶಸ್ತ್ರಚಿಕಿತ್ಸೆ ಯಶಸ್ವಿಯಾದರೂ ವೈದ್ಯರು ಹೇಳಿರುವ ಪ್ರಕಾರ, ದೇಹದಲ್ಲಿನ ಹಾರ್ಮೋನ್​ನಲ್ಲಿ ಸಿಕ್ಕಾಪಟ್ಟೆ ವ್ಯತ್ಯಾಸವಾಗಿರುವ ಹಿನ್ನೆಲೆಯಲ್ಲಿ ಆತನ ಖಾಸಗಿ ಅಂಗದಲ್ಲಿರುವ ನೋವು ಎಂದಿಗೂ ಕಡಿಮೆಯಾಗುವುದಿಲ್ಲ. ಉಬ್ಬುವಿಕೆಯನ್ನು ಮರೆಮಾಡಲು ಅವನು ಶಾಶ್ವತವಾಗಿ ಬಿಗಿಯಾದ ಬಟ್ಟೆಯನ್ನು ಧರಿಸಬೇಕಾಗುತ್ತದೆ ಎಂದಿದ್ದಾರೆ. ಮಕ್ಕಳಾಗಲು ಯಾವುದೇ ಸಮಸ್ಯೆ ಇಲ್ಲ. ಆದರೆ ಮಾತ್ರೆ ಅಡ್ಡ ಪರಿಣಾಮ ಬೀರಿರುವ ಕಾರಣ, ಬಿಗಿಯಾದ ಬಟ್ಟೆ ಧರಿಸುವುದು ಅನಿವಾರ್ಯ ಎಂದಿದ್ದಾರೆ.

Leave a Comment

Your email address will not be published. Required fields are marked *