ಲಾರಿ‌ಚಕ್ರದಡಿಗೆ ಸಿಲುಕಿದ ಅರ್ಧ ದೇಹ| ನರಳಾಡಿ ಪ್ರಾಣಬಿಟ್ಟ ಬಾಲಕ

ಸಮಗ್ರ ನ್ಯೂಸ್: ಅರ್ಧ ದೇಹ ಲಾರಿ ಚಕ್ರದಡಿಗೆ ಸಿಲುಕಿ ಬಾಲಕನೋರ್ವ ನರಳಾಡಿ ಪ್ರಾಣಬಿಟ್ಟ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ. ಚಕ್ರದಡಿಗೆ ಸಿಲುಕಿದ್ದ ಆತನನ್ನು ರಕ್ಷಿಸಲಾಯಿತಾದರೂ ತೀವ್ರವಾಗಿ ಗಾಯಗೊಂಡಿದ್ದ ಆ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾನೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗೀರಗಾಂವ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

Ad Widget ... ..

ಚಿಕ್ಕೋಡಿ ತಾಲೂಕಿನ ಗೀರಗಾಂವ ಗ್ರಾಮದಲ್ಲಿ ಬಾಲಕನೊಬ್ಬ ಅಂಗಡಿಗೆ ಹೋಗಿ ಬರುವಾಗ ಲಾರಿಯೊಂದು ಏಕಾಎಕಿ ನುಗ್ಗಿದೆ. ಪರಿಣಾಮ ಲಾರಿಯ ಚಕ್ರಕ್ಕೆ ಬಾಲಕ ಸಿಲುಕಿದ್ದಾನೆ.ಆದರೆ ಲಾರಿ ಅತೀ ವೇಗದಲ್ಲಿದ್ದ ಪರಿಣಾಮ ಬಾಲಕ ಸಮೇತ ಲಾರಿ ಚಕ್ರ ಅನತಿ ದೂರದಲ್ಲಿದ್ದ ಚರಂಡಿಯೊಳಗೆ ಹೋಗಿ ಸಿಲುಕಿಕೊಂಡಿದೆ. ದುರದೃಷ್ಟವಶಾತ್‌ ಆ ಬಾಲಕನ ದೇಹದ ಸೊಂಟದವರೆಗಿನ ಅರ್ಧ ಭಾಗ ಹೊರಗಿದ್ದರೆ,ಇನ್ನರ್ಧ ಭಾಗ ಮಾತ್ರ ಚರಂಡಿ ಹಾಗೂ ಲಾರಿ ಚಕ್ರದ ನಡುವೆ ಸಿಲುಕಿತ್ತು..

Ad Widget

ಇನ್ನು ಅಲ್ಲಿದ್ದ ಜನರೆಲ್ಲಾ ಬಾಲಕನ್ನು ಹೊರತೆಗೆಯಲು ಹರಸಾಹಪಟ್ಟರು.ಕೊನೆಗೆ ಜೆಸಿಬಿ ಸಹಾಯದಿಂದ ಬಾಲಕನ್ನು ಲಾರಿಚಕ್ರ-ಚರಂಡಿ ನಡುವಿನ ಸ್ಥಳದಿಂದ ಹೊರ ತರಲಾಯಿತು.

ಇದೇ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಬಾಲಕನನ್ನು ನಿಪ್ಪಾಣಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆ ಬಾಲಕ ಇದೀಗ ಸಾವು ಕಂಡಿದ್ದಾನೆ.

Leave a Comment

Your email address will not be published. Required fields are marked *