ಸಮಗ್ರ ನ್ಯೂಸ್: ಬಿಸಿಯೂಟಕ್ಕೆ ಎಂದು ತಂದಿರಿಸಿರುವ ಹಳೆಯ ಅಕ್ಕಿ ಮೂಟೆಗಳನ್ನು ಅನುದಾನಿತ ಶಾಲೆಯೊಂದರ ಅಧ್ಯಾಪಕರು ಸ್ಥಳೀಯವಾಗಿ ಇದ್ದ ಪಡಿತರ ಅಂಗಡಿಗೆ ವರ್ಗಾಯಿಸಿರುವ ಮತ್ತು ವರ್ಗಾಯಿಸುವ ಸಂದರ್ಭದಲ್ಲಿ ಅಕ್ಕಿ ಮೂಟೆಯನ್ನು ಎತ್ತಲು ವಿದ್ಯಾರ್ಥಿಗಳ ಬಳಕೆ ಮಾಡಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ವಿಡಿಯೋ ವೈರಲ್ ಮಾಡಿರುವವರು ಅಡ್ಕಾರು ಪಡಿತರ ಕೇಂದ್ರದಲ್ಲಿ ಶಾಲೆಯಲ್ಲಿ ಉಳಿದಿರುವ ಹುಳು ತುಂಬಿದ ಅಕ್ಕಿಯನ್ನು ಸಾರ್ವಜನಿಕರಿಗೆ ವಿತರಿಸಿ ಶಾಲೆಗೆ ಉತ್ತಮ ಅಕ್ಕಿಯನ್ನು ನೀಡಿ ಪಡಿತರಿಗೆ ಅನ್ಯಾಯವೆಸಗುತ್ತಿದ್ದಾರೆ ಎಂದು ಆರೋಪಿಸಿದ ಸಂದೇಶ ಹರಿದಾಡುತ್ತಿದೆ.
ಜಾಲತಾಣದಲ್ಲಿ ಈ ಸಂದೇಶಗಳು ಹರಿದಾಡುತ್ತಿದ್ದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇದಲ್ಲದೆ ಈ ಕೆಲಸಕ್ಕೆ ಶಾಲೆಯ ವಿದ್ಯಾರ್ಥಿಗಳನ್ನು ಬಳಸಿಕೊಂಡ ಶಾಲಾ ಅಧ್ಯಾಪಕರು ಮತ್ತು, ಸೊಸೈಟಿ ಸಿಬ್ಬಂದಿ ಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು, ಹಾಗೂ ಇದಕ್ಕೆ ಶಿಕ್ಷಣ ಅಧಿಕಾರಿಗಳು ಮಧ್ಯಪ್ರವೇಶಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಪ್ರಕರಣದ ಕುರಿತ ಸತ್ಯಾಸತ್ಯತೆ ಇನ್ನಷ್ಟೇ ಬೆಳಕಿಗೆ ಬರಬೇಕಿದೆ.