ಪರಪುರುಷನೊಂದಿಗೆ ಮಲಗಲು ಒತ್ತಾಯಿಸುತ್ತಿದ್ದ ಪತಿ| ಗಂಡನ ಕಿರುಕುಳ ತಾಳಲಾರದೆ ಠಾಣೆ ಮೆಟ್ಟಿಲೇರಿದ ಪತ್ನಿ

ಸಮಗ್ರ ನ್ಯೂಸ್: ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯ ಹಾಗೂ ಪರ ಪುರುಷನೊಂದಿಗೆ ಮಲಗುವಂತೆ ಹಿಂಸೆ ನೀಡಿದ ಆರೋಪದಡಿ ಗಂಡನ ವಿರುದ್ಧ ಹೆಂಡತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

Ad Widget ... ..

ಅರಕೆರೆ ನಿವಾಸಿಯಾಗಿರುವ ಎಡ್ರಿಲ್ ತೈಮಲ್ ಡಿಕುನ್ಹ (28) ವಿರುದ್ಧ ಲೈಂಗಿಕ ದೌರ್ಜನ್ಯ, ಮಾನಸಿಕ ಕಿರುಕುಳ ಹಾಗೂ ವರದಕ್ಷಿಣೆಗೆ ಒತ್ತಾಯ ಮಾಡುತ್ತಿರುವುದಾಗಿ ಪತ್ನಿ ಆರೋಪಿಸಿದ್ದು, ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget

ಪತ್ನಿ ಹಣದಲ್ಲಿ ಮೋಜು-ಮಸ್ತಿ ಮಾಡ್ತಿದ್ದ ಎಡ್ರಿಲ್, ಆಕೆಯ ದುಡ್ಡಿನಲ್ಲಿ ಪರ ಸ್ತ್ರೀಯರಿಗೆ ಬೇಕಾಬಿಟ್ಟಿ ಖರ್ಚು ಮಾಡುತ್ತಿದ್ದನಂತೆ. ಅಚಾನಕ್ ಆಗಿ ಗಂಡನ ಮೊಬೈಲ್​​ನಲ್ಲಿದ್ದ ಆಶ್ಲೀಲ ಫೋಟೊ- ವಿಡಿಯೋ ನೋಡಿದ ಪತ್ನಿ ದಂಗಾಗಿದ್ದಾಳೆ. ಹಲವರೊಂದಿಗೆ ದೈಹಿಕ ಸಂಬಂಧ ಹೊಂದಿದ್ದ ಪತಿ ಎಡ್ರಿಲ್, ಆ ವೇಳೆ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಚಿತ್ರೀಕರಣ ಮಾಡಿಕೊಂಡಿದ್ದನಂತೆ.

ಕೆಲಸ‌ಕಾರ್ಯ ಮಾಡದೆ ಪತ್ನಿ ದುಡಿದ ಹಣ ಪಡೆದು ಈ ಎಡ್ರಿಲ್ ಪೋಲಿಯಾಟ ಆಡುತ್ತಿದ್ದ ಎಂದು ತಿಳಿದುಬಂದಿದೆ. ಈ ಬಗ್ಗೆ ಪತ್ನಿ ಪ್ರಶ್ನೆ ಮಾಡಿದ್ದಕ್ಕೆ ಆಕೆಯನ್ನೇ ಬಿಟ್ಟು ಎಸ್ಕೇಪ್ ಆಗಿದ್ದ. ಸಾಲದ್ದಕ್ಕೆ ತನ್ನ ಸ್ನೇಹಿತೆಯರಿಗೂ ಲೈಂಗಿಕ ಕಿರುಕುಳ ನೀಡ್ತಿದ್ದ ಎಂದು ಪತ್ನಿ ಆರೋಪಿದ್ದಾಳೆ‌.

Leave a Comment

Your email address will not be published. Required fields are marked *