Ad Widget .

‘ಲವ್, ಸೆಕ್ಸ್ & ದೋಖಾ’ | ಪ್ರೀತಿ ನಾಟಕವಾಡಿದ ಎಂಜಿನಿಯರ್ ಅಂದರ್

ಸಮಗ್ರ ನ್ಯೂಸ್: ಮದುವೆಯಾಗುವುದಾಗಿ ನಂಬಿಸಿ ಪ್ರೀತಿಸಿದ ಯುವತಿಯ ಜೊತೆ ದೈಹಿಕ ಸಂಪರ್ಕ ನಡೆಸಿ ಬಳಿಕ ಆಕೆಗೆ ವಂಚಿಸಿರುವ ಆರೋಪದಡಿ ಬಳ್ಳಾರಿ ಕೆಎಂಎಫ್​ನ ಅಸಿಸ್ಟೆಂಟ್ ಟೆಕ್ನಿಕಲ್ ಎಂಜಿನಿಯರ್​ವೊಬ್ಬರನ್ನು ಇಲ್ಲಿನ ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

Ad Widget . Ad Widget .

ಪಿ.ವೆಂಕಟೇಶ್ ಎಂಬುವರೆ ಬಂಧಿತ ಎಂಜಿನಿಯರ್. ರಾಯಚೂರು ಮೂಲದ ಆರೋಪಿಯು ಬಳ್ಳಾರಿಯ ಯುವತಿಯೊಬ್ಬಳನ್ನು ಪ್ರೀತಿಸಿದ್ದ. ಬಳಿಕ ಮದುವೆಯಾಗುವುದಾಗಿ ಹೇಳಿಕೊಂಡು ನಿರಂತರ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ತದನಂತರ ಯುವತಿ ಮದುವೆಯಾಗೋಣ ಎಂದಾಗ ಅದೆಲ್ಲ ಸದ್ಯ ಬೇಡ, ಹೀಗೆಯೇ ಸ್ನೇಹಿತರಾಗಿ ಇರೋಣ ಎಂದು ಹೇಳಿ ನಿರಂತರ ಅತ್ಯಾಚಾರ ಮಾಡಿ ಮೋಸ ಮಾಡಿದ್ದಾನೆ ಎಂದು ದೂರಲಾಗಿದೆ.

Ad Widget . Ad Widget .

ಯುವಕನ ಮಾತಿನಿಂದ ಯುವತಿಗೆ ಪ್ರೀತಿಯ ನಾಟಕವಾಡಿ ವಂಚನೆ ಆಗಿರುವುದು ಗೊತ್ತಾಗಿದೆ. ಹೀಗಾಗಿ, ಪ್ರೇಮದ ವಿಚಾರವನ್ನು ಮನೆಯವರಲ್ಲಿ ತಿಳಿಸಿದ್ದಾಳೆ. ವಿಷಯ ತಿಳಿದ ಪೋಷಕರು ವೆಂಕಟೇಶ್​​ ಬಳಿ ತಮ್ಮ ಮಗಳನ್ನು ಮದುವೆ ಆಗುವಂತೆ ಕೇಳಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ತಾನು ಮದುವೆಯಾಗುವುದಿಲ್ಲ ಎಂದು ಎಂಜಿನಿಯರ್ ಗಲಾಟೆ ಮಾಡಿದ್ದಾನೆ ಎನ್ನಲಾಗಿದೆ.

ನಂತರ ಯುವತಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ದೂರು ನೀಡಿದ್ದು, ಪೊಲೀಸರು ಆರೋಪಿ ವೆಂಕಟೇಶ್ ಹಾಗೂ ಆತನಿಗೆ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಸಹೋದರರಾದ ರಾಮಕೃಷ್ಣ, ತಾಯಣ್ಣ ಅವರನ್ನು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ.

Leave a Comment

Your email address will not be published. Required fields are marked *