Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಈ ವಾರ ನಿಮ್ಮ ರಾಶಿಗಳಲ್ಲಿ ಉಂಟಾಗುವ ಬದಲಾವಣೆಗಳೇನು? ಯಾರಿಗೆ ಯಾವ ಶುಭಫಲವಿದೆ, ಪರಿಹಾರೋಪಾಯಗಳನ್ನು ತಿಳಿದುಕೊಳ್ಳೋಣ ಬನ್ನಿ…

Ad Widget . Ad Widget .

ಮೇಷ ರಾಶಿ:
ಹಿರಿಯರೊಂದಿಗೆ ಮನಃಸ್ತಾಪ ಆಗುವ ಸಾಧ್ಯತೆ. ಇಷ್ಟಮಿತ್ರರ ಆಗಮನದಿಂದ ಮನಸ್ಸಿಗೆ ಸಂತೋಷವಾಗುತ್ತದೆ. ನೌಕಾಯಾನದಲ್ಲಿ ಕೆಲಸ ಮಾಡುತ್ತಿರುವವರಿಗೆ ಸಮಯ ಉತ್ತಮವಾಗಿರುತ್ತದೆ. ಪ್ರಸಕ್ತ ರಾಜಕೀಯದಲ್ಲಿ ಇರುವವರಿಗೆ ಅನಿರೀಕ್ಷಿತ ಸುದ್ದಿಯೊಂದು ದಿಗ್ಭ್ರಮೆ ಮೂಡಿಸುತ್ತದೆ. ಸ್ಥಿರಾಸ್ತಿಯ ದಾಖಲೆಯಲ್ಲಿದ್ದ ತೊಡಕುಗಳು ನಿವಾರಣೆಯಾಗುತ್ತವೆ. ಹಿರಿಯರಿಗೆ ತೀರ್ಥಕ್ಷೇತ್ರಗಳ ದರ್ಶನಭಾಗ್ಯ ಒದಗಿಬರುತ್ತದೆ. ನಿಮ್ಮ ನಿರೀಕ್ಷಿತ ಕಾರ್ಯದಲ್ಲಿ ನೀವು ಮೇಲುಗೈ ಸಾಧಿಸುವಿರಿ. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಇಲ್ಲಸಲ್ಲದ ವಿಚಾರಗಳನ್ನು ತಲೆಗೆ ತುಂಬಿಕೊಂಡು ಮಾನಸಿಕ ಒತ್ತಡ ಹೆಚ್ಚುಮಾಡಿಕೊಳ್ಳಬೇಡಿ.

Ad Widget . Ad Widget .

ವೃಷಭರಾಶಿ:
ಭೂ ವ್ಯವಹಾರವನ್ನು ಮಾಡುವವರಿಗೆ ಉತ್ತಮ ಏಳಿಗೆ ಇರುತ್ತದೆ. ತೈಲವಸ್ತುಗಳನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ಲಾಭವು ಇರುತ್ತದೆ. ಪಾಲುದಾರಿಕೆ ವ್ಯವಹಾರ ಮಾಡುವುದು ಬಹಳ ಉತ್ತಮ. ಇದರಿಂದ ನಿಮಗೆ ಹೆಚ್ಚು ಲಾಭ ಬರುತ್ತದೆ. ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ. ನಿರೀಕ್ಷಿತ ಮೂಲಗಳಿಂದ ಹಣ ಒದಗಿ ಬರುತ್ತದೆ. ಸಹೋದರಿಯರಿಂದ ನಿಮ್ಮ ಕೆಲಸಗಳಿಗೆ ಸಹಕಾರ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ ಇರುತ್ತದೆ. ಅಜೀರ್ಣ ನಿಮ್ಮನ್ನು ಬಾಧಿಸಬಹುದು. ಕೃಷಿಕರಿಗೆ ಉತ್ತಮ ಆದಾಯ ಒದಗಿಬರುತ್ತದೆ. ಹಿರಿಯರಿಂದ ಸಾಂಪ್ರದಾಯಿಕ ಕೃಷಿಯ ಬಗ್ಗೆ ತಿಳಿವಳಿಕೆ ದೊರೆಯುತ್ತದೆ. ಆಭರಣಗಳ ಬಗ್ಗೆ ಎಚ್ಚರಿಕೆ ವಹಿಸಿ.

ಮಿಥುನ ರಾಶಿ:
ವಿದ್ಯಾರ್ಥಿಗಳಿಗೆ ಅತ್ಯಂತ ಮಹತ್ವವಾದ ಕಾಲವೆನಿಸುತ್ತದೆ. ನಿರುದ್ಯೋಗಿಗಳನ್ನು ಅವರ ಹಳೆಯ ಸಂಸ್ಥೆಗಳು ಪುನಃ ಕೆಲಸಕ್ಕೆ ಕರೆಯಬಹುದು. ನಿಮ್ಮ ಮಿತ್ರರ ಸಹಕಾರದಿಂದ ರಾಜಕೀಯ ವ್ಯವಹಾರಗಳು ಸುಗಮವಾಗುತ್ತದೆ. ಆರ್ಥಿಕ ದೃಢೀಕರಣದಿಂದ ನಿಮ್ಮ ಹೊಸ ಕೆಲಸ ಕಾರ್ಯಗಳಿಗೆ ಅನುಕೂಲವಾಗುತ್ತದೆ. ಮೇಲಧಿಕಾರಿಯ ತಲೆನೋವು ತಪ್ಪುವ ಸಾಧ್ಯತೆ ಇದೆ. ಉದ್ಯೋಗರಂಗದಲ್ಲಿ ಆತ್ಮವಿಶ್ವಾಸದ ಬೆಳವಣಿಗೆಯನ್ನು ಕಾಣಬಹುದು. ಬರೀ ಬಾಯಿ ಮಾತಿನ ಮೇಲೆ ಬಂಡವಾಳ ಹೂಡಿ ವ್ಯವಹಾರ ನಡೆಸುವುದು ಎಂದಿಗೂ ಸರಿಯಲ್ಲ. ಕೃಷಿಕ್ಷೇತ್ರದಲ್ಲಿ ಹೆಚ್ಚು ಪ್ರಗತಿಯನ್ನು ನಿರೀಕ್ಷೆ ಮಾಡಬಹುದು. ಪ್ರೀತಿ ಪ್ರೇಮದ ಸಫಲತೆಯನ್ನು ಕಾಣಬಹುದು. ಹೈನುಗಾರಿಕೆ ಮಾಡುವವರಿಗೆ ಪ್ರಗತಿ ಇರುತ್ತದೆ. ಕ್ಷೀರೋತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಹೆಚ್ಚು ಆದಾಯ ಬರುತ್ತದೆ.

ಕಟಕ ರಾಶಿ:
ಗುರು ಹಿರಿಯರಿಂದ ಹೆಚ್ಚು ಪ್ರಶಂಸೆ ಒದಗಿಬರುತ್ತದೆ. ಆಕಸ್ಮಿಕ ಧನಲಾಭವಾಗುವ ಸಾಧ್ಯತೆ. ಆದಾಯದ ಹೊಸದಾರಿಗಳು ಗೋಚರ ಆಗುವ ಸಾಧ್ಯತೆಗಳಿವೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ಕುಶಲ ಕಾರ್ಮಿಕರಿಗೆ ಉತ್ತಮ ಮನ್ನಣೆ ಸಿಗುವುದರ ಜೊತೆಗೆ ಉತ್ತಮ ಆದಾಯ ಸಹ ದೊರೆಯುತ್ತದೆ. ಉದ್ಯಮ ರಂಗದಲ್ಲಿ ನೀವು ಮಾಡುವ ಬದಲಾವಣೆಗಳು ಶುಭ ಫಲಿತಾಂಶಗಳನ್ನು ಕೊಡುತ್ತವೆ. ಅನಿರೀಕ್ಷಿತವಾದ ಬೆನ್ನು ನೋವು ನಿಮ್ಮನ್ನು ಕಾಡಬಹುದು. ಹಣಕಾಸಿನ ವ್ಯವಹಾರ ಮಾಡುವವರಿಗೆ ವ್ಯವಹಾರ ತೃಪ್ತಿದಾಯಕವಾಗಿ ಇರುತ್ತದೆ. ನಿಮ್ಮ ಪ್ರೀತಿಪಾತ್ರರಿಂದ ಕಿರಿಕಿರಿ ಸಾಧ್ಯತೆ. ವಿದೇಶದಲ್ಲಿ ಹಣ ಹೂಡಿಕೆ ಮಾಡಬೇಕೆಂದು ಇದ್ದವರಿಗೆ ಈಗ ಕಾಲ ಒದಗಿಬರುತ್ತದೆ.

ಸಿಂಹ ರಾಶಿ:
ವೃತ್ತಿಯಲ್ಲಿ ಪ್ರಗತಿ ಇರುತ್ತದೆ. ಹಣದ ಒಳಹರಿವಿಗೆ ಏನು ತೊಂದರೆ ಇರುವುದಿಲ್ಲ, ಆದರೆ ಖರ್ಚಿಗೆ ಕಡಿವಾಣ ಹಾಕಬೇಕಾದ ಅನಿವಾರ್ಯತೆ ಇದೆ. ಕೈಗಾರಿಕೋದ್ಯಮಿಗಳಿಗೆ ಅವರ ದಾರಿಯಲ್ಲಿ ಪ್ರಗತಿಯನ್ನು ಕಾಣಬಹುದು. ಹೊಸ ಉದ್ಯಮ ಸ್ಥಾಪಿಸುವ ಉತ್ಸಾಹವಿರುತ್ತದೆ. ದೂರ ಪ್ರಯಾಣದಿಂದ ಅತಿಯಾದ ಆಯಾಸ ಆಗಬಹುದು. ನಿಮ್ಮ ಕೆಲವೊಂದು ಕೆಲಸಗಳು ನಿಧಾನವಾದರೂ ಕೆಲಸ ನಿಲ್ಲುವುದಿಲ್ಲ. ದೊಡ್ಡ ದೊಡ್ಡ ವ್ಯವಹಾರಗಳನ್ನು ನಡೆಸುವವರಿಗೆ ಸಾಮಾಜಿಕ ಗೌರವ ದೊರೆಯುವ ಸಾಧ್ಯತೆಗಳಿವೆ. ದೂರದ ಬಂಧುಗಳ ಜೊತೆ ತೀರ್ಥಯಾತ್ರೆಗೆ ಹೋಗಿ ಬರುವ ಬಗ್ಗೆ ಮಾತುಕತೆ ನಡೆದು ಫಲಪ್ರದ ಆಗುವ ಸಾಧ್ಯತೆ ಇದೆ. ತಾಯಿಗಾಗಿ ಹೆಚ್ಚಿನ ಹಣ ಖರ್ಚು ಮಾಡಬೇಕಾದ ಸಾಧ್ಯತೆ.

ಕನ್ಯಾ ರಾಶಿ:
ರಾಜಕೀಯ ಮುಖಂಡರಿಗೆ ಮುಖಭಂಗ ಲಕ್ಷಣಗಳಿವೆ. ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿರುವವರಿಗೆ ಹೆಚ್ಚಿನ ಪ್ರಗತಿ ಇರುತ್ತದೆ. ಮನೆಯವರ ಸಹಕಾರ ನಿಮಗೆ ಒದಗಿ ಬರುತ್ತದೆ. ಆಲಸ್ಯ ಉದಾಸೀನತೆಯಿಂದ ನಿರೀಕ್ಷಿತ ಫಲಿತಾಂಶಗಳು ಕೈಕೊಡಬಹುದು. ಅನಗತ್ಯ ಕೋಪದಿಂದ ವ್ಯವಹಾರದಲ್ಲಿ ಮುಜುಗರ ಉಂಟಾಗುವುದರ ಜೊತೆಗೆ ನಷ್ಟ ಆಗಬಹುದು. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಸರ್ಕಾರಿ ಕಚೇರಿಯ ಕೆಲಸಗಳಲ್ಲಿ ಪ್ರಗತಿ ಇರುತ್ತದೆ. ದೈಹಿಕವಾಗಿ ಸಣ್ಣಪುಟ್ಟ ನೋವು ನಿಮ್ಮನ್ನು ಬಾಧಿಸಬಹುದು. ತೈಲ ವ್ಯಾಪಾರಿಗಳಿಗೆ ಮತ್ತು ರಾಸಾಯನಿಕ ವಸ್ತುಗಳನ್ನು ಮಾರಾಟ ಮಾಡುವವರಿಗೆ ವ್ಯಾಪಾರ ಹೆಚ್ಚಾಗಿ ಲಾಭ ಹೆಚ್ಚುತ್ತದೆ. ಸ್ವಂತ ಆರೋಗ್ಯದ ಮೇಲೆ ಹೆಚ್ಚು ನಿಗಾ ಇರಲಿ.

ತುಲಾ ರಾಶಿ:
ಮಕ್ಕಳಿಂದ ಕಠಿಣ ಮಾತುಗಳನ್ನು ಕೇಳಬೇಕಾಗಬಹುದು. ಭೂ ವ್ಯವಹಾರ ಮಾಡುವವರಿಗೆ ಸ್ವಲ್ಪ ಹಿನ್ನಡೆಯ ವಾರ. ಚಿಕ್ಕ ಮಕ್ಕಳ ಯೋಗ ಕ್ಷೇಮದ ಬಗ್ಗೆ ಹೆಚ್ಚು ನಿಗಾ ಇರಲಿ. ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚು ಒತ್ತಡಗಳಾಗಬಹುದು. ತಾಳ್ಮೆಯಿಂದ ಇದ್ದಲ್ಲಿ ಹೆಚ್ಚು ತೊಂದರೆಯಾಗುವುದಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣ ಒಗ್ಗೂಡಿಕೆ ಮಾಡಬೇಕು. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ನಿಮ್ಮ ನಿರೀಕ್ಷಿತ ರಾಜಕೀಯ ದಾರಿಯು ನಿಧಾನವಾಗಬಹುದು. ಖರ್ಚನ್ನು ಸಾಕಷ್ಟು ಕಡಿಮೆ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ವಿದೇಶದಲ್ಲಿರುವವರಿಗೆ ಸಂಪಾದನೆ ಹೆಚ್ಚುತ್ತದೆ. ನಿರೀಕ್ಷಿತ ಮೂಲಗಳಿಂದ ಸಾಲ ಸೌಲಭ್ಯಗಳು ದೊರೆಯುತ್ತವೆ. ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ತ್ರಾಸವೆನ್ನಿಸಬಹುದು.

ವೃಶ್ಚಿಕ ರಾಶಿ:
ಭೂ ವ್ಯವಹಾರವನ್ನು ಮಾಡುವವರಿಗೆ ಹೆಚ್ಚಿನ ಪ್ರಗತಿ ಇರುತ್ತದೆ. ಅನಿರೀಕ್ಷಿತ ಧನಾಗಮನವಾಗಬಹುದು. ಕೆಲವೊಂದು ವಿಷಯಗಳಲ್ಲಿ ಇದ್ದ ಅತಿಯಾದ ಆತಂಕದ ಸಂದರ್ಭಗಳು ದೂರವಾಗುತ್ತವೆ. ಸೂಕ್ತ ಸಮಯದಲ್ಲಿ ಬಂಧುಗಳ ಸಹಕಾರ ಒದಗಿಬರುತ್ತದೆ. ವೈದ್ಯರ ನೆರವಿನಿಂದಾಗಿ ಆರೋಗ್ಯದಲ್ಲಿ ಸ್ಥಿರತೆಯನ್ನು ಕಾಣಬಹುದು. ವಿದೇಶಗಳಲ್ಲಿರುವ ನಿಮ್ಮ ಸ್ನೇಹಿತರಿಂದ ನಿಮಗೆ ಸಹಾಯವಾಗುತ್ತದೆ. ಗೃಹಸ್ಥಾಶ್ರಮವನ್ನು ಸ್ವೀಕರಿಸಬೇಕೆನ್ನುವವರಿಗೆ ಈಗ ಸಂಬಂಧ ಒದಗಿಬರಬಹುದು. ಸಂಗಾತಿಯ ಆದಾಯದಲ್ಲಿ ಸ್ವಲ್ಪ ಮಟ್ಟಿನ ಏರಿಕೆಯನ್ನು ಕಾಣಬಹುದು. ಹಿರಿಯರ ಕೃಷಿ ಭೂಮಿಗಳು ನಿಮಗೆ ಕಡಿಮೆ ಬೆಲೆಯಲ್ಲಿ ಸಿಗುವ ಸಾಧ್ಯತೆ ಇದೆ. ಮಹಿಳೆಯರು ನಡೆಸುವ ಹಣಕಾಸಿನ ವ್ಯವಹಾರಗಳಲ್ಲಿ ಅಷ್ಟು ಪ್ರಗತಿ ಇರುವುದಿಲ್ಲ.

ಧನಸ್ಸು ರಾಶಿ:
ಉದ್ಯೋಗ ಕ್ಷೇತ್ರದಲ್ಲಿ ಲವಲವಿಕೆಯ ವಾರ. ಮೇಲಧಿಕಾರಿಗಳಿಂದ ಪ್ರಶಂಸೆಯನ್ನು ಕೇಳಬಹುದು. ಸಾಲದ ಮೇಲಿನ ತೊಂದರೆ ನಿವಾರಣೆಯಾಗಬಹುದು. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿ ಇರುತ್ತದೆ. ವಿದೇಶಿ ಅಲಂಕಾರಿಕ ವಸ್ತುಗಳನ್ನು ಕೊಳ್ಳುವ ಸಾಧ್ಯತೆ ಇದೆ. ಕಣ್ಣಿನ ತೊಂದರೆ ಇರುವವರು ಮತ್ತು ಚರ್ಮದ ಕಾಯಿಲೆ ಇರುವವರು ಚಿಕಿತ್ಸೆಗೆ ಹೋಗುವುದು ಬಹಳ ಒಳಿತು. ದೊಡ್ಡಮಟ್ಟದ ವ್ಯವಹಾರಗಳಲ್ಲಿ ನಿಮ್ಮ ಆದಾಯ ಕಡಿಮೆಯಾಗಬಹುದು. ತಾಯಿಯ ಜೊತೆ ಕಾವೇರಿದ ಮಾತುಗಳಾಗಬಹುದು. ಸಮಾಜಕ್ಕೆ ಉತ್ತಮ ಸಂದೇಶ ಕೊಡುವಂತಹ ಕೆಲಸಗಳನ್ನು ಮಾಡಲು ಮುಂದಾಗುವಿರಿ. ಶಸ್ತ್ರಚಿಕಿತ್ಸೆ ಮಾಡುವ ವೈದ್ಯರಿಗೆ ಹೆಚ್ಚು ಒತ್ತಡ ಇರುತ್ತದೆ. ಮಹಿಳಾ ರಾಜಕಾರಣಿಗಳು ಎದುರಾಗುವ ಪರಿಸ್ಥಿತಿಯನ್ನು ತಮ್ಮ ಅನುಕೂಲ ರಾಜಕಾರಣಕ್ಕೆ ಬಳಸಿಕೊಳ್ಳುವರು.

ಮಕರ ರಾಶಿ:
ಮಾಡಿದ ಕೆಲಸಗಳಲ್ಲಿ ಹೆಚ್ಚು ಮನ್ನಣೆ ದೊರೆಯುತ್ತದೆ. ಹೊಸ ಕಾರ್ಯ ರೂಪಿಸುವಲ್ಲಿ ನಿಮ್ಮ ಯೋಜನೆ ಸಫಲವಾಗಲಿವೆ. ಬೇರೆಯವರ ಹಣದ ಅಥವಾ ಸಾಂಸಾರಿಕ ವ್ಯವಹಾರಗಳಲ್ಲಿ ಮಧ್ಯಸ್ಥಿಕೆಯನ್ನು ವಹಿಸುವುದು ಖಂಡಿತಾ ಬೇಡ. ಹಿರಿಯ ಅಧಿಕಾರಿಗಳ ಭೇಟಿಯಿಂದ ಮುಂದೂಡಲ್ಪಡುತ್ತಿರುವ ಕೆಲವು ಕೆಲಸಗಳು ಶೀಘ್ರವಾಗಿ ಆಗುತ್ತವೆ. ಆರ್ಥಿಕ ಸ್ಥಿತಿಯು ಮಂದಗತಿಯಲ್ಲಿ ಇರುವುದರಿಂದ ಖರ್ಚು ಮಾಡುವ ಮುಂಚೆ ಯೋಚನೆ ಮಾಡಿರಿ. ಕ್ರೀಡಾಪಟುಗಳಿಗೆ ಸಾಕಷ್ಟು ನೆರವು ದೊರೆತು ಅವರ ಅಭಿವೃದ್ಧಿಗೆ ನೆರವಾಗುತ್ತದೆ. ಕುಶಲ ಕರ್ಮಿಗಳಿಗೆ ಹೆಚ್ಚಿನ ಅನುಕೂಲ ಮತ್ತು ಸಹಾಯಧನ ದೊರೆಯುತ್ತದೆ. ಆಸ್ತಿ ಕೊಳ್ಳುವ ವಿಚಾರದಲ್ಲಿ ಬಹಳ ಎಚ್ಚರಿಕೆಯನ್ನು ವಹಿಸಬೇಕು. ವಿದ್ಯಾರ್ಥಿಗಳಿಗೆ ಅನುಕೂಲ ಕಾಲವಾಗಿರುತ್ತದೆ.

ಕುಂಭ ರಾಶಿ:
ಹೊಸ ವಾಹನ ಖರೀದಿಯ ಯೋಗವಿದೆ. ಹಣದ ಒಳಹರಿವು ತೃಪ್ತಿಕರವಾಗಿ ಇರುತ್ತದೆ. ಕೆಲವು ಯುವಕರ ಒರಟು ಮಾತು ಉದ್ಯೋಗಕ್ಕೆ ಕುತ್ತು ತರಬಹುದು. ಸ್ಥಿರಾಸ್ತಿ ವಿಚಾರದಲ್ಲಿ ಪ್ರಗತಿ ಸಾಧಿಸಬಹುದು. ಸ್ವಲ್ಪ ಆಲಸಿತನವಿದ್ದರೂ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ಶೀತಬಾಧೆ ಇರುವವರು ಹೆಚ್ಚು ಎಚ್ಚರವಹಿಸಬೇಕು. ಪ್ರೀತಿ-ಪ್ರೇಮದ ವಿಷಯದಲ್ಲಿ ನಿರಾಸೆ ಇರುತ್ತದೆ. ಹಿರಿಯರ ಆಸ್ತಿ ಕೊಡುವ ಬಗ್ಗೆ ಮಾತುಕತೆಗಳಾಗಬಹುದು. ಕೃಷಿಕರಿಗೆ ಹೆಚ್ಚಿನ ಆದಾಯ ಬರುವ ಸಾಧ್ಯತೆಗಳಿವೆ. ಹೊಸ ಯೋಜನೆಗಳನ್ನು ರೂಪಿಸುವ ಮುನ್ನ ಅವುಗಳ ಸಾಧಕ-ಬಾಧಕಗಳನ್ನು ಅರಿಯುವುದು ಉತ್ತಮ. ಹಿರಿಯರನ್ನು ಅವರ ವಿರೋಧಿಗಳೂ ಒಪ್ಪಿಕೊಳ್ಳುವಂಥ ಸನ್ನಿವೇಶ ಆಗುತ್ತದೆ. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವವರ ವ್ಯವಹಾರ ವೃದ್ಧಿಸುತ್ತದೆ.

ಮೀನ ರಾಶಿ:
ಕಲಾವಿದರಿಗೆ ಹೆಚ್ಚು ಅನುಕೂಲಕರ ವಾತಾವರಣವಿರುತ್ತದೆ. ಸಾಂಸಾರಿಕ ನೆಮ್ಮದಿ ಇದ್ದರೂ ಆರ್ಥಿಕ ಸಮಸ್ಯೆ ಹೆಚ್ಚಾಗಬಹುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಗಮನವನ್ನು ಈಗ ಕೊಡಲೇಬೇಕು. ವೈದ್ಯ ವೃತ್ತಿಯವರಿಗೆ ಹೆಚ್ಚಿನ ಪ್ರಗತಿ ಇರುತ್ತದೆ. ಸಂಗೀತಗಾರರಿಗೆ ಹೆಚ್ಚು ಆದಾಯ ಬರುವ ಸಾಧ್ಯತೆಗಳಿವೆ. ಚಿನ್ನಾಭರಣಗಳನ್ನು ಖರೀದಿ ಮಾಡುವ ಸಂದರ್ಭವಿದೆ. ವಿದೇಶದಲ್ಲಿರುವವರಿಗೆ ವೇತನದಲ್ಲಿ ಹೆಚ್ಚಾಗುವ ಸಾಧ್ಯತೆಗಳಿವೆ. ಮಹಿಳೆಯರ ನವೀನ ರೀತಿಯ ಆಭರಣಗಳನ್ನು ರಫ್ತುಮಾಡುವ ವ್ಯಾಪಾರಿಗಳಿಗೆ ವ್ಯವಹಾರ ಹೆಚ್ಚುತ್ತದೆ. ಕಾಲು ನೋವು ಅಥವಾ ಮಾಂಸಖಂಡಗಳ ನೋವು ಬಾಧಿಸಬಹುದು. ನಿಮ್ಮ ಹಿರಿಯರ ಆಸ್ತಿಗಳನ್ನು ಕಡಿಮೆ ಬೆಲೆಗೆ ಕೊಳ್ಳಬಹುದು. ಸಾಂಪ್ರದಾಯಿಕ ಕೃಷಿಯನ್ನು ಮಾಡುವವರಿಗೆ ಬೇಡಿಕೆ ಹೆಚ್ಚಾಗುತ್ತದೆ.

Leave a Comment

Your email address will not be published. Required fields are marked *