Ad Widget .

ಕಾರ್ಕಳ: ತಲವಾರಿನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದವರು ಪೊಲೀಸ್ ವಶಕ್ಕೆ

ಸಮಗ್ರ ನ್ಯೂಸ್: ತಲವಾರಿನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ ಏಳು ಮಂದಿಯ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget . Ad Widget .

ಕಾರ್ಕಳ ರಸ್ತೆಯ ಮನೆಯೊಂದರಲ್ಲಿ ಮೇ 30 ರಂದು ರಂದು ಹುಟ್ಟುಹಬ್ಬದ ಆಚರಣೆ ವೇಳೆ ತಲವಾರಿನಿಂದ ಕೇಕ್ ಕತ್ತರಿಸಿ ಮತ್ತು ಕೊಡಲಿಗಳನ್ನು ಇಟ್ಟುಕೊಂಡು ಪೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಪಡುಬಿದ್ರಿ ನಿವಾಸಿಗಳಾದ ರೌಡಿಶೀಟರ್ ಜೀತೇಂದ್ರ ಶೆಟ್ಟಿ, ಗಣೇಶ್ ಪೂಜಾರಿ ಮತ್ತು ಶರತ್ ಶೆಟ್ಟಿಯನ್ನು ಬಂಧಿಸಲಾಗಿದೆ.

Ad Widget . Ad Widget .

ಕಾಪು ಸಿಐ ಪ್ರಕಾಶ ಹಾಗೂ ಪಡುಬಿದ್ರಿ ಎಸ್‌ಐ ಪುರುಷೋತ್ತಮ ನೇತೃತ್ವದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ನಿರಂಜನ್‌ ಶೆಟ್ಟಿಗಾರ್‌, ತನುಜ್‌, ಸೂರಜ್‌, ಅನೀಶ್‌ ಎಂಬುವವರ ಬಂಧನಕ್ಕೆ ಹುಡುಕಾಟ ನಡೆದಿದೆ. ಶಸ್ತ್ರಾಸ್ತ್ರ ಕಾಯ್ದೆಯದಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪಡುಬಿದ್ರಿ ಎಸ್‌ಐ ನೇತೃತ್ವದ ಪೊಲೀಸ್ ತಂಡಒಂದು ತಲವಾರು ,ಒಂದು ಮಚ್ಚು ಹಾಗೂ ಒಂದು ಕೊಡಲಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Leave a Comment

Your email address will not be published. Required fields are marked *