ಕುಕ್ಕೆ ಸುಬ್ರಹ್ಮಣ್ಯ – ಗುಂಡ್ಯ ಅರಣ್ಯ ಪ್ರದೇಶದ ಚಿತ್ರ ಹಂಚಿಕೊಂಡ ಆನಂದ್‌ ಮಹೀಂದ್ರ

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ-ಗುಂಡ್ಯ ನಡುವೆ ಸಾಗುವ ಅರಣ್ಯ ಪ್ರದೇಶದ ಚಿತ್ರವೊಂದನ್ನು ಮಹೀಂದ್ರ ಗ್ರೂಪ್‌ನ ಚೇರ್‌ರ್ಮೆನ್‌ ಆಗಿರುವ ಆನಂದ್‌ ಮಹೀಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಸುದ್ದಿ ವೈರಲ್‌ ಆಗಿದೆ.

Ad Widget ... ..

ಕೆಲವು ದಿನಗಳ ಹಿಂದೆ ವಿಸಿಟ್‌ ಉಡುಪಿ ಎಂಬ ಟ್ವಿಟರ್‌ ಖಾತೆಯವರು ಈ ಚಿತ್ರವನ್ನು ಟ್ವೀಟ್‌ ಮಾಡಿದ್ದು, ಕುಕ್ಕೆ ಸುಬ್ರಹ್ಮಣ್ಯಕ್ಕೆ ಅರಣ್ಯ ಪ್ರದೇಶ ಮಧ್ಯೆ ಸಾಗುವ ಗುಂಡ್ಯ ಬಳಿಯ ಹೆದ್ದಾರಿಯ ಚಿತ್ರವನ್ನು ಜಗತ್ತಿನ ಅತ್ಯಂತ ಸುಂದರ ಕಾಡಿನ ಪ್ರಯಾಣ ಎಂಬ ಶೀರ್ಷಿಕೆಯಡಿ ಅಪ್‌ಲೋಡ್‌ ಮಾಡಿದ್ದರು.

Ad Widget

ಇದೀಗ ಇದೇ ಚಿತ್ರವನ್ನು ಆನಂದ್‌ ಮಹೀಂದ್ರಾ ಕೂಡ ಹಂಚಿಕೊಂಡಿದ್ದು, ಈ ಸುಂದರ ಚಿತ್ರಕ್ಕೆ ಅನೇಕ ಮಂದಿ ಹಲವು ರೀತಿಯಲ್ಲಿ ಹೊಗಳಿ ಪ್ರತಿಕ್ರಿಯೆ ನೀಡಿದ್ದು, ಸದ್ಯ ಟ್ವೀಟ್‌ ಭಾರೀ ವೈರಲ್‌ ಆಗಿದೆ.

ಇನ್ನು ಈ ಪೋಟೊವನ್ನು ದೀಪಕ್‌ ಬೆಂಗಳೂರು ಅವರು ತೆಗೆದಿದ್ದು, ಭಾರೀ ವೈರಲ್ ಆಗುತ್ತಿದೆ.

Leave a Comment

Your email address will not be published. Required fields are marked *