Ad Widget .

ಹಣದಾಸೆಗೆ ವಜ್ರದ ವ್ಯಾಪಾರಿಯ ಅಪಹರಣ| ಖಳನಟ ನಾರಾಯಣ್ ಸೇರಿದಂತೆ ನಾಲ್ಕು ಮಂದಿ‌ ಅರೆಸ್ಟ್

ಸಮಗ್ರ ನ್ಯೂಸ್: ಹಣಕ್ಕಾಗಿ ವಜ್ರದ ವ್ಯಾಪಾರಿಯನ್ನು ಅಪಹರಿಸಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಿ ತಲೆಮರೆಸಿಕೊಂಡಿದ್ದ ಪ್ರಕರಣದಲ್ಲಿ ಕನ್ನಡದ ಖಳನಟ ಸೇರಿ ನಾಲ್ವರನ್ನು ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದಾರೆ.

Ad Widget . Ad Widget .

ವೀರಪರಂಪರೆ, ದುಷ್ಟ ಹಾಗೂ‌ ಉಡಾ ಸೇರಿದಂತೆ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಆರೋಪಿ ನಾರಾಯಣ ಹಾಗೂ ಸಹಚರರಾದ ಉಮೇಶ್, ನರ್ತನ್ ಹಾಗೂ ಅಶ್ವತ್ಥ ಎಂಬುವರನ್ನು ಬಂಧಿಸಿ ಜೈಲಿಗಟ್ಟಲಾಗಿದೆ ಎಂದು ಕೇಂದ್ರ ವಿಭಾಗದ ಪ್ರಭಾರ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.

Ad Widget . Ad Widget .

ಕಳೆದ ತಿಂಗಳು 20ರಂದು ನಗರದ ಶಿವಾನಂದ ಸರ್ಕಲ್ ಬಳಿ ವಜ್ರದ ವ್ಯಾಪಾರಿಯನ್ನ ಆರೋಪಿಗಳು ಕಿಡ್ನಾಪ್ ಮಾಡಿದ್ದರು. ಅಪಹರಿಸಿ ಎರಡು ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪಿಗಳು ಕೊನೆಗೆ 25 ಲಕ್ಷ ರೂಪಾಯಿ ಹಣ ಪಡೆದು ಆರು ಚೆಕ್​ ಪಡೆದಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಹೈಗ್ರೌಂಡ್ಸ್ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

Leave a Comment

Your email address will not be published. Required fields are marked *