ಸಮಗ್ರ ನ್ಯೂಸ್: ಕೆಎಸ್‌ಆರ್‌ಟಿಸಿ ಬಸ್ ಚಾಲಕ ಸಾವಿನಲ್ಲೂ ಕರ್ತವ್ಯಪ್ರಜ್ಞೆ ಮೆರೆದಿದ್ದಾರೆ. ಉತ್ತರಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ಮೈನಳ್ಳಿ ಬಳಿ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮಲ್ಲಪ್ಪ ಸೋಮಪ್ಪನವರ (56) ಬಸ್ ಚಲಾಯಿಸುತ್ತಿರುವಾಗಲೇ ಎದೆ ನೋವು ಕಾಣಿಸಿಕೊಂಡಿದೆ. ಆಗ ಚಾಲಕ ಮಲ್ಲಪ್ಪ ಕೂಡಲೇ ಬಸ್ನ್ನು ರಸ್ತೆಯ ಪಕ್ಕಕ್ಕೆ ನಿಲ್ಲಿಸಿದ್ದಾರೆ. ತಕ್ಷಣ ಬಸ್ನಲ್ಲಿದ 38 ಪ್ರಯಾಣಿಕರು ಕೆಳಗಿಳಿದಿದ್ದಾರೆ.
ನಂತರ ಪ್ರಯಾಣಿಕರು ಚಾಲಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಾಲಕ ಆಸ್ಪತ್ರೆಗೆ ಹೋಗುವಷ್ಟರಲ್ಲೇ ಸಾವನ್ನಪ್ಪಿದ್ದನು ಎಂದು ವೈದ್ಯರು ಹೇಳಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಯಲ್ಲಾಪುರ ದಿಂದ ಮುಂಡಗೋಡಕ್ಕೆ ಬರುತ್ತಿದ್ದ ಬಸ್ ನ ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಜರುಗಿದೆ. ಮಲ್ಲಪ್ಪ ಸೋಮಪ್ಪನವರ (45) ಎಂಬವನೆ ಸಾವನ್ನಪ್ಪಿದ ಚಾಲಕನಾಗಿದ್ದು, ಯಲ್ಲಾಪುರ ದಿಂದ ಮುಂಡಗೋಡ ಬರುತ್ತಿದ್ದ ಬಸ್ ತಾಲೂಕಿನ ಮೈನಳ್ಳಿ ಸನಿಹ ಬರುತ್ತಿದ್ದಂತೆ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡಿದ್ದು ಬಸ್ ನ ವೇಗ ಕಡಿಮೆ ಮಾಡಿದ ಚಾಲಕ ಬಸ್ ನಿಲ್ಲಿಸುವಷ್ಟರಲ್ಲಿ ಹೃದಯಾಘಾತವಾಗಿ ಸಾವನ್ನಪ್ಪಿದ್ದಾನೆ. ಬಸ್ ನಲ್ಲಿರುವ ಪ್ರಯಾಣಿಕರೆಲ್ಲರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.