Ad Widget .

ಸುಳ್ಯ: ಮನೆಯೊಳಗೆ ಮನೆ ಮಾಲಿಕನ ಮೃತ ದೇಹ ಪತ್ತೆ|ತಿಂಗಳ ಹಿಂದೆ ಸಹೋದರನ ಸಾವು|ಸಾವಿನ ಸುತ್ತ ಅನುಮಾನದ ಹುತ್ತ..!

ತಿಂಗಳ ಹಿಂದೆ ಸಹೋದರನ ಸಾವು

Ad Widget . Ad Widget .

Ad Widget . Ad Widget .

ಸಮಗ್ರ ನ್ಯೂಸ್: ಮನೆಯೊಳಗೆ‌ ಮನೆ ಯಜಮಾನ ಶವವಾಗಿ ಪತ್ತೆಯಾದ ಘಟನೆ ಜೂ.2 ರಂದು ರಾತ್ರಿ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಪಂಜದಿಂದ ವರದಿಯಾಗಿದೆ. ಮೃತರನ್ನು ತಿರುಮಲೇಶ್ವರ ( 42ವ) ಎಂದು ಗುರುತಿಸಲಾಗಿದೆ.

ಇವರು ಕೆಲವು ವರ್ಷಗಳಿಂದ ಮನೆಯಲ್ಲಿ ಒಬ್ಬಂಟಿಗರಾಗಿ ವಾಸವಾಗಿದ್ದರು. ತಿರುಮಲೇಶ್ವರ ಮನೆಯ ಪಕ್ಕದಲ್ಲಿ ವಾಸವಾಗಿದ್ದ ಅವರ ತಾಯಿ ಮತ್ತು ಸಹೋದರ ಕೆಲವು ಸಮಯಗಳ ಹಿಂದೆ ಅವರ ಜಾಗ ಮಾರಾಟ ಮಾಡಿ, ಕಡಬದಲ್ಲಿ ಜಾಗ ಖರೀದಿಸಿ ಮನೆ ಮಾಡಿಕೊಂಡಿದ್ದಾರೆ.

ಮೇ.2 ರಂದು ಸಹೋದರ ಶಿವರಾಮರು ತಿರುಮಲೇಶ್ವರರಿಗೆ ದೂರವಾಣಿ ಮೂಲಕ ಕರೆ ಮಾಡಿದಾಗ ಸಿಗದಿರುವುದರಿಂದ ಅನುಮಾನಗೊಂಡು ಪಂಜದಲ್ಲಿ ತಿರುಮಲೇಶ್ವರರ ಬಗ್ಗೆ ಕೆಲವರಲ್ಲಿ ವಿಚಾರಿಸಿದರು. ಬಳಿಕ ಅವರ ಮನೆ ಸಮೀಪದವರಲ್ಲಿ ತಿರುಮಲೇಶ್ವರ ಮನೆಗೆ ಹೋಗಿ ನೋಡಲು ಹೇಳಿದರು. ಈ ವೇಳೆ ತಿರುಮಲೇಶ್ವರ ಮನೆಯ ಒಳಗೆ ಮಲಗಿದ್ದಲ್ಲಿ ಶವವಾಗಿ ಇರುವುದು ಬೆಳಕಿಗೆ ಬಂದಿದೆ ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನು ಈ ಸಾವಿನ ಸುತ್ತ ಹಲವು ಅನುಮಾನ ಗಳು ಮೂಡಿದೆ.

ಈ ಹಿಂದೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪತ್ನಿಯ ದೂರಿನ ಹಿನ್ನೆಲೆ ಜೈಲು ಸೇರಿದ್ದ ಅವರು ಬಿಡುಗಡೆ ಗೊಂಡಿದ್ದರು. ನಂತರದ ದಿನಗಳಲ್ಲಿ ಪತ್ನಿ ಮಕ್ಕಳೊಂದಿಗೆ ತವರು ಮನೆಯಲ್ಲಿ ವಾಸವಾಗಿದ್ದರು. ತಿರುಮಲೇಶ್ವರರು ಒಂಟಿಯಾಗಿ ವಾಸವಾಗಿದ್ದು ಸಾವು ಹೇಗೆ ಸಂಭವಿಸಿರುತ್ತದೆ ಎಂಬ ಖಚಿತ ಮಾಹಿತಿ ತಿಳಿದು ಬಂದಿಲ್ಲ. ಮೃತರು ತಾಯಿ ಸೀತಮ್ಮ, ಪತ್ನಿ ವೇದಾವತಿ, ಪುತ್ರಿ ಭವಿಷ್ಯ, ಸಿಂಚನ, ಪುತ್ರ ಪ್ರಜ್ವಲ್, ಹಾಗೂ ಕುಟುಂಬಸ್ಥನ್ನು ಅಗಲಿದ್ದಾರೆ.

ತಿಂಗಳ ಹಿಂದೆ ಸಹೋದರನ ಸಾವು:

ಕಳೆದ ಮೇ.15 ರಂದು ತಿರುಮಲೇಶ್ವರ ತಮ್ಮ ರಮೇಶ್ ರವರ ಸಾವು ಇದೇ ರೀತಿ ಆಗಿತ್ತು. ತಿರುಮಲೇಶ್ವರರ ಮನೆಯ ಪಕ್ಕದಲ್ಲಿ ಸಹೋದರ ರಮೇಶ್ ರವರ ಮನೆ ಇದೆ. ರಮೇಶ್ ಒಂಟಿಯಾಗಿ ಮನೆಯಲ್ಲಿ ವಾಸವಾಗಿದ್ದು. ರಮೇಶ್ ಅನಾರೋಗ್ಯದಿಂದ ಮನೆಯೊಳಗೆ ಮೃತಪಟ್ಟು ಯಾರ ಗಮನಕ್ಕೂ ಬಾರದೆ ಕೆಲವು ದಿನಗಳ ಬಳಿಕ ಬೆಳಕಿಗೆ ಬಂದಿತ್ತು.

Leave a Comment

Your email address will not be published. Required fields are marked *