Ad Widget .

ಇಡಿ ಯಿಂದ ಪಿಎಫ್ಐ ಬ್ಯಾಂಕ್ ಖಾತೆಗಳ ಮುಟ್ಟುಗೋಲಿಗೆ ಖಂಡನೆ

ಸಮಗ್ರ ನ್ಯೂಸ್: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಗೆ ಸೇರಿದ ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಡಿ) ಅಧಿಕಾರಿಗಳು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದ್ದನ್ನು ಸಂಘದ ಮುಖಂಡರು ಖಂಡಿಸಿದ್ದಾರೆ.

Ad Widget . Ad Widget .

ಇಡಿಯು ಕಳೆದ ಕೆಲವು ವರ್ಷಗಳಿಂದ ಸಂಘಟನೆಯ ವಿರುದ್ಧ ಧಮನಕಾರಿ ನೀತಿಯನ್ನು ಪ್ರಕಟಿಸುತ್ತಿದ್ದು ಅದರ ಮುಂದುವರಿದ ಭಾಗವಾಗಿ ಈ ಕ್ರಮ ಕೈಗೊಂಡಿದೆ. ಜನಪರ ಚಳವಳಿಗಳು, ಎನ್‌ಜಿಒಗಳು, ಮಾನವ ಹಕ್ಕುಗಳ ಸಂಘಟನೆಗಳು, ವಿರೋಧ ಪಕ್ಷಗಳು, ಮಾಧ್ಯಮಗಳು ಮತ್ತು ಆಡಳಿತ ಪಕ್ಷವನ್ನು ಟೀಕಿಸುವ ದೇಶದ ಯಾವುದೇ ಪ್ರಜಾಸತ್ತಾತ್ಮ ಧ್ವನಿಗಳನ್ನು ಗಮನಿಸುವ ಮೂಲಕ ಏಜೆನ್ಸಿಯು ರಾಜಕೀಯ ನಾಯಕರ ದಾಳವಾಗಿ ವರ್ತಿಸುತ್ತಿದೆ ಎಂಬುದು ಮತ್ತೊಮ್ಮೆ ಸ್ಪಷ್ಟವಾಗುತ್ತದೆ.

Ad Widget . Ad Widget .

ಪಾಪ್ಯುಲರ್ ಪೈಂಟ್ ಗಂಡನ ರಾಷ್ಟ್ರಮಟ್ಟದ ಸಾಮಾಜಿಕ ಆಂದೋಲನದ ಕಾರ್ಯನಿರ್ವಹಣೆಗೆ 13 ವರ್ಷಗಳ ಅವಧಿಗೆ ಶ್ರಮ ‌ವಹಿಸಿದೆ. ದೇಶವು ಎದುರಿಸುತ್ತಿದ್ದ ಪ್ರಮುಖ ಪಾಕೃತಿಕ ವಿಕೋಪದ ಸಂದರ್ಭಗಳಲ್ಲಿ ಪಾಪ್ಯುಲರ್‌ ಫ್ರೆಂಟ್ ಪರಿಹಾರ ಮತ್ತು ರಕ್ಷಣಾ ಕಾರ್ಯಾಗಳನ್ನು ನಿರ್ವಹಿಸಿದ್ದು ಇದಕ್ಕಾಗಿ ಸಾರ್ವಜನಿಕರಿಂದ ನಿಧಿ ಸಂಗ್ರಹಣಾ ಅಭಿಯಾನ ನಡೆಸಿದೆ. ಈ ವೇಳೆ ಸಂಗ್ರಹಿಸಿದ ಠೇವಣಿಗಳನ್ನು ಕೂಡ ಈ ಮೊತ್ತವು ಒಳಗೊಂಡಿದೆ ಎಂಬುದನ್ನು ಗಮನಿಸಬೇಕು.

ಸಂಘಟನೆಯ ಮೇಲೆ ದೊಡ್ಡ ತನಿಖೆಯ ಅಗತ್ಯವಿಲ್ಲ, ಏಕೆಂದರೆ ನಾವು ಈಗಾಗಲೇ ಸಂಗ್ರಹಿಸಿದ ಪ್ರತಿ ಪೈಸೆಯ ಲೆಕ್ಕವನ್ನೂ ಆದಾಯ ತೆರಿಗೆಗೆ ಸಲ್ಲಿಸಿದ್ದೇವೆ. ಇದು ಅಂಕಿಅಂಶಗಳನ್ನು ವೈಭವೀಕರಿಸಿರುವುದರ ಹೊರತಾಗಿ ಮತ್ತೇನೂ ಅಲ್ಲ ಎಂದು ಸಾಬೀತುಪಡಿಸುತ್ತದೆ.

ಬಿಜೆಪಿ ನಾಯಕರ ಭ್ರಷ್ಟಾಚಾರ ಮತ್ತು ಹಣದ ವ್ಯವಹಾರಗಳು ನೂರಾರು ಕೋಟಿ ರೂ.ಗಳಷ್ಟಿದ್ದರೂ ಈಡಿಗೆ ಇದೊಂದು ಕಾಳಜಿಯ ವಿಷಯವಲ್ಲ, ವಿರೋಧ ಪಕ್ಷದವರನ್ನು ಗುರಿಯಾಗಿಸಲು ಮತ್ತು ಮೌನಗೊಳಿಸಲು ಬಿಜೆಪಿ ಯಾವಾಗಲೂ ಈಡಿ ಮತ್ತು ಇತರ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿರುವ ರೀತಿಯನ್ನು ಗಮನಿಸಿದರೆ ಈ ನಡೆ ಅಚ್ಚರಿಯಲ್ಲ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಈ ಅಪ್ರಜಾಸತ್ತಾತ್ಮಕ ನಡೆ ಮತ್ತು ಅಧಿಕಾರದ ದುರ್ಬಳಕೆಯನ್ನು ಖಂಡಿಸಲು ಮುಂದಾಗಬೇಕೆಂದು ಪ್ರಜಾಪ್ರಭುತ್ವವನ್ನು ರಕ್ಷಿಸಲು ಬದ್ಧರಾಗಿರುವ ದೇಶದ ಜನತೆಗೆ ಪಾಪ್ಯುಲರ್ ಫ್ರೆಂಟ್ ಕರೆ ನೀಡುತ್ತದೆ ಎಂದು ಪಾಪ್ಯುಲರ್ ಫ್ರಂಟ್ ಹೇಳಿದೆ.

ಪತ್ರಿಕಾಗೋಷ್ಠಿಯಲ್ಲಿ , ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್, ಕಾರ್ಯದರ್ಶಿ ಮುಹಮ್ಮದ್ ಸಾಕಿಫ್, ಎ.ಕೆ.‌ಅಶ್ರಫ್ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *