Ad Widget .

ಮಂಗಳೂರು ಮಳಲಿ ಮಸೀದಿ ವಿವಾದ| ಎಸ್ಡಿಪಿಐ ಗೆ ಜಮಾಅತ್ ಖಡಕ್ ಸಂದೇಶ!?

ಸಮಗ್ರ ನ್ಯೂಸ್: ಮಂಗಳೂರಿನ ಮಳಲಿ ಮಸೀದಿ ವಿಚಾರಕ್ಕೆ ಸಂಬಂಧಿಸಿದಂತೆ ಎಸ್ಡಿಪಿಐ ‌ಪಕ್ಷಕ್ಕೆ ಅಲ್ಲಿನ ಜಮಾಅತ್ ಖಡಕ್ ಸಂದೇಶ ರವಾನಿಸಿದೆ. ಮಸೀದಿಯಲ್ಲಿ ಉಂಟಾಗಿರುವ ವಿವಾದಕ್ಕೆ ಸಂಬಂಧಿಸಿದಂತೆ ಎಸ್ಡಿಪಿಐ ಮೈಲೇಜ್ ತೆಗೆದುಕೊಳ್ಳುತ್ತಿರುವ ಹಿನ್ನಲೆಯಲ್ಲಿ ಮಸೀದಿಯ ಮುಖಂಡರು ಪಕ್ಷದ ಮುಖಂಡರಿಗೆ ಸಂದೇಶ ರವಾನಿಸಿರುವ ತುಣುಕೊಂದು ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Ad Widget . Ad Widget .

“ಮಳಲಿ ಮಸೀದಿಯ ವಿಷಯದಲ್ಲಿ ಕಲವು ಸೋಕಾಲ್ಡ್ ಸಮುದಾಯ ರಕ್ಷಕರು, ಬಾಯಿ ಬಡುಕರು , ಸಮುದಾಯಕ್ಕೆ ಬೆಂಕಿ ಹಚ್ಚುವವರು ನಮ್ಮ ಜಮಾತ್ ಕಮೀಟಿ ಮೇಲೆ ಇಲ್ಲ ಸಲ್ಲದ ಆರೋಪ ಮಾಡಲಿಕ್ಕೆ ಹೊರಟಿದ್ದಾರೆ. ನಾವು ಯಾವ ಸಂಘಟಣಿಯವರಿಗೂ ಇಲ್ಲಿಗೆ ಬಂದು ಮಸೀದಿಯ ಬಗ್ಗೆ ಮಾತನಾಡಲು ಅವಕಾಶ ನೀಡಲಿಲ್ಲ ನಮ್ಮ ಮಸೀದಿಯ ಸಮಸ್ಯೆಯನ್ನು ನಾವೇ ಬಗೆಹರಿಸುತ್ತೇವೆ . ನಾವೆಲ್ಲರೂ ಇಲ್ಲಿ ಮಸೀದಿಯ ವಿಷಯದಲ್ಲಿ ಪಕ್ಷ ಭೇದ ಮರೆತು ಒಂದಾಗಿದ್ದೇವೆ , ನಿಮಗೆ ರಾಜಕೀಯ ಮಾಡಲು ಇದ್ದರೆ ಮಾಡಿ ಆದರೆ ನಮ್ಮ ಮಸೀದಿ ಹಾಗು ಸಮುದಾಯದ ಹೆಸರಿನಲ್ಲಿ ಮಾಡಬೇಡಿ, ಯಾಕೆಂದರೆ ನೀವು ಹೋದಲ್ಲೆಲ್ಲ ಸಮುದಾಯಕ್ಕೆ ತೊಂದರೆ ಆಗಿದ್ದು ಬಿಟ್ಟರೆ ಒಳ್ಲೆದಂತೂ ಆಗಲೇ ಇಲ್ಲ, ಹೇಗಿರುವಾಗ ನಿಮ್ಮ ಅವಶ್ಯಕತೆಯೂ ನಮಗಿಲ್ಲ. ನಮ್ನ ಜಮಾತ್ ಗೆ 900 ವರ್ಷದ ಇತಿಹಾಸ ಇದೆ. ನಿಮ್ಮಿಂದ ನಮಗೆ ಕಲಿಯಲು ಏನೂ ಇಲ್ಲ ,ನಮಗೆ ಮಾರ್ಗದರ್ಶನ ನೀಡಲು ಉಲೇಮಾಗಳು ಉಸ್ತಾದ್ ಗಳಿದ್ದಾರೆ .ರಾಜಕೀಯ ಮಾಡಲು ನಮ್ಮ ಜಮಾತಿಗೆ ಬರಬೇಡಿ” ಎಂದು ಹೇಳಿದ್ದು, ಈ ಸಂದೇಶವೊಂದು ವೈರಲ್ ಆಗುತ್ತಿದೆ.

Ad Widget . Ad Widget .

Leave a Comment

Your email address will not be published. Required fields are marked *