ಸಮಗ್ರ ನ್ಯೂಸ್: ಹಾಸನ ನಗರಸಭೆ ಕಾರ್ಪೋರೇಟರ್ ಓರ್ವರನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆಗೈದ ಘಟನೆ ನಿನ್ನೆ ರಾತ್ರಿನಡೆದಿದೆ. ಸದಸ್ಯ ಪ್ರಶಾಂತ್ ಎಂಬಾತನೇ ಕೊಲೆಯಾದ ದುರ್ದೈವಿ.
ರಾತ್ರಿ ತನ್ನ ಹೋಂಡಾ ಆ್ಯಕ್ಟಿವಾದಲ್ಲಿ ಪ್ರಶಾಂತ್ ತೆರಳುತ್ತಿದ್ದಾಗ ಜವೇನಹಳ್ಳಿ ಮಠದ ಬಳಿ ಆಟೋದಲ್ಲಿ ಬಂದು ಅಡ್ಡ ಹಾಕಿದ ದುಷ್ಕರ್ಮಿಗಳು ಮನಸೋ ಇಚ್ಛೆ ಕೊಚ್ಚಿ ಹಾಕಿದ್ದಾರೆ.
ಘಟನೆ ವಿಷಯ ತಿಳಿಯುತ್ತಿದ್ದಂತೆ ಜನರು ಭಯಭೀತರಾಗಿದ್ದರು. ಸ್ಥಳಕ್ಕೆ ಹೆಚ್.ಡಿ.ರೇವಣ್ಣ ಭೇಟಿ ನೀಡಿದರು. ಈ ವೇಳೆ ಮೃತದೇಹ ಇಳಿಸುವ ವಿಚಾರದಲ್ಲಿ ಪೊಲೀಸರು ಮತ್ತು ರೇವಣ್ಣ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು ಎಂದು ತಿಳಿದುಬಂದಿದೆ.