Ad Widget .

ಚಿನ್ನಾಭರಣ ಮಾರಾಟಕ್ಕೆ ಹೊಸ ನಿಯಮ‌ ಜಾರಿ| ಹೀಗಿರಲಿದೆ ಹೊಸ ಹಾಲ್ ಮಾರ್ಕ್ ರೂಲ್ಸ್

ಸಮಗ್ರ ನ್ಯೂಸ್: ದೇಶದಲ್ಲಿ ಆಭರಣ ಮಾರಾಟಕ್ಕೆ ಹೊಸ ನಿಯಮವನ್ನು ಜಾರಿ ಮಾಡಲಾಗಿದೆ. ಜೂನ್ 1 ರಿಂದ ದೇಶದ ಎಲ್ಲಾ ಆಭರಣ ವ್ಯಾಪಾರಿಗಳು ಅದರ ಶುದ್ಧತೆಯನ್ನು ಲೆಕ್ಕಿಸದೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ಆಭರಣಗಳನ್ನು ಮಾತ್ರ ಮಾರಾಟ ಮಾಡಬೇಕು ಎಂದು ಸರ್ಕಾರ ಆದೇಶಿಸಿದೆ.

Ad Widget . Ad Widget .

ವ್ಯಾಪಾರಿಗಳು ಶುದ್ಧತೆಯನ್ನು ಲೆಕ್ಕಿಸದೆ ಜೂನ್ 1 ರಿಂದ ಹಾಲ್‌ಮಾರ್ಕ್ ಮಾಡಿದ ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳನ್ನು (2 ಗ್ರಾಂಗಿಂತ ಹೆಚ್ಚು) ಮಾತ್ರ ಮಾರಾಟ ಮಾಡಬೇಕು ಎಂದು ಏಪ್ರಿಲ್ 4, 2022 ರಂದು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS)ತನ್ನ ಅಧಿಸೂಚನೆಯಲ್ಲಿ ತಿಳಿಸಿತ್ತು.

Ad Widget . Ad Widget .

ಚಿನ್ನದ ಮಾರಾಟದಲ್ಲಿ ನಡೆಯುತ್ತಿದ್ದ ಅಕ್ರಮಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಹಾಲ್‌ಮಾರ್ಕಿಂಗ್ ಅನ್ನು ಕಡ್ಡಾಯಗೊಳಿಸುವುದರಿಂದ ದೇಶದ ಜನರು ನಕಲಿ ಮತ್ತು ಕಲಬೆರಕೆ ಚಿನ್ನದಿಂದ ಮುಕ್ತಿ ಪಡೆಯಲಿದ್ದಾರೆ. ಇದಕ್ಕೂ ಮೊದಲು ಒಟ್ಟು ಮೂರು ದರ್ಜೆಯ ಚಿನ್ನಗಳಿಗೆ ಹಾಲ್ಮಾರ್ಕಿಂಗ್ ನಿಯಮದಿಂದ ವಿನಾಯ್ತಿ ನೀಡಲಾಗಿತ್ತು, ಆದರೆ ಇದೀಗ ಎಲ್ಲಾ ದರ್ಜೆಯ ಚಿನ್ನವನ್ನು ಹಾಲ್‌ಮಾರ್ಕಿಂಗ್‌ ನಿಯಮದ ಅಡಿಗೆ ತರಲಾಗಿದೆ.

BIS ಹಾಲ್‌ಮಾರ್ಕಿಂಗ್ ಯಾವುದೇ ಚಿನ್ನದ ಶುದ್ಧತೆಯ ಗುರುತಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಇದಕ್ಕೂ ಮೊದಲು ಜೂನ್ 16, 2021 ರವರೆಗೆ, ಚಿನ್ನದ ಹಾಲ್‌ಮಾರ್ಕಿಂಗ್ ಸ್ವಇಚ್ಚೆಯ ಮೇಲೆ ಆಧಾರವಾಗಿರಲಿದೆ ಎನ್ನಲಾಗಿತ್ತು. ಆದರೆ ಇದೀಗ ಜೂನ್ 1 ರಿಂದ ಅದನ್ನು ಕಡ್ಡಾಯಗೊಳಿಸಲಾಗಿದೆ. ಹಲವು ಬಾರಿ ನಕಲಿ ಅಥವಾ ಕಡಿಮೆ ದರ್ಜೆಯ ಚಿನ್ನವನ್ನು ಗ್ರಾಹಕರಿಗೆ ಮಾರಾಟ ಮಾಡಲಾಗುತ್ತದೆ. ಆದರೆ ಹಾಲ್‌ಮಾರ್ಕ್ ಚಿನ್ನವು 100% ಪ್ರಮಾಣೀಕೃತ ಚಿನ್ನವಾಗಿರಲಿದೆ.

ಜೂನ್ 1 ರಿಂದ ಸರ್ಕಾರ ಎರಡನೇ ಹಂತದ ಹಾಲ್‌ಮಾರ್ಕಿಂಗ್ ಜಾರಿಗೊಳಿಸುತ್ತಿದ್ದು, ಇದರಲ್ಲಿ ಹಾಲ್‌ಮಾರ್ಕಿಂಗ್ ಕಡ್ಡಾಯಗೊಳಿಸಿ, ಅದರಲ್ಲಿ ಮತ್ತೆ ಮೂರೂ ಗ್ರೇಡ್‌ಗಳನ್ನು ಶಾಮೀಳುಗೊಲಿಸಿದೆ. ಅಂದರೆ, ಈ ಬಾರಿ 20 ಕ್ಯಾರೆಟ್, 23 ಕ್ಯಾರೆಟ್ ಮತ್ತು 24 ಕ್ಯಾರೆಟ್ಗಳನ್ನು ಹಾಲ್ಮಾರ್ಕಿಂಗ್ ನಿಯಮಗಳಲ್ಲಿ ಸೇರಿಸಲಾಗಿದೆ. ಇದಕ್ಕೂ ಮೊದಲು, ಕಳೆದ ವರ್ಷ ಸರ್ಕಾರವು ದೇಶಾದ್ಯಂತ ಚಿನ್ನದ ಕಡ್ಡಾಯ ಹಾಲ್‌ಮಾರ್ಕ್ ಅನ್ನು ಜಾರಿಗೆ ತರಲು ನಿರ್ಧರಿಸಿತ್ತು. ಆದರೆ ಇದು ಹಂತ ಹಂತವಾಗಿ ಜಾರಿಯಾಗುತ್ತಿದೆ. ಮೊದಲ ಹಂತದಲ್ಲಿ, 23 ಜೂನ್ 2021 ರಂದು ದೇಶದ 256 ಜಿಲ್ಲೆಗಳಲ್ಲಿ ಇದನ್ನು ಜಾರಿಗೆ ತರಲಾಗಿತ್ತು.

ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ 4 ಏಪ್ರಿಲ್ 2022 ರಂದು ಅಧಿಸೂಚನೆಯನ್ನು ಹೊರಡಿಸುವ ಮೂಲಕ ಎರಡನೇ ಹಂತದ ಹಾಲ್‌ಮಾರ್ಕಿಂಗ್ ಅನ್ನು ಜಾರಿಗೊಳಿಸುವುದಾಗಿ ಘೋಷಿಸಿತ್ತು. ಇಲ್ಲಿಯವರೆಗೆ 14 ಕ್ಯಾರೆಟ್, 18 ಕ್ಯಾರೆಟ್, 20 ಕ್ಯಾರೆಟ್, 22 ಕ್ಯಾರೆಟ್, 23 ಕ್ಯಾರೆಟ್ ಮತ್ತು 24 ಕ್ಯಾರೆಟ್ ಎಂಬ 6 ಶುದ್ಧತೆಯ ವರ್ಗಗಳಿಗೆ ಚಿನ್ನದ ಹಾಲ್‌ಮಾರ್ಕ್ ಕಡ್ಡಾಯವಾಗಿತ್ತು. ಇದರೊಂದಿಗೆ, ಹಾಲ್‌ಮಾರ್ಕಿಂಗ್‌ನಲ್ಲಿ ಬಿಐಎಸ್ ಲೋಗೋ, ನಿಖರತೆ ಗ್ರೇಡ್ ಮತ್ತು ಆರು ಅಂಕೆಗಳ ಆಲ್ಫಾನ್ಯೂಮರಿಕಲ್ ಕೋಡ್ ಅನ್ನು ನಮೂದಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಜೂನ್ 1 ರಿಂದ, ಗ್ರಾಹಕರು ಪ್ರತಿ ಚಿನ್ನದ ಆಭರಣದ ಮೇಲೆ 35 ರೂಪಾಯಿಗಳನ್ನು ಹಾಲ್‌ಮಾರ್ಕಿಂಗ್ ಶುಲ್ಕವಾಗಿ ಪಾವತಿಸಬೇಕಾಗುತ್ತದೆ.

Leave a Comment

Your email address will not be published. Required fields are marked *