May 2022

ವಿಟ್ಲ: ವಾಟ್ಸಪ್ ನಲ್ಲಿ ಶಿವಲಿಂಗದ ಕುರಿತು ಅವಹೇಳನ| ಹಿಂಜಾವೆಯಿಂದ ದೂರು

ಸಮಗ್ರ ನ್ಯೂಸ್: ವಾಟ್ಸಾಪ್‌ ಸ್ಟೇಟಸ್‌ನಲ್ಲಿ ಶಿವ ದೇವರನ್ನು ಅವಮಾನಿಸಿ ಬರೆದು ಹಾಕಿದ ಹಿನ್ನಲೆ ಆಕ್ರೋಶಗೊಂಡ ಹಿಂದೂ ಜಾಗರಣ ವೇದಿಕೆ ವಿಟ್ಲ ಪ್ರಖಂಡ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ವಿಟ್ಲ ಕಸಬಾದ ಒಕ್ಕೆತ್ತೂರು ಊರುದಂಗಡಿಯ ನಿವಾಸಿ ರಸೀದ್ ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಿಂದೂ ಬಾಂಧವರು ಪೂಜಿಸುವ ಶಿವಲಿಂಗವನ್ನು ಅಸಭ್ಯವಾಗಿ ನಿಂದಿಸಿದ್ದಾನೆ ” ಸಾಬ್ರೆ…. ಒಳ ಉಡುಪುಗಳನ್ನು ಬಿಗಿಯಾಗಿ, ಸರಿಯಾಗಿ ಧರಿಸಿರಿ, ಅಕಸ್ಮಾತ್ “ಅವರ” ಕಣ್ಣಿಗೆ ಆ ಪವಿತ್ರ “ಲಿಂಗ” ನಮ್ಮದೇ […]

ವಿಟ್ಲ: ವಾಟ್ಸಪ್ ನಲ್ಲಿ ಶಿವಲಿಂಗದ ಕುರಿತು ಅವಹೇಳನ| ಹಿಂಜಾವೆಯಿಂದ ದೂರು Read More »

ಮಂಗಳೂರು: ಮತ್ತೆ ಹಿಜಾಬ್- ಕೇಸರಿ‌ ಕದನ| ಆದೇಶ‌ ಪಾಲಿಸಲು ನಕಾರ; ವಿದ್ಯಾರ್ಥಿಗಳಿಂದ ಪ್ರತಿಭಟನೆ

ಸಮಗ್ರ ನ್ಯೂಸ್: ಕರಾವಳಿ ಸೇರಿದಂತೆ ದೇಶಾದ್ಯಂತ ವಿವಾದಕ್ಕೆ ಕಾರಣವಾಗಿದ್ದ ಹಿಜಾಬ್ ಗಲಾಟೆ ಇದೀಗ ಮತ್ತೆ ಶುರುವಾಗಿದೆ. ಹೈಕೋರ್ಟ್ ತೀರ್ಪು ಬಳಿಕ ತಣ್ಣಗಾಗಿದ್ದ ಹಿಜಾಬ್ ವಿವಾದ ಇದೀಗ ಮತ್ತೆ ಚರ್ಚೆಗೆ ಬಂದಿದ್ದು,ಮಂಗಳೂರಿನ ವಿವಿ ಕಾಲೇಜಿನಲ್ಲಿ ಹಿಜಾಬ್ ವಿವಾದ ಮುಂದುವರೆದಿದೆ. ಹಿಜಾಬ್ ಆದೇಶ ಕಟ್ಟುನಿಟ್ಟು ಪಾಲನೆ ಮಾಡಿ ಇಲ್ಲದಿದ್ದರ ಕೇಸರಿ ಶಾಲು ಹಾಕಲು ಅವಕಾಶ ಕೊಡಿ ಎಂದು ಒತ್ತಾಯಿಸಿ ಕೆಲವು ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದ್ದಾರೆ. ಕಾಲೇಜಿನಲ್ಲಿ ಹೈಕೋರ್ಟ್‌ ತೀರ್ಪನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ. ಕೆಲವು ವಿದ್ಯಾರ್ಥಿನಿಯರು ತರಗತಿಗೆ ಹಿಜಾಬ್‌ ಧರಿಸಿ

ಮಂಗಳೂರು: ಮತ್ತೆ ಹಿಜಾಬ್- ಕೇಸರಿ‌ ಕದನ| ಆದೇಶ‌ ಪಾಲಿಸಲು ನಕಾರ; ವಿದ್ಯಾರ್ಥಿಗಳಿಂದ ಪ್ರತಿಭಟನೆ Read More »

ಸುಳ್ಯ: ಬೈಕ್- ಕಾರು ಢಿಕ್ಕಿ| ಗಂಭೀರ ಗಾಯಗೊಂಡ ಯುವಕ ಸಾವು

ಸಮಗ್ರ ನ್ಯೂಸ್: ಬೈಕ್ ಮತ್ತು ಕಾರು ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ. ಮೃತಪಟ್ಟ ಬೈಕ್ ಸವಾರನನ್ನು ಮೇನಾಲದ ವಿಷ್ಣುಪ್ರಸಾದ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ತೀವ್ರ ಜಖಂಗೊಂಡಿದ್ದ ಈತ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮೃತಪಟ್ಟಿದ್ದಾರೆ. ಎರಡು ವಾರಗಳ ಹಿಂದೆ ರಾತ್ರಿ ಶ್ರೀರಾಂಪೇಟೆಯ ಸರಕಾರಿ ಆಸ್ಪತ್ರೆ ಎದುರುಗಡೆ ಮೇನಾಲಲದ ವಿಷ್ಣುಪ್ರಸಾದ್ ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕ್ ಮತ್ತು ಬೊಳುಗಲ್ಲಿನ ಯುವಕ ಚಲಾಯಿಸಿಕೊಂಡು ಬರುತ್ತಿದ್ದ ಕಾರು ಮುಖಾಮುಖಿ ಡಿಕ್ಕಿಯಾಯಿತು.

ಸುಳ್ಯ: ಬೈಕ್- ಕಾರು ಢಿಕ್ಕಿ| ಗಂಭೀರ ಗಾಯಗೊಂಡ ಯುವಕ ಸಾವು Read More »

ಪ್ರಧಾನಿಯಾಗಿ‌ 8 ವರ್ಷ ಪೂರೈಸಿದ ನರೇಂದ್ರ ಮೋದಿ| ಇಂದು ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ

ಸಮಗ್ರ ನ್ಯೂಸ್: ನರೇಂದ್ರ ಮೋದಿ ಅವರು, ದೇಶದ ಪ್ರಧಾನಿಯಾಗಿ ಇಂದು (ಮೇ.26) 8 ವರ್ಷ ಪೂರ್ಣಗೊಳ್ಳಲಿದೆ. ಈ ದಿನದಂದು ಅವರು ಚೆನ್ನೈ ಹಾಗೂ ಹೈದರಾಬಾದ್‌ನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ಹೆದ್ದಾರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮೋದಿ ಅವರು ಮೊದಲ ಬಾರಿ 2014ರ ಮೇ 26ರಂದು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅದಾದ ನಂತರ 2019ರಲ್ಲಿ ಪುನಃ ಅಧಿಕಾರಕ್ಕೆ ಬಂದಿದ್ದರು. 2ನೇ ಅವಧಿಯಲ್ಲಿ ಅವರು ಮೇ 30ರಂದು ಪ್ರಮಾಣವಚನ ಸ್ವೀಕಾರ ಮಾಡಿದ್ದರು. ಮೋದಿ ಅಧಿಕಾರಕ್ಕೆ ಬಂದು 8

ಪ್ರಧಾನಿಯಾಗಿ‌ 8 ವರ್ಷ ಪೂರೈಸಿದ ನರೇಂದ್ರ ಮೋದಿ| ಇಂದು ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ Read More »

ಮೇ.27ರಿಂದ ಮತ್ತೆ ಮುಂಗಾರಿನ ಸಿಂಚನ| ನಾಳೆ ಕೇರಳದ ಕದ ತಟ್ಟಲಿದ್ದಾನೆ ವರುಣ

ಸಮಗ್ರ ನ್ಯೂಸ್: ಮುಂಗಾರು ಮಳೆಯು ಮೇ 27ರಂದು ಕೇರಳಕ್ಕೆ ಆಗಮಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ಬುಧವಾರ ತಿಳಿ ಸಿದೆ. ರಾಜ್ಯದಲ್ಲಿ ಶನಿವಾರದವರೆಗೆ ಗುಡುಗು, ಮಿಂಚು, ಗಾಳಿ ಸಹಿತ ಮಳೆ ಯಾಗುವ ಎಚ್ಚರಿಕೆಯನ್ನೂ ಕೊಡಲಾಗಿದೆ. ಕೇರಳ ಮತ್ತು ಲಕ್ಷದ್ವೀಪ ಕರಾವಳಿ ಭಾಗದಲ್ಲಿ 40-50 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಅದು 60 ಕಿ.ಮೀ.ವರೆಗೂ ಹೆಚ್ಚುವ ಸಾಧ್ಯತೆಯಿದೆ. ಹಾಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದೆ.ಕರ್ನಾಟಕಕ್ಕೂ ಎಚ್ಚರಿಕೆ: ಕರ್ನಾಟಕ, ಲಕ್ಷದ್ವೀಪ, ಆಂಧ್ರಪ್ರದೇಶ, ತೆಲಂಗಾಣ, ತಮಿಳು ನಾಡು ಮತ್ತು

ಮೇ.27ರಿಂದ ಮತ್ತೆ ಮುಂಗಾರಿನ ಸಿಂಚನ| ನಾಳೆ ಕೇರಳದ ಕದ ತಟ್ಟಲಿದ್ದಾನೆ ವರುಣ Read More »

ರಾಯಚೂರಿನ ಈ ಊರುಗಳಿಗೆ ತೆಪ್ಪವೇ ಗತಿ! 20 ವರ್ಷಗಳ ಹೋರಾಟಕ್ಕೆ ಸಿಕ್ಕಿಲ್ಲ ಮುಕ್ತಿ

ಸಮಗ್ರ ನ್ಯೂಸ್: ತಾಲ್ಲೂಕಿನ ನಾಲ್ಕೈದು ಗ್ರಾಮಗಳು ಈಗಲೂ ಕೃಷ್ಣಾ ನದಿ ದಾಟಲು ಸೇತುವೆ ಇಲ್ಲದೆ ತೆಪ್ಪಗಳ ಮೂಲಕ ಜೀವಭಯದಲ್ಲಿ ಸಾಗುತ್ತಾರೆ. 20 ವರ್ಷಗಳಿಂದ ಸೇತುವೆ ನಿರ್ಮಾಣಕ್ಕೆ ಹೋರಾಟ ನಡೆಸಿದರೂ ಪ್ರಯೋಜನವಾಗದೆ ಇದೀಗ ಸರ್ಕಾರಕ್ಕೆ ಹೋರಾಟದ ಎಚ್ಚರಿಕೆಯನ್ನು ಗ್ರಾಮಸ್ಥರು ನೀಡಿದ್ದಾರೆ. ಶಾಲೆ ಆರಂಭವಾಯಿತು ಅಂದರೆ ಸಾಕು ಮಕ್ಕಳಿಗೆ ಹಾಗೂ ಪೋಷಕರಿಗೆ ಜೀವಭಯ ಕಾಡಲು ಆರಂಭವಾಗುತ್ತದೆ. ಮೊಸಳೆಗಳು, ಪ್ರವಾಹ, ಬಿರುಗಾಳಿ ಎಂಬ ಭಯದ ನಡುವೆ ತೆಪ್ಪಗಳ ಮೂಲಕ ಸಾಗುತ್ತಾರೆ. ಸದ್ಯ ಶಾಲಾ ಕಾಲೇಜುಗಳು ಅರಂಭವಾಗಿದ್ದು, ಮತ್ತೆ ಮಕ್ಕಳ ಸ್ಥಿತಿ ಕರಾಳತೆಗೆ

ರಾಯಚೂರಿನ ಈ ಊರುಗಳಿಗೆ ತೆಪ್ಪವೇ ಗತಿ! 20 ವರ್ಷಗಳ ಹೋರಾಟಕ್ಕೆ ಸಿಕ್ಕಿಲ್ಲ ಮುಕ್ತಿ Read More »

ಮೈಸೂರು: ಮಗನ ಜೊತೆಗೆ ಎಸ್ಎಸ್ಎಲ್ ಸಿ ಪಾಸಾದ ತಂದೆ

ಸಮಗ್ರ ನ್ಯೂಸ್: ಬರೋಬ್ಬರಿ 28 ವರ್ಷಗಳು ಮತ್ತು ಮೂರು ವಿಫಲ ಪ್ರಯತ್ನಗಳ ನಂತರ, 42 ವರ್ಷದ ರಹಮತುಲ್ಲಾ ಅಂತಿಮವಾಗಿ ರಾಜ್ಯದಲ್ಲಿ ಫಲಿತಾಂಶಗಳು ಪ್ರಕಟವಾದಾಗ ತನ್ನ ಹತ್ತನೇ ತರಗತಿ ಪರೀಕ್ಷೆಯನ್ನು ತೇರ್ಗಡೆ ಮಾಡುವ ತನ್ನ ಜೀವಿತಾವಧಿಯ ಕನಸನ್ನು ಸಾಧಿಸಿದರು ಮತ್ತು ಅವರು 333 ಅಂಕಗಳೊಂದಿಗೆ ಉತ್ತೀರ್ಣನಾಗಿದ್ದಾರೆ. ಶೇ.98 ರಷ್ಟು ಅಂಕ ಗಳಿಸಿದ ತನ್ನ ಮಗ ಮೊಹಮ್ಮದ್ ಫರಾನ್‌ನೊಂದಿಗೆ ಸಾಧನೆಯನ್ನು ಹಂಚಿಕೊಂಡಿರುವುದು ಈ ಸಾಧನೆಯನ್ನು ಸಿಹಿಗೊಳಿಸಿದೆ. ‘ನಾನು 10ನೇ ತರಗತಿಯಲ್ಲಿ ತೇರ್ಗಡೆಯಾಗಬೇಕೆಂದು ನನ್ನ ತಂದೆ ಯಾವಾಗಲೂ ಒತ್ತಾಯಿಸುತ್ತಿದ್ದರು. ನಾನು ಅದನ್ನು

ಮೈಸೂರು: ಮಗನ ಜೊತೆಗೆ ಎಸ್ಎಸ್ಎಲ್ ಸಿ ಪಾಸಾದ ತಂದೆ Read More »

ಮಂಗಳೂರು: ಮರಳು ಮಿತ್ರ ಮೂಲಕ ಜಿಲ್ಲೆಗೆ ಮರಳು ಪೂರೈಕೆ – ಡಾ| ರಾಜೇಂದ್ರ ಕೆ.ವಿ

ಸಮಗ್ರ ನ್ಯೂಸ್: ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಿಷೇಧವಿದ್ದರೂ ಜಿಲ್ಲೆಯಲ್ಲಿ ಮರಳಿನ ಕೊರತೆ ಎದುರಾಗದು. ಹಲವು ತಿಂಗಳಿಗೆ ಬೇಕಾಗುವಷ್ಟು ಸಂಗ್ರಹವಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಸ್ಪಷ್ಟಪಡಿಸಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಶಂಭೂರು ಹಾಗೂ ಮರವೂರಿನ ಅಣೆಕಟ್ಟಿನಲ್ಲಿ ಹೂಳೆತ್ತುವ ಮೂಲಕ ತೆರವುಗೊಳಿಸಲಾದ ಮರಳನ್ನು ಸಂಗ್ರಹಿಸಲಾಗುತ್ತಿದೆ. ಸಿಹಿ ನೀರಿನ ಮರಳು ಇದಾಗಿರುವ ಕಾರಣ ಉತ್ತಮ ಗುಣಮಟ್ಟದ್ದಾಗಿದೆ. “ಮರಳು ಮಿತ್ರ’ ಆಯಪ್‌ನಲ್ಲಿ ಅರ್ಜಿ ಸಲ್ಲಿಸಿ 7,000 ರೂ.ಗೆ 10 ಮೆಟ್ರಿಕ್‌ ಟನ್‌ ಮರಳು ಪಡೆಯಬಹುದು. ಜಿಎಸ್‌ಟಿ ಮತ್ತು

ಮಂಗಳೂರು: ಮರಳು ಮಿತ್ರ ಮೂಲಕ ಜಿಲ್ಲೆಗೆ ಮರಳು ಪೂರೈಕೆ – ಡಾ| ರಾಜೇಂದ್ರ ಕೆ.ವಿ Read More »

ನಟ ಅನಿರುದ್ಧ್ ರಿಂದ ಪ್ರಧಾನಿ ಮೋದಿಗೆ ಪತ್ರ

ಸಮಗ್ರ ನ್ಯೂಸ್: ನಟ ಅನಿರುದ್ಧ್​ ಅವರೀಗ ಬೆಂಗಳೂರಿನ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಸುದ್ದಿಯಾಗಿದ್ದಾರೆ. ಆಗಾಗ ಸಾಮಾಜಿಕ ಕಳಕಳಿಯ ವಿಚಾರಗಳಲ್ಲಿ ಸುದ್ದಿಯಾಗಿರುವ ನಟ, ಇದೀಗ ‘ಬ್ರ್ಯಾಂಡ್ ಬೆಂಗಳೂರು’ ಉಳಿಸುವ ಬಗ್ಗೆ ಪತ್ರದಲ್ಲಿ ನಮೂದಿಸಿದ್ದಾರೆ. ಐಟಿ ಹಬ್, ಗ್ರೀನ್ ಸಿಟಿ ಎಂದೆಲ್ಲಾ ವಿಶ್ವದ ಗಮನ ಸೆಳೆದ ಬೆಂಗಳೂರು ಇತ್ತೀಚೆಗೆ ಅವ್ಯವಸ್ಥೆಗಳ ಕೂಪವಾಗುತ್ತಿದೆ. ಬೆಂಗಳೂರಿನ ಸಮಸ್ಯೆಯನ್ನು ಆಲಿಸಲು ಪ್ರತ್ಯೇಕವಾಗಿರುವ ಇಲಾಖೆಯನ್ನು ರಚಿಸಬೇಕು. ಕೇಂದ್ರ ಸರ್ಕಾರ ರಾಜ್ಯಕ್ಕೆ ಈ ಬಗ್ಗೆ ಸೂಕ್ತ ಕಾರ್ಯ ನಿರ್ವಹಿಸಲು ಕೂಡಲೇ ಆದೇಶ ಮಾಡಬೇಕು.

ನಟ ಅನಿರುದ್ಧ್ ರಿಂದ ಪ್ರಧಾನಿ ಮೋದಿಗೆ ಪತ್ರ Read More »

ಆಕಾಶವಾಣಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಮಗ್ರ ನ್ಯೂಸ್: ಆಕಾಶವಾಣಿ ಬೆಂಗಳೂರು ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗವು ಸಾಂದರ್ಭಿಕ ಸುದ್ದಿ ಸಂಪಾದಕರು/ವರದಿಗಾರರು ಹಾಗೂ ಸಾಂಧರ್ಭಿಕ ಸುದ್ದಿ ವಾಚಕರು-ಅನುವಾದಕಾರರನ್ನು ನೇಮಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಸಾಂದರ್ಭಿಕ ಸುದ್ದಿ ಸಂಪಾದಕರು/ವರದಿಗಾರರ ಹುದ್ದೆಗೆ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವೀಧರರಾಗಿರಬೇಕು, ಪದವಿ ಅಥವಾ ಪತ್ರಿಕೋದ್ಯಮ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಕನಿಷ್ಟ 1 ವರ್ಷದ ಸ್ನಾತಕೋತ್ತರ ಡಿಪ್ಲೊಮಾ ಪಡೆದಿರಬೇಕು ಅಥವಾ ಮುದ್ರಣ/ವಿದ್ಯುನ್ಮಾನ ಮಾಧ್ಯಮದಲ್ಲಿ ವರದಿಗಾರಿಕೆ/ಸಂಪಾದಕತ್ವ ಕೆಲಸದಲ್ಲಿ 5 ವರ್ಷ ಅನುಭವವಿರಬೇಕು. ಕಂಪ್ಯೂಟರ್ ಅಪ್ಲಿಕೇಷನ್ ಪ್ರಾಥಮಿಕ ತಿಳುವಳಿಕೆ, ಕನ್ನಡ ಭಾಷೆಯಲ್ಲಿ

ಆಕಾಶವಾಣಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ Read More »