May 2022

ಕುಂದಾಪುರ: ಉದ್ಯಮಿ ಕಟ್ಟೆ ಭೋಜಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ? ಈ ಸ್ಟೋರಿ ಓದಿ…

ಸಮಗ್ರ ನ್ಯೂಸ್: ಉದ್ಯಮಿ, ಕುಂದಾಪುರ ಚಿನ್ಮಯಿ ಆಸ್ಪತ್ರೆ ಮಾಲಕ ಕಟ್ಟೆ ಗೋಪಾಲಕೃಷ್ಣ ರಾವ್‌ (ಕಟ್ಟೆ ಭೋಜಣ್ಣ) (79) ಅವರು ಹಂಗಳೂರು ಗ್ರಾಮದ ಅಂಕದಕಟ್ಟೆಯಲ್ಲಿರುವ ಉದ್ಯಮಿ ಮೊಳಹಳ್ಳಿ ಗಣೇಶ್‌ ಶೆಟ್ಟಿ ಅವರ ಮನೆಯ ಸಿಟೌಟ್‌ನಲ್ಲಿ ಪಿಸ್ತೂಲಿನಲ್ಲಿ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಗ್ಗೆ 6.20ರ ಸುಮಾರಿಗೆ ಸಂಭವಿಸಿದೆ. ಕುಂದಾಪುರದಲ್ಲಿ ಆರಂಭವಾದ ಗೋಲ್ಡ್‌ ಜುವೆಲ್ಲರಿಯಲ್ಲಿ ಗಣೇಶ್‌ ಶೆಟ್ಟಿ ತಟಸ್ಥ ಪಾಲುದಾರರಾಗಿದ್ದು, ಈ ಗೋಲ್ಡ್‌ ಜುವೆಲ್ಲರಿಯ ಪಾಲುದಾರರು ಆಫ್ರಿಕಾದ ಚಿನ್ನದ ಗಣಿಯಲ್ಲಿ ಹಣ ವಿನಿಯೋಗಿಸಿದ್ದರು. ಆರಂಭದಲ್ಲಿ ಇದು ಉತ್ತಮ ಲಾಭ […]

ಕುಂದಾಪುರ: ಉದ್ಯಮಿ ಕಟ್ಟೆ ಭೋಜಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ? ಈ ಸ್ಟೋರಿ ಓದಿ… Read More »

ಎಸಿಬಿ ಬಲೆಗೆ ಬಿದ್ದ ಸರ್ವೇಯರ್

ಸಮಗ್ರ ನ್ಯೂಸ್: ರಾಯಚೂರು ತಹಶೀಲ್ದಾರ್ ಕಚೇರಿಯ ಎಡಿಎಲ್ ಆರ್ ಕಚೇರಿಯ ಮೇಲೆ ಎಸಿಬಿ ದಾಳಿ ನಡೆಸಿದ್ದು ಸರ್ವೆಯರ್ ಎನ್ ಮಹೇಶ ಎಸಿಬಿ ಬಲೆಗೆ ಬಿದ್ದಿದ್ದಾರೆ. ವೆಂಕಟೇಶ ವರಲು ಎಂಬುವವರು ಎಸಿಬಿಗೆ ದೂರು ನೀಡಿದ್ದರು. ಈ ಆಧಾರದ ಮೇಲೆ ದಾಳಿ ನಡೆಸಿದ ಎಸಿಬಿ, ಜಮೀನು‌ ಪೋಡಿ ಮಾಡಲು 35 ಸಾವಿರ ಲಂಚ ಕೇಳಿದ್ದ ಮಹೇಶ10 ಸಾವಿರ ಮುಂಗಡ ಪಡೆಯುವ ವೇಳೆ ಎಸಿಬಿ ದಾಳಿ ನಡೆಸಿದೆ.

ಎಸಿಬಿ ಬಲೆಗೆ ಬಿದ್ದ ಸರ್ವೇಯರ್ Read More »

ಸಲೂನ್ ನಲ್ಲಿ ಹೇರ್ ಕಲರಿಂಗ್ ಮಾಡಿಸಲು ಬಂದಾತನ ಇರಿದು ಕೊಂದ ಕ್ಷೌರಿಕ!!

ಸಮಗ್ರ ನ್ಯೂಸ್: ಸಲೂನಿನಲ್ಲಿ ತಲೆಗೆ ಬಣ್ಣ ಹಚ್ಚಲು ರೇಟ್ ವಿಚಾರಕ್ಕೆ ವಾಗ್ವಾದ ನಡೆದಿದ್ದು ಕತ್ತರಿಯಿಂದ ಇರಿದು ಗ್ರಾಹಕನನ್ನು ಕ್ಷೌರಿಕ ಬರ್ಬರವಾಗಿ ಕೊಂದ ಘಟನೆ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಅಸಂಗಿ ಗ್ರಾಮದ ಸಲೂನ್ನಲ್ಲಿ ನಡೆದಿದೆ. ಸಾಗರ ಅವಟಿ(22) ಕೊಲೆಯಾದ ಗ್ರಾಹಕ. ಪ್ರಜ್ವಲ್ ಜೆಂಟ್ಸ್ ಪಾರ್ಲರ್ನ ಸದಾಶಿವ ನಾವಿ ಎಂಬ ಕ್ಷೌರಿಕ ಈ ಕೃತ್ಯ ಎಸಗಿದ್ದಾನೆ. ನಿನ್ನೆ ಸಂಜೆ ಸಾಗರ ಎಂಬ ಯುವಕ ತಲೆಗೆ ಕಲರ್ ಮಾಡಿಸಲು ಸಲೂನ್ಗೆ ಬಂದಿದ್ದ. ಈ ವೇಳೆ ಸಲೂನ್ ಮಾಲೀಕ ಲಕ್ಷ್ಮಣ ಕಲರ್

ಸಲೂನ್ ನಲ್ಲಿ ಹೇರ್ ಕಲರಿಂಗ್ ಮಾಡಿಸಲು ಬಂದಾತನ ಇರಿದು ಕೊಂದ ಕ್ಷೌರಿಕ!! Read More »

ಮಂಗಳೂರು : ಹಿಜಾಬ್ ವಿವಾದಕ್ಕೆ ಡಿಸಿ ಮಧ್ಯಪ್ರವೇಶಿಸಲಿ – ಯು.ಟಿ ಖಾದರ್

ಸಮಗ್ರ ನ್ಯೂಸ್: ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿವಿ ಕಾಲೇಜಿನಲ್ಲಿ ಹಿಜಾಬ್‌ಗೆ ಕೆಲವು ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿರುವ ಪ್ರಕರಣವು ಗಂಭೀರಗೊಳ್ಳುವ ಮುನ್ನ ದ.ಕ. ಜಿಲ್ಲಾಧಿಕಾರಿ ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ರಾಜ್ಯ ವಿಧಾನ ಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಆಗ್ರಹಿಸಿದ್ದಾರೆ. ಈ ಬಗ್ಗೆ ಗುರುವಾರ ರಾಜ್ಯ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಅವರನ್ನು ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ , ಅಬ್ದುಲ್ ಜಬ್ಬಾರ್ ಜೊತೆ ಭೇಟಿಯಾಗಿ ಧಾರ್ಮಿಕ ಸೂಕ್ಷ್ಮ ವಿಷಯಗಳನ್ನು ಎಳೆದು ತಂದು

ಮಂಗಳೂರು : ಹಿಜಾಬ್ ವಿವಾದಕ್ಕೆ ಡಿಸಿ ಮಧ್ಯಪ್ರವೇಶಿಸಲಿ – ಯು.ಟಿ ಖಾದರ್ Read More »

ಸಂಸದೆ ನವನೀತ್ ರಾಣಾಗೆ ಕೊಲೆ ಬೆದರಿಕೆ| ಮಹಾರಾಷ್ಟ್ರಕ್ಕೆ ಕಾಲಿಟ್ಟರೆ ನಿಮ್ಮ ಕಥೆ ಮುಗೀತು!

ಸಮಗ್ರ ನ್ಯೂಸ್: ಹನುಮಾನ್ ಚಾಲೀಸಾ ಪ್ರಕರಣದಲ್ಲಿ ಜೈಲಿಗೆ ಹೋಗಿ ಈಗ ಜಾಮೀನಿನ ಮೇಲೆ ಹೊರಗಡೆ ಇರುವ ಸಂಸದೆ, ನಟಿ ನವನೀತ್ ರಾಣಾ ಅವರಿಗೆ ಕೊಲೆ ಬೆದರಿಕೆ ಕರೆಗಳು ಬಂದಿದ್ದು, ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾರೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸ ಮಾತ್ರೋಶ್ರೀ ಹೊರಗೆ ಹನುಮಾನ್ ಚಾಲೀಸಾ ಪಠಣೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ದೇಶದ್ರೋಹದ ಆರೋಪದ ಮೇಲೆ ಶಿಕ್ಷೆಗೆ ಒಳಗಾಗಿರುವ ಸಂಸದೆಗೆ ಇದೀಗ ಬೆದರಿಕೆ ಕರೆಗಳು ಬಂದಿವೆ. ತನ್ನ ವೈಯಕ್ತಿಕ ಮೊಬೈಲ್ ನಂಬರ್​ಗೆ 11 ಜೀವ ಬೆದರಿಕೆ ಕರೆಗಳು

ಸಂಸದೆ ನವನೀತ್ ರಾಣಾಗೆ ಕೊಲೆ ಬೆದರಿಕೆ| ಮಹಾರಾಷ್ಟ್ರಕ್ಕೆ ಕಾಲಿಟ್ಟರೆ ನಿಮ್ಮ ಕಥೆ ಮುಗೀತು! Read More »

ಬಿಜೆಪಿ ಸೇರುವಂತೆ ಒತ್ತಡ; ಮಣಿಯದ್ದಕ್ಕೆ ಇಡಿ ಸಂಚು – ಅಲವತ್ತುಕೊಂಡ ಡಿ.ಕೆ ಶಿವಕುಮಾರ್

ಸಮಗ್ರ ನ್ಯೂಸ್: ಬಿಜೆಪಿ ಪಕ್ಷಕ್ಕೆ ಸೇರುವಂತೆ ನನ್ನ ಮೇಲೆ ಒತ್ತಡ ಹೇರಲಾಗುತ್ತಿದೆ. ಅದಕ್ಕೆ ಒಪ್ಪದಿದ್ದಕ್ಕೆ ಸಂಚು ರೂಪಿಸಲಾಗಿದೆ. ಸರ್ಕಾರಿ ಸಂಸ್ಥೆಗಳು ನನ್ನ ವಿರುದ್ಧ ಪ್ರಕರಣ ದಾಖಲಿಸುತ್ತಿವೆ. ನನ್ನನ್ನು ಹೆದರಿಸುವುದು ಅಷ್ಟು ಸುಲಭವಲ್ಲ – ಕರ್ನಾಟಕ ಕಾಂಗ್ರೆಸ್​ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕರ್ನಾಟಕ ಕಾಂಗ್ರೆಸ್​ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸುವ ಮಾತು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಟ್ವೀಟ್​ ಮೂಲಕ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿಗೆ ಸೇರುವಂತೆ

ಬಿಜೆಪಿ ಸೇರುವಂತೆ ಒತ್ತಡ; ಮಣಿಯದ್ದಕ್ಕೆ ಇಡಿ ಸಂಚು – ಅಲವತ್ತುಕೊಂಡ ಡಿ.ಕೆ ಶಿವಕುಮಾರ್ Read More »

ರಾಷ್ಟ್ರಕವಿ ಕುವೆಂಪು ಗೆ ಅಪಮಾನ| ರೋಹಿತ್ ಚಕ್ರತೀರ್ಥ, ಲಕ್ಷಣ ಆಕಾಶೆ ವಿರುದ್ದ ದೂರು

ಸಮಗ್ರ ನ್ಯೂಸ್: ರಾಷ್ಟ್ರಕವಿ ಕುವೆಂಪುರವರಿಗೆ ಅಪಮಾನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ರೋಹಿತ್ ಚಕ್ರತೀರ್ಥ ಹಾಗೂ ಲಕ್ಷ್ಮಣ್ ಆಕಾಶೆ ವಿರುದ್ಧ ವಕೀಲರ ನಿಯೋಗ ದೂರು ದಾಖಲಿಸಿದೆ. ಈ ಸಂಬಂಧ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ ರಂಗನಾಥ್, ಹಿರಿಯ ವಕೀಲರಾದ ಬಾಲನ್, ಕೆ.ಎನ್ ಜಗದೀಶ್ ಕುಮಾರ್, ಪ್ರದೀಪ್, ಸೂರ್ಯ ಮುಕುಂದರಾಜ್ ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿ ಅವರಿಗೆ ದೂರು ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರನ್ನು ಅವಹೇಳನ ಮಾಡಿರುವ ಇವರು ನಾಡಗೀತೆಗೂ

ರಾಷ್ಟ್ರಕವಿ ಕುವೆಂಪು ಗೆ ಅಪಮಾನ| ರೋಹಿತ್ ಚಕ್ರತೀರ್ಥ, ಲಕ್ಷಣ ಆಕಾಶೆ ವಿರುದ್ದ ದೂರು Read More »

ಬೆಳ್ತಂಗಡಿ: ರಿಕ್ಷಾ ಬಾಡಿಗೆಗೆ ಬಂದವಳನ್ನೇ ಮದುವೆಯಾದ ಮುಸ್ಲಿಂ ಆಟೋವಾಲ

ಸಮಗ್ರ ನ್ಯೂಸ್: ಬೆಂಗಳೂರಿನ ಯುವತಿಯನ್ನು ಬೆಳ್ತಂಗಡಿಯ ಆಟೋ ಡ್ರೈವರ್‌ ಲವ್ ಜಿಹಾದ್ ನಿಂದ ಬಲೆಗೆ ಕೆಡವಿ ಮದುವೆಯಾದ ಘಟನೆ ನಡೆದಿದ್ದು, ಇದೀಗ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಕಾರಣವಾಗಿದೆ. ಬೆಂಗಳೂರಿನ ಬಸಮ್ಮ ಬೆಳ್ತಂಗಡಿ ತಾಲೂಕಿನ ಸೌತಡ್ಕ ದೇವಸ್ಥಾನಕ್ಕೆ ಆಗಮಿಸಿದ್ದ ವೇಳೆ ಕೊಕ್ಕಡದಲ್ಲಿ ಆಟೋ ಓಡಿಸುತ್ತಿದ್ದ ಮುಸ್ಲಿಂ ಯುವಕ ಸಮೀರ್‌ ನ ರಿಕ್ಷಾವನ್ನು ಬಾಡಿಗೆಗೆ ಪಡೆದಿದ್ದಳು ಎನ್ನಲಾಗಿದೆ. ನಂತರದ ದಿನಗಳಲ್ಲಿ ಇವರಿಬ್ಬರ ಪರಿಚಯ ಪ್ರೇಮವಾಗಿ ತಿರುಗಿದೆ. ಪ್ರೇಮ ಮದುವೆಯವರೆಗೆ ತಲುಪಿ ಇದೇ ತಿಂಗಳು ಮದುವೆಯಾಗಿದ್ದಾರೆ. ಇದರ ಪ್ರತಿಯೊಂದು ದಾಖಲೆಗಳು ಸಾಮಾಜಿಕ

ಬೆಳ್ತಂಗಡಿ: ರಿಕ್ಷಾ ಬಾಡಿಗೆಗೆ ಬಂದವಳನ್ನೇ ಮದುವೆಯಾದ ಮುಸ್ಲಿಂ ಆಟೋವಾಲ Read More »

ವೇಶ್ಯಾವಾಟಿಕೆ‌ ಅಪರಾದವಲ್ಲ – ಸುಪ್ರೀಂಕೋರ್ಟ್

ಸಮಗ್ರ ನ್ಯೂಸ್: ಲೈಂಗಿಕ ಚಟುವಟಿಕೆ ಕಾನೂನುಬದ್ಧ ಎಂದು ಘೋಷಿಸಿರುವ ಸುಪ್ರೀಂಕೋರ್ಟ್‌, ಲೈಂಗಿಕ ಕಾರ್ಯಕರ್ತರ ವಿರುದ್ಧ ಪೊಲೀಸರು ಕ್ರಿಮಿನಲ್‌ ಕೇಸ್‌ ದಾಖಲಿಸುವುದಾಗಲಿ ಅಥವಾ ಯಾವುದೇ ಕಾನೂನು ಕ್ರಮ ಕೈಗೊಳ್ಳುವಂತಿಲ್ಲ ಎಂದು ಪೊಲೀಸರಿಗೆ ಸೂಚಿಸಿದೆ. ವೇಶ್ಯಾವಾಟಿಕೆ ಎನ್ನುವುದು ವೃತ್ತಿಪರ ಕೆಲಸ. ಲೈಂಗಿಕ ಕಾರ್ಯಕರ್ತೆಯರಿಗೂ ದೇಶದ ಕಾನೂನಿನ ಅಡಿಯಲ್ಲಿ ಸಮಾಜ ಗೌರವ ಹಾಗೂ ಎಲ್ಲರಂತೆ ಸಮಾನ ರೀತಿಯಲ್ಲಿ ಬದುಕುವ ಹಕ್ಕು ಇದೆ ಎಂದು ಹೇಳಿದೆ. ನ್ಯಾಯಮೂರ್ತಿ ನಾಗೇಶ್ವರ ರಾವ್‌ ಅವರ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ, ದೇಶದಲ್ಲಿ ವೇಶ್ಯಾವಾಟಿಕೆ ಕಾನೂನು ಬದ್ಧ

ವೇಶ್ಯಾವಾಟಿಕೆ‌ ಅಪರಾದವಲ್ಲ – ಸುಪ್ರೀಂಕೋರ್ಟ್ Read More »

ಸ್ಯಾಂಡಲ್‌ವುಡ್ ನಟಿ ತಾರಾ ಮತ್ತೆ ಗರ್ಭಿಣಿಯಾಗಿದ್ದಾರೆ..!!

ಸಮಗ್ರ ನ್ಯೂಸ್: ಸ್ಯಾಂಡಲ್‌ವುಡ್ ನಟಿ ತಾರಾ ಮತ್ತೆ ಸುದ್ದಿಯಲ್ಲಿದ್ದಾರೆ. ತಾರಾ ಮತ್ತೆ ಗರ್ಭಿಣಿಯಾಗಿದ್ದಾರೆ, ಅದಕ್ಕೆ ಪೂರಕವೆಂಬಂತೆ ತಾರಾ ಗರ್ಭ ಧರಸಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ತಾರಾ ಅವರು ಎರಡನೇ ತಾಯಿ ಆಗ್ತಿದ್ದಾರಾ ಅಂತಾ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗ ಮತ್ತು ರಾಜಕೀಯದ ಜೊತೆ ಕಿರುತೆರೆಯಲ್ಲೂ ಬ್ಯುಸಿಯಿರುವ ನಟಿ ತಾರಾ ಮತ್ತೆ ಸುದ್ದಿಯಲ್ಲಿದ್ದಾರೆ. ಮತ್ತೆ ಗರ್ಭಿಣಿಯಾಗಿರುವ ಫೋಟೋಗಳ ಮೂಲಕ ಸೌಂಡ್ ಮಾಡುತ್ತಿದ್ದಾರೆ. ಸಾಕಷ್ಟು ಸಿನಿಮಾಗಳ ಮೂಲಕ ಛಾಪೂ ಮೂಡಿಸಿರುವ ತಾರಾ, ಗರ್ಭಿಣಿಯಾಗಿರುವ ನಿಜ

ಸ್ಯಾಂಡಲ್‌ವುಡ್ ನಟಿ ತಾರಾ ಮತ್ತೆ ಗರ್ಭಿಣಿಯಾಗಿದ್ದಾರೆ..!! Read More »