May 2022

ಕಾರ್ಕಳ: ಮಾಲ್ ಮೇಲ್ವಿಚಾರಕನ ಹಲ್ಲೆಗೈದ ರಿಕ್ಷಾ ಚಾಲಕರು

ಸಮಗ್ರ ನ್ಯೂಸ್: ಜೋಡುರಸ್ತೆಯ ಪೂರ್ಣಿಮಾ ಪ್ರೈಮ್ ಸಂಸ್ಥೆಯ ಮೇಲ್ವಿಚಾರಕರಿಗೆ ಹಲ್ಲೆಗೈದ ಮೂವರು ರಿಕ್ಷಾ ಚಾಲಕರನ್ನು ನಗರ ಠಾಣಾ ಪೊಲೀಸರು ವಶಕ್ಕೆ ತೆಗೆದಿದ್ದು, ಕೃತ್ಯಕ್ಕೆ ಬಳಸಲಾಗಿದ್ದ ರಿಕ್ಷಾಗಳನ್ನು ಜಪ್ತಿಪಡಿಸಲಾಗಿದೆ. ಜೋಡುರಸ್ತೆಯ ಪೂರ್ಣಿಮಾ ಸಿಲ್ಕ್ಸ್ ನಲ್ಲಿ ಮೇಲ್ವಿಚಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಯೋಗೀಶ್ ನಾಯಕ(47) ಘಟನೆಯಲ್ಲಿ ಗಾಯಗೊಂಡವರು. ಎಪ್ರಿಲ್ 29ರಂದು ಸಂಜೆ 6 ಗಂಟೆಗೆ ಈ ಘಟನೆ ನಡೆದಿದೆ. ಆರೋಪಿ ಗಳಾದ ಪದ್ಮನಾಭ ಶೆಟ್ಟಿಗಾರ, ಮನೋಜ, ಫಾಸ್ಕರ್ ಸಮಾನ ದುರುದ್ದೇಶ ಹೊಂದಿ ಈ ಕೃತ್ಯ ಎಸಗಿದ್ದಾರೆ. ಯೋಗೀಶ್ ನಾಯಕ್ ಅವರು ತನ್ನ ಬೈಕ್‌ನಲ್ಲಿ ಜೋಡುರಸ್ತೆ […]

ಕಾರ್ಕಳ: ಮಾಲ್ ಮೇಲ್ವಿಚಾರಕನ ಹಲ್ಲೆಗೈದ ರಿಕ್ಷಾ ಚಾಲಕರು Read More »

ಪುನಿತ್ ರಾಜ್ ಕುಮಾರ್ ಗೆ ಮರಣೋತ್ತರ ಬಸವ ಪ್ರಶಸ್ತಿ ಪ್ರಧಾನ

ಸಮಗ್ರ ನ್ಯೂಸ್: ಮುರುಘಾ ಮಠದ 2021ನೇ ಸಾಲಿನ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಯನ್ನು ಮರಣೋತ್ತರವಾಗಿ ಡಾ.ಪುನೀತ್‌ ರಾಜ್‌ಕುಮಾರ್ ಅವರಿಗೆ ನೀಡಲಾಗಿದ್ದು, ಅಶ್ವಿನಿ ಪುನೀತ್​ರಾಜ್​ಕುಮಾರ್​ ಅವರು ಪ್ರಶಸ್ತಿ ಸ್ವೀಕರಿಸಿದರು. ಬಸವ ಜಯಂತಿ ದಿನವಾದ ಮಂಗಳವಾರ ಚಿತ್ರದುರ್ಗ ಮುರುಘಾ ಮಠದ ಅನುಭವ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರದಲ್ಲಿ ಬಸವಶ್ರೀ ಪ್ರಶಸ್ತಿಯನ್ನು ಡಾ. ಶಿವಮೂರ್ತಿ ಮುರುಘಾ ಶರಣರು ಪ್ರದಾನ ಮಾಡಿದರು. ಪ್ರಶಸ್ತಿಯು 5 ಲಕ್ಷ ರೂ. ನಗದು ಮತ್ತು ಫಲಕ ಒಳಗೊಂಡಿದೆ. ಡಾ.ಶಿವಮೂರ್ತಿ ಮುರುಘ ಶರಣು ಮಾತನಾಡಿ, ಡಾ.ರಾಜ್​ಕುಮಾರ್ ಅವರ ಮುದ್ದಿನ ಮಗ ಪುನೀತ್‌.

ಪುನಿತ್ ರಾಜ್ ಕುಮಾರ್ ಗೆ ಮರಣೋತ್ತರ ಬಸವ ಪ್ರಶಸ್ತಿ ಪ್ರಧಾನ Read More »

ಮಂಗಳೂರು: ನಾಗನ ಕಲ್ಲುಗಳನ್ನು ಬೇರೆಡೆ ಎಸೆದು ವಿಕೃತಿ

ಸಮಗ್ರ ನ್ಯೂಸ್: ನಾಗಬನದಲ್ಲಿದ್ದ 6 ನಾಗನ ಕಲ್ಲುಗಳನ್ನು ಬೇರೆ ಬೇರೆ ಜಾಗದಲ್ಲಿ ಎಸೆದು ವಿಕೃತಿ ಮೆರೆದ ಘಟನೆ ಕಟೀಲು ಸಮೀಪದ ಮಲ್ಲಿಗೆಯಂಗಡಿಯಲ್ಲಿ ರವಿವಾರ ನಡೆದಿದೆ. ಕಟೀಲು ಮಲ್ಲಿಗೆಯಂಗಡಿಯ ಪಡುಸಾಂತ್ಯ ಭಂಡಾರಿ ಮನೆತನದ ನಾಗಬನದಲ್ಲಿದ್ದ ನಾಗನ ಕಲ್ಲುಗಳನ್ನು ದುಷ್ಕರ್ಮಿಗಳು ಬೇರೆ ಜಾಗದಲ್ಲಿ ಎಸೆದಿದ್ದಾರೆ. ರವಿವಾರ ಬೆಳಗ್ಗೆ ಮನೆತನದ ವ್ಯಕ್ತಿಯಾಬ್ಬರು ಈ ಜಾಗದಲ್ಲಿ ತೆರಳುತ್ತಿದ್ದ ವೇಳೆ ನಾಗನ ಕಲ್ಲು ಆವರಣದಿಂದ ಹೊರಗೆ ಬಿದ್ದಿರುವುದನ್ನು ಗಮನಿಸಿದ್ದಾರೆ. ಬಳಿಕ ಪರಿಶೀಲಿಸಿದಾಗ ನಾಗಬನದಲ್ಲಿ ಪ್ರತಿಷ್ಠೆ ಮಾಡಿದ ಜಾಗದಿಂದ 6 ನಾಗನ ಕಲ್ಲುಗಳನ್ನು ಎಸೆದು ಬೇರೆ ಬೇರೆ

ಮಂಗಳೂರು: ನಾಗನ ಕಲ್ಲುಗಳನ್ನು ಬೇರೆಡೆ ಎಸೆದು ವಿಕೃತಿ Read More »

ಅಂಚೆ ಇಲಾಖೆಯಲ್ಲಿ ಡಾಕ್ ಸೇವಕ್ ಹುದ್ದೆಗೆ ಅರ್ಜಿ ಆಹ್ವಾನ

ಸಮಗ್ರ ನ್ಯೂಸ್: ಎಸ್​ಎಸ್​ಎಲ್​ಸಿಯಾದವರಿಗೆ ಅಂಚೆ ಇಲಾಖೆಯಿಂದ 2410 ಡಾಕ್​ ಸೇವಕ್​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳು: 2410ವಿದ್ಯಾರ್ಹತೆ: ಎಸ್​ಎಸ್​ಎಲ್​ಸಿಕೊನೆಯ ದಿನ: ಜೂನ್​ 5, 2022ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್ ಮೂಲಕhttps://indiapostgdsonline.gov.in ಆಯ್ಕೆ ವಿಧಾನ: SSLC ಪರ್ಸಂಟೇಜ್ ಆಧಾರದ ಮೇಲೆಕೆಲಸದ ಅವಧಿ: 4/5 ಗಂಟೆಗಳು ಪ್ರತಿದಿನಕೆಲಸದ ಸ್ವರೂಪ: BPM (ಶಾಖಾ ಅಂಚೆ ಕಚೇರಿಗಳಲ್ಲಿ ಪೋಸ್ಟಮಾಸ್ಟರ್)ABPM (ಶಾಖಾ ಅಂಚೆ ಕಚೇರಿಗಳಲ್ಲಿ ಪೋಸ್ಟಮನ್, ಮೇಲ್ ಕ್ಯಾರಿಯರ್)Daksevak (ಉಪ/ಪ್ರಧಾನ ಅಂಚೆ ಕಚೇರಿಗಳಲ್ಲಿ ಪೋಸ್ಟಮನ್, ಮೇಲ್ ಕ್ಯಾರಿಯರ್, ಪ್ಯಾಕರ್ )ವೇತನ:BPM : 12000+DA (16

ಅಂಚೆ ಇಲಾಖೆಯಲ್ಲಿ ಡಾಕ್ ಸೇವಕ್ ಹುದ್ದೆಗೆ ಅರ್ಜಿ ಆಹ್ವಾನ Read More »

ಶಾಂತಿ, ಸೌಹಾರ್ದತೆಯನ್ನು ತರಲಿ ರಂಜಾನ್

ಸಮಗ್ರ ವಿಶೇಷ: ಕಳೆದೊಂದು ತಿಂಗಳಿನಿಂದ ಪವಿತ್ರ ರಂಜಾನ್ ಮಾಸದ ಉಪವಾಸದಲ್ಲಿದ್ದ ಮುಸ್ಲಿಂ ಬಾಂಧವರು ಇಂದು ಖುತುಬ್ ಎ ರಂಜಾನ್ ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಶಾಂತಿ ಸೌಹಾರ್ದತೆಯ ಸಂದೇಶ ಸಾರುವ ರಂಜಾನ್ ಹಬ್ಬವನ್ನು ಕೋವಿಡ್ ಮಹಾಮಾರಿಯಿಂದಾಗಿ ಹಿಂದಿನ ಎರಡು ವರ್ಷಗಳಲ್ಲಿ ಸರಳವಾಗಿ ಆಚರಿಸಲಾಗಿತ್ತು. ಈ ಸಲ ಕೋವಿಡ್ ಪರಿಣಾಮವಿಲ್ಲದ ಕಾರಣ ಮುಸ್ಲಿಮರು ಒಟ್ಟಾಗಿ ಹಬ್ಬ ಆಚರಿಸುತ್ತಿದ್ದಾರೆ. ಕೋವಿಡ್‌ ಅವಧಿಯಲ್ಲಿ ಸರಿಯಾದ ಕೆಲಸ ಸಿಗದೆ ಸಣ್ಣ ಹಾಗೂ ಮಧ್ಯಮ ವ್ಯಾಪಾರಿಗಳು ತೀವ್ರ ಹೊಡೆತ ಅನುಭವಿಸಿದ್ದವು. ಆರ್ಥಿಕ ಸಂಕಷ್ಟದಿಂದ ಈಗ ಚೇತರಿಕೆ ಕಾಣುತ್ತಿದೆ.

ಶಾಂತಿ, ಸೌಹಾರ್ದತೆಯನ್ನು ತರಲಿ ರಂಜಾನ್ Read More »

ವಾಹನ ಮಾಲೀಕರಿಗೆ ಶಾಕ್ : ಹೊಗೆ ಚೆಕ್ಅಫ್ ದರ ಹೆಚ್ಚಳ

ಸಮಗ್ರ ನ್ಯೂಸ್: ಪೆಟ್ರೋಲ್, ಡೀಸೆಲ್ ದರ ಏರಿಕೆಯ ಬೆನ್ನಲ್ಲೇ ವಾಹನ ಸವಾರರಿಗೆ ಸಾರಿಗೆ ಇಲಾಖೆ ಬಿಗ್ ಶಾಕ್ ನೀಡಿದ್ದು, ವಾಹನಗಳ ಮಾಲಿನ್ಯ ಪರೀಕ್ಷೆಯ ದರವನ್ನು ಹೆಚ್ಚಳ ಮಾಡಿದೆ. ಸಾರಿಗೆ ಇಲಾಖೆ ವಾಹನಗಳ ಮಾಲಿನ್ಯ ಪರೀಕ್ಷಾ ಶುಲ್ಕವನ್ನು ಹೆಚ್ಚಳ ಮಾಡಿದ್ದು, ಎಲ್ಲಾ ರೀತಿಯ ಡಿಸೇಲ್ ವಾಹನಗಳ ಮಾಲಿನ್ಯ ಪರೀಕ್ಷಾ ಶುಲ್ಕವನ್ನು 35 ರೂ ಹೆಚ್ಚಿಸಲಾಗಿದೆ. ಈ ಮೂಲಕ 125 ರೂ. ಇದ್ದ ಶುಲ್ಕ ಈಗ 160 ರೂ.ಗೆ ಏರಿಕೆಯಾಗಿದೆ. ದ್ವಿಚಕ್ರ ವಾಹನಗಳ ಶುಲ್ಕವನ್ನು 50 ರೂ. ನಿಂದ 65

ವಾಹನ ಮಾಲೀಕರಿಗೆ ಶಾಕ್ : ಹೊಗೆ ಚೆಕ್ಅಫ್ ದರ ಹೆಚ್ಚಳ Read More »

ಮೇ.12ರಂದು ಎಸ್ಎಸ್ ಎಲ್ ಸಿ ಫಲಿತಾಂಶ!?

ಸಮಗ್ರ ನ್ಯೂಸ್: ಪ್ರಸಕ್ತ ಸಾಲಿನ ಎಸ್ ಎಸ್ ಎಲ್‍ಸಿ ಪರೀಕ್ಷಾ ಫಲಿತಾಂಶ ಮೇ 12ರಂದು ಪ್ರಕಟವಾಗುವ ಸಾಧ್ಯತೆ ಇದೆ. ಮೌಲ್ಯಮಾಪನ ಪ್ರಕ್ರಿಯೆಯು ಏಪ್ರಿಲ್ 23 ರಿಂದ ಪ್ರಾರಂಭವಾಗಿದ್ದು, ಮೇ 1-2ರೊಳಗೆ ಪೂರ್ಣ ಗೊಳ್ಳಲಿದೆ ಎಂದು ಮಂಡಳಿ ತಿಳಿಸಿತ್ತು. ನಂತರ ಫಲಿತಾಂಶವನ್ನು ಅಂತಿಮಗೊಳಿಸಲು 10-15 ದಿನ ಕಾಲ ತೆಗೆದುಕೊಳ್ಳಲಿದ್ದು, ಮೇ 12ರಂದು ಫಲಿತಾಂಶ ಪ್ರಕಟವಾಗಬಹುದು ಎಂದು ಹೇಳಲಾಗಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮಾರ್ಚ್ 28ರಿಂದ ಏಪ್ರಿಲ್ 11 ರವರೆಗೆ ಹತ್ತನೇ ತರಗತಿಯ ಪರೀಕ್ಷೆ ನಡೆಸಿತ್ತು. ಕಳೆದೆರಡು

ಮೇ.12ರಂದು ಎಸ್ಎಸ್ ಎಲ್ ಸಿ ಫಲಿತಾಂಶ!? Read More »

ಹೊಸ ಪಕ್ಷ ಕಟ್ಟುತ್ತಾರಾ ಪ್ರಶಾಂರ್ ಕಿಶೋರ್? ಚುನಾವಣಾ ಚಾಣಕ್ಯ ನೀಡಿದ್ರು ಹೊಸ ಸುಳಿವು

ಸಮಗ್ರ ನ್ಯೂಸ್: ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರು ಇದೀಗ ಹೊಸ ರಾಜಕೀಯ ಪಕ್ಷ ಸ್ಥಾಪಿಸುವ ಸುಳಿವು ನೀಡಿದ್ದಾರೆ. ಬಿಹಾರದಲ್ಲಿ ಹೊಸ ಪಕ್ಷ ಸ್ಥಾಪಿಸಿ ಇತರೆ ಪಕ್ಷಗಳಿಗೆ ಟಾಂಗ್ ಕೊಡಲು ಮುಂದಾಗಿದ್ದಾರೆ. ಈ ಕುರಿತು ಇಂದು ಬೆಳಗ್ಗೆ ಮಾಡಿರುವ ಟ್ವೀಟ್ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗುತ್ತಿತ್ತು. ಈ ಸಂಬಂಧ ಸೋನಿಯಾ, ರಾಹುಲ್ ಗಾಂಧಿ ಅವರೊಂದಿಗೆ ಕೂಡ ಮಾತುಕತೆ ನಡೆಸಿದ್ದರು. ‌ಆದರೆ ಪ್ರಶಾಂತ್ ಅವರ ಷರತ್ತಿಗೆ ಕಾಂಗ್ರೆಸ್ ಒಪ್ಪದ ಕಾರಣ ಪಕ್ಷ ಸೇರ್ಪಡೆಯಿಂದ

ಹೊಸ ಪಕ್ಷ ಕಟ್ಟುತ್ತಾರಾ ಪ್ರಶಾಂರ್ ಕಿಶೋರ್? ಚುನಾವಣಾ ಚಾಣಕ್ಯ ನೀಡಿದ್ರು ಹೊಸ ಸುಳಿವು Read More »

ಕಡಬ: ತಲೆ ಕಡಿದ ದನ ಮತ್ತು ಮಾಂಸಕ್ಕಾಗಿ ತಂದ ಜಾನುವಾರು ವಶ; ಆರೋಪಿಗಳು ಪರಾರಿ

ಸಮಗ್ರ ನ್ಯೂಸ್: ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿರುವ ಕಡಬ ಪೊಲೀಸರು ತಲೆ ಕಡಿದ ದನ ಹಾಗೂ ಮಾಂಸಕ್ಕಾಗಿ ತಂದಿದ್ದ ಜಾನುವಾರುಗಳನ್ನು ವಶಪಡಿಸಿಕೊಂಡ ಘಟನೆ ಭಾನುವಾರದಂದು ಕಡಬದಲ್ಲಿ ನಡೆದಿದೆ. ಕಡಬ ಕಳಾರ ಸಮೀಪದ ತಿಮರಡ್ಡ ಎಂಬಲ್ಲಿ ಜಾನುವಾರುಗಳನ್ನು ಮಾಂಸ ಮಾಡಲಾಗುತ್ತಿದೆ ಎಂಬ ದೂರಿ‌ನ ಮೇರೆಗೆ ದಾಳಿ ನಡೆಸಿರುವ ಕಡಬ ಎಸ್‌ಐ ಆಂಜನೇಯ ರೆಡ್ಡಿ, ಎಎಸ್‌ಐ ಸುರೇಶ್ ಹಾಗೂ ಸಿಬ್ಬಂದಿಗಳು ಕೊಲ್ಲಲ್ಪಟ್ಟ ಒಂದು ದನ ಹಾಗೂ ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಫಾರೂಕ್ ಹಾಗೂ ಇನ್ನಿತರರು ಸ್ಥಳದಿಂದ ಪರಾರಿಯಾಗಿದ್ದು, ಈ ಬಗ್ಗೆ

ಕಡಬ: ತಲೆ ಕಡಿದ ದನ ಮತ್ತು ಮಾಂಸಕ್ಕಾಗಿ ತಂದ ಜಾನುವಾರು ವಶ; ಆರೋಪಿಗಳು ಪರಾರಿ Read More »

ಉಪ್ಪಿನಂಗಡಿ: ಮಹಿಳೆ ಮೇಲೆ ಕೈ ಮಾಡಿದ ನಾಲ್ವರ ವಿರುದ್ದ ದೂರು ದಾಖಲು

ಸಮಗ್ರ ನ್ಯೂಸ್: ಮನೆ ಕೆಲಸಗಾರನ ಮೇಲೆ ಹಲ್ಲೆ ನಡೆಸಿದನ್ನು ಪ್ರಶ್ನಿಸಿದ್ದಕ್ಕೆ ಮಹಿಳೆ ಮೇಲೆ ಕೈ ಮಾಡಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ದ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಕಡಬ ತಾಲೂಕಿನ ಕೌಕ್ರಾಡಿ ಮಣ್ಣಗುಂಡಿ ನಿವಾಸಿ ಬಿಜಿ ಎಂ. ಅವರ ಮನೆ ಕೆಲಸಗಾರ ಕುಮಾರ್ ಅವರು ಏಪ್ರಿಲ್ 27ರಂದು ಬಿಜಿ ಅವರ ಮನೆಯಿಂದ ಸಾಕು ದನವನ್ನು ಕೊಂಡೊಯ್ಯುವಾಗ ಮಹೇಶ್ ಮತ್ತು ಇತರ ಮೂವರು ಕುಮಾರ್‍ ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದರು. ಇದನ್ನು ನೋಡಿದ ಮೋಹನ್ ಎಂಬವರು

ಉಪ್ಪಿನಂಗಡಿ: ಮಹಿಳೆ ಮೇಲೆ ಕೈ ಮಾಡಿದ ನಾಲ್ವರ ವಿರುದ್ದ ದೂರು ದಾಖಲು Read More »