May 2022

“ಎಲ್ಲರನ್ನೂ ಬಿಟ್ಟು ಬಾ; ಇಲ್ಲದಿದ್ದರೆ ಸಾಯಿ” | ಪ್ರೀತಿಯಿಂದಲೇ ಆತ್ಮಹತ್ಯೆಗೆ ಪ್ರೇರೇಪಿಸಿದನಾ ಆ ಮುಸ್ಲಿಂ ಯುವಕ?

ಸಮಗ್ರ ನ್ಯೂಸ್: ಬಂಟ್ವಾಳ ತಾಲೂಕಿನ ಕನ್ಯಾನ ಎಂಬಲ್ಲಿ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ತಂದೆ ಯುವಕನೊಬ್ಬನ ವಿರುದ್ಧ ವಿಟ್ಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ‘ತಂದೆ, ತಾಯಿಯನ್ನು ಬಿಟ್ಟು ನನ್ನೊಂದಿಗೆ ಬಾ, ಇಲ್ಲವಾದರೆ ಸಾಯಿ..’ ಎಂದು ಪ್ರೀತಿಸಲು ಒತ್ತಾಯಿಸುತ್ತಿದ್ದ ಅನ್ಯ ಕೋಮಿನ ಯುವಕನ ಪ್ರಚೋದನೆಯೇ ಆತ್ಮಹತ್ಯೆಗೆ ಕಾರಣ ಎಂದು ತಂದೆ ವಿಟ್ಲ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ನಡುವೆ ಸ್ಥಳೀಯ ಭಜರಂಗದಳ ಘಟಕವೂ ಪ್ರಕರಣದ ತನಿಖೆಗೆ ಒತ್ತಾಯಿಸಿದ್ದು, ವಿಟ್ಲ […]

“ಎಲ್ಲರನ್ನೂ ಬಿಟ್ಟು ಬಾ; ಇಲ್ಲದಿದ್ದರೆ ಸಾಯಿ” | ಪ್ರೀತಿಯಿಂದಲೇ ಆತ್ಮಹತ್ಯೆಗೆ ಪ್ರೇರೇಪಿಸಿದನಾ ಆ ಮುಸ್ಲಿಂ ಯುವಕ? Read More »

ಯುವಕನನ್ನು ಹುಡ್ಕೊಂಡು ಬಂದು ಚಪ್ಪಲಿಯಲ್ಲಿ ಹೊಡೆದ ಯುವತಿ! ಕಾರಣ?

ಸಮಗ್ರ ನ್ಯೂಸ್: ಫೇಸ್ ಬುಕ್ ನಲ್ಲಿ ಪರಿಚಯವಾದ ಯುವತಿಯ ಫೋಟೋವನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿದ್ದಲ್ಲದೆ, ಆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಯುವಕನಿಗೆ ಹುಡ್ಕೊಂಡು ಬಂದು ಯುವತಿ ಥಳಿಸಿದ ಘಟನೆ ನಡೆದಿದೆ. ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದೆ. ಜಿಲ್ಲೆಯ ಆಲೂರಿನ ಶಾನವಾಜ್ ಎಂಬಾತನಿಗೆ ಫೇಸ್ ಬುಕ್ ನಲ್ಲಿ ಯುವತಿಯೋರ್ವಳು ಪರಿಚಯ ಆಗಿದ್ದಳು. ಆತ ಯುವತಿಯೊಂದಿಗೆ ಸಲುಗೆ ಬೆಳೆಸಿ ಆಕೆಯ ಫೋಟೋಗಳನ್ನು ಪಡೆದುಕೊಂಡಿದ್ದ. ಬಳಿಕ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದಾಗಿ

ಯುವಕನನ್ನು ಹುಡ್ಕೊಂಡು ಬಂದು ಚಪ್ಪಲಿಯಲ್ಲಿ ಹೊಡೆದ ಯುವತಿ! ಕಾರಣ? Read More »

ಸುಳ್ಯ: ಅಕ್ರಮ ಸಹಿ ಸಂಗ್ರಹಿಸಿ ಮರ್ಕಂಜದಲ್ಲಿ ಅಕ್ರಮ ಗಣಿಗಾರಿಕೆ!
ದೇವಸ್ಥಾನ, ಮನೆ, ಶಾಲೆಯ ಕಟ್ಟಡಗಳಿಗೆ ತೊಂದರೆಯಾದರೂ ಅಧಿಕಾರಿಗಳ ದಿವ್ಯಮೌನ| ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿರುವ ಪುಟಾಣಿಗಳು|ಪಂಚಸ್ಥಾಪನೆಯ ಉಳಿವಿಗಾಗಿ ನಮ್ಮೊಂದಿಗೆ ಕೈಜೋಡಿಸಿ: ಗ್ರಾಮಸ್ಥರ ಅಳಲು

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದಲ್ಲಿ “ಡೆಲ್ಮಾ ಎಂಟರ್‌ಪ್ರೈಸಸ್’’ ಹೆಸರಿನಲ್ಲಿ ನಡೆಯುತ್ತಿರುವ ಗಣಿಗಾರಿಕೆಯು ಅಕ್ರಮ ಸಹಿಗಳನ್ನು ಸಂಗ್ರಹಿಸಿ ಪರವಾನಿಗೆ ಪಡೆದಿರುವ ಆರೋಪ ಕೇಳಿಬಂದಿದೆ. ಗಣಿಗಾರಿಕೆಯಿಂದ ಸ್ಥಳೀಯ ದೇವಸ್ಥಾನ, ಶಾಲೆ, ಮತ್ತು ಮನೆಗೆಳ ಕಟ್ಟಡಗಳಿಗೆ ತೊಂದರೆ ಉಂಟಾಗುತ್ತಿದ್ದು ಗ್ರಾಮಸ್ಥರು ಇದೀಗ ಸರ್ಕಾರಿ ಕಚೇರಿಗಳ ಕದ ತಟ್ಟುತ್ತಿದ್ದಾರೆ. ಮರ್ಕಂಜ ಗ್ರಾಮದ ಅಳವುಪಾರೆ ಎಂಬಲ್ಲಿ ” ಡೆಲ್ಮಾ ಎಂಟರ್‌ಪ್ರೈಸಸ್ ” ಹೆಸರಿನ ಅಕ್ರಮ ಕಲ್ಲುಕೋರೆ ಕೆಲಸ ನಡೆಯುತ್ತಿರುವುದು ಈಗಾಗಲೇ ಸುದ್ದಿಯಲ್ಲಿದೆ. ಈ ಕಲ್ಲು ಕೋರೆ ನಡೆಸಲು ಅಸುಪಾಸಿನ

ಸುಳ್ಯ: ಅಕ್ರಮ ಸಹಿ ಸಂಗ್ರಹಿಸಿ ಮರ್ಕಂಜದಲ್ಲಿ ಅಕ್ರಮ ಗಣಿಗಾರಿಕೆ!
ದೇವಸ್ಥಾನ, ಮನೆ, ಶಾಲೆಯ ಕಟ್ಟಡಗಳಿಗೆ ತೊಂದರೆಯಾದರೂ ಅಧಿಕಾರಿಗಳ ದಿವ್ಯಮೌನ| ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿರುವ ಪುಟಾಣಿಗಳು|ಪಂಚಸ್ಥಾಪನೆಯ ಉಳಿವಿಗಾಗಿ ನಮ್ಮೊಂದಿಗೆ ಕೈಜೋಡಿಸಿ: ಗ್ರಾಮಸ್ಥರ ಅಳಲು
Read More »

ಮೇ.16ರಂದೇ ಶಾಲಾರಂಭ; 15 ದಿನ ಕಲಿಕಾ ಚೇತರಿಕೆ ಕಾರ್ಯಕ್ರಮ – ಸಚಿವ ಬಿ.ಸಿ ನಾಗೇಶ್

ಸಮಗ್ರ ನ್ಯೂಸ್ : ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಕಲಿಕಾ ಕೊರತೆ ಸರಿದೂಗಿಸಲು ಈ ಬಾರಿ 15 ದಿನ ಮೊದಲೇ ಅಂದರೆ ಮೇ. 16 ರಿಂದಲೇ ಶಾಲೆ ಆರಂಭಿಸಿ, ಕಲಿಕಾ ಚೇತರಿಕೆ ಕಾರ್ಯಕ್ರಮ ನಡೆಸಲು ಶಿಕ್ಷಣ ಇಲಾಖೆ ಸಜ್ಜಾಗಿದೆ. ವಿಧಾನಪರಿಷತ್ ಜೆಡಿಎಸ್ ಸದಸ್ಯ ಬೋಜೇಗೌಡ ಸೇರಿದಂತೆ ಕೆಲ ಮೇಲ್ಮನೆ ಸದಸ್ಯರು ಈ ಬಾರಿ ಬಿಸಿಲ ಬೇಗೆಯ ತಾಪಪಾನ ಹೆಚ್ಚಾಗಿದ್ದು, ಶಾಲೆಗಳನ್ನು ಒಂದು ತಿಂಗಳು ಕಾಲ ವಿಸ್ತರಿಸುವಂತೆ ಮನವಿ ಮಾಡಿದ್ದಾರೆ. ಇದರಿಂದ ವಿದ್ಯಾರ್ಥಿಗಳು

ಮೇ.16ರಂದೇ ಶಾಲಾರಂಭ; 15 ದಿನ ಕಲಿಕಾ ಚೇತರಿಕೆ ಕಾರ್ಯಕ್ರಮ – ಸಚಿವ ಬಿ.ಸಿ ನಾಗೇಶ್ Read More »

ಮಂಗಳೂರು : ಬಾಲ್ ತರಲು ಮಹಡಿ ಮೇಲೇರಿದ್ದ ವಿದ್ಯಾರ್ಥಿ ಆಯತಪ್ಪಿ ಬಿದ್ದು ಸಾವು

ಸಮಗ್ರ ನ್ಯೂಸ್: ಮಂಗಳೂರು ನಗರದ ಕೊಟ್ಟಾರ ಚೌಕಿಯಲ್ಲಿರುವ ಖಾಸಗಿ ಕಾಲೇಜ್ ನ ಹಾಸ್ಟೆಲ್ ಕಟ್ಟಡದ ನಾಲ್ಕನೇ ಮಹಡಿಯಿಂದ ಆಯತಪ್ಪಿ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟ ದುರ್ಘಟನೆ ಬುಧವಾರ ಸಂಭವಿಸಿದೆ. ಪ್ರಣವ್ ಸ ಮುಂಡಾಸ ಎಂಬ 18 ವರ್ಷದ ವಿದ್ಯಾರ್ಥಿ ಮೃತ ದುರ್ದೈವಿಯಾಗಿದ್ದು, ವಿಜಯ ಪುರ ಮೂಲದ ವಿದ್ಯಾರ್ಥಿಯಾಗಿದ್ದಾನೆ. ಕ್ರಿಕೆಟ್ ಆಡುವ ವೇಳೆ 4 ನೇ ಮಹಡಿಯಲ್ಲಿ ಸಿಕ್ಕಿಕೊಂಡ ಚೆಂಡನ್ನು ತರಲು ಹೋದಾಗ ಆಯ ತಪ್ಪಿ ಬಿದ್ದಿದ್ದಾನೆ ಎಂದು ತಿಳಿದು ಬಂದಿದೆ. ಗಂಭೀರವಾಗಿ ಗಾಯಗೊಂಡಿದ್ದ ಪ್ರಣವ್ ನನ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ

ಮಂಗಳೂರು : ಬಾಲ್ ತರಲು ಮಹಡಿ ಮೇಲೇರಿದ್ದ ವಿದ್ಯಾರ್ಥಿ ಆಯತಪ್ಪಿ ಬಿದ್ದು ಸಾವು Read More »

ಐಸಿಸಿ ರ‍್ಯಾಂಕಿಂಗ್ ಪ್ರಕಟ| ಟಿ-20ಯಲ್ಲಿ ಭಾರತಕ್ಕೆ ಮೊದಲ ಸ್ಥಾನ

ಸಮಗ್ರ ನ್ಯೂಸ್: ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ 2021-22 ರ ಋತುವಿನಲ್ಲಿ ತವರಿನಲ್ಲಿ ಪ್ರಭಾವಶಾಲಿ ಪ್ರದರ್ಶನಗಳ ನಂತರ ಬುಧವಾರ ಐಸಿಸಿ ಬಿಡುಗಡೆ ಮಾಡಿದ ವಾರ್ಷಿಕ ಶ್ರೇಯಾಂಕದಲ್ಲಿ ವಿಶ್ವದ ನಂಬರ್ ಒನ್ ಟಿ-20 ತಂಡವಾಗಿ ಹೊರ ಹೊಮ್ಮಿದೆ. ಆದರೆ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ಭಾರತವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಬಂದಿದ್ದು, ಭಾರತ ಆಸೀಸ್ ಗಿಂತ 9 ಅಂಕಗಳನ್ನು ಕಡಿಮೆ ಹೊಂದಿದೆ. ನ್ಯೂಜಿಲೆಂಡ್‌ನ ವಿಶ್ವದ ನಂ.1 ಏಕದಿನ ತಂಡವಾಗಿ ಹೊರ ಹೊಮ್ಮಿದೆ. ಇಂದು ಘೋಷಣೆಯಾದ ರ‍್ಯಾಂಕಿಂಗ್ ನಲ್ಲಿ ಐಸಿಸಿ

ಐಸಿಸಿ ರ‍್ಯಾಂಕಿಂಗ್ ಪ್ರಕಟ| ಟಿ-20ಯಲ್ಲಿ ಭಾರತಕ್ಕೆ ಮೊದಲ ಸ್ಥಾನ Read More »

ನ್ಯಾಷನಲ್ ಲೆವೆಲ್ ಅಬಾಕಸ್ ಸ್ಪರ್ಧೆ
ಐಆರ್‌ಸಿಎಂಡಿ ಶಿಕ್ಷಣ ಸಂಸ್ಥೆಯ 6 ವಿದ್ಯಾರ್ಥಿಗಳಿಗೆ
ಚಾಂಪಿಯನ್‌ನೊಂದಿಗೆ ಸಮಗ್ರ ಪ್ರಶಸ್ತಿ

ಪುತ್ತೂರು: ಇಲ್ಲಿನ ಸಿಟಿ ಆಸ್ಪತ್ರೆ ಬಳಿ ಕಾರ‍್ಯಾಚರಿಸುತ್ತಿರುವ ಐಆರ್‌ಸಿಎಂಡಿ ಶಿಕ್ಷಣ ಸಂಸ್ಥೆಯ 21 ವಿದ್ಯಾರ್ಥಿಗಳು ಎಪ್ರಿಲ್ 10 ರಂದು ನಡೆದ ನ್ಯಾಷನಲ್ ಲೆವೆಲ್ ಅಬಾಕಸ್ ಸ್ಪರ್ಧೆಯಲ್ಲಿ ಭಾಗವಹಿಸಿ, ಅರ್ಹತಾ ಅಂಕಗಳನ್ನು ಗಳಿಸುವುದರೊಂದಿಗೆ, 6 ವಿದ್ಯಾರ್ಥಿಗಳು ಚಾಂಪಿಯನ್ ಆಗಿ ಹೊರ ಹೊಮ್ಮುವ ಮೂಲಕ ಸಮಗ್ರ ಪ್ರಶಸ್ತಿಯನ್ನು ಪಡೆದು ಪುತ್ತೂರಿಗೆ ಕೀರ್ತಿಯನ್ನು ತಂದಿರುತ್ತಾರೆ.ಈ ಎಲ್ಲಾ ವಿದ್ಯಾರ್ಥಿಗಳು ಐಆರ್‌ಸಿಎಂಡಿ ಶಿಕ್ಷಣ ಸಂಸ್ಥೆಯಲ್ಲಿ ಕಳೆದ 6ತಿಂಗಳಿನಿಂದ ಅಬಾಕಸ್ ತರಬೇತಿಯನ್ನು ಪಡೆದಿರುತ್ತಾರೆ. ಹಾಗೂ ಕಳೆದ ನವಂಬರ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಆನ್‌ಲೈನ್ ಅಬಾಕಸ್ ಸ್ಪರ್ಧೆಯಲ್ಲಿ 3

ನ್ಯಾಷನಲ್ ಲೆವೆಲ್ ಅಬಾಕಸ್ ಸ್ಪರ್ಧೆ
ಐಆರ್‌ಸಿಎಂಡಿ ಶಿಕ್ಷಣ ಸಂಸ್ಥೆಯ 6 ವಿದ್ಯಾರ್ಥಿಗಳಿಗೆ
ಚಾಂಪಿಯನ್‌ನೊಂದಿಗೆ ಸಮಗ್ರ ಪ್ರಶಸ್ತಿ
Read More »

ಆರ್‌ಬಿಐನಿಂದ ರೆಪೋ ದರ ಹೆಚ್ಚಳ| ಸಾಲ ಮತ್ತಷ್ಟು ತುಟ್ಟಿ ಸಾಧ್ಯತೆ

ಸಮಗ್ರ ನ್ಯೂಸ್: ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಿಸುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರದಲ್ಲಿ ತಕ್ಷಣಕ್ಕೆ ಜಾರಿಗೆ ಬರುವಂತೆ 40 ಬೇಸಿಸ್ ಪಾಯಿಂಟ್ಸ್ ಗಳಷ್ಟು ಹೆಚ್ಚಳದೊಂದಿಗೆ ಶೇ.4.40ಕ್ಕೆ ಏರಿಕೆ ಮಾಡಿದೆ. 2020ರ ನಂತರ ಇದೇ ಮೊದಲ ಬಾರಿಗೆ ಆರ್‌ಬಿಐ ರೆಪೋ ದರ ಹೆಚ್ಚಳ ಮಾಡಿದ್ದು ಈ ಮೂಲಕ ಸಾಲದ ಮೇಲಿನ ಬಡ್ಡಿದರ ಹೆಚ್ಚಳವಾಗುವ ಸಾಧ್ಯತೆ ಬಹುತೇಕ‌ ಅಧಿಕವಾಗಿದೆ. ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಿಸುವ ಉದ್ದೇಶದಿಂದ ರೆಪೊ ದರದಲ್ಲಿ 40 ಮೂಲಾಂಶ ಹೆಚ್ಚಳ ಮಾಡಲಾಗಿದ್ದು, ಶೇ 4.40ಕ್ಕೆ ನಿಗದಿಪಡಿಸಲಾಗಿದೆ.

ಆರ್‌ಬಿಐನಿಂದ ರೆಪೋ ದರ ಹೆಚ್ಚಳ| ಸಾಲ ಮತ್ತಷ್ಟು ತುಟ್ಟಿ ಸಾಧ್ಯತೆ Read More »

ಹನುಮಾನ್ ಚಾಲೀಸಾ ಪಠಣ ಪ್ರಕರಣ| ರಾಣಾ ದಂಪತಿಗೆ ಜಾಮೀನು ನೀಡಿದ ವಿಶೇಷ ನ್ಯಾಯಾಲಯ

ಸಮಗ್ರ ನ್ಯೂಸ್: ಠಾಕ್ರೆ ನಿವಾಸ ಮಾತೋಶ್ರಿ ಎದುರಲ್ಲಿ ಹನುಮಾನ್‌ ಚಾಲೀಸಾ ಪಠಿಸುತ್ತೇವೆಂದು ಹೇಳಿದ ಕಾರಣಕ್ಕೆ ದೇಶದ್ರೋಹ ಸೇರಿದಂತೆ ವಿವಿಧ ಅರೋಪದ ಅಡಿಯಲ್ಲಿ ಬಂಧಿತ ರಾಗಿದ್ದ ಪಕ್ಷೇತರ ಶಾಸಕ ರವಿ ರಾಣಾ ಮತ್ತು ಸಂಸದೆಯಾಗಿರುವ ಅವರ ಪತ್ನಿ ನವನೀತ್‌ ರಾಣಾ ಅವರಿಗೆ ಮುಂಬೈ ವಿಶೇಷ ನ್ಯಾಯಾಲಯವು ಜಾಮೀನು ನೀಡಿದೆ. ಏಪ್ರಿಲ್‌ 23 ರಂದು ರಾಣಾ ದಂಪತಿಗಳನ್ನು ಬಂಧಿಸಿ ದೇಶದ್ರೋಹ, ಶಾಂತಿ ಸುವ್ಯವಸ್ಥೆಗೆ ಭಂಗ ತರುವುದು ಮುಂತಾದ ಆರೋಪಗಳನ್ನು ಹೊರಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು ಅವರನ್ನು ಮೇ

ಹನುಮಾನ್ ಚಾಲೀಸಾ ಪಠಣ ಪ್ರಕರಣ| ರಾಣಾ ದಂಪತಿಗೆ ಜಾಮೀನು ನೀಡಿದ ವಿಶೇಷ ನ್ಯಾಯಾಲಯ Read More »

“ಲವ್ ಜಿಹಾದ್” ಗೆ ಬಲಿಯಾದಳಾ ಬಾಲೆ| ವಿಟ್ಲದಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ವಿದ್ಯಾರ್ಥಿನಿ ಪ್ರಕರಣಕ್ಕೆ ಟ್ವಿಸ್ಟ್|

ಸಮಗ್ರ ನ್ಯೂಸ್: ಸುಳ್ಯ ಮೂಲದ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕನ್ಯಾನ ಗ್ರಾಮದ ಕಣಿಯೂರು ಎಂಬಲ್ಲಿ ನಡೆದಿದ್ದು, ಈ ಪ್ರಕರಣ ಈಗ ಲವ್ ಜಿಹಾದ್ ಎಂದು ಹೇಳಲಾಗುತ್ತಿದೆ. ಮುಸ್ಲಿಂ ವ್ಯಕ್ತಿಯ ಮನೆಯಲ್ಲಿದ್ದ ಬಾಡಿಗೆಗಿದ್ದ ಆಕೆ ಏಕಾಏಕಿ ಆತ್ಮಹತ್ಯೆಗೆ ಶರಣಾಗಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಸುಳ್ಯ ತಾಲೂಕಿನ ಪಂಜ ನಿವಾಸಿ ಸಂಜೀವ ಅವರ ಪುತ್ರಿ ಆತ್ಮಿಕಾ(14)ಳ ಮೃತದೇಹ ಇಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವಿದ್ಯಾರ್ಥಿನಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ‌ ಈಕೆ ಇಂದು ತನ್ನ

“ಲವ್ ಜಿಹಾದ್” ಗೆ ಬಲಿಯಾದಳಾ ಬಾಲೆ| ವಿಟ್ಲದಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ವಿದ್ಯಾರ್ಥಿನಿ ಪ್ರಕರಣಕ್ಕೆ ಟ್ವಿಸ್ಟ್| Read More »