May 2022

ಕಾರ್ಕಳ: ಶಾಲಾ‌ ಮಕ್ಕಳಿದ್ದ ಟೆಂಪೋ ಟ್ರಾವೆಲರ್ ಪಲ್ಟಿ – ಓರ್ವ ವಿದ್ಯಾರ್ಥಿ ಸಾವು

ಸಮಗ್ರ ನ್ಯೂಸ್: ನಿಯಂತ್ರಣ ತಪ್ಪಿದ ಟೆಂಪೋ ಟ್ರಾವೆಲರ್ ಉರುಳಿ ಬಿದ್ದು,‌ ವಿದ್ಯಾರ್ಥಿಯೋರ್ವ ಮೃತ ಪಟ್ಟ ಘಟನೆ ಕುದುರೆಮುಖ-ಮಾಳ ಹೆದ್ದಾರಿ ನಡುವೆ ಘಾಟಿ ರಸ್ತೆಯ ಎಸ್ ಕೆ ಬಾರ್ಡರ್ ಹಾಗೂ ಚೆಕ್ ಪೋಸ್ಟ್ ಬಳಿ ಮೇ.8 ಸಂಜೆ ನಡೆದಿದೆ. ಮೃತರನ್ನು ಹೇಮಂತ್ (23) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಪಲ್ಲವಿ ಹುಣಸಿಕಟ್ಟೆ, ಅಖಿಲಾಶ್ರೀ ಲೋಳೇಕರ, ಶ್ರೇಯಾ, ಬಿಂದು ಎಂದು ಗುರುತಿಸಲಾಗಿದೆ. ಪ್ರವಾಸ ನಿಮಿತ್ತ ಹೊರನಾಡು ಕಡೆಯಿಂದ ಕಾರ್ಕಳ ಕಡೆಗೆ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದ ಕಾರಣ ದುರ್ಘಟನೆ ಸಂಭವಿಸಿದೆ‌. […]

ಕಾರ್ಕಳ: ಶಾಲಾ‌ ಮಕ್ಕಳಿದ್ದ ಟೆಂಪೋ ಟ್ರಾವೆಲರ್ ಪಲ್ಟಿ – ಓರ್ವ ವಿದ್ಯಾರ್ಥಿ ಸಾವು Read More »

ಬಿಜೆಪಿ ಸರಕಾರದ 40% ಕಮಿಷನ್‌‌ ಫಲ ಮಲ್ಪೆಯ ತೂಗುವ ಸೇತುವೆ!| ಜಾಲತಾಣಗಳಲ್ಲಿ ಆಕ್ರೋಶ

ಸಮಗ್ರ ನ್ಯೂಸ್: ಮಲ್ಪೆ ಬೀಚ್‌ನಲ್ಲಿ ನಿರ್ಮಿಸಿದ ರಾಜ್ಯದ ಮೊದಲ ತೇಲುವ ಸೇತುವೆ ಉದ್ಘಾಟನೆಯಾದ ಮೂರೇ ದಿನಕ್ಕೆ ಸಮುದ್ರದಲ್ಲಿ ಕೊಚ್ಚಿಹೋದ ಘಟನೆ ನಡೆದಿದ್ದು, ಇದು ರಾಜ್ಯ ಬಿಜೆಪಿ ಸರ್ಕಾರದ 40% ಭ್ರಷ್ಟಾಚಾರದ ಫಲ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ ಮೊದಲ ತೇಲುವ ಸೇತುವೆ ಮೇ 6ರ ಶುಕ್ರವಾರದಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಮತ್ತು ಜಿಲ್ಲಾಧಿಕಾರಿ ಎಂ. ಕೂರ್ಮಾ ರಾವ್ ಅವರು ಸಮ್ಮುಖದಲ್ಲಿ ಉದ್ಘಾಟನೆಗೊಂಡಿತ್ತು. 100 ಮೀಟರ್ ಉದ್ದ ಮತ್ತು 3.5 ಮೀಟರ್ ಅಗಲವಿರುವ ತೇಲುವ

ಬಿಜೆಪಿ ಸರಕಾರದ 40% ಕಮಿಷನ್‌‌ ಫಲ ಮಲ್ಪೆಯ ತೂಗುವ ಸೇತುವೆ!| ಜಾಲತಾಣಗಳಲ್ಲಿ ಆಕ್ರೋಶ Read More »

ಶ್ರೀಲಂಕಾದಲ್ಲಿ ಆರ್ಥಿಕ ಅಧಃಪತನದ ಜೊತೆಗೆ ರಾಜಕೀಯ ಬಿಕ್ಕಟ್ಟು| ಪ್ರಧಾನಿ‌ ಸ್ಥಾನಕ್ಕೆ ರಾಜಪಕ್ಸೆ ರಾಜೀನಾಮೆ

ಸಮಗ್ರ ನ್ಯೂಸ್: ನೆರೆಯ ಶ್ರೀಲಂಕಾ ದೇಶದಲ್ಲಿ ತಲೆದೋರಿರುವ ಆರ್ಥಿಕ ಸಂಕಷ್ಟ ನೀಗಿಸುವಲ್ಲಿ ವಿಫಲವಾದ ಕಾರಣ ಪ್ರಧಾನಿ ಹುದ್ದೆಗೆ ಮಹಿಂದಾ ರಾಜಪಕ್ಸೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.ಕಳೆದ ಕೆಲ ದಿನಗಳ ಹಿಂದೆ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲು ಮಹಿಂದಾ ರಾಜಪಕ್ಸೆ ಅವರ ಬಳಿ ಮನವಿ ಮಾಡಿದ್ದರು. ಇದಕ್ಕೆ ಮಹಿಂದಾ ರಾಜಪಕ್ಸೆ ಸಮ್ಮತಿ ಸೂಚಿಸಿದ್ದರು. ಇದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಶ್ರೀಲಂಕಾದಲ್ಲಿ ಆರ್ಥಿಕ ಅಧಃಪತನದ ಜೊತೆಗೆ ರಾಜಕೀಯ ಬಿಕ್ಕಟ್ಟು| ಪ್ರಧಾನಿ‌ ಸ್ಥಾನಕ್ಕೆ ರಾಜಪಕ್ಸೆ ರಾಜೀನಾಮೆ Read More »

ಪುತ್ತೂರು:‌ ಬಾಲಕಿಯನ್ನು ಶೌಚಾಲಯಕ್ಕೆ ಕರೆದೊಯ್ದು ಅನ್ಯಕೋಮಿನ ಯುವಕನಿಂದ ಅಸಭ್ಯ ವರ್ತನೆ

ಸಮಗ್ರ ನ್ಯೂಸ್: ಗದಗ ಮೂಲದ ಬಾಲಕಿಯನ್ನು ಬಾಲಕಿಯನ್ನು ಶೌಚಾಲಯ ಕ್ಕೆ ಕರೆದುಕೊಂಡು ಹೋಗಿ ಅಸಭ್ಯವಾಗಿ ವರ್ತಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರುಗಡೆ ಟವರ್ ಬಿಲ್ಡಿಂಗ್ ನ ಸ್ವಚ್ಛತೆ ಕೆಲಸ ಮಾಡುತ್ತಿದ್ದ ಗದಗ ಮೂಲದ ಮಹಿಳೆಯೊಬ್ಬರ 10 ವರ್ಷದ ಮಗಳನ್ನು ನೌಫಲ್ ಸರಲಿಕಟ್ಟೆ ಎಂಬ ಮುಸ್ಲಿಂ ಕಾಮುಕ ಶೌಚಾಲಯಕ್ಕೆ ಬಾಲಕಿಯನ್ನು ಕರೆದುಕೊಂಡು ಹೋಗಿ, ಹಣ ಕೊಡುವುದಾಗಿ ನಂಬಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಬಗ್ಗೆ ತಾಯಿ ಆ ಯುವಕನನ್ನು ವಿಚಾರಿಸಿದಾಗ ಅಸಭ್ಯವಾಗಿ ಬೈದು ಕಳುಹಿಸಿದ್ದಾನೆ

ಪುತ್ತೂರು:‌ ಬಾಲಕಿಯನ್ನು ಶೌಚಾಲಯಕ್ಕೆ ಕರೆದೊಯ್ದು ಅನ್ಯಕೋಮಿನ ಯುವಕನಿಂದ ಅಸಭ್ಯ ವರ್ತನೆ Read More »

ಉಡುಪಿ: ಮನೆಯೊಳಗೆ ಕೊಲೆಯಾದ ಸ್ಥಿತಿಯಲ್ಲಿ ತಾಯಿ‌,‌ಮಗು ಪತ್ತೆ; ಗಂಡ ಪರಾರಿ

ಸಮಗ್ರ ನ್ಯೂಸ್: ತಾಯಿ ಮತ್ತು 10 ವರ್ಷ ಮಗುವಿನ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಉಡುಪಿ ಜಿಲ್ಲೆಯ ಆತ್ರಾಡಿ ಗ್ರಾ.ಪಂ ವ್ಯಾಪ್ತಿಯ ಮದಗದಲ್ಲಿ ನಡೆದಿದೆ. ಚೆಲುವಿ (28) ಹಾಗು ಪ್ರಿಯಾ (10) ಇವರ ಮೃತದೇಹವು ಮನೆಯ ಕೋಣೆಯಲ್ಲಿ ಪತ್ತೆಯಾಗಿದ್ದು, ಬಾಯಿಯಲ್ಲಿ ರಕ್ತದ ಕಲೆಗಳು ಕಂಡು ಬಂದಿದೆ ಎನ್ನಲಾಗಿದೆ. ಮಣಿಪಾಲದ ಖಾಸಗಿ ಸಂಸ್ಥೆಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದ ಚೆಲುವಿ, ಅವರ ಇಬ್ಬರ ಮಕ್ಕಳು ಮತ್ತು ತಾಯಿ ಮನೆಯಲ್ಲಿ ವಾಸವಿದ್ದರು. ಆದರೆ ಭಾನುವಾರ ಚೆಲುವಿ ಅವರ ತಾಯಿ

ಉಡುಪಿ: ಮನೆಯೊಳಗೆ ಕೊಲೆಯಾದ ಸ್ಥಿತಿಯಲ್ಲಿ ತಾಯಿ‌,‌ಮಗು ಪತ್ತೆ; ಗಂಡ ಪರಾರಿ Read More »

ಮದರಸಾಗಳಲ್ಲಿ ಅಪ್ರಾಪ್ತರಿಗೆ ಕೊಲೆಯ ತರಬೇತಿ ನೀಡಲಾಗುತ್ತಿದೆ;
ಕರ್ನಾಟಕದಲ್ಲಿ ಮೊದಲು ಅದನ್ನು ಬ್ಯಾನ್ ಮಾಡಿ: ಪ್ರಮೋದ್ ಮುತಾಲಿಕ್

ಸಮಗ್ರ ನ್ಯೂಸ್: ಮದರಸಾಗಳಲ್ಲಿ ಅಪ್ರಾಪ್ತರಿಗೆ ಕೊಲೆಯ ತರಬೇತಿ ನೀಡಲಾಗುತ್ತಿದೆ. ಹಾಗಾಗಿ ಮೊದಲು ಕರ್ನಾಟಕ ಸರ್ಕಾರ ಮದರಾಸ ಬ್ಯಾನ್ ಮಾಡಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಹಿಂದೂ ಮುಖಂಡರ ಹತ್ಯೆಯ ಪ್ಲಾನ್ ವಿಚಾರದ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಅವರು, ಮುಸ್ಲಿಮರ ಅಬ್ಬರ ಅಟ್ಟಹಾಸ ಹೆಚ್ಚಾಗತ್ತಿದೆ. ಕೊಲೆ, ಗಲಾಟೆ ಮಾಡುತ್ತಿರುವವರು ಹಿಂದೂಗಳಲ್ಲ. ಮೈಸೂರಿನ ‘ಕವಲಂದೆಯಲ್ಲಿ ಛೋಟಾ ಪಾಕಿಸ್ತಾನ್ ಅಂತ ಘೋಷಣೆ ಕೂಗಿದ್ದು, ಹುಬ್ಬಳ್ಳಿಯಲ್ಲಿ ದೇವಾಲಯದ ಮೇಲೆ ಕಲ್ಲೂತೂರಾಟ ನಡೆಸಿ ಹಲ್ಲೆ ನಡೆಸಿದ್ದೂ ಹಿಂದೂಗಳಲ್ಲ. ಹಿಂದೂಗಳಿಂದ ಯಾವುದೇ ತೊಂದರೆಯಾಗುತ್ತಿಲ್ಲ.

ಮದರಸಾಗಳಲ್ಲಿ ಅಪ್ರಾಪ್ತರಿಗೆ ಕೊಲೆಯ ತರಬೇತಿ ನೀಡಲಾಗುತ್ತಿದೆ;
ಕರ್ನಾಟಕದಲ್ಲಿ ಮೊದಲು ಅದನ್ನು ಬ್ಯಾನ್ ಮಾಡಿ: ಪ್ರಮೋದ್ ಮುತಾಲಿಕ್
Read More »

ಪತ್ನಿಯ ಶವದೊಂದಿಗೆ 21 ವರ್ಷ ಕಳೆದ ನಿವೃತ್ತ ಸೇನಾಧಿಕಾರಿ| ಎರಡು ದಶಕದ ಬಳಿಕ ಪಾರ್ಥಿವ ಶರೀರಕ್ಕೆ ನಡೆಯಿತು‌ ಅಂತ್ಯಕ್ರಿಯೆ!!

ಸಮಗ್ರ ನ್ಯೂಸ್: ನಿವೃತ್ತ ಮಿಲಿಟರಿ ಅಧಿಕಾರಿಯೊಬ್ಬರು ತಮ್ಮ ಮೃತ ಹೆಂಡತಿಯ ಶವಕ್ಕೆ 21 ವರ್ಷಗಳ ನಂತರ ಅಂತ್ಯಸಂಸ್ಕಾರ ಮಾಡಿದ ಘಟನೆ ಥಾಯ್ಲೆಂಡ್ ನಲ್ಲಿ ಬೆಳಕಿಗೆ ಬಂದಿದೆ. ನಿವೃತ್ತ ಸೇನಾಧಿಕಾರಿ ಚಾನ್ ವಚರಕರ್ಣ್ ಅವರು 2001ರಲ್ಲಿ ಮೃತಪಟ್ಟಿದ್ದ ತಮ್ಮ ಹೆಂಡತಿಯ ಶವವನ್ನು ಆಗಿನಿಂದಲೂ ಶವಪೆಟ್ಟಿಗೆಯೊಳಗಿಟ್ಟು ತಮ್ಮ ಮನೆಯಲ್ಲೇ ಇಟ್ಟುಕೊಂಡಿದ್ದರು. ಆದರೆ, ಇಷ್ಟು ವರ್ಷದವರೆಗೂ ಯಾಕೆ ಹೆಂಡತಿಯ ಶವಸಂಸ್ಕಾರ ಮಾಡಲಿಲ್ಲ ಎಂಬ ಕಾರಣ ಮಾತ್ರ ಗೊತ್ತಾಗಿಲ್ಲ. ”ಇತ್ತೀಚಿಗೆ ಇವರಿಗೆ ತಮ್ಮ ಹೆಂಡತಿಯ ಶವ ಸಂಸ್ಕಾರ ಮಾಡದೆಯೇ ತಾನು ಸತ್ತು ಹೋಗಿ

ಪತ್ನಿಯ ಶವದೊಂದಿಗೆ 21 ವರ್ಷ ಕಳೆದ ನಿವೃತ್ತ ಸೇನಾಧಿಕಾರಿ| ಎರಡು ದಶಕದ ಬಳಿಕ ಪಾರ್ಥಿವ ಶರೀರಕ್ಕೆ ನಡೆಯಿತು‌ ಅಂತ್ಯಕ್ರಿಯೆ!! Read More »

ಉಡುಪಿ: ದೇವರ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತ ಮೃತ್ಯು

ಸಮಗ್ರ ನ್ಯೂಸ್: ಉಡುಪಿಯ ಶ್ರೀ ಕ್ಷೇತ್ರ ಶ್ರೀಕೃಷ್ಣ ಮಠಕ್ಕೆ ದೇವರ ದರ್ಶನ ಪಡೆಯಲು ಸರದಿ ಸಾಲಿನಲ್ಲಿ ಸಾಗುತ್ತಿದ್ದ ಭಕ್ತರೊಬ್ಬರು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ. ಬೆಂಗಳೂರಿನ ಮೋಹನ್‌ (70) ಮೃತ ಯಾತ್ರಾರ್ಥಿ. ಇವರು ಸರದಿ ಸಾಲಿನಲ್ಲಿ ನಿಂತಿದ್ದ ಸಂದರ್ಭದಲ್ಲಿ ಕುಸಿದು ಬಿದ್ದಿದ್ದರು. ಈ ವೇಳೆ ಅವರನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಒಳಕಾಡು ಅವರು ಶ್ರೀಕೃಷ್ಣ ಮಠದ ರಕ್ಷಣ ಸಿಬ್ಬಂದಿ ಸಹಕಾರದಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.

ಉಡುಪಿ: ದೇವರ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತ ಮೃತ್ಯು Read More »

ಉಡುಪಿ : ಕಡಲಬ್ಬರಕ್ಕೆ ಬಲಿಯಾಯ್ತು‌ ಮಲ್ಪೆಯ ತೇಲುವ ಸೇತುವೆ! 80 ಲಕ್ಷ ರೂಪಾಯಿ ಸಮುದ್ರ ಪಾಲು!?

ಸಮಗ್ರ ನ್ಯೂಸ್: ಪ್ರಮುಖ ಪ್ರವಾಸಿ ತಾಣವಾದ ಮಲ್ಪೆಯ ಬೀಚ್ ನಲ್ಲಿ ನಿರ್ಮಿಸಲಾಗಿದ್ದ ತೇಲುವ ಸೇತುವೆ ಉದ್ಘಾಟನೆಗೊಂಡು ವಾರದ ಒಳಗೆ ಕಡಲಿನ ಅಬ್ಬರಕ್ಕೆ ಹಾನಿಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸೇತುವೆಯ ಲಾಕ್ ತೆಗೆಯುವ ವೇಳೆ ಸೇತುವೆಯ ಭಾಗಗಳು ಕಳಚಿಕೊಂಡಿವೆ ಎಂದು ತಿಳಿದು ಬಂದಿವೆ. ಈಚೆಗಷ್ಟೇ ಉದ್ಘಾಟನೆಗೊಂಡಿರುವ ನೂತನ ಅಲೆಗಳಲ್ಲಿ ತೇಲುವ ಸೇತುವೆಯನ್ನು ನೋಡಲು ಮತ್ತು ಅನುಭವಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರೂ ಅವಕಾಶ ನೀಡಿರಲಿಲ್ಲ. ಅಲೆಗಳ ಅಬ್ಬರ ಹೆಚ್ಚಿದ್ದರಿಂದ ಸುರಕ್ಷೆಯ ದೃಷ್ಟಿಯಿಂದ ಪ್ರವಾಸಿಗರು ನೀರಿಗೆ ಇಳಿಯದಂತೆ

ಉಡುಪಿ : ಕಡಲಬ್ಬರಕ್ಕೆ ಬಲಿಯಾಯ್ತು‌ ಮಲ್ಪೆಯ ತೇಲುವ ಸೇತುವೆ! 80 ಲಕ್ಷ ರೂಪಾಯಿ ಸಮುದ್ರ ಪಾಲು!? Read More »

ಬೆಳ್ತಂಗಡಿ : ಬೈಕ್ ಸ್ಕಿಡ್ ಆಗಿ ಸವಾರ ಸಾವು; ಮತ್ತೊಬ್ಬ ಗಂಭೀರ

ಸಮಗ್ರ ನ್ಯೂಸ್: ಬೈಕ್ ಸ್ಕಿಡ್ ಆಗಿ ಫೋನ್ ಕಂಬಕ್ಕೆ ಡಿಕ್ಕಿ ಹೊಡೆದು ಸವಾರ ಸಾವನ್ನಪ್ಪಿದ್ದು,ಸಹಸವಾರ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಮುಂಡಾಜೆಯ ಶಾರದಾನಗರದಲ್ಲಿ ನಡೆದಿದೆ. ಸೋಮಂತಡ್ಕದಿಂದ ನಿನ್ನೆ ರಾತ್ರಿ ಹನ್ನೊಂದು ಗಂಟೆಗೆ ಗಾರೆ ಕೆಲಸ ಮುಗಿಸಿ ಕಡಿರುದ್ಯಾವರದ ಮನೆಗೆ ವಾಪಸ್ ಬೈಕ್ ಲ್ಲಿ ಬರುತ್ತಿದ್ದಾಗ ಮುಂಡಾಜೆ ಗ್ರಾಮದ ಶಾರದಾ ನಗರದ ಬಳಿ ಬೈಕ್ ಸ್ಕಿಡ್ ಆಗಿ ಫೋನ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸವಾರ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ,

ಬೆಳ್ತಂಗಡಿ : ಬೈಕ್ ಸ್ಕಿಡ್ ಆಗಿ ಸವಾರ ಸಾವು; ಮತ್ತೊಬ್ಬ ಗಂಭೀರ Read More »