May 2022

ಅಸಾನಿ ಹೊತ್ತು ತಂದ ಚಿನ್ನದ ರಥ| ಆಂದ್ರದ ಕಡಲ ಕಿನಾರೆಯಲ್ಲಿ‌ ಅಚ್ಚರಿ

ಸಮಗ್ರ ನ್ಯೂಸ್: ಬಂಗಾಳಕೊಲ್ಲಿಯಲ್ಲಿ ಅಸಾನಿ ಚಂಡಮಾರುತ ಅವಾಂತರ ಸೃಷ್ಟಿಸುತ್ತಿದೆ. ಕರಾವಳಿ ಪ್ರದೇಶದಲ್ಲಿ ಸಮುದ್ರದ ಅಲೆಗಳು ರಕ್ಕಸ ರೂಪದಲ್ಲಿ ದಡಕ್ಕೆ ಅಪ್ಪಳಿಸುತ್ತಿವೆ. ಚಂಡಮಾರುತದ ರಭಸಕ್ಕೆ ಸಂತಬೊಮ್ಮಲಿ ಸುನ್ನಪಲ್ಲಿ ಬಂದರಿಗೆ ರಥವೊಂದು ತೇಲಿಬಂದಿದೆ. ಚಿನ್ನದ ಬಣ್ಣದಿಂದ ಕೂಡಿದ ರಥ ಹೊಂಬಣ್ಣದಿಂದ ಮಿನುಗುತ್ತಿದೆ. ತೇಲಿಬಂದ ರಥ ನೋಡಲು ಸ್ಥಳೀಯರು ಸಾಲು ಸಾಲಾಗಿ ಸಮುದ್ರ ತೀರಕ್ಕೆ ಬಂದಿದ್ದಾರೆ. ಕೊಚ್ಚಿ ಬಂದ ರಥದ ಮೇಲೆ 16-1-2022 ಎಂದು ಅನ್ಯ ಭಾಷೆಯಲ್ಲಿ ಬರೆಯಲಾಗಿದೆ. ಮಲೇಷ್ಯಾ, ಥಾಯ್ಲೆಂಡ್ ಅಥವಾ ಜಪಾನ್ ದೇಶಕ್ಕೆ ಸೇರಿದ್ದಿರಬಹುದು ಎಂದು ಸ್ಥಳೀಯ ಮೀನುಗಾರರು […]

ಅಸಾನಿ ಹೊತ್ತು ತಂದ ಚಿನ್ನದ ರಥ| ಆಂದ್ರದ ಕಡಲ ಕಿನಾರೆಯಲ್ಲಿ‌ ಅಚ್ಚರಿ Read More »

ಎಸ್ಎಸ್ಎಲ್ಸಿ ಫಲಿತಾಂಶ, ಶಾಲಾರಂಭ ಕುರಿತು ಶಿಕ್ಷಣ ಸಚಿವರಿಂದ ಮಾಹಿತಿ

ಸಮಗ್ರ ನ್ಯೂಸ್: ಶಾಲಾರಂಭ ಮತ್ತು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಹತ್ತನೇ ತರಗತಿ ಫಲಿತಾಂಶಕ್ಕೆ ಸಂಬಂಧಿಸಿದಂತೆ ಸಚಿವ ಬಿ.ಸಿ ನಾಗೇಶ್ ಮಾಹಿತಿ ನೀಡಿದ್ದಾರೆ. ಈಗಾಗಲೇ ನಿಗದಿಯಾಗಿರುವಂತೆ ಮೇ 16 ರಿಂದಲೇ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟಪಡಿಸಿದ್ದಾರೆ.. ಮೇ 16 ರಿಂದ ಶಾಲೆಗಳನ್ನು ಆರಂಭಿಸಿ ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಬಿಸಿಲ ಬೇಗೆ ತಾಪಮಾನ ಹೆಚ್ಚಾದ ಹಿನ್ನೆಲೆಯಲ್ಲಿ ಬೇಸಿಗೆ ರಜೆ ವಿಸ್ತರಿಸಬೇಕು. ಜೂನ್ 1 ರಿಂದ ಶಾಲೆಗಳನ್ನು ಆರಂಭಿಸಬೇಕೆಂಬ

ಎಸ್ಎಸ್ಎಲ್ಸಿ ಫಲಿತಾಂಶ, ಶಾಲಾರಂಭ ಕುರಿತು ಶಿಕ್ಷಣ ಸಚಿವರಿಂದ ಮಾಹಿತಿ Read More »

ಲಂಕನ್ನರ ಪ್ರತಿಭಟನೆಗೆ ಬೆದರಿದ ರಾಜಪಕ್ಸ| ಕುಟುಂಬ ಸಮೇತ ನೌಕಾನೆಲೆಗೆ ಪಲಾಯನ| ಹಿಂಸಾಚಾರಕ್ಕೆ ನಲುಗಿದ ದ್ವೀಪರಾಷ್ಟ್ರ

ಸಮಗ್ರ ನ್ಯೂಸ್: ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಕರ್ಫ್ಯೂ ನಡುವೆಯೇ ಪ್ರತಿಭಟನೆ, ಹಿಂಸಾಚಾರ ತೀವ್ರಗೊಂಡಿದೆ. ಮತ್ತೊಂದೆಡೆ ಮುಂಜಾಗ್ರತಾ ಕ್ರಮವಾಗಿ ಲಂಕಾದ ಮಾಜಿ ಪ್ರಧಾನಿ ಮಹೀಂದ ರಾಜಪಕ್ಸ ಮತ್ತು ಅವರ ಕುಟುಂಬ ಸದಸ್ಯರು ನೌಕಾನೆಲೆಗೆ ಪಲಾಯನಗೈದಿರುವುದಾಗಿ ಮಾತುಗಳು ಕೇಳಿಬರುತ್ತಿವೆ. ಕೆಲವು ಮೂಲಗಳ ಪ್ರಕಾರ, ಮುಂಜಾಗ್ರತಾ ಕ್ರಮವಾಗಿ ಮಾಜಿ ಪ್ರಧಾನಿ ರಾಜಪಕ್ಷ ಮತ್ತು ಕುಟುಂಬ ಸದಸ್ಯರನ್ನು ಹೆಲಿಕಾಪ್ಟರ್ ಮೂಲಕ ನೌಕಾನೆಲೆಗೆ ಕರೆದೊಯ್ಯಲಾಗಿದೆ ಎನ್ನಲಾಗುತ್ತಿದೆ. ಈ ನಡುವೆ ಶ್ರೀಲಂಕಾದಲ್ಲಿ ನಡೆದ ಹಿಂಸಾಚಾರ, ಗಲಭೆಯಲ್ಲಿ ಈವರೆಗೆ ಸಾವನ್ನಪ್ಪಿರುವವರ ಸಂಖ್ಯೆ 08ಕ್ಕೆ ಏರಿಕೆಯಾಗಿದೆ.

ಲಂಕನ್ನರ ಪ್ರತಿಭಟನೆಗೆ ಬೆದರಿದ ರಾಜಪಕ್ಸ| ಕುಟುಂಬ ಸಮೇತ ನೌಕಾನೆಲೆಗೆ ಪಲಾಯನ| ಹಿಂಸಾಚಾರಕ್ಕೆ ನಲುಗಿದ ದ್ವೀಪರಾಷ್ಟ್ರ Read More »

ಐಪಿಎಸ್ ಡಾ.ಪಿ. ರವೀಂದ್ರನಾಥ್ ಮತ್ತೊಮ್ಮೆ ರಾಜೀನಾಮೆ

ಸಮಗ್ರ ನ್ಯೂಸ್: ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರ ವಿರುದ್ಧ ನಕಲಿ ಜಾತಿ ಪ್ರಮಾಣ ಪತ್ರ ಆರೋಪದ ವಿರುದ್ಧ ಸಮರವನ್ನೇ ಸಾರಿದ್ದಕ್ಕಾಗಿ, ಐಪಿಎಸ್ ಅಧಿಕಾರಿ ಡಾ.ಪಿ.ರವೀಂದ್ರನಾಥ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿತ್ತು. ಈ ನಡೆಯಿಂದ ಬೇಸರಗೊಂಡಿರುವಂತ ತರಬೇತಿ ವಿಭಾಗ ಡಿಜಿಪಿ ಡಾ.ಪಿ.ರವೀಂದ್ರನಾಥ್ ತಮ್ಮ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿ ಗುಡ್ ಬೈ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಅವರು, ನಕಲಿ ಜಾತಿ ಪ್ರಮಾಣ ಪತ್ರದಲ್ಲಿ ಸಮರವನ್ನೇ ಸಾರಿದ್ದೆ. ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರಿಗೆ ನೋಟಿಸ್ ಕೂಡ ನೀಡಲಾಗಿತ್ತು. ಅವರು ತಮ್ಮ ವಕೀಲರ

ಐಪಿಎಸ್ ಡಾ.ಪಿ. ರವೀಂದ್ರನಾಥ್ ಮತ್ತೊಮ್ಮೆ ರಾಜೀನಾಮೆ Read More »

ಅಜಾನ್ v/s ಸುಪ್ರಭಾತ| ರಾಜ್ಯ‌ ಸರ್ಕಾರದಿಂದ ಮಹತ್ವದ ಮಾರ್ಗಸೂಚಿ ಪ್ರಕಟ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಭುಗಿಲಿದಿದ್ದ ಆಝಾನ್‌ ವರ್ಸಸ್‌ ಸುಪ್ರಭಾತ ವಿವಾದಕ್ಕೆ ರಾಜ್ಯ ಸರ್ಕಾರ ಕಡಿವಾಣ ಹಾಕಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಧ್ವನಿವರ್ಧಕಗಳ ಬಳಕೆಯ ಬಗ್ಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶವನ್ನು ಹೊರಡಿಸಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್‌ ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ಹಾಗಾದರೆ ಮಾರ್ಗಸೂಚನೆಯಲ್ಲಿ ರುವ ಮಾಹಿತಿ ಏನು? ವಿಳಾಸ ವ್ಯವಸ್ಥೆಯನ್ನು ಬಳಸುವ ಎಲ್ಲಾ ಬಳಕೆದಾರರು 15 ದಿನಗಳೊಳಗೆ ಗೊತ್ತುಪಡಿಸಿದ ಪ್ರಾಧಿಕಾರದಿಂದ ಲಿಖಿತ ಅನುಮತಿಯನ್ನು ಪಡೆಯಬೇಕು. Rule 5 (2) NPRC ನಿಯಮಗಳ

ಅಜಾನ್ v/s ಸುಪ್ರಭಾತ| ರಾಜ್ಯ‌ ಸರ್ಕಾರದಿಂದ ಮಹತ್ವದ ಮಾರ್ಗಸೂಚಿ ಪ್ರಕಟ Read More »

ಸುಳ್ಯ: ಅಳವುಪಾರೆ ಅಕ್ರಮ ಗಣಿಗಾರಿಕೆ ಪ್ರದೇಶಕ್ಕೆ ತಹಶಿಲ್ದಾರ್ ದಿಢೀರ್ ಭೇಟಿ| ಗ್ರಾಮಸ್ಥರಿಂದ ಅಧಿಕಾರಿಗಳ ಮೇಲೆ ತರಾಟೆ| ಗಣಿಗಾರಿಕೆ ಪೂರ್ವನಿಯೋಜಿತ ಬಂದ್!?

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದಲ್ಲಿ ನಡೆಯುತ್ತಿರುವ ಜನ ವಿರೋಧಿ ಗಣಿಗಾರಿಕೆ ಪ್ರದೇಶಕ್ಕೆ ಸುಳ್ಯ ತಹಶಿಲ್ದಾರ್ ಭೇಟಿ ನೀಡಿ ಅಲ್ಲಿನ ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸಿದ್ದು, ಈ ವೇಳೆ ತಹಶೀಲ್ದಾರರನ್ನು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಸರಿಸುಮಾರು ಒಂದು ವರ್ಷದಿಂದ ಮರ್ಕಂಜ ಗ್ರಾಮದ ಅಳವು ಪಾರೆ ಎಂಬಲ್ಲಿ ಡೆಲ್ಮಾ ಎಂಟರ್‌ಪ್ರೈಸಸ್ ಹೆಸರಿನಲ್ಲಿ ಅಕ್ರಮ ಗಣಿಗಾರಿಗೆ ನಡೆಯುತ್ತಿರುವ ಬಗ್ಗೆ ಗ್ರಾಮಸ್ಥರಿಂದ ವಿರೋದ ವ್ಯಕ್ತವಾಗಿತ್ತು. ಅದರೆ ಕೆಲವು ಅಕ್ರಮ ದಾಖಲೆಗಳನ್ನು ಸಂಗ್ರಹಿಸಿ ಪರವಾನಿಗೆ

ಸುಳ್ಯ: ಅಳವುಪಾರೆ ಅಕ್ರಮ ಗಣಿಗಾರಿಕೆ ಪ್ರದೇಶಕ್ಕೆ ತಹಶಿಲ್ದಾರ್ ದಿಢೀರ್ ಭೇಟಿ| ಗ್ರಾಮಸ್ಥರಿಂದ ಅಧಿಕಾರಿಗಳ ಮೇಲೆ ತರಾಟೆ| ಗಣಿಗಾರಿಕೆ ಪೂರ್ವನಿಯೋಜಿತ ಬಂದ್!? Read More »

ಕೇರಳದಲ್ಲಿ ಆತಂಕ ಮೂಡಿಸಿದ ಟೊಮೇಟೋ ಜ್ವರ ಎಚ್ಚರ ಎಚ್ಚರ…!

ಸಮಗ್ರ ನ್ಯೂಸ್: ದೇಶದೆಲ್ಲೆಡೆ ಕೊರೊನಾ ವೈರಸ್ ತಾಂಡವವಾಡುತ್ತಿದ್ದಂತೆ, ಇದೀಗ ಹೊಸತೊಂದು ವೈರಸ್ ಕೇರಳದಲ್ಲಿ ಕಾಣಿಸಿಕೊಂಡಿದೆ. ಟೊಮೇಟೋ ವೈರಸ್ ಅಥವಾ ಟೊಮೇಟೋ ಜ್ವರ ಎಂದು ಕರೆಯಲ್ಪಡುತ್ತಿರುವ‌ ಈ ಜ್ವರ ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಇದೇನಪ್ಪಾ, ಟೊಮೇಟೋ ಜ್ವರ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.ಇದೀಗ ಕೇರಳದಲ್ಲಿ ಟೊಮೇಟೋ ಜ್ವರದ ಆತಂಕ ಹೆಚ್ಚಾಗಿದ್ದು, ಕೊಲ್ಲಂ ಜಿಲ್ಲೆಯೊಂದರಲ್ಲೇ ಬರೋಬ್ಬರಿ 82 ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಸೋಂಕು ತಗುಲಿದವರೆಲ್ಲ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಾಗಿದ್ದು, ವಾಸ್ತವ ಸ್ಥಿತಿಯ ಬಗ್ಗೆ ರಾಜ್ಯ ಆರೋಗ್ಯ

ಕೇರಳದಲ್ಲಿ ಆತಂಕ ಮೂಡಿಸಿದ ಟೊಮೇಟೋ ಜ್ವರ ಎಚ್ಚರ ಎಚ್ಚರ…! Read More »

ಮಂಗಳೂರು: ನಗರ ಪ್ರದೇಶದಲ್ಲಿ ಹೆಚ್ಚುತ್ತಿದ್ಯಾ ಕಾನ್ಸರ್!?

ಸಮಗ್ರ ನ್ಯೂಸ್: ನಗರಗಳಲ್ಲಿ ಹೆಚ್ಚುತ್ತಿರುವ ವಿಷಕಾರಿ ತ್ಯಾಜ್ಯವಸ್ತುಗಳ ಜೊತೆಗೆ ಕಾರ್ಖಾನೆಗಳಿಂದ ಹೊರಬರುವ ಹೊಗೆಗಳು ಇಡೀ ಪರಿಸರವನ್ನೇ ಆವರಿಸಿಕೊಂಡಿದ್ದು, ನಗರ ಪ್ರದೇಶದ ಸುತ್ತ-ಮುತ್ತಲಿನ ಜನರಲ್ಲಿ ಮಾರಕ ಕ್ಯಾನ್ಸರ್ ರೋಗ ಹೆಚ್ಚಾಗಿರೋದು ಇದೀಗ ಬೆಳಕಿಗೆ ಬಂದಿದೆ. ವಾಯುಮಾಲಿನ್ಯ, ಜಲಮಾಲಿನ್ಯ, ಅಂತರ್ಜಲ ಮಾಲಿನ್ಯದ ಪರಿಣಾಮ ನಗರದ ಎಂಆರ್‍ಪಿಎಲ್ ಸುತ್ತಮುತ್ತಲಿನ ಕಾಟಿಪಳ್ಳ, ಸುರತ್ಕಲ್, ಕುಳಾಯಿ ಪ್ರದೇಶಗಳಲ್ಲಿ ಕ್ಯಾನ್ಸರ್ ಪ್ರಮಾಣ ಜಾಸ್ತಿಯಾಗುತ್ತಿದೆ ಎಂದು ಸ್ವತಃ ರಾಜ್ಯ ವಿಧಾನ ಪರಿಷತ್ತಿನ ಭರವಸೆಗಳ ಸಮಿತಿ ಕಳವಳ ವ್ಯಕ್ತಪಡಿಸಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ನೀಡಿರುವ ವರದಿಯ ಪ್ರಕಾರ ಈ

ಮಂಗಳೂರು: ನಗರ ಪ್ರದೇಶದಲ್ಲಿ ಹೆಚ್ಚುತ್ತಿದ್ಯಾ ಕಾನ್ಸರ್!? Read More »

ಕುಣಿಗಲ್ : ವಿದ್ಯುತ್ ಸ್ಪರ್ಶಿಸಿ ಜೂ. ರವಿಚಂದ್ರನ್ ಸಾವು

ಸಮಗ್ರ ನ್ಯೂಸ್: ಸಂಪ್‌ಗೆ ನೀರು ತುಂಬಿಸಲು ಮೋಟರ್ ಆನ್ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಸಂಗೀತ ಸಂಜೆ ಕಾರ್ಯಕ್ರಮದ ಕಲಾವಿದನೋರ್ವ ಮೃತಪಟ್ಟಿರುವ ಘಟನೆ ತಾಲೂಕಿನ ಕುಣಿಗಲ್ ಕಸಬಾ ಹೋಬಳಿ ಹೇರೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಹೇರೂರು ಗ್ರಾಮದ ಲಕ್ಷ್ಮಿ ನಾರಾಯಣ (35) (ಜೂನಿಯರ್ ರವಿಚಂದ್ರನ್) ಮೃತ ದುರ್ದೈವಿ. ಜೂನಿಯರ್ ರವಿಚಂದ್ರನ್ ಎಂದೇ ಪ್ರಖ್ಯಾತಗೊಂಡಿದ್ದ ಸಂಗೀತ ಸಂಜೆ ಕಾರ್ಯಕ್ರಮದ ಕಲಾವಿಧ ಲಕ್ಷ್ಮಿ ನಾರಾಯಣ ಮಂಗಳವಾರ ತಮ್ಮ ಮನೆಯ ಸಂಪ್‌ಗೆ ನೀರು ತುಂಬಿಸಲೆಂದು ಮೋಟರ್ ಸ್ವಿಚ್ ಹಾಕಲು ಯತ್ನಿಸಿದ್ದಾರೆ ಎನ್ನಲಾಗಿದ್ದು,

ಕುಣಿಗಲ್ : ವಿದ್ಯುತ್ ಸ್ಪರ್ಶಿಸಿ ಜೂ. ರವಿಚಂದ್ರನ್ ಸಾವು Read More »

ಸುಳ್ಯದ ಕಸ ಸಮಸ್ಯೆ‌ ಕುರಿತು ನಟ ಅನಿರುದ್ಧ್ ಕಳಕಳಿ ಜಾಲತಾಣಗಳಲ್ಲಿ ವೈರಲ್| ಆದರೆ…?

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯ ನ.ಪಂ ವ್ಯಾಪ್ತಿಯ ಕಸ ನ.ಪಂ ಆವರಣದಲ್ಲಿ ಬೃಹದಾಕಾರವಾಗಿ ಬೆಳೆಯುತ್ತಾ ಬಂದಿದೆ. ಅದೇಕೋ ಈ ಕಸದ ರಾಶಿ ಮೇಲೆ ನ.ಪಂ ಆಡಳಿತ ಹಾಗೂ ಅಧಿಕಾರಿ ವರ್ಗಕ್ಕೆ ಬಹಳ ಪ್ರೀತಿ! ಆದ್ದರಿಂದ ಇದುವರೆಗೂ ಈ ಕಸದ ವಾಸನೆಯನ್ನೇ ಸವಿಯುತ್ತಾ ನ.ಪಂ ಅಧಿಕಾರಿಗಳು, ಆಡಳಿತ ವರ್ಗ ದಿನಗಳೆಯುತ್ತಿದೆ. ಇದೀದ ಈ ಕಸದ ಸಮಸ್ಯೆಯ ಕುರಿತು ಬಿಜೆಪಿ ಸಾಮಾಜಿಕ ಜಾಲತಾಣದ ಪ್ರಮುಖರಾದ ಸುಪ್ರೀತ್ ಮೋಂಟಡ್ಕರು ಫೋಟೊಗಳನ್ನು ಕ್ಲಿಕ್ಕಿಸಿ ಚಿತ್ರ ನಟ ಅನಿರುದ್ಧ್ ಗೆ ಕಳುಹಿಸಿದ್ದು, .

ಸುಳ್ಯದ ಕಸ ಸಮಸ್ಯೆ‌ ಕುರಿತು ನಟ ಅನಿರುದ್ಧ್ ಕಳಕಳಿ ಜಾಲತಾಣಗಳಲ್ಲಿ ವೈರಲ್| ಆದರೆ…? Read More »