May 2022

ಮೇ.15ರಿಂದ ಮುಂಗಾರು ಆಗಮನ| ಈ ಬಾರಿ 15 ದಿನ ಮೊದಲೇ ಕಾಲಿಡಲಿದೆ ಮಾನ್ಸೂನ್

ಸಮಗ್ರ ನ್ಯೂಸ್: ನೈರುತ್ಯ ಮಾನ್ಸೂನ್ ಈ ಬಾರಿ ಹದಿನೈದು ದಿನ ಮುಂಚೆಯೇ ಆಗಮಿಸಲಿದೆ. ಮೇ 15 ರಂದೇ ನೈರುತ್ಯ ಮಾನ್ಸೂನ್ ಆಗಮನದ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆಯಿಂದ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಸಾಮಾನ್ಯವಾಗಿ ಮೇ ಕೊನೆ ಇಲ್ಲವೇ ಜೂನ್ ಮೊದಲವಾರದಲ್ಲಿ ಮುಂಗಾರು ಆರಂಭವಾಗುತ್ತದೆ. ಆದರೆ, ಈ ಬಾರಿ ಮುಂಗಾರು ಮೇ 15 ರಿಂದಲೇ ಆರಂಭವಾಗಲಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮೇ 15 ರಂದು ಮೊದಲ ಋತುಮಾನದ ಮಳೆಯಾಗಲಿದೆ. ಇದರೊಂದಿಗೆ ನೈರುತ್ಯ ಮಾನ್ಸೂನ್ […]

ಮೇ.15ರಿಂದ ಮುಂಗಾರು ಆಗಮನ| ಈ ಬಾರಿ 15 ದಿನ ಮೊದಲೇ ಕಾಲಿಡಲಿದೆ ಮಾನ್ಸೂನ್ Read More »

“ಅವನು ವಿಹಾನ್ ನನ್ನ ಸ್ಟೈಲಿಸ್ಟ್”| ಗಾಸಿಪ್ ಗ್ ತೆರೆ ಎಳೆದ ರಮ್ಯಾ

ಸಮಗ್ರ ನ್ಯೂಸ್: ಇತ್ತೀಚೆಗೆ ನಟಿ ರಮ್ಯಾ ಅವರ ಫೋಟೋವೊಂದನ್ನು ಶೇರ್ ಮಾಡಿದ್ದು ಅದು ಸಖತ್‌ ವೈರಲ್‌ ಆಗಿತ್ತು. ಇದು ಹಲವು ಗಾಸಿಪ್‌ಗಳನ್ನು ಸಹ ಹುಟ್ಟು ಹಾಕಿತು. ಈ ಪೋಸ್ಟ್‌ನ್ನು ಇತ್ತೀಚೆಗೆ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ರಮ್ಯಾ ಜೊತೆಗೆ ಕಾಣಿಸಿಕೊಂಡ ಹುಡುಗನ ಬಗ್ಗೆ ಸಾಕಷ್ಟು ಚರ್ಚೆ ಹುಟ್ಟಿಕೊಂಡಿದ್ದವು. ಯುವಕನೊಬ್ಬನ ಜೊತೆಗೆ ರಮ್ಯಾ ಸೆಲ್ಫಿ ತೆಗೆದುಕೊಂಡಿರುವ ಫೋಟೋವೊಂದನ್ನು ಹಂಚಿಕೊಂಡಿದ್ದರು. ರಮ್ಯಾ ಜೊತೆ ಇರುವ ಯುವಕ ಯಾರು ಎಂಬುದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಈ ಬಗ್ಗೆ

“ಅವನು ವಿಹಾನ್ ನನ್ನ ಸ್ಟೈಲಿಸ್ಟ್”| ಗಾಸಿಪ್ ಗ್ ತೆರೆ ಎಳೆದ ರಮ್ಯಾ Read More »

ತೆಲಂಗಾಣ: ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ‘ಆರ್‍ಆರ್‍ಆರ್’ ಸಿನಿಮಾ ಕುರಿತು ಪ್ರಶ್ನೆ

ಸಮಗ್ರ ನ್ಯೂಸ್: ಜ್ಯೂ.ಎನ್‍ಟಿಆರ್ ಹಾಗೂ ರಾಮ್ ಚರಣ್ ನಟನೆಯ ‘ಆರ್‍ಆರ್‍ಆರ್’ ಸಿನಿಮಾ ಇತಿಹಾಸ ಸೃಷ್ಟಿಸಿದೆ. ಈ ಸಿನಿಮಾ ಬಾಕ್ಸ್ ಆಫೀಸ್‍ನಲ್ಲಿ 1100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಚಿತ್ರದಿಂದ ರಾಜಮೌಳಿ ಖ್ಯಾತಿ ಮತ್ತಷ್ಟು ಹೆಚ್ಚಿದೆ. ಈಗ ತೆಲಂಗಾಣ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ‘ಆರ್‍ಆರ್‍ಆರ್’ ಸಿನಿಮಾಗೆ ಪ್ರಶ್ನೆ ಕೇಳಲಾಗಿದೆ. ಈ ಪ್ರಶ್ನೆ ಪತ್ರಿಕೆ ವೈರಲ್ ಆಗುತ್ತಿದೆ. ಈ ಸಿನಿಮಾ ಹಲವು ದಾಖಲೆಗಳನ್ನು ಬರೆದಿದೆ. ಈಗ ಅಚ್ಚರಿ ಎಂಬಂತೆ ದ್ವಿತೀಯ ಪಿಯುಸಿ ಅವರಿಗೆ ಈ ಬಗ್ಗೆ ಪ್ರಶ್ನೆ

ತೆಲಂಗಾಣ: ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ‘ಆರ್‍ಆರ್‍ಆರ್’ ಸಿನಿಮಾ ಕುರಿತು ಪ್ರಶ್ನೆ Read More »

ಡಿ.ಕೆ.ಶಿವಕುಮಾರ್ ವಿರುದ್ಧ ಮತ್ತೆ ಕಿಡಿಕಾರಿದ ನಟಿ ರಮ್ಯಾ

ಸಮಗ್ರ ನ್ಯೂಸ್: ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಸಂಸದೆ, ನಟಿ ರಮ್ಯಾ‌ ಮತ್ತೆ ಕಿಡಿಕಾರಿದ್ದಾರೆ. ಕಾಂಗ್ರೆಸ್ ಕಚೇರಿಯೇ ನನ್ನ ಟ್ರೋಲ್ ಮಾಡಲು ಹೇಳಿದೆ. ಕರ್ನಾಟಕ ಕಾಂಗ್ರೆಸ್ ಅಂದರೆ ಡಿ.ಕೆ.ಶಿವಕುಮಾರ್, ಡಿ.ಕೆ.ಶಿವಕುಮಾರ್ ಅಂದರೆ ಕರ್ನಾಟಕ ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಉಸ್ತುವಾರಿ ಜವಾಬ್ದಾರಿ ಬಿಟ್ಟ ಬಳಿಕ ನನ್ನ ವಿರುದ್ಧ 8 ಕೋಟಿ ರೂಪಾಯಿ ವಂಚನೆ ಆರೋಪ ಕೇಳಿ ಬಂದಿದೆ. ನನ್ನ ಇಮೇಜ್ ಡ್ಯಾಮೇಜ್ ಮಾಡಲೆಂದೇ ನನ್ನ ವಿರುದ್ಧ ಸುದ್ದಿ ಮಾಡಲಾಗುತ್ತಿದೆ. ವೈಯಕ್ತಿಕ ಕಾರಣಕ್ಕೆ

ಡಿ.ಕೆ.ಶಿವಕುಮಾರ್ ವಿರುದ್ಧ ಮತ್ತೆ ಕಿಡಿಕಾರಿದ ನಟಿ ರಮ್ಯಾ Read More »

ಭಾರೀ ಕುಸಿತ ಕಂಡ ಷೇರು ಮಾರುಕಟ್ಟೆ| ಪಾತಾಳಕ್ಕೆ ಕುಸಿದ ರೂಪಾಯಿ ಮೌಲ್ಯ|

ಸಮಗ್ರ ನ್ಯೂಸ್: ಒಂದೆಡೆ ಭಾರತೀಯ ರೂಪಾಯಿ ಮೌಲ್ಯ ಯುಎಸ್ ಡಾಲರ್ ಎದುರು ಗುರುವಾರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡರೆ, ಇನ್ನೊಂದೆಡೆ ಭಾರತೀಯ ಷೇರು ಮಾರುಕಟ್ಟೆಗಳ ಸಂವೇದಿ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಶೇ.2ಕ್ಕಿಂತಲೂ ಹೆಚ್ಚು ಇಳಿಕೆ ದಾಖಲಿಸಿವೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ 50 ಇಂಡೆಕ್ಸ್ ಶೇ.2.22 ಅಥವಾ 359.10 ಅಂಶ ಕಡಿಮೆಯಾಗಿ 15,808 ಅಂಶಗಳಲ್ಲಿ ವಹಿವಾಟು ಮುಗಿಸಿದೆ. ಇನ್ನು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಶೇ.2.14ರಷ್ಟು ಅಥವಾ 1,158.08ರಿಂದ 52,930.31 ಮಟ್ಟಕ್ಕೆ ಇಳಿಕೆಯಾಗಿದೆ. ಈ

ಭಾರೀ ಕುಸಿತ ಕಂಡ ಷೇರು ಮಾರುಕಟ್ಟೆ| ಪಾತಾಳಕ್ಕೆ ಕುಸಿದ ರೂಪಾಯಿ ಮೌಲ್ಯ| Read More »

ಶ್ರೀಲಂಕಾದ ನೂತನ ಪ್ರಧಾನಿಯಾಗಿ ರನಿಲ್ ವಿಕ್ರಂಸಿಂಘೆ‌ ನೇಮಕ

ಸಮಗ್ರ ನ್ಯೂಸ್: ಆರ್ಥಿಕ ತುರ್ತು ಪರಿಸ್ಥಿತಿಯ ಹೊಣೆ ಹೊತ್ತು ರಾಜಪಕ್ಸೆ ರಾಜೀನಾಮೆ ಬಳಿಕ, ಇದೀಗ ಶ್ರೀಲಂಕಾದ ನೂತನ ಪ್ರಧಾನಿಯಾಗಿ ರನಿಲ್ ವಿಕ್ರಮ ಸಿಂಘೆ ನೇಮಕವಾಗಿದ್ದಾರೆ. ಶ್ರೀಲಂಕಾದ ನೂತನ ಪ್ರಧಾನಿಯಾಗಿ ರನಿಲ್ ವಿಕ್ರಮಸಿಂಘೆ ಅವರನ್ನು ನೇಮಕ ಮಾಡಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಶ್ರೀಲಂಕಾದ ನೂತನ ಪ್ರಧಾನಿಯಾಗಿ ರನಿಲ್ ವಿಕ್ರಂಸಿಂಘೆ‌ ನೇಮಕ Read More »

ರಾಜ್ಯ ಕರಾವಳಿಗೆ ಲಂಕಾ ವಲಸಿಗರ ಭೀತಿ| ಕಡಲ ಕಿನಾರೆಯಲ್ಲಿ ಕಟ್ಟೆಚ್ಚರ

ಸಮಗ್ರ ನ್ಯೂಸ್: ಆರ್ಥಿಕ ಮತ್ತು ರಾಜಕೀಯ ತಲ್ಲಣಕ್ಕೆ ಸಿಲುಕಿರುವ ದ್ವೀಪ ರಾಷ್ಟ್ರ ಶ್ರೀಲಂಕಾದೊಂದಿಗೆ ಸಮುದ್ರ ಗಡಿ ಹಂಚಿಕೊಂಡಿರುವ ಭಾರತಕ್ಕೆ ವಲಸಿಗರ ಆತಂಕ ಎದುರಾಗಿದ್ದು, ರಾಜ್ಯ ಕರಾವಳಿಯಲ್ಲೂ ನಿಗಾ ಹೆಚ್ಚಿಸಲಾಗಿದೆ. ಲಂಕಾ ಪರಿಸ್ಥಿತಿ ಹಿನ್ನೆಲೆಯಲ್ಲಿ ಅಲ್ಲಿನ ಪ್ರಜೆ ಗಳು ಅಕ್ರಮವಾಗಿ ದಕ್ಷಿಣ ಭಾರತಕ್ಕೆ ಬರಲು ಯತ್ನಿಸುತ್ತಿರುವುದನ್ನು ಭಾರತೀಯ ಬೇಹು ವಿಭಾಗ ಪತ್ತೆ ಹಚ್ಚಿದೆ. ಹಾಗಾಗಿ ಕರ್ನಾಟಕ ಸೇರಿದಂತೆ ದ. ಭಾರತದ ಕರಾವಳಿ ರಾಜ್ಯ ಗಳಿಗೆ ಕೇಂದ್ರ ಗುಪ್ತಚರ ಇಲಾಖೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ. ಲಭ್ಯ ಮಾಹಿತಿಯ ಪ್ರಕಾರ ತಮಿಳುನಾಡಿಗೆ

ರಾಜ್ಯ ಕರಾವಳಿಗೆ ಲಂಕಾ ವಲಸಿಗರ ಭೀತಿ| ಕಡಲ ಕಿನಾರೆಯಲ್ಲಿ ಕಟ್ಟೆಚ್ಚರ Read More »

ಉಡುಪಿ : ವಿದ್ಯಾರ್ಹತೆಗೆ ಸೂಕ್ತ ಕೆಲಸ ಸಿಗದ ಹಿನ್ನಲೆ | ಆತ್ಮಹತ್ಯೆಗೆ ಶರಣಾದ ಯುವತಿ

ಸಮಗ್ರ ನ್ಯೂಸ್: 23 ವರ್ಷದ ಎಂಬಿಎ ಪದವೀಧರೆ, ಮಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಒಂದೂವರೆ ವರ್ಷದ ಹಿಂದೆಯೇ ಎಂಬಿಎ ಪದವಿ ಮುಗಿಸಿದ್ದಳು. ತನ್ನ ವಿದ್ಯಾರ್ಹತೆಗೆ ಸೂಕ್ತ ಕೆಲಸ ಸಿಗಲಿಲ್ಲವೆಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಶಿರ್ವ ಸಮೀಪದ ಕಟ್ಟಿಂಗೇರಿ ಗ್ರಾಮದಲ್ಲಿ ನಡೆದಿದೆ. ದ.ಕ ಜಿಲ್ಲೆ ಉಪ್ಪಿನಂಗಡಿ ಮೂಲದ ಸಹನಾ ಆತ್ಮಹತ್ಯೆ ಮಾಡಿಕೊಂಡ ಮೃತ ದುರ್ದೈವಿ. ಏಪ್ರಿಲ್ 30 ರಂದು ಸಹೋದರಿ ಸೌಮ್ಯ ಅವರ ಮನೆಗೆ ಬಂದಿದ್ದು ಅಲ್ಲೇ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ, ಆಕೆಯನ್ನು

ಉಡುಪಿ : ವಿದ್ಯಾರ್ಹತೆಗೆ ಸೂಕ್ತ ಕೆಲಸ ಸಿಗದ ಹಿನ್ನಲೆ | ಆತ್ಮಹತ್ಯೆಗೆ ಶರಣಾದ ಯುವತಿ Read More »

“ನಿಮ್ಮ ಕೈಯಲ್ಲಿ ಆಗದಿದ್ದರೆ ಬರೆದುಕೊಡಿ ಎರಡು ದಿನದಲ್ಲಿ ಕಸ ಕ್ಲಿಯರ್ ಮಾಡ್ತೇವೆ”| ಸುಳ್ಯ ನ.ಪಂ ಗೆ ಸವಾಲೆಸೆದ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ನಲಪಾಡ್

ಸಮಗ್ರ ನ್ಯೂಸ್: “ಸುಳ್ಯ ನಗರ ಪಂಚಾಯತ್ ಕಚೇರಿ ಮುಂಭಾಗದಲ್ಲಿ ತುಂಬಿಟ್ಟಿರುವ ಕಸದ ರಾಶಿಯನ್ನು ತೆರವು ಮಾಡಲು ನಿಮ್ಮ ಕೈಯಲ್ಲಿ ಆಗದಿದ್ದರೆ ಲಿಖಿತವಾಗಿ ಕೊಡಿ. ಎಷ್ಟೇ ಖರ್ಚಾದರೂ ಎರಡು ದಿನದಲ್ಲಿ ನಾವು ಕ್ಲಿಯರ್ ಮಾಡಿ ಕೊಡುತ್ತೇವೆ” ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ್ ಸುಳ್ಯ ನಗರ ಪಂಚಾಯತ್‌ ಆಡಳಿತಕ್ಕೆ ಸವಾಲು ಹಾಕಿದ್ದಾರೆ. ನಗರ ಪಂಚಾಯತ್‌ಗೆ ಭೇಟಿ ನೀಡಿ ಕಸದ ರಾಶಿಯನ್ನು ವೀಕ್ಷಿಸಿದ ಅವರು ಬಳಿಕ ಮಾತನಾಡಿದರು. ಒಂದು ತಿಂಗಳಲ್ಲಿ ಕಚೇರಿ ಆವರಣದಿಂದ ಸಂಪೂರ್ಣ ಕಸವನ್ನು ತೆರವು

“ನಿಮ್ಮ ಕೈಯಲ್ಲಿ ಆಗದಿದ್ದರೆ ಬರೆದುಕೊಡಿ ಎರಡು ದಿನದಲ್ಲಿ ಕಸ ಕ್ಲಿಯರ್ ಮಾಡ್ತೇವೆ”| ಸುಳ್ಯ ನ.ಪಂ ಗೆ ಸವಾಲೆಸೆದ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ನಲಪಾಡ್ Read More »

ಉಡುಪಿ: ಉದ್ಯಾವರ ಸಮೀಪ ಬಸ್ ಪಲ್ಟಿ, ಹಲವರು ಜಖಂ

ಸಮಗ್ರ ನ್ಯೂಸ್: ಮಂಗಳೂರಿನಿಂದ ಉಡುಪಿಗೆ ಸಂಚರಿಸುತ್ತಿದ್ದ ಖಾಸಗಿ ಬಸ್ಸೊಂದು ಉಡುಪಿ-ಉದ್ಯಾವರ ಜಂಕ್ಷನ್ ಬಳಿ ಪಲ್ಟಿಯಾಗಿ ಪ್ರಯಾಣಿಕರು ಜಖಂಗೊಂಡ ಘಟನೆ ಇಂದು (ಮೇ.೧೨) ಮಧ್ಯಾಹ್ನ ‌ನಡೆದಿದೆ. ಬಸ್ ಚಲಿಸುತ್ತಿದ್ದ ವೇಳೆ ಓವರ್ ಟೇಕ್‌ ಮಾಡುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂಬಕ್ಕೆ ಢಿಕ್ಕಿ ಹೊಡೆದಿದ್ದು, ಬಳಿಕ ಡಿವೈಡರ್ ಗೆ ಹಾರಿ ಪಲ್ಟಿಯಾಗಿರುವುದಾಗಿ ಹೇಳಲಾಗುತ್ತಿದೆ. ಬಸ್ ನಲ್ಲಿ ಪ್ರಯಾಣಿಕರಿದ್ದರೂ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಇಲ್ಲದೆ ಪಾರಾಗಿದ್ದಾರೆ. ಹೆಚ್ಚಿನ ‌ಮಾಹಿತಿ‌ ನಿರೀಕ್ಷಿಸಲಾಗುತ್ತಿದೆ.

ಉಡುಪಿ: ಉದ್ಯಾವರ ಸಮೀಪ ಬಸ್ ಪಲ್ಟಿ, ಹಲವರು ಜಖಂ Read More »