May 2022

ಕಾರು ಅಪಘಾತ: ಕ್ರಿಕೆಟ್ ದಂತಕತೆ ಆಂಡ್ರೂ ಸೈಮಂಡ್ಸ್ ಇನ್ನಿಲ್ಲ

ಸಮಗ್ರ ನ್ಯೂಸ್: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗಷ್ಟೇ ಥಾಯ್ಲೆಂಡ್‌ನಲ್ಲಿ ಹೃದಯಾಘಾತದಿಂದ ಸಾರ್ವಕಾಲಿಕ ಶ್ರೇಷ್ಠ ಲೆಗ್‌ ಸ್ಪಿನ್ನರ್, ಕ್ರಿಕೆಟ್‌ ದಂತಕತೆ ಶೇನ್‌ ವಾರ್ನ್‌ ಹಠಾತ್‌ ನಿಧನರಾಗಿದ್ದರು. ಇದೀಗ ಆಂಡ್ರ್ಯೂ ಸೈಮಂಡ್ಸ್ ಕೂಡ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದು, ಕಾಂಗರೋ ನಾಡಿಗೆ ಬರಸಿಡಿಲು ಬಡಿದಂತಾಗಿದೆ. ಮಾಜಿ ಲೆಜೆಂಡರಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ಶನಿವಾರ ತಡರಾತ್ರಿ ಸಾವನ್ನಪ್ಪಿದ್ದಾರೆ. ಕ್ವೀನ್ಸ್‌ಲ್ಯಾಂಡ್‍ನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಸೈಮಂಡ್ಸ್ ಕೊನೆಯುಸಿರೆಳೆದಿದ್ದಾರೆ. ಸೈಮಂಡ್ಸ್ ನಿಧನದ ನಂತರ ಕ್ರಿಕೆಟ್ ಲೋಕ […]

ಕಾರು ಅಪಘಾತ: ಕ್ರಿಕೆಟ್ ದಂತಕತೆ ಆಂಡ್ರೂ ಸೈಮಂಡ್ಸ್ ಇನ್ನಿಲ್ಲ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ದೈನಂದಿನ ಜೀವನದಲ್ಲಿ ನಮ್ಮ ಎಲ್ಲಾ ವ್ಯವಹಾರಗಳ ಹಿಂದೆ, ನಕ್ಷತ್ರ, ರಾಶಿಗಳು ಪ್ರಭಾವ ಬೀರುತ್ತವೆ. ನಮ್ಮ ನಡವಳಿಕೆಗಳು ಇವುಗಳ ಪ್ರಭಾವದಿಂದಾಗಿ ನಡೆಯುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇವುಗಳ ಪ್ರಭಾವದಿಂದಾಗಿ ನಾವು ನಮ್ಮ ಕಾರ್ಯಗಳಲ್ಲಿ ಶುಭ ಮತ್ತು ಅಶುಭ ಫಲಗಳನ್ನು ಕಾಣುತ್ತೇವೆ. ಈ ವಾರದಲ್ಲಿ ಯಾವ ರಾಶಿಯವರಿಗೆ ಏನು ಫಲ ಲಭಿಸುತ್ತದೆ, ರಾಶಿಗಳ ಗೋಚಾರಫಲ ಮತ್ತು ಪರಿಹಾರವೇನು ಎಂಬ ಮಾಹಿತಿ ಇಲ್ಲಿದೆ. ಮೇಷ ರಾಶಿ:ಪಾರಂಪರಿಕವಾಗಿ ನಡೆದು ಬಂದ ವ್ಯವಹಾರಗಳನ್ನು ಬಿಡುವುದು ಬೇಡ.ಸಿನಿಮಾ ರಂಗದವರಿಗೆ ಉತ್ತಮ ಅವಕಾಶಗಳು

ದ್ವಾದಶ ರಾಶಿಗಳ ವಾರಭವಿಷ್ಯ Read More »

ಚುನಾವಣೆ; ರಾಜ್ಯಸಭೆಗೆ ನಿರ್ಮಲಾ, ಪರಿಷತ್ ಗೆ ವಿಜಯೇಂದ್ರ ಫೈನಲ್?

ಸಮಗ್ರ ನ್ಯೂಸ್: ವಿಧಾನ ಪರಿಷತ್ ಮತ್ತು ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದಂತೆ ಇಂದು ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯಸಭೆ ಅಭ್ಯರ್ಥಿಯಾಗಿ ನಿರ್ಮಲಾ ಸೀತಾರಾಮನ್ ಹೆಸರು ಮತ್ತು ಪರಿಷತ್ ಸ್ಥಾನದ ಅಭ್ಯರ್ಥಿಯಾಗಿ ಬಿ.ವೈ.ವಿಜಯೇಂದ್ರ ಹೆಸರನ್ನೂ ಕಳುಹಿಸಿದೆ ಎನ್ನಲಾಗಿದೆ. ಇದಲ್ಲದೇ ರಾಜ್ಯಸಭೆ ಅಭ್ಯರ್ಥಿಯಾಗಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ಲೆಹರ್ ಸಿಂಗ್ ಕೆ.ಸಿ ರಾಮಮೂರ್ತಿ ಸೇರಿದಂತೆ 5 ಹೆಸರುಗಳನ್ನು ಹೆಸರನ್ನೂ ಪ್ರಸ್ತಾಪಿಸಲಾಗಿದೆ ಅಂತ ತಿಳಿದು ಬಂದಿದೆ.

ಚುನಾವಣೆ; ರಾಜ್ಯಸಭೆಗೆ ನಿರ್ಮಲಾ, ಪರಿಷತ್ ಗೆ ವಿಜಯೇಂದ್ರ ಫೈನಲ್? Read More »

ರಾಜಕೀಯ ಬೆಳವಣಿಗೆ; ತ್ರಿಪುರ ಮುಖ್ಯಮಂತ್ರಿ ದಿಢೀರ್ ರಾಜೀನಾಮೆ

ಸಮಗ್ರ ನ್ಯೂಸ್: ದಿಢೀರ್‌ ರಾಜಕೀಯ ಬೆಳವಣಿಗೆಯಲ್ಲಿ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್‌ ಕುಮಾರ್‌ ದೇವ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಬಿಜೆಪಿ ಹೈಕಮಾಂಡ್‌ ಸೂಚನೆಯಂತೆ ಬಿಪ್ಲಬ್‌ ಕುಮಾರ್‌ ದೇವ್‌ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದ್ದು, ಮತ್ತೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಶಾಸಕಾಂಗ ಪಕ್ಷ ಆಯ್ಕೆ ಮಾಡಲಿದೆ. ಬಿಪ್ಲಬ್‌ ಕುಮಾರ್‌ ದೇವ್‌ ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಹೈಕಮಾಂಡ್‌ ಸೂಚನೆಯಂತೆ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿರುವ ಬಿಪ್ಲಬ್‌ ಕುಮಾರ್‌ ದೇವ್‌ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.

ರಾಜಕೀಯ ಬೆಳವಣಿಗೆ; ತ್ರಿಪುರ ಮುಖ್ಯಮಂತ್ರಿ ದಿಢೀರ್ ರಾಜೀನಾಮೆ Read More »

ವಕೀಲೆ ಮೇಲೆ ನಡುರಸ್ತೆಯಲ್ಲೇ ಹಲ್ಲೆ| ಪೊಲೀಸರಿಗೆ ಮನೆ ತೋರಿಸಿದ್ದಕ್ಕೆ ಹಿಗ್ಗಾಮುಗ್ಗ ಥಳಿತ

ಸಮಗ್ರ ನ್ಯೂಸ್: ಪೊಲೀಸರಿಗೆ ಮನೆ ತೋರಿಸಿದರು ಎಂಬ ಕಾರಣಕ್ಕೆ ಪಕ್ಕದ ಮನೆಯವರ ಜೊತೆ ವಕೀಲೆ ಮೇಲೆ ನಡುರಸ್ತೆಯಲ್ಲೇ ಹಲ್ಲೆ ನಡೆಸಿ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಬಾಗಲಕೋಟೆಯ ವಿನಾಯಕ ನಗರದಲ್ಲಿ ಸಂಭವಿಸಿದೆ. ಜಗಳದಲ್ಲಿ ವಕೀಲೆ, ಕುಟುಂಬಸ್ಥರು ಹಾಗೂ ಇನ್ನೋರ್ವ ವ್ಯಕ್ತಿ ಮಧ್ಯೆ ಮಾರಾಮಾರಿ ನಡೆದಿದೆ. ಈ ವೇಳೆ ವಕೀಲೆ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮಾಂತೇಶ ಚೊಳಚಗುಡ್ಡ ಎಂಬ ವ್ಯಕ್ತಿ ವಕೀಲೆ ಸಂಗೀತಾ ಶಿಕ್ಕೇರಿ ಮೇಲೆ ಹಲ್ಲೆ ನಡೆಸಿದ್ದಾರೆ. ನನ್ನ ಪತಿ ಹಾಗೂ

ವಕೀಲೆ ಮೇಲೆ ನಡುರಸ್ತೆಯಲ್ಲೇ ಹಲ್ಲೆ| ಪೊಲೀಸರಿಗೆ ಮನೆ ತೋರಿಸಿದ್ದಕ್ಕೆ ಹಿಗ್ಗಾಮುಗ್ಗ ಥಳಿತ Read More »

ಕರಾವಳಿಯಲ್ಲಿ ಡೆಂಗ್ಯೂ ಜ್ವರ ಭೀತಿ

ಸಮಗ್ರ ನ್ಯೂಸ್:  ಕರಾವಳಿ ಭಾಗದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯ ನಡುವೆ ಉಡುಪಿ, ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಡೆಂಗ್ಯೂ ಜ್ವರ ಉಲ್ಬಣದ ಭೀತಿ ಎದುರಾಗಿದೆ. ಹೀಗಾಗಿ ಸೊಳ್ಳೆ ಉತ್ಪತ್ತಿ ತಾಣಗಳ ನಿಷೇಧಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ. ಈಡೀಸ್ ಸೊಳ್ಳೆ ಡೆಂಗ್ಯೂ ಜ್ವರ ಹರಡುತ್ತದೆ. ಹೀಗಾಗಿ ಇದರ ಉತ್ಪತ್ತಿ ತಾಣವನ್ನು ನಾಶ ಮಾಡುವ ಮೂಲಕ ಕಾಯಿಲೆ ವ್ಯಾಪಕವಾಗದಂತೆ ತಡೆಯುವ ಉದ್ದೇಶದಿಂದಾಗಿ ಮೇ 16ರಂದು ಆರೋಗ್ಯ ಇಲಾಖೆಯು ಸೊಳ್ಳೆ ಉತ್ಪತ್ತಿ ತಾಣ ನಾಶ ಅಭಿಯಾನವನ್ನು ದ.,ಕ. ಜಿಲ್ಲೆಯಾದ್ಯಂತ

ಕರಾವಳಿಯಲ್ಲಿ ಡೆಂಗ್ಯೂ ಜ್ವರ ಭೀತಿ Read More »

ರಾಜ್ಯಸರ್ಕಾರದಿಂದ ಮತಾಂತರ ನಿಷೇಧ ಕಾಯ್ದೆ ಸುಗ್ರೀವಾಜ್ಞೆ ಜಾರಿ| ಸುಗ್ರೀವಾಜ್ಞೆ ತಿರಸ್ಕರಿಸಲು ಸಿದ್ದರಾಮಯ್ಯ ಆಗ್ರಹ

ಸಮಗ್ರ ನ್ಯೂಸ್: ಕೆಲ ಸಮಯದಿಂದ ಪರ-ವಿರೋಧಕ್ಕೆ ಕಾರಣವಾಗಿದ್ದ ಬಲವಂತದ ಮತಾಂತರ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ವಿಧಾನಸಭೆಯಲ್ಲಿ ಅನುಮೋದನೆಗೊಂಡು, ಪರಿಷತ್ತಿನಲ್ಲಿ ಬಾಕಿ ಉಳಿದುಕೊಂಡಿದ್ದ ‘ಕರ್ನಾಟಕ ಧಾರ್ವಿುಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಅಧ್ಯಾದೇಶ, 2022’ಕ್ಕೆ ಮೇ 12ರಂದು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಸಂಪುಟದ ತೀರ್ವನವನ್ನು ಶುಕ್ರವಾರ ರಾಜಭವನಕ್ಕೆ ಕಳಿಸಲಾಗುತ್ತದೆ. ರಾಜ್ಯಪಾಲರು ಕಾನೂನು ತಂಡದ ಜತೆ ಸಮಾಲೋಚಿಸಿ ಸುಗ್ರೀವಾಜ್ಞೆಗೆ ಸಹಿ ಹಾಕಿದ ಕೂಡಲೇ ಮತಾಂತರ ನಿಷೇಧ ಕಾನೂನು ಜಾರಿಗೆ

ರಾಜ್ಯಸರ್ಕಾರದಿಂದ ಮತಾಂತರ ನಿಷೇಧ ಕಾಯ್ದೆ ಸುಗ್ರೀವಾಜ್ಞೆ ಜಾರಿ| ಸುಗ್ರೀವಾಜ್ಞೆ ತಿರಸ್ಕರಿಸಲು ಸಿದ್ದರಾಮಯ್ಯ ಆಗ್ರಹ Read More »

ಇನ್ಮುಂದೆ ಬೆಳಗ್ಗಿ‌ನ ಆಜಾನ್ ಗೆ ಧ್ವನಿವರ್ಧಕ ಉಪಯೋಗಿಸದಿರಲು ಮುಸ್ಲಿಂ ಮುಖಂಡರ ನಿರ್ಧಾರ

ಸಮಗ್ರ ನ್ಯೂಸ್: ರಾಜ್ಯ ಸರ್ಕಾರದಿಂದ ಮಸೀದಿಗಳಲ್ಲಿ ಧ್ವನಿ ವರ್ಧಕ ಬಳಕೆಯ ಬಗ್ಗೆ ಮಾರ್ಗಸೂಚಿಯನ್ನು ಜಾರಿಗೊಳಿಸಲಾಗಿದೆ. ಬೆಳಗಿನ ಜಾವದಲ್ಲಿ ಇಂತಿಷ್ಟೇ ಡೆಸಿಬಲ್ ಶಬ್ದವನ್ನು ಹೊರಸೂಸುವಂತೆ ಧ್ವನಿ ವರ್ಧಕ ಬಳಕೆಗೂ ಖಡಕ್ ಸೂಚನೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಮುಸ್ಲೀಂ ಮುಖಂಡರು, ಇನ್ಮುಂದೆ ರಾಜ್ಯಾಧ್ಯಂತ ಬೆಳಿಗ್ಗೆ 5 ಗಂಟೆಯ ಆಜಾನ್ ಕೂಗೋದನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ. ಈ ಕುರಿತಂತೆ ಮುಸ್ಲೀಂ ಮುಖಂಡರು ಸಭೆ ನಡೆಸಿದ ಬಳಿಕ, ಸುದ್ದಿಗಾರರಿಗೆ ಮಾಹಿತಿ ನೀಡಿದಂತ ಇಮಾಮ್ ಮೌಲಾನ್ ಮಕ್ಸೂದ್ ಇಮ್ರಾನ್ ರಶಾದಿ

ಇನ್ಮುಂದೆ ಬೆಳಗ್ಗಿ‌ನ ಆಜಾನ್ ಗೆ ಧ್ವನಿವರ್ಧಕ ಉಪಯೋಗಿಸದಿರಲು ಮುಸ್ಲಿಂ ಮುಖಂಡರ ನಿರ್ಧಾರ Read More »

ಪ್ರತ್ಯೇಕ ಬೆಂಕಿ ಅವಘಡ| 31 ಮಂದಿ ಸಜೀವ ದಹನ

ಸಮಗ್ರ ನ್ಯೂಸ್: ಜಮ್ಮುವಿನ ಕತ್ರಾ ಬಳಿ ವೈಷ್ಣೋದೇವಿ ಯಾತ್ರಾರ್ಥಿಗಳು ತೆರಳುತ್ತಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿರುವ ಘೋರ ದುರಂತ ಶುಕ್ರವಾರ ಸಂಭವಿಸಿದೆ. ದುರ್ಘಟನೆಯಲ್ಲಿ ಕನಿಷ್ಠ 22 ಮಂದಿ ಗಾಯಗೊಂಡಿದ್ದಾರೆ. ವೈಷ್ಣೋದೇವಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಕತ್ರಾದಿಂದ ಜಮ್ಮುವಿಗೆ ತೆರಳುತ್ತಿದ್ದಾಗ ಹಠಾತ್ ಬೆಂಕಿ ಹೊತ್ತಿಕೊಂಡು ಈ ದುರಂತ ಸಂಭವಿಸಿದೆ. ದೆಹಲಿಯಲ್ಲಿ 27 ಮಂದಿ ಸಾವು!ಪಶ್ಚಿಮ ದೆಹಲಿಯ ಮುಂಡ್ಕಾ ಮೆಟ್ರೊ ನಿಲ್ದಾಣ ಸಮೀಪದ ನಾಲ್ಕು ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಅಗ್ನಿ ದುರಂತದಲ್ಲಿ

ಪ್ರತ್ಯೇಕ ಬೆಂಕಿ ಅವಘಡ| 31 ಮಂದಿ ಸಜೀವ ದಹನ Read More »

41ನೇ ವಸಂತಕ್ಕೆ ಕಾಲಿಟ್ಟ ಸನ್ನಿ ಲಿಯೋನ್| ಅಭಿಮಾನಿಗಳಿಂದ ಶುಭಾಶಯದ ಮಹಾಪೂರ|

ಸಮಗ್ರ ನ್ಯೂಸ್: ಬಾಲಿವುಡ್ ನಟಿ, ಮಾದಕ ತಾರೆ ಸನ್ನಿ ಲಿಯೋನ್ ಅವರು ಇಂದು (ಮೇ.13) 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನೆಚ್ಚಿನ ನಟಿಯ ಹುಟ್ಟುಹಬ್ಬದ ಅಂಗವಾಗಿ ಚಿತ್ರರಂಗದ ಗಣ್ಯರು ಸೇರಿದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭ ಹಾರೈಸಿದ್ದಾರೆ. ಇಂಟರ್ನೆಟ್‌ನಲ್ಲಿ ತಮ್ಮ ಮಾದಕ ಭಂಗಿಗಳ ಮೂಲಕ ನೋಡುಗರ ಎದೆಯಲ್ಲಿ ಕಿಚ್ಚು ಹಚ್ಚುವ ಕಲೆಯನ್ನು ಸನ್ನಿ ಚೆನ್ನಾಗಿಯೇ ಕರಗತ ಮಾಡಿಕೊಂಡಿದ್ದಾರೆ. ಪ್ರವಾಸ, ಫೋಟೊಶೂಟ್‌, ಹೊಸ ಉಡುಪು ಹಾಗೂ ಇನ್ನಿತರ ವಿಚಾರಗಳಿಗೆ ಸಂಬಂಧಿಸಿದ ಚಿತ್ರಗಳು, ವಿಡಿಯೊ ತುಣುಕುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಮೂಲಕ

41ನೇ ವಸಂತಕ್ಕೆ ಕಾಲಿಟ್ಟ ಸನ್ನಿ ಲಿಯೋನ್| ಅಭಿಮಾನಿಗಳಿಂದ ಶುಭಾಶಯದ ಮಹಾಪೂರ| Read More »