May 2022

ಉಡುಪಿ: ನಿಶ್ಚಿತಾರ್ಥ ಬಂದಿದ್ದ ತಾಯಿ ಮಗು ನಿಗೂಢ ನಾಪತ್ತೆ

ಉಡುಪಿ: ಮದುವೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆಂದು ಹೇರೂರು ಗ್ರಾಮದಲ್ಲಿರುವ ಚಿಕ್ಕಪ್ಪನ ಮನೆಗೆ ಬಂದಿದ್ದನಿಗೂಢವಾಗಿ ನಾಪತ್ತೆಯಾದ ಘಟನೆ ನಡೆದಿದೆ. ಮಂಗಳೂರಿನ ಉಳ್ಳಾಲ ಬಂಡಿಕೊಟ್ಯ ನಿವಾಸಿ ಪ್ರಥ್ವಿನಿ (32) ಎನ್ನುವ ಮಹಿಳೆ ತನ್ನ ನಾಲ್ಕೂವರೆ ವರ್ಷದ ಮಗಳು ಪುನರ್ವಿಯೊಂದಿಗೆ ಮೇ 13ರಿಂದ ನಾಪತ್ತೆಯಾಗಿದ್ದಾರೆ. 5 ಅಡಿ 5 ಇಂಚು ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ, ದಪ್ಪ ಶರೀರ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬ್ರಹ್ಮಾವರ ಪೊಲೀಸ್‌ ಠಾಣೆ (0820-2561044), ಪೊಲೀಸ್‌ ವೃತ್ತ […]

ಉಡುಪಿ: ನಿಶ್ಚಿತಾರ್ಥ ಬಂದಿದ್ದ ತಾಯಿ ಮಗು ನಿಗೂಢ ನಾಪತ್ತೆ Read More »

ಕಾಂಗ್ರೆಸ್‌ ತೊರೆದ ಹಾರ್ದಿಕ್ ಪಟೇಲ್

ಸಮಗ್ರ ನ್ಯೂಸ್: ಗುಜರಾತ್ ಕಾಂಗ್ರೆಸ್ ನ ರಾಜ್ಯಾಧ್ಯಕ್ಷ ಹಾರ್ಧಿಕ್ ಪಟೇಲ್, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೇ ಕಾಂಗ್ರೆಸ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ. ಈ ಕುರಿತಂತೆ ಟ್ವಿಟ್ ಮಾಡಿರುವ ಅವರು, ಇಂದು ನಾನು ಧೈರ್ಯದಿಂದ ಕಾಂಗ್ರೆಸ್ ಪಕ್ಷದ ಹುದ್ದೆಗೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ. ನನ್ನ ನಿರ್ಧಾರವನ್ನು ನನ್ನ ಎಲ್ಲಾ ಸಹೋದ್ಯೋಗಿಗಳು ಮತ್ತು ಗುಜರಾತ್ ಜನರು ಸ್ವಾಗತಿಸುತ್ತಾರೆ ಎಂದು ನನಗೆ ಖಾತ್ರಿಯಿದೆ. ನನ್ನ ಈ ಹೆಜ್ಜೆಯ ನಂತರ, ನಾನು ಭವಿಷ್ಯದಲ್ಲಿ ಗುಜರಾತ್ ಗಾಗಿ

ಕಾಂಗ್ರೆಸ್‌ ತೊರೆದ ಹಾರ್ದಿಕ್ ಪಟೇಲ್ Read More »

ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿ‌ಎಜಿ ಪೆರಾರಿವಾಲನ್ ಬಿಡುಗಡೆಗೆ ಸುಪ್ರೀಂ ಸೂಚನೆ

ಸಮಗ್ರ ನ್ಯೂಸ್: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳಲ್ಲಿ ಒಬ್ಬರಾದ ಎಜಿ ಪೆರಾರಿವಾಲನ್ ಅವರನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಬುಧವಾರ ಆದೇಶಿಸಿದೆ. ‘ಅನುಚ್ಛೇದ 142 ಅನ್ನು ಚಲಾಯಿಸುವ ಮೂಲಕ ಅಪರಾಧಿಯನ್ನು ಬಿಡುಗಡೆ ಮಾಡುವುದು ಸೂಕ್ತವಾಗಿದೆ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ನಾಗೇಶ್ವರ ರಾವ್, ಬಿ.ಆರ್.ಬವಾಯಿ ಮತ್ತು ಎ.ಎಸ್.ಬೋಪಣ್ಣ ಸೇರಿದಂತೆ ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠವು ಬುಧವಾರ ಈ ತೀರ್ಪನ್ನು ಪ್ರಕಟಿಸಿದೆ. ಮಾರ್ಚ್ 9, 2022 ರಂದು ಆದೇಶದ ಮೂಲಕ, ಸುಪ್ರೀಂ ಕೋರ್ಟ್ ಎಜಿ

ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿ‌ಎಜಿ ಪೆರಾರಿವಾಲನ್ ಬಿಡುಗಡೆಗೆ ಸುಪ್ರೀಂ ಸೂಚನೆ Read More »

ತಲೆನೋವು ನಿವಾರಣೆಯೇ ಒಂದು ತಲೆನೋವು| ಮಾತ್ರೆಗಿಂತ ಒಳ್ಳೆಯ ಮನೆಮದ್ದು ಇಲ್ಲಿದೆ…

ಸಮಗ್ರ ನ್ಯೂಸ್: ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರ ಸಂಖ್ಯೆ ಹೆಚ್ಚು. ಜೊತೆಗೆ ಸದಾ ಮೊಬೈಲ್ ನಲ್ಲಿಯೇ ಸಮಯ ಕಳೆಯುವವರ ಸಂಖ್ಯೆ ಬಹಳ ದೊಡ್ಡದಿದೆ. ಪ್ರತಿದಿನ ತಲೆ ನೋವು ಎನ್ನುವವರನ್ನು ನೋಡಬಹುದು, ತಲೆನೋವು ಬಂದ ತಕ್ಷಣ ಮೆಡಿಕಲ್ ಶಾಪ್ ಗೆ ಹೋಗಿ ಮಾತ್ರೆ ನುಂಗ್ತಾರೆ. ಆದ್ರೆ ಮಾತ್ರೆಗಿಂತ ಮನೆಮದ್ದು ಒಳ್ಳೆಯದು. ಆಲೂಗಡ್ಡೆ ತಲೆನೋವನ್ನು ಕೆಲವೇ ಕ್ಷಣಗಳಲ್ಲಿ ದೂರ ಮಾಡಿ ನೆಮ್ಮದಿ ನೀಡುತ್ತದೆ. ಒಂದು ಆಲೂಗಡ್ಡೆಯನ್ನು ಸ್ಲೈಸ್ ಮಾಡಿ. ನಂತ್ರ ಶಾಂತವಾದ ಜಾಗದಲ್ಲಿ ಕುಳಿತುಕೊಂಡು ಹಣೆಯ

ತಲೆನೋವು ನಿವಾರಣೆಯೇ ಒಂದು ತಲೆನೋವು| ಮಾತ್ರೆಗಿಂತ ಒಳ್ಳೆಯ ಮನೆಮದ್ದು ಇಲ್ಲಿದೆ… Read More »

ವಿಟ್ಲ: ಹೃದಯಾಘಾತದಿಂದ ಹೈಸ್ಕೂಲ್ ವಿದ್ಯಾರ್ಥಿನಿ ಸಾವು

ಸಮಗ್ರ ನ್ಯೂಸ್: 9ನೇ ತರಗತಿಯ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಅಳಿಕೆ ಗ್ರಾಮದ ಚಂದಾಡಿಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಅನ್ವಿತ ಹೆಗ್ಡೆ ಎಂದು ಗುರುತಿಸಲಾಗಿದೆ. ಈಕೆ ಅಳಿಕೆ ಗ್ರಾಮದ ಚಂದಾಡಿ ನಿವಾಸಿಗಳಾದ ವಿನಯ್ ಹೆಗ್ಡೆ ಹಾಗೂ ಸಾಯಿಗೀತಾ ದಂಪತಿಗಳ ಪುತ್ರಿಯಾಗಿದ್ದು, ನಿನ್ನೆ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ. ಇದ್ದ ಓರ್ವ ಮಗಳನ್ನು ಕಳೆದುಕೊಂಡ ಹೆತ್ತವರ ದುಃಖ ಮುಗಿಲುಮುಟ್ಟಿದೆ.

ವಿಟ್ಲ: ಹೃದಯಾಘಾತದಿಂದ ಹೈಸ್ಕೂಲ್ ವಿದ್ಯಾರ್ಥಿನಿ ಸಾವು Read More »

ಪಿಯು ತರಗತಿಗಳಿಗೆ ಸಮವಸ್ತ್ರ ಮಾರ್ಗಸೂಚಿ ಪ್ರಕಟ|

ಸಮಗ್ರ ನ್ಯೂಸ್: ಹಿಜಾಬ್‌ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯು ಸಮವಸ್ತ್ರ ಮಾರ್ಗಸೂಚಿ ಪ್ರಕಟಿಸಿದೆ. ಈ ಬಾರಿ ವಿದ್ಯಾರ್ಥಿಗಳು ಕಾಲೇಜು ಅಭಿವೃದ್ಧಿ ಸಮಿತಿ ನಿಗದಿಪಡಿಸಿರುವ ಸಮವಸ್ತ್ರ ಧರಿಸಬೇಕು. ಒಂದು ವೇಳೆ ನಿಗದಿಪಡಿಸಿಲ್ಲವಾದರೆ, ಸಮಾನತೆ ಮತ್ತು ಐಕ್ಯತೆಯನ್ನು ಕಾಪಾಡುವ ಸಮವಸ್ತ್ರ ಧರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಹಿಜಾಬ್‌ ವಿವಾದದಲ್ಲಿ ಹೈಕೋರ್ಟ್‌ ನೀಡಿರುವ ತೀರ್ಪಿನ ಅನ್ವಯ ಸಮವಸ್ತ್ರಗಳನ್ನು ಧರಿಸುವಂತೆ ಸೂಚಿಸಿದೆ. ಪದವಿಪೂರ್ವ ಶಿಕ್ಷಣ ಇಲಾಖೆಯು 2022-23ನೇ ಶೈಕ್ಷಣಿಕ ವರ್ಷದ ದಾಖಲಾತಿ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಮೇ 20ರಿಂದಲೇ ಪ್ರವೇಶ ಪ್ರಕ್ರಿಯೆ

ಪಿಯು ತರಗತಿಗಳಿಗೆ ಸಮವಸ್ತ್ರ ಮಾರ್ಗಸೂಚಿ ಪ್ರಕಟ| Read More »

ಬಂಟ್ವಾಳ: ಕಾರಿಂಜೇಶ್ವರ ಬೆಟ್ಟದಿಂದ ಉರುಳಿದ ಬಂಡೆ| ಅಕ್ರಮ ಗಣಿಗಾರಿಕೆ ಪರಿಣಾಮವೆಂದ ಸ್ಥಳೀಯರು|

ಸಮಗ್ರ ನ್ಯೂಸ್: ಮಳೆಗಾಲ ಆರಂಭವಾಗುತ್ತಿದ್ದಂತೆ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕಾರಿಂಜೇಶ್ವರನ ಸನ್ನಿದಿಯ ಬಲಭಾಗದಿಂದ ಬೃಹತ್ ಗಾತ್ರದ ಬಂಡೆ ಕಲ್ಲೊಂದು ಉರುಳಿ ಕೆಳಗೆ ಬಿದ್ದಿದೆ. ಘಟನೆಯಿಂದ ಕಾರಿಂಜ ರಸ್ತೆಗೆ ಮರ ಉರುಳಿ ಬಿದ್ದು ಕೆಲ ಹೊತ್ತು ಸಂಚಾರಕ್ಕೆ ಅಡಚಣೆಯಾಗಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರ ನೆರವಿನಿಂದ ರಸ್ತೆಯಲ್ಲಿದ್ದ ಮರಗಳನ್ನು ತೆರವು ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಗುಡ್ಡದಲ್ಲಿರುವ ಕೆಲವು ಮರಗಳಿಗೆ ಹಾನಿಯಾಗಿದೆ. ಬೆಳಿಗ್ಗೆ ಸುಮಾರು 9 ಗಂಟೆಯ ಬಳಿಕ ಕಾರಿಂಜೇಶ್ವರನ ದೇವಾಲಯದ ಸಮೀಪದಲ್ಲೇ

ಬಂಟ್ವಾಳ: ಕಾರಿಂಜೇಶ್ವರ ಬೆಟ್ಟದಿಂದ ಉರುಳಿದ ಬಂಡೆ| ಅಕ್ರಮ ಗಣಿಗಾರಿಕೆ ಪರಿಣಾಮವೆಂದ ಸ್ಥಳೀಯರು| Read More »

ಪಠ್ಯಪುಸ್ತಕಗಳು ಪಕ್ಷ ಪುಸ್ತಕಗಳಾಗುತ್ತಿವೆ. ಬಿಜೆಪಿಯ ಪಟಾಲಂ ವಿಕೃತಿಯ ಪರಾಕಾಷ್ಠೆ – ಮಾಜಿ ಸಿಎಂ ಹೆಚ್ಡಿಕೆ ಕಿಡಿ

ಸಮಗ್ರ ನ್ಯೂಸ್: 10ನೇ ತರಗತಿ ಪಠ್ಯದಲ್ಲಿ ಆರ್.ಎಸ್.ಎಸ್ ಸಂಸ್ಥಾಪಕ ಹೆಡ್ಗೆವಾರ್ ಭಾಷಣ ಸೇರಿಸಿರುವ ಸರ್ಕಾರದ ಕ್ರಮಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದು, ಪಠ್ಯಪುಸ್ತಕಗಳನ್ನು ʼಪಕ್ಷಪುಸ್ತಕʼಗಳನ್ನಾಗಿ ಮಾಡುವ ವ್ಯವಸ್ಥಿತ ಹುನ್ನಾರಕ್ಕೆ ನನ್ನ ಧಿಕ್ಕಾರವಿದೆ. ಬಿಜೆಪಿಯ ನೈಜ ಬಣ್ಣದ ವಿಸ್ತೃತರೂಪವೇ ಆಯ್ದ ಪಠ್ಯಗಳನ್ನು ಟಾರ್ಗೆಟ್‌ ಮಾಡಿ ಡಿಲೀಟ್‌ ಮಾಡುವುದು ಎಂದು ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯ ಈ ಬುಡಮೇಲು ಕೃತ್ಯಗಳ ಬಗ್ಗೆ ನನಗೆ ಅಚ್ಚರಿಯೇನೂ ಇಲ್ಲ. ನನ್ನ ಜತೆ ಮೈತ್ರಿ ಸರಕಾರ ಮಾಡಿದಾಗ ಅವರ ಬೇಳೆ ಬೇಯಲಿಲ್ಲ. ʼಆಪರೇಷನ್‌ ಕಮಲʼದ

ಪಠ್ಯಪುಸ್ತಕಗಳು ಪಕ್ಷ ಪುಸ್ತಕಗಳಾಗುತ್ತಿವೆ. ಬಿಜೆಪಿಯ ಪಟಾಲಂ ವಿಕೃತಿಯ ಪರಾಕಾಷ್ಠೆ – ಮಾಜಿ ಸಿಎಂ ಹೆಚ್ಡಿಕೆ ಕಿಡಿ Read More »

ಮತಾಂತರ ನಿಷೇಧ ಕಾಯ್ದೆಗೆ ರಾಜ್ಯಪಾಲರಿಂದ ಅಂಕಿತ| ಇನ್ಮುಂದೆ ಬಲವಂತದ ಮತಾಂತರಕ್ಕೆ ಬ್ರೇಕ್

ಸಮಗ್ರ ನ್ಯೂಸ್: ಸುಗ್ರೀವಾಜ್ಞೆ ಮೂಲಕ ಜಾರಿಗೆ ಮಾಡಿದ್ದ ಮತಾಂತರ ನಿಷೇಧ ಕಾಯ್ದೆಗೆ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್ ಅಂತಿಮ ಮುದ್ರೆ ಒತ್ತಿದ್ದಾರೆ. ಇಂದಿನಿಂದ ರಾಜ್ಯದಲ್ಲಿ ಕಾನೂನು ಜಾರಿಗೆ ಬರಲಿದೆ. ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆಯನ್ನ ಪಾಸ್‌ ಮಾಡಿತ್ತು. ಇದಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದರಿಂದ ಕಾನೂನು ಈಗ ರಾಜ್ಯದಲ್ಲಿ ಜಾರಿಗೆ ಬರಲಿದೆ. ಈ ಮೂಲಕ ಕರ್ನಾಟಕವು ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತಂದ 9ನೇ ರಾಜ್ಯವಾಗಿದೆ. ಈ ವಿವಾದಾತ್ಮಕ ಕಾನೂನು ‘ಬಲಪ್ರಯೋಗ, ವಂಚನೆ, ಅನಗತ್ಯ ಪ್ರಭಾವ,

ಮತಾಂತರ ನಿಷೇಧ ಕಾಯ್ದೆಗೆ ರಾಜ್ಯಪಾಲರಿಂದ ಅಂಕಿತ| ಇನ್ಮುಂದೆ ಬಲವಂತದ ಮತಾಂತರಕ್ಕೆ ಬ್ರೇಕ್ Read More »

ಮೇ.19ಕ್ಕೆ ಎಸ್ಎಸ್ಎಲ್‌ಸಿ ರಿಸಲ್ಟ್| ಮೊಬೈಲ್ ಗೇ ಬರುತ್ತೆ ಫಲಿತಾಂಶ ಸಂದೇಶ

ಸಮಗ್ರ ನ್ಯೂಸ್: 2021-22ನೇ ಸಾಲಿನ ಕರ್ನಾಟಕ 10ನೇ ತರಗತಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಮೇ.19ರಂದು ಪ್ರಕಟಗೊಳ್ಳಲಿದೆ. ಪರೀಕ್ಷಾ ಮಂಡಳಿಯು ಎಸ್ಎಸ್ ಎಲ್‌ಸಿ ಫಲಿತಾಂಶವನ್ನು ಮೇ 19, 2022 ರಂದು 1 ಗಂಟೆ ಫಲಿತಾಂಶ ಬಿಡುಗಡೆ ಮಾಡಲಿದೆ. ಜೊತೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್ ರವರು ಪತ್ರಿಕಾಗೋಷ್ಠಿ ಮೂಲಕ ರಿಸಲ್ಟ್ ಪ್ರಕಟಿಸಲಿದ್ದಾರೆ. ವಿದ್ಯಾರ್ಥಿಗಳು ವೆಬ್‌ಸೈಟ್‌ಗಳಾದhttp://kseeb.kar.nic.in/ karresults.nic.in ಗೆ ಭೇಟಿ ನೀಡಿ ತಮ್ಮ ಫಲಿತಾಂಶ ಚೆಕ್ ಮಾಡಬಹುದು. ವಿದ್ಯಾರ್ಥಿಗಳು ವೆಬ್‌ಸೈಟ್‌ನಲ್ಲಿ ಮಾತ್ರವಲ್ಲದೇ ತಮ್ಮ ಶಾಲೆಗಳಲ್ಲಿಯೂ, ಎಸ್ಎಂಎಸ್

ಮೇ.19ಕ್ಕೆ ಎಸ್ಎಸ್ಎಲ್‌ಸಿ ರಿಸಲ್ಟ್| ಮೊಬೈಲ್ ಗೇ ಬರುತ್ತೆ ಫಲಿತಾಂಶ ಸಂದೇಶ Read More »