May 2022

ಬೆಳ್ತಂಗಡಿ: ಗೊಡಂಬಿ ಆಕಾರದಲ್ಲಿ ಮೊಟ್ಟೆ ಇಟ್ಟ ಕೋಳಿ

ಸಮಗ್ರ ನ್ಯೂಸ್: ಗೊಡಂಬಿ ರೀತಿಯ ಆಕಾರದಲ್ಲಿ ಕೋಳಿಯೊಂದು ಮೊಟ್ಟೆ ಇಟ್ಟಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಲಾಯ್ಲ ಗ್ರಾಮದ ಬೇಲಾಜೆ ಎಂಬಲ್ಲಿಯ ಪ್ರಶಾಂತ್ ಎಂಬವರ ಮನೆಯಲ್ಲಿ ಸಾಕಿದ್ದ ಕೋಳಿಯೊಂದು ಕಳೆದ ಕೆಲವು ದಿನಗಳಿಂದ ಈ ರೀತಿಯ ಮೊಟ್ಟೆ ಇಡುತ್ತಿದೆ. ಈ ಮೊಟ್ಟೆಗಳನ್ನು ಗಮನಿಸಿದಾಗ ಗೋಡಂಬಿ ರೀತಿಯಲ್ಲಿ ಕಂಡು ಬರುತ್ತಿವೆ. ಮೊಟ್ಟೆಯ ಆಕಾರ ನೋಡಿ ಎಲ್ಲರೂ ಆಶ್ಚರ್ಯ ಪಡುವಂತಾಗಿದೆ.

ಬೆಳ್ತಂಗಡಿ: ಗೊಡಂಬಿ ಆಕಾರದಲ್ಲಿ ಮೊಟ್ಟೆ ಇಟ್ಟ ಕೋಳಿ Read More »

ಮಂಗಳೂರು: ಹೆಚ್ಚುತ್ತಿರುವ ಡೆಂಗ್ಯೂ, ಮಲೇರಿಯಾ| ಮುನ್ನೆಚ್ಚರಿಕೆ ವಹಿಸಲು ಡಿ.ಸಿ ಸೂಚನೆ

ಸಮಗ್ರ ನ್ಯೂಸ್: ಡೆಂಗ್ಯೂ, ಮಲೇರಿಯಾ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ ಅವರ ಮಾರ್ಗದರ್ಶನದಂತೆ ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಆರೋಗ್ಯ ಇಲಾಖೆ, ಕೆಎಸ್ಸಾರ್ಟಿಸಿ, ಮೆಸ್ಕಾಂ, ಪಿಡಬ್ಲ್ಯುಡಿ, ಆರ್‌ಟಿಓ, ಮಹಾ ನಗರ ಪಾಲಿಕೆ ಕಚೇರಿ ಸೇರಿದಂತೆ ನಾನಾ ಕಚೇರಿಗಳ ಸುತ್ತಮುತ್ತ ಸ್ವಚ್ಛತಾ, ಲಾರ್ವ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಮಂಗಳೂರು, ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿಯಲ್ಲಿ ಮಳೆಯಾಗಿದೆ. ಕಳೆದ ಎರಡು ವರ್ಷಗಳಿಂದ ಪುತ್ತೂರು, ಬೆಳ್ತಂಗಡಿಯ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ಡೆಂಗ್ಯೂ,

ಮಂಗಳೂರು: ಹೆಚ್ಚುತ್ತಿರುವ ಡೆಂಗ್ಯೂ, ಮಲೇರಿಯಾ| ಮುನ್ನೆಚ್ಚರಿಕೆ ವಹಿಸಲು ಡಿ.ಸಿ ಸೂಚನೆ Read More »

ಉಡುಪಿ: ಪೆಟ್ರೋಲ್ ಸುರಿದುಕೊಂಡು ಕಾರೊಳಗೆ ಆತ್ಮಹತ್ಯೆಗೆ ಶರಣಾದ ಯುವಜೋಡಿ!? ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಜೋಡಿ?

ಸಮಗ್ರ ನ್ಯೂಸ್: ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಯುವ ಜೋಡಿಯೊಂದು ಕಾರಿನೊಳಗೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉಡುಪಿಯ ಮಂದಾರ್ತಿ ಸಮೀಪದ ಹೆಗ್ಗುಂಜ್ಜೆಯಲ್ಲಿ ನಡೆದಿದೆ. ಮೃತರನ್ನು ಬೆಂಗಳೂರು ಆರ್.ಟಿ.ನಗರದ ಯಶವಂತ ಯಾದವ್, ಜ್ಯೋತಿ ಎಂದು ಗುರುತಿಸಲಾಗಿದೆ.ಮುಂಜಾನೆ 3:00 ಗಂಟೆ ಸುಮಾರಿಗೆ ಹೆಗ್ಗುಂಜ್ಜೆಯಲ್ಲಿ ಸುಡುತ್ತಿದ್ದ ಕಾರು ಪತ್ತೆಯಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಕಾರು ಸುಟ್ಟು ಕರಕಲಾಗಿದೆ. ಸ್ಥಳೀರು ಕಾರಿಗೆ ಹತ್ತಿದ್ದ ಬೆಂಕಿಯನ್ನು ನಂದಿಸಿದಾಗ ಕಾರಿನಲ್ಲಿ ಇಬ್ಬರ ಶವ ಪತ್ತೆಯಾಗಿದ್ದು, ಸ್ವಿಫ್ಟ್​ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಮೃತರು ಕಳೆದ

ಉಡುಪಿ: ಪೆಟ್ರೋಲ್ ಸುರಿದುಕೊಂಡು ಕಾರೊಳಗೆ ಆತ್ಮಹತ್ಯೆಗೆ ಶರಣಾದ ಯುವಜೋಡಿ!? ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಜೋಡಿ? Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಸಮಯ ಎನ್ನುವುದು ನಮ್ಮ ಬದುಕಿನ ಪಾಠವನ್ನು ಕಲಿಸುತ್ತದೆ. ಸಮಯಕ್ಕೆ ತಕ್ಕಂತೆ ನಾವು ನಮ್ಮನ್ನು ಬದಲಿಸಿಕೊಳ್ಳುವ ಕೌಶಲ್ಯವನ್ನು ಕಲಿತಿರಬೇಕು. ಇಲ್ಲವಾದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಬದಲಾವಣೆ ಎನ್ನುವುದು ನಿರಂತರವಾಗಿ ಹರಿಯುವ ನದಿಯಂತೆ ಅದು ಹೇಗೆ ಬರುತ್ತದೆಯೋ ಹಾಗೆ ನಾವು ಸ್ವೀಕರಿಸಬೇಕಾಗುವುದು.ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಾರ ಸಾಕಷ್ಟು ಗ್ರಹಗಳ ಬದಲಾವಣೆಗಳು ಉಂಟಾಗುವುದು ಅವುಗಳ ಪ್ರಭಾವ ರಾಶಿಚಕ್ರಗಳ ಮೇಲೆ ಗಣನೀಯವಾಗಿರುತ್ತವೆ. ಆ ಬದಲಾವಣೆಗಳು ನಿಮ್ಮ ಜೀವನದಲ್ಲಿ ಹೇಗಿರುತ್ತದೆ ಎನ್ನುವುದನ್ನು ತಿಳಿಯೋಣ… ಮೇಷ ರಾಶಿ:ಸಾರ್ವಜನಿಕ ಕಾರ್ಯಕ್ರಮದ ಜವಾಬ್ದಾರಿಯನ್ನು ಮುನ್ನಡೆಸುವ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಸುಳ್ಯ: ಶಾಂತಿನಗರ ತಾಲೂಕು ಕ್ರೀಡಾಂಗಣದಲ್ಲಿ ಬಿರುಕು| ಗುಡ್ಡ ಕುಸಿತದ ಭೀತಿಯಲ್ಲಿ‌ ನಿವಾಸಿಗಳು

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯ ನಗರದ ಹೊರವಲಯದ ಶಾಂತಿನಗರ ಎಂಬಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ತಾಲೂಕು ಕ್ರೀಡಾಂಗಣದ ಅಭಿವೃದ್ಧಿ ಕಾಮಗಾರಿಯು ಇದೀಗ ಅಪಾಯವನ್ನು ತಂದೊಡ್ಡಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಕ್ರೀಡಾಂಗಣ ಬಿರುಕು ಬಿಟ್ಟಿದ್ದು ಸ್ಥಳೀಯ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ. ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸುಳ್ಯ ಶಾಸಕ ಹಾಗೂ ಸಚಿವ ಎಸ್. ಅಂಗಾರ ಅವರ ಮುತುವರ್ಜಿಯಲ್ಲಿ ಈ ಕ್ರೀಡಾಂಗಣದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.‌ ಈ ಹಿಂದೆ ಇದ್ದಂತಹ ಕ್ರೀಡಾಂಗಣವು ನೆಲ ಮಟ್ಟದಿಂದ ಎತ್ತರದಲ್ಲಿ

ಸುಳ್ಯ: ಶಾಂತಿನಗರ ತಾಲೂಕು ಕ್ರೀಡಾಂಗಣದಲ್ಲಿ ಬಿರುಕು| ಗುಡ್ಡ ಕುಸಿತದ ಭೀತಿಯಲ್ಲಿ‌ ನಿವಾಸಿಗಳು Read More »

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆ

ಸಮಗ್ರ ನ್ಯೂಸ್: ವಾಹನ ಸವಾರರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರಿಗೆ 8 ರೂ. ಇಳಿಕೆ ಮಾಡಲಾಗಿದೆ. ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರಿಗೆ 6 ರೂ. ಇಳಿಕೆ ಮಾಡಲಾಗಿದೆ.ಅಬಕಾರಿ ಸುಂಕ ಕಡಿತವಾದ ಹಿನ್ನೆಲೆಯಲ್ಲಿ ಒಂದು ಲೀಟರ್ ಪೆಟ್ರೋಲ್ ದರ 9.5 ರೂಪಾಯಿ ಇಳಿಕೆಯಾಗಿದೆ. ನಾವು ಪೆಟ್ರೋಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 8 ರೂ. ಮತ್ತು ಡೀಸೆಲ್‌ ನ ಮೇಲೆ 6 ರೂ.ನಷ್ಟು ಕಡಿಮೆ

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆ Read More »

ಕುಕ್ಕೆ: ಬೀದಿಗೆ ಬಂದ ಆಡಳಿತ ಮಂಡಳಿ, ಕಾರ್ಯನಿರ್ವಹಣಾಧಿಕಾರಿ ನಡುವಿನ ಒಳಜಗಳ| ನಿಂಗಯ್ಯ ವಿರುದ್ದ ದೂರಿನ ಸರಮಾಲೆ ಸಲ್ಲಿಸಿದ ಮೋಹನ್ ರಾಂ ಸುಳ್ಳಿ|

ಸಮಗ್ರ ನ್ಯೂಸ್: ದಕ್ಷಿಣ ಕನ್ನಡದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿ ಹಾಗೂ ಕಾರ್ಯ ನಿರ್ವಹಣಾಧಿಕಾರಿ ನಡುವಿನ ಜಟಾಪಟಿ ತಾರಕಕ್ಕೇರಿದೆ. ಉಭಯ ಬಣಗಳು ಪರಸ್ಪರ ದೂರು ಪ್ರತಿ ದೂರಿನಲ್ಲಿ ತೊಡಗಿವೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಪ್ರಸಿದ್ಧ ಕ್ಷೇತ್ರ ಮಾತ್ರವಲ್ಲದೆ, ರಾಜ್ಯದಲ್ಲಿ ಅತಿಹೆಚ್ಚು ಆದಾಯ ಬರುವ ಸ್ಥಳವೂ ಹೌದು. ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಈ ದೇವಸ್ಥಾನದಲ್ಲಿ ಆಡಳಿತ ಮಂಡಳಿ – ಕಾರ್ಯ ನಿರ್ವಹಣಾಧಿಕಾರಿ ನಡುವಿನ ಜಟಾಪಟಿ ಬೀದಿಗೆ ಬಂದಿದೆ. ಆಡಳಿತ ಮಂಡಳಿ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ವಿರುದ್ಧ

ಕುಕ್ಕೆ: ಬೀದಿಗೆ ಬಂದ ಆಡಳಿತ ಮಂಡಳಿ, ಕಾರ್ಯನಿರ್ವಹಣಾಧಿಕಾರಿ ನಡುವಿನ ಒಳಜಗಳ| ನಿಂಗಯ್ಯ ವಿರುದ್ದ ದೂರಿನ ಸರಮಾಲೆ ಸಲ್ಲಿಸಿದ ಮೋಹನ್ ರಾಂ ಸುಳ್ಳಿ| Read More »

ಮರ್ಯಾದಾ ಹತ್ಯೆ; ಅನ್ಯ ಜಾತಿಯ ಯುವತಿಯ ಮದುವೆಯಾಗಿದ್ದಕ್ಕೆ ಯುವಕನ ಕೊಲೆ

ಸಮಗ್ರ ನ್ಯೂಸ್: ಅನ್ಯ ಜಾತಿಯ ಯುವತಿಯನ್ನು ಮದುವೆ ಆಗಿದ್ದಕ್ಕೆ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹೈದರಾಬಾದ್​ನ ಬೇಗುಂ ಬಜಾರ್​ನಲ್ಲಿ ನಡೆದಿದೆ. ಐದು ಮಂದಿಯ ಗ್ಯಾಂಗ್​ ಯುವನನ್ನು ನಡುರಸ್ತೆಯಲ್ಲೇ ಕುಟುಂಬದ ಎದುರಲ್ಲೇ ಮಾರಕಾಸ್ತ್ರಗಳಿಂದ ಇರಿದು ಕೊಂದಿದ್ದಾರೆ. ಈ ಘಟನೆ ಶುಕ್ರವಾರ ರಾತ್ರಿ 7.30ರ ಸುಮಾರಿಗೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಶಾಹಿನಾಯತ್‌ಗುಂಜ್ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈವರೆಗೂ ಕೊಲೆಗಾರರ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿ ದೊರೆತಿಲ್ಲ. ಮಾಹಿತಿ ಕಲೆಹಾಕುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಮೃತ

ಮರ್ಯಾದಾ ಹತ್ಯೆ; ಅನ್ಯ ಜಾತಿಯ ಯುವತಿಯ ಮದುವೆಯಾಗಿದ್ದಕ್ಕೆ ಯುವಕನ ಕೊಲೆ Read More »

ಮಂಗಳೂರು: ಜೊತೆಯಾಗಿ ಬರೆದ ತಾಯಿ- ಮಗಳು ಎಸ್ಎಸ್ಎಲ್ಸಿ ಪಾಸ್

ಸಮಗ್ರ ನ್ಯೂಸ್: ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ಜತೆಯಾಗಿ ಬರೆದಿದ್ದ ಮಂಗಳೂರು ತಾಲೂಕಿನ ಉಳ್ಳಾಲದ ತಾಯಿ ಹಾಗೂ ಮಗಳು ಇಬ್ಬರು ಕೂಡ ತೇರ್ಗಡೆಯಾಗಿದ್ದಾರೆ. ಮುನ್ನೂರು ಗ್ರಾಮದ ತೇವುಲ ನಿವಾಸಿ ಮಮತಾ ರಮೇಶ್ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು ತೇರ್ಗಡೆಯಾಗಿದ್ದು, ಈಕೆಯ ಪುತ್ರಿ ಖುಷಿಯೂ ಆಂಗ್ಲಮಾಧ್ಯಮ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಳೆ. 21 ವರ್ಷಗಳ ಹಿಂದೆ ವಿದ್ಯಾರ್ಥಿ ಜೀವನದಲ್ಲಿ ಸ್ವಯಂ ನಿರ್ಧಾರದಿಂದ ಎಸ್ ಎಸ್ ಎಲ್ ಸಿ ಕಲಿಯುವ

ಮಂಗಳೂರು: ಜೊತೆಯಾಗಿ ಬರೆದ ತಾಯಿ- ಮಗಳು ಎಸ್ಎಸ್ಎಲ್ಸಿ ಪಾಸ್ Read More »

ಸುಳ್ಯ: ಶಾಂತಿನಗರ ಕ್ರೀಡಾಂಗಣ ಸಮಸ್ಯೆಗೆ ಕಾಂಗ್ರೆಸ್ ಎಂಟ್ರಿ| ಗುಡ್ಡ ಅಗೆದು ದುಡ್ಡು ಮಾಡಲು ಹೊರಟ ಶಾಸಕ ಎಸ್.ಅಂಗಾರ- ಪಿ ಸಿ ಜಯರಾಮ್ ಆರೋಪ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಹೊರವಲಯದ ಶಾಂತಿನಗರ ಎಂಬಲ್ಲಿ ನಢಯುತ್ತಿರುವ ಕ್ರೀಡಾಂಗಣ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ತೊಂದರೆಯಾಗುತ್ತಿದ್ದು, ಈ ಕುರಿತಂತೆ ಕಾಂಗ್ರೆಸ್ ಮುಖಂಡರು ಇಂದು ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಕಾಮಗಾರಿಯ ಅವ್ಯವಸ್ಥೆ ಬಗ್ಗೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದ ಘಟನೆ ಮೇ 20 ರಂದು ನಡೆದಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಮುಖಂಡರುಗಳು ಮೊದಲಿಗೆ ಅಪಾಯದ ಸ್ಥಿತಿಯಲ್ಲಿರುವ ಮಣ್ಣಿನ ರಾಶಿ ಮತ್ತು, ಕ್ರೀಡಾಂಗಣದಿಂದ ಹರಿಯುವ ನೀರು

ಸುಳ್ಯ: ಶಾಂತಿನಗರ ಕ್ರೀಡಾಂಗಣ ಸಮಸ್ಯೆಗೆ ಕಾಂಗ್ರೆಸ್ ಎಂಟ್ರಿ| ಗುಡ್ಡ ಅಗೆದು ದುಡ್ಡು ಮಾಡಲು ಹೊರಟ ಶಾಸಕ ಎಸ್.ಅಂಗಾರ- ಪಿ ಸಿ ಜಯರಾಮ್ ಆರೋಪ Read More »