ಸಮಗ್ರ ನ್ಯೂಸ್: ಅಮೇಜಾನ್ ನಲ್ಲಿ ಮಾರಾಟಕ್ಕೆ ಇರುವ ಹಾಗೂ ಈಗಾಗಲೇ ಸೋಲ್ಡ್ ಔಟ್ ಆಗಿರುವ ಬಕೆಟ್ ನ ಫೋಟೋ ಇಂಟರ್ ನೆಟ್ ನಲ್ಲಿ ವೈರಲ್ ಆಗಿದೆ. ಈ ಬಕೆಟ್ ನ ಫೋಟೋ ಕಂಡು ಬಳಕೆದಾರರು ಅಚ್ಚರಿ ವ್ಯಕ್ತಪಡಿಸಲು ಕಾರಣ, ಅದಕ್ಕೆ ನಿಗದಿಯಾಗಿರುವ ಬೆಲೆ.
“ಪ್ಲಾಸ್ಟಿಕ್ ಬಕೆಟ್ ಫಾರ್ ಹೋಮ್ ಅಂಡ್ ಬಾತ್‌ರೂಮ್ ಸೆಟ್ ಆಫ್ 1” ಎಂಬ ಶೀರ್ಷಿಕೆಯ ಐಟಂ ಅನ್ನು ಇ-ಕಾಮರ್ಸ್ ವೆಬ್‌ಸೈಟ್ ಅಮೇಜಾನ್ ನಲ್ಲಿ ದಾಖಲೆಯ ₹ 25,999 ಗೆ ಮಾರಾಟ ಮಾಡಲಾಗುತ್ತಿದೆ. ಇದು ಇನ್ನೂ ವಿಚಿತ್ರವಾದ ಸಂಗತಿಯೆಂದರೆ, ಈ ಬಕೆಟ್ ನ ಮೂಲ ಬೆಲೆ 35, 990 ರೂಪಾಯಿ. ಗ್ರಾಹಕರಿಗೆ ಶೇ. 28ರ ರಿಯಾಯಿತಿಯಲ್ಲಿ 25,999 ರೂಪಾಯಿಗೆ ಸಿಗುತ್ತಿದೆ. ಇನ್ನೂ ಅಚ್ಚರಿಯ ವಿಚಾರವೆಂದರೆ, ಈ ಬಕೆಟ್ ನೀವು ಬುಕ್ ಮಾಡಿದರೆ ಸಿಗೋದಿಲ್ಲ. ಸಾಕಷ್ಟು ಬೇಡಿಕೆಯಿರುವ ಈ ಬಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದೆ!
ಈ ಫೋಟೋವನ್ನು @vivekraju93 ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡದ್ದು, “ಅಮೆಜಾನ್‌ನಲ್ಲಿ ಇದನ್ನು ಈಗ ತಾನೆ ನೋಡಿದೆ ಮತ್ತು ನನಗೆ ಏನು ಮಾಡಬೇಕೆಂದು ತೋಚುತ್ತಿಲ್ಲ’ ಎಂದು ಬರೆದುಕೊಂಡಿದ್ದಾರೆ. ಇನ್ನು @shubhi1011 ಎನ್ನುವ ಟ್ವಿಟರ್ ಬಳಕೆದಾರರು, ಚಿತ್ರವನ್ನು ಹಂಚಿಕೊಂಡಿದ್ದು, “ಅಚ್ಚರಿಯ ಸಂಗತಿ ಏನೆಂದರೆ, ಕೇವಲ 1 ಬಕೆಟ್ ಮಾತ್ರವೇ ಸ್ಟಾಕ್ ನಲ್ಲಿ ಇದೆ ಎನ್ನುವುದು’ ಎಂದು ಬರೆದಿದ್ದಾರೆ.
ಆನ್‌ಲೈನ್ ಶಾಪಿಂಗ್‌ನಲ್ಲಿ ಬೆಲೆ ಏರಿಳಿತಗಳು ಮತ್ತು ಏರಿಕೆಗಳು ನಿಯಮಿತವಾಗಿರುತ್ತದೆ. ಆದರೆ ಕೆಲವು ಬೆಲೆ ಪಟ್ಟಿಗಳು ಕೆಲವೊಮ್ಮೆ ಅತಿರೇಕ ಎನಿಸುತ್ತಿರುತ್ತದೆ. ಬಕೆಟ್‌ನ ಸ್ಕ್ರೀನ್‌ಶಾಟ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ನಂತರ, ಕೆಲವು ನೆಟಿಜನ್‌ಗಳು ತಾಂತ್ರಿಕ ದೋಷದಿಂದ ಹೀಗಾಗಿದೆ ಎಂದು ಹೇಳಿದ್ದರೆ, ಇನ್ನೂ ಕೆಲವರು EMI ನಲ್ಲಿ ಬಕೆಟ್ ಕೂಡ ಲಭ್ಯವಾಗುತ್ತಿರುವುದಕ್ಕೆ ಬಹಳ ಸಂತೋಷವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
Just found this on Amazon and I don't know what to do pic.twitter.com/hvxTqGYzC4
— Vivek Raju (@vivekraju93) May 23, 2022