Ad Widget .

ರಾಜ್ಯಸಭಾ ಚುನಾವಣೆ; ಆಪ್ ನಿಂದ ಇಬ್ಬರು ಪದ್ಮಶ್ರೀ ಪುರಸ್ಕೃತ ಅಭ್ಯರ್ಥಿಗಳ ನಾಮ ನಿರ್ದೇಶನ

ಸಮಗ್ರ ನ್ಯೂಸ್: ಮುಂಬರುವ ಚುನಾವಣೆ ಹಿನ್ನಲೆಯಲ್ಲಿ ಇಬ್ಬರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರನ್ನು ಆಮ್‌ ಆದ್ಮಿ ಪಕ್ಷವು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ನಾಮ ನಿರ್ದೇಶನ ಮಾಡಿದೆ.

Ad Widget . Ad Widget .

ಪಂಜಾಬ್‌ನ ಇಬ್ಬರು ರಾಜ್ಯಸಭಾ ಸದಸ್ಯರಾದ ಅಂಬಿಕಾ ಸೋನಿ (ಕಾಂಗ್ರೆಸ್) ಮತ್ತು ಬಲ್ವಿಂದರ್ ಸಿಂಗ್ ಭುಂದರ್ (ಶಿರೋಮಣಿ ಅಕಾಲಿ ದಳ) ಅವರ ಅವಧಿ ಜುಲೈನಲ್ಲಿ ಕೊನೆಗೊಳ್ಳಲಿದೆ.

Ad Widget . Ad Widget .

ಆ ಸ್ಥಾನಗಳಿಗೆ ಪದ್ಮಶ್ರೀ ಪುರಸ್ಕೃತರಾದ ಪರಿಸರ ಕಾರ್ಯಕರ್ತ ಬಾಬಾ ಬಲ್ಬೀರ್ ಸಿಂಗ್ ಸೀಚೆವಾಲ್ ಮತ್ತು ಉದ್ಯಮಿ- ಸಾಮಾಜಿಕ ಕಾರ್ಯಕರ್ತ ವಿಕ್ರಮಜಿತ್ ಸಿಂಗ್ ಅವರನ್ನು ಆಮ್‌ ಆದ್ಮೀ ಪಕ್ಷದ ಪರವಾಗಿ ಕಣಕ್ಕಿಳಿಸಲಾಗಿದೆ. ಈ ಕುರಿತು ಟ್ವಿಟ್‌ ಮಾಡಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಇಬ್ಬರೂ ಅಭ್ಯರ್ಥಿಗಳಿಗೆ ಶುಭಾಶಯ ಕೋರಿದ್ದಾರೆ

Leave a Comment

Your email address will not be published. Required fields are marked *