Ad Widget .

ಮಂಗಳೂರು:: ಹಿಜಾಬ್ ಕುರಿತಂತೆ ಡಿಸಿ ಕಚೇರಿ ಬಾಗಿಲು ತಟ್ಟಿದ ವಿದ್ಯಾರ್ಥಿನಿಯರು| ಸಿಂಡಿಕೇಟ್ ನಿರ್ಣಯ ರದ್ದುಪಡಿಸಲಾಗದು ಎಂದ ಜಿಲ್ಲಾಧಿಕಾರಿ|

ಸಮಗ್ರ ನ್ಯೂಸ್: ಮಂಗಳೂರು ವಿಶ್ವವಿದ್ಯಾನಿಲಯದ ಕೆಲ ಕಾಲೇಜಿನಲ್ಲಿ ಹಿಜಾಬ್ ವಿವಾದ ಮತ್ತೆ ಸದ್ದು ಮಾಡುತ್ತಿದೆ. ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ಕೋರಿ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ.

Ad Widget . Ad Widget .

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅನುಮತಿಗಾಗಿ ವಿದ್ಯಾರ್ಥಿನಿಯರು ಡಿ.ಸಿ ಕಚೇರಿಗೆ ತೆರಳಿದ್ದರು. ಇಂದು ಜಿಲ್ಲಾಧಿಕಾರಿಗಳು ವಿದ್ಯಾರ್ಥಿನಿಯರ ಜೊತೆಗೆ ಸಭೆ ನಡೆಸಿದ್ದು, ಬಳಿಕ ಮಾತಾಡಿದ ಜಿಲ್ಲಾಧಿಕಾರಿಗಳು ಸಿಂಡಿಕೇಟ್ ಸಭೆಯ ನಿರ್ಣಯವನ್ನು ಪಾಲಿಸಲು ಸೂಚಿಸಿದ್ದಾಗಿ ತಿಳಿಸಿದ್ದಾರೆ. ಸಭೆಯಲ್ಲಿ ಮಂಗಳೂರು ವಿವಿ ಕಾಲೇಜಿನ ಪ್ರಾಂಶುಪಾಲೆ ಅನುಸೂಯ ಅವರು ಕೂಡ ಭಾಗಿಯಾಗಿದ್ದರು.

Ad Widget . Ad Widget .

ಸಭೆಯ ಬಳಿಕ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ ವಿ ರಾಜೇಂದ್ರ, ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸಭೆಯಲ್ಲಿ ಹಿಜಾಬ್ ಕಡ್ಡಾಯ ಮಾಡಿದ ಬಗ್ಗೆ ಆಕ್ಷೇಪಿಸಿದ ವಿದ್ಯಾರ್ಥಿನಿಯರು ಸಭೆಯಲ್ಲಿ ಭಾಗಿಯಾಗಿದ್ದರು. ಸಿಂಡಿಕೇಟ್ ಸಭೆಯ ನಿರ್ಧಾರವನ್ನು ಬದಲಿಸಲು ಜಿಲ್ಲಾಮಟ್ಟದಲ್ಲಿ ಸಾಧ್ಯವಿಲ್ಲ. ಸಿಂಡಿಕೇಟ್ ಸಭೆಯ ನಿರ್ಧಾರವನ್ನು ಕಾಲೇಜಿನೊಳಗೆ ಪಾಲಿಸಬೇಕು. ಇದನ್ನು ಕಾನೂನು ರೀತ್ಯವಾಗಿ ನೋಡಬೇಕಾಗುತ್ತದೆಯೇ ಹೊರತು ಕಾಲೇಜಿನ ಆವರಣದಲ್ಲಿ ಶಾಂತಿ ಭಂಗವಾಗದಂತೆ ನೋಡಿಕೊಳ್ಳಬೇಕು ಎಂದರು.

ನಿರ್ಣಯ ಆದೇಶ ಪತ್ರವನ್ನು ಕೊಡಿಸುವುದಾಗಿ ತಿಳಿಸಿದ್ದೇನೆ. ಸಿಂಡಿಕೇಟ್ ನಿರ್ಧಾರವನ್ನು ಪಾಲನೆ ಮಾಡುವ ಕುರಿತು ವಿದ್ಯಾರ್ಥಿಗಳಿಗೆ ತಿಳಿ ಹೇಳಲಾಗಿದೆ ಎಂದರು. ಹೈಕೋರ್ಟ್ ಆದೇಶದ ಅನ್ವಯ ಆಯಾ‌ ಸಂಸ್ಥೆಗಳು ನಿರ್ಧಾರ ತೆಗೆದುಕೊಳ್ಳುತ್ತವೆ. ಈ ಕಾಲೇಜಿನಲ್ಲಿ ಆದೇಶದ ವಿರುದ್ಧವಾದ ನಿರ್ಣಯ ತೆಗೆದುಕೊಂಡಿದ್ದಾರೆ, ಕಾನೂನು ರೀತಿಯಲ್ಲಿ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದೇವೆ ಎಂದರು. ಕ್ಯಾಂಪಸ್ ನಲ್ಲಿ ಕಾನೂನು ಕೈಗೆ ತೆಗೆದುಕೊಳ್ಳಬಾರದು, ಕಾಲೇಜಿನಲ್ಲಿ ನಿಯಮ ಉಲ್ಲಂಘನೆ ಮಾಡಬಾರದು ಹಾಗೂ ಕಾಲೇಜು ಒಳಗೆ ಶಾಂತಿ ಭಂಗ ಮಾಡಬಾರದು ಎಂದು ಡಿಸಿ ತಿಳಿಸಿದ್ದಾರೆ.

ಇನ್ನು ಕಾಲೇಜಿನಲ್ಲಿ ಹಿಜಾಬ್ ಧರಿಸಲು ಪಟ್ಟು ಹಿಡಿದ ವಿದ್ಯಾರ್ಥಿನಿ, ಈ ಬಗ್ಗೆ ​ಡಿಸಿ ಅವರ ಬಳಿ ಹೋಗಿ ಮಾತನಾಡಿದ್ದೇವೆ. ಡಿಸಿಯವರ ಮಾತಿನಲ್ಲಿ ಅಸಹಾಯಕತೆ ಗೊತ್ತಾಗುತ್ತಿದೆ. ಈ ಆದೇಶ ಸಿಂಡಿಕೇಟ್​ನಿಂದ ಬಂದಿದ್ದು, ಜಿಲ್ಲಾಧಿಕಾರಿಯಿಂದ ಏನು ಮಾಡಲು ಸಾಧ್ಯವಿಲ್ಲ ಎಂದು ಗೊತ್ತಾಯಿತು ಎಂದರು. ದಾಖಲೆ ಇರುವುದರಿಂದ ಕಾನೂನಾತ್ಮಕ ಹೋರಾಟ ಮಾಡಿ ಎಂಬ ಅಭಿಪ್ರಾಯ ನೀಡಿದ್ದಾರೆ.

ಕರ್ನಾಟಕದ ಹಿಜಾಬ್ ವಿವಾದಕ್ಕೂ ನಮ್ಮ ಕಾಲೇಜಿನ ಹಿಜಾಬ್ ವಿವಾದಕ್ಕೂ ಸಂಬಂಧ ಇಲ್ಲ. ABVP ಒತ್ತಡದಿಂದ ನಮ್ಮ‌ ಸಿಂಡಿಕೇಟ್ ಹಿಜಾಬ್ ನಿಷೇಧದ ಆದೇಶ ಮಾಡಿದೆ. ಇದು ಹೈಕೋರ್ಟ್ ವರೆಗೂ ಹೋಗುವ ವಿಚಾರವಲ್ಲ, ವಿಶ್ವವಿದ್ಯಾಲಯದ ಮಟ್ಟದಲ್ಲೇ ಸಮಸ್ಯೆ ಬಗೆಹರಿಸಬಹುದು ಎಂದು ಗೌಸಿಯಾ ಹೇಳಿದ್ದಾರೆ.

Leave a Comment

Your email address will not be published. Required fields are marked *