Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಈ ವಾರ ನಿಮ್ಮ ಭವಿಷ್ಯಕ್ಕೆ ಯಾವೆಲ್ಲಾ ಬದಲಾವಣೆಯನ್ನು ಉಂಟುಮಾಡುತ್ತದೆ? ಈ ವಾರ ನೆಮ್ಮದಿಯ ಜೊತೆಗೆ ಒಂದಿಷ್ಟು ಖುಷಿಯನ್ನು ನೀಡುವುದೇ ಎಂದು ತಿಳಿದುಕೊಳ್ಳಲು ಈ ಮುಂದೆ ವಿವರಿಸಲಾದ ರಾಶಿ ಭವಿಷ್ಯವನ್ನು ತಿಳಿಯೋಣ.

Ad Widget . Ad Widget .

ಮೇಷ ರಾಶಿ:
ಉನ್ನತ ಅಧಿಕಾರಿಗಳ ಅನುಗ್ರಹದಿಂದಾಗಿ ವೃತ್ತಿಯಲ್ಲಿ ಸಾಕಷ್ಟು ಅನುಕೂಲ ಒದಗುತ್ತದೆ. ಅನಿರೀಕ್ಷಿತ ಧನಾಗಮನದಿಂದ ನಿಮಗೆ ಅಚ್ಚರಿ. ಹಣದ ಹರಿವು ಉತ್ತಮ. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಬೇಕಾದ ಸವಲತ್ತುಗಳು ದೊರೆಯುವುದರ ಜೊತೆಗೆ ಉತ್ತಮ ಫಲಿತಾಂಶ ಸಿಗುವ ಯೋಗವಿದೆ. ಬಂಧುಗಳ ಜೊತೆಗಿದ್ದ ಕೆಲವು ಜಂಜಾಟಗಳು ನಿವಾರಣೆಯಾಗುತ್ತದೆ. ಆಹಾರ ವಸ್ತುಗಳನ್ನು ಉತ್ಪಾದನೆ ಮಾಡುವವರಿಗೆ ವ್ಯವಹಾರ ವೃದ್ಧಿಸುತ್ತದೆ. ನೀವು ಇಚ್ಛೆಪಟ್ಟಿದ್ದ ಆಸ್ತಿಯ ಬೆಲೆ ಹೆಚ್ಚಾಗಬಹುದು. ಕಬ್ಬಿಣದ ವ್ಯಾಪಾರಿಗಳಿಗೆ ಹೆಚ್ಚು ವ್ಯವಹಾರ ನಡೆಯುತ್ತದೆ. ಕಟ್ಟಡ ನಿರ್ಮಾಣ ಮಾಡುವವರಿಗೆ ಹೊಸ ನಿರ್ಮಾಣ ಗುತ್ತಿಗೆಗಳು ದೊರೆಯುವ ಸಂದರ್ಭವಿದೆ.

Ad Widget . Ad Widget .

ವೃಷಭ ರಾಶಿ:
ನೌಕರರು ಮಾಡುವ ತಪ್ಪಿಗೆ ಹಿರಿಯ ಅಧಿಕಾರಿಗಳು ಮುಜುಗರ ಪಡುವ ಸಂದರ್ಭವಿದೆ. ನಿಂತುಹೋಗಿರುವ ನಿಮ್ಮ ಕೆಲವು ಯೋಜನೆಗಳು ಪುನಃ ಚಾಲನೆ ಪಡೆಯುತ್ತವೆ. ಕೆಲವರಿಗೆ ಜನರಿಂದ ಪುರಸ್ಕಾರ ಪಡೆಯುವ ಯೋಗವಿದೆ. ಪ್ರಾಪ್ತ ವಯಸ್ಕರಿಗೆ ವಿವಾಹ ಸಂಬಂಧ ಒದಗುವ ಸಾಧ್ಯತೆ ಇದೆ. ಮಹಿಳೆಯರಿಗೆ ಆಭರಣ ಕೊಳ್ಳುವ ಯೋಗವಿದೆ. ಅತಿಯಾದ ಆತ್ಮಗೌರವ ನಿಮ್ಮನ್ನು ಕಾಡಬಹುದು. ಹಣದ ಒಳಹರಿವು ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ಇರುತ್ತದೆ. ಒಡಹುಟ್ಟಿದವರಿಂದ ನೀವು ನಿರೀಕ್ಷೆ ಮಾಡುವ ಸಹಾಯ ಸಿಗದೇ ಇರಬಹುದು. ಸ್ಥಿರಾಸ್ತಿಯನ್ನು ಈಗ ಕೊಳ್ಳಬಹುದು. ಗಣಿತ ವಿಷಯವನ್ನು ಐಚ್ಛಿಕವಾಗಿ ಓದುತ್ತಿರುವವರಿಗೆ ಉತ್ತಮ ಫಲಿತಾಂಶವಿರುತ್ತದೆ. ಹೊಟ್ಟೆಗೆ ಸಂಬಂಧಪಟ್ಟ ಅನಾರೋಗ್ಯ ಬಾಧಿಸಬಹುದು.

ಮಿಥುನ ರಾಶಿ:
ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳು ಇವೆ. ಆಕಸ್ಮಿಕ ಧನ ಲಾಭವಾಗುವ ಸಾಧ್ಯತೆ ಕಾಣುತ್ತಿದೆ. ಗೃಹ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಬಹುದು. ವಿದೇಶಿ ವ್ಯವಹಾರ ಮಾಡುವವರಿಗೆ ಹೆಚ್ಚಿನ ಲಾಭ ಬರುವ ಸಾಧ್ಯತೆ ಇದೆ. ವಸ್ತ್ರವಿನ್ಯಾಸಕಾರರಿಗೆ ಬೇಡಿಕೆ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಇರುತ್ತದೆ. ಹರಿತವಾದ ಆಯುಧಗಳನ್ನು ಉಪಯೋಗಿಸುವಾಗ ಎಚ್ಚರವಿರಲಿ. ಸಂಗಾತಿಗೆ ಅವರ ತಂದೆಯಿಂದ ಆಸ್ತಿ ದೊರಕುವ ಸಾಧ್ಯತೆಗಳಿವೆ. ಕೃಷಿ ಯಂತ್ರೋಪಕರಣಗಳನ್ನು ತಯಾರಿಸಿ ಮಾರಾಟ ಮಾಡುವವರಿಗೆ ಹೆಚ್ಚು ವ್ಯಾಪಾರವಾಗುತ್ತದೆ. ಹೊರ ದೇಶಕ್ಕೆ ಸಿದ್ಧಪಡಿಸಿದ ಆಹಾರ ವಸ್ತುಗಳನ್ನು ರಪ್ತು ಮಾಡುವವರಿಗೆ ಲಾಭ ಹೆಚ್ಚುತ್ತದೆ. ಕೃಷಿ ಸಂಶೋಧನೆಗಳನ್ನು ಮಾಡುವವರಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ.

ಕಟಕ ರಾಶಿ:
ನಿಮ್ಮ ಒಳ್ಳೆಯತನವನ್ನು ಕೆಲವರು ದುರುಪಯೋಗಪಡಿಸಿಕೊಳ್ಳುವರು, ಈ ಬಗ್ಗೆ ಎಚ್ಚರವಹಿಸಿ. ನಿಮ್ಮ ನಿರೀಕ್ಷೆಯಷ್ಟು ಹಣದ ಒಳಹರಿವು ಇರುತ್ತದೆ. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಸಾಕಷ್ಟು ಯಶಸ್ಸನ್ನು ಕಾಣಬಹುದು. ಅನವಶ್ಯಕ ವ್ಯವಹಾರಗಳಿಂದ ಮುಕ್ತಿಯನ್ನು ಹೊಂದುವಿರಿ. ಹಿರಿಯರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯನ್ನು ಈಗ ಕಾಣಬಹುದು. ನಿಮಗೆ ಬರಬೇಕಾಗಿದ್ದ ಹಣವನ್ನು ಈಗ ವಸೂಲಿ ಮಾಡಬಹುದು. ಕೌಟುಂಬಿಕ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ತಾರ್ಕಿಕ ಅಂತ್ಯ ಸಿಗುವ ಲಕ್ಷಣಗಳಿವೆ. ನಿಮ್ಮ ಕೆಲಸ ಕಾರ್ಯಗಳಿಗೆ ಒಡಹುಟ್ಟಿದವರಿಂದ ಸಹಾಯ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಉತ್ತಮ ಅವಕಾಶಗಳು ದೊರೆಯುತ್ತವೆ.

ಸಿಂಹ ರಾಶಿ:
ಉನ್ನತ ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗಿರುವವರಿಗೆ ಅಪೇಕ್ಷಿಸುತ್ತಿದ್ದ ಸೌಕರ್ಯಗಳು ಈಗ ದೊರೆಯುತ್ತದೆ. ಮಧ್ಯವರ್ತಿಗಳನ್ನು ಕೈಬಿಟ್ಟು ನೀವೇ ನೇರವಾಗಿ ಅಧಿಕಾರಿಗಳನ್ನು ಭೇಟಿಯಾದಲ್ಲಿ ನಿಮ್ಮ ಕೆಲಸಗಳು ಆಗುತ್ತದೆ. ಸಣ್ಣಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಲೇಬೇಕಾಗುತ್ತದೆ. ಸಗಟು ವಸ್ತ್ರಗಳನ್ನು ಮಾರಾಟ ಮಾಡುವವರಿಗೆ ವ್ಯವಹಾರ ವೃದ್ಧಿ ಆಗುತ್ತದೆ. ಆಭರಣಗಳನ್ನು ತಯಾರು ಮಾಡುವ ಕುಶಲಕರ್ಮಿಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ವಿಷಜಂತುಗಳೊಡನೆ ಕೆಲಸ ಮಾಡುವವರು ಎಚ್ಚರ ವಹಿಸುವುದು ಅಗತ್ಯ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆಯನ್ನು ಕಾಣಬಹುದು. ಅಪೇಕ್ಷಿತ ನಿವೇಶನ ಖರೀದಿಗಾಗಿ ಸಾಲಸೌಲಭ್ಯಗಳು ದೊರೆಯುತ್ತವೆ. ಕಚೇರಿ ಕೆಲಸದ ಮೇಲೆ ದೂರ ಪ್ರಯಾಣ ಮಾಡಬೇಕಾಗಬಹುದು.

ಕನ್ಯಾ ರಾಶಿ:
ರಕ್ತಸಂಬಂಧಿಗಳ ಸಹಾಯದಿಂದ ಕೆಲವು ಆರ್ಥಿಕ ಮುಗ್ಗಟ್ಟುಗಳನ್ನು ಪರಿಹಾರ ಮಾಡಿಕೊಳ್ಳುವಿರಿ. ಉದ್ಯೋಗದಲ್ಲಿ ಅತಿಯಾದ ಒತ್ತಡಗಳನ್ನು ಎದುರಿಸಬೇಕಾಗಬಹುದು. ತಾಳ್ಮೆಯಿಂದ ಇದ್ದಲ್ಲಿ ನಿಮಗೆ ಅನುಕೂಲವಾಗುತ್ತದೆ. ಯಾರ ಮೇಲೆಯೂ ಅತಿಯಾದ ನಂಬಿಕೆ ಇಡುವುದು ಒಳಿತಲ್ಲ. ಮಕ್ಕಳ ಪ್ರಗತಿಗಾಗಿ ಸಾಕಷ್ಟು ಶ್ರಮವಹಿಸುವಿರಿ. ಯಾರನ್ನೋ ನಿಂದಿಸಲು ಹೋಗಿ ಎಲ್ಲರ ಮುಂದೆ ನೀವೇ ಸಣ್ಣವರು ಆಗುವ ಸಂದರ್ಭವಿದೆ. ಅತಿಯಾದ ಆತ್ಮವಿಶ್ವಾಸ ನಿಮ್ಮನ್ನು ಈ ವಾರ ಬಾಧಿಸಬಹುದು. ಮೂಳೆ ಅಥವಾ ನರದೌರ್ಬಲ್ಯಗಳ ತೊಂದರೆ ಇರುವವರು ಚಿಕಿತ್ಸೆ ಪಡೆಯುವುದು ಉತ್ತಮ. ದಿನಸಿ ವ್ಯಾಪಾರಿಗಳಿಗೆ ಹೆಚ್ಚು ವ್ಯಾಪಾರವಾಗುತ್ತದೆ. ತನ್ಮೂಲಕ ಅವರ ಆದಾಯ ಹೆಚ್ಚುತ್ತದೆ. ಹಣದ ಒಳಹರಿವು ಸಾಮಾನ್ಯ ಸ್ಥಿತಿಯಲ್ಲಿ ಇರುತ್ತದೆ.

ತುಲಾ ರಾಶಿ:
ಕ್ರೀಡಾಪಟುಗಳಿಗೆ ಉತ್ತಮ ಅವಕಾಶ ದೊರೆಯುತ್ತದೆ. ಕಳೆದುಕೊಂಡಿದ್ದ ಗೌರವ ಸ್ಥಾನ ಪುನಃ ದೊರೆಯುತ್ತವೆ. ನ್ಯಾಯಾಲಯದಲ್ಲಿನ ತೀರ್ಪು ನಿಧಾನವಾಗುವ ಸಾಧ್ಯತೆಗಳಿವೆ. ಮಹಿಳೆಯರಿಗೆ ರಾಜಕೀಯ ಪಕ್ಷಗಳಲ್ಲಿ ಯಶಸ್ಸು ದೊರೆಯುತ್ತದೆ. ಆರ್ಥಿಕ ಸ್ಥಿತಿಯು ಸಾಮಾನ್ಯ ಮಟ್ಟದಲ್ಲಿ ಇರುತ್ತದೆ. ಸಾಹಿತಿಗಳಿಗೆ ಮತ್ತು ಬರಹಗಾರರಿಗೆ ಶುಭಸಂದೇಶ ಬರುತ್ತದೆ. ಖರೀದಿ ಮತ್ತು ಮಾರಾಟ ವ್ಯವಹಾರ ಮಾಡುವವರಿಗೆ ಲಾಭ ಹೆಚ್ಚುತ್ತದೆ. ಕಟ್ಟಡ ನಿರ್ಮಾಣ ಮಾಡುವವರಿಗೆ ಯಶಸ್ಸು ಇರುತ್ತದೆ. ಮಕ್ಕಳು ನಿಮ್ಮ ವಿರುದ್ಧ ತಿರುಗಿಬೀಳುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಸಾಮಾನ್ಯ ಪ್ರಗತಿ ಇರುತ್ತದೆ. ವಿದೇಶದಲ್ಲಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿರುವವರಿಗೆ ಹೊಸ ಶಾಖೆಗಳನ್ನು ತೆರೆಯುವ ಅವಕಾಶವಿರುತ್ತದೆ.

ವೃಶ್ಚಿಕ ರಾಶಿ:
ಬಹುದಿನಗಳ ನಂತರ ಸಂಗಾತಿಯೊಡನೆ ವಿಹಾರಕ್ಕಾಗಿ ಹೋಗಿಬರುವ ಸಾಧ್ಯತೆಗಳಿವೆ. ಹಣದ ಒಳಹರಿವು ತೃಪ್ತಿದಾಯಕವಾಗಿ ಇರುತ್ತದೆ. ಹಿರಿಯ ಅಧಿಕಾರಿಗಳು ತಮ್ಮ ಕರ್ತವ್ಯದಲ್ಲಿ ಸರಿಯಾಗಿ ನಡೆದುಕೊಳ್ಳುವುದು ಬಹಳ ಉತ್ತಮ. ಸಾಮಾಜಿಕ ಕಾರ್ಯಗಳನ್ನು ಮಾಡುವ ಮಹಿಳೆಯರಿಗೆ ಗೌರವ ದೊರೆಯುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚು ಹಣ ವಿನಿಯೋಗಿಸುವಿರಿ. ಮಕ್ಕಳಿಗಾಗಿ ಹೊಸ ವಸ್ತ್ರಗಳನ್ನು ಖರೀದಿ ಮಾಡುವಿರಿ. ಸಂಗಾತಿಯ ಆದಾಯದಲ್ಲಿ ಸಾಕಷ್ಟು ಏರಿಕೆಯನ್ನು ಕಾಣಬಹುದು. ಅನಿರೀಕ್ಷಿತವಾಗಿ ಒಂದು ವ್ಯವಹಾರದಲ್ಲಿ ಹೂಡಿದ್ದ ಹಣ ಸಾಕಷ್ಟು ಲಾಭಗಳಿಸುತ್ತದೆ. ಕುಟುಂಬ ವ್ಯವಹಾರವನ್ನು ಮಾಡುತ್ತಿರುವವರು ಹಣ ಸೋರಿಕೆಯ ಬಗ್ಗೆ ಎಚ್ಚರವಹಿಸಿರಿ. ಆರೋಗ್ಯದ ಬಗ್ಗೆ ಗಮನ ಹರಿಸಿರಿ.

ಧನಸ್ಸು ರಾಶಿ:
ನಿಮಗೆ ಎದುರಾಗುವ ಸಮಸ್ಯೆಗಳನ್ನು ಸಮಾಧಾನವಾಗಿ ಸ್ವೀಕರಿಸಿರಿ. ಸೌಂದರ್ಯ ವರ್ಧಕಗಳನ್ನು ತಯಾರಿಸಿ ಮಾರುವವರಿಗೆ ಹೆಚ್ಚು ಮಾರಾಟವಾಗುತ್ತದೆ. ರಾಜಕೀಯ ವ್ಯಕ್ತಿಗಳಿಗೆ ಗಂಭೀರವಾಗಿ ಚಿಂತನೆ ಮಾಡುವ ಕಾಲ. ಕೃಷಿ ಕ್ಷೇತ್ರದಲ್ಲಿ ದುಡಿಯುವವರಿಗೆ ಹೆಚ್ಚು ಸಂಪಾದನೆಯಾಗುತ್ತದೆ. ಚಿಲ್ಲರೆ ವ್ಯಾಪಾರ ಮಾಡುವವರಿಗೆ ಹೆಚ್ಚು ವ್ಯವಹಾರ ನಡೆದು ಲಾಭ ಬರುತ್ತದೆ. ಕೋರ್ಟು-ಕಚೇರಿ ವಿಚಾರಗಳಲ್ಲಿ ಸ್ವಲ್ಪಮಟ್ಟಿನ ಯಶಸ್ಸನ್ನು ಕಾಣಬಹುದು. ವಿದೇಶಿ ವ್ಯವಹಾರಸ್ಥರ ಪರಿಚಯದಿಂದಾಗಿ ವ್ಯವಹಾರಕ್ಕೆ ಒಂದು ಉತ್ತಮ ತಿರುವು ಬರುತ್ತದೆ. ಸರ್ಕಾರಿ ತೆರಿಗೆ ತಜ್ಞರಿಗೆ ಬಿಡುವಿಲ್ಲದ ಕೆಲಸವಿರುತ್ತದೆ. ತಿಜೋರಿಯ ಬೀಗದ ಕೈಗಳನ್ನು ಜತನವಾಗಿ ಕಾಪಾಡಿಕೊಳ್ಳಿರಿ, ಕಳೆದುಹೋಗುವ ಸಾಧ್ಯತೆಗಳಿವೆ.

ಮಕರ ರಾಶಿ:
ವೈಯಕ್ತಿಕ ಕೆಲಸಗಳಲ್ಲಿ ಹೆಚ್ಚು ಯಶಸ್ಸನ್ನು ಕಾಣಬಹುದು. ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ವೃತ್ತಿಯಲ್ಲಿ ಯಶಸ್ಸು ಸಿಗುತ್ತದೆ ಹಾಗೂ ಉತ್ತಮ ಗೌರವ ದೊರೆಯುತ್ತದೆ. ಕುಟುಂಬದ ವ್ಯವಹಾರಗಳಲ್ಲಿ ಅಭಿವೃದ್ಧಿ ಇರುತ್ತದೆ. ರಾಜಕೀಯ ನಾಯಕರಿಗೆ ಹಿರಿಯ ನಾಯಕರೊಡನೆ ಉತ್ತಮ ಸಂಪರ್ಕ ದೊರೆಯುತ್ತದೆ. ಹಿರಿಯರಿಗೆ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಆರೋಗ್ಯ ವ್ಯತ್ಯಾಸ ಕಾಣಬಹುದು. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಹೆಚ್ಚಿನ ಯಶಸ್ಸು ಇರುತ್ತದೆ. ಕೋರ್ಟ್ ಕಚೇರಿ ಸಂಬಂಧಿತ ಕೆಲಸಗಳಲ್ಲಿ ಯಶಸ್ಸು ಇರುತ್ತದೆ. ಕೃಷಿ ಆಧಾರಿತ ಕೈಗಾರಿಕೆಯನ್ನು ನಡೆಸುವವರಿಗೆ ಅಭಿವೃದ್ಧಿ ಇರುತ್ತದೆ.

ಕುಂಭ ರಾಶಿ:
ಸಮಾಜದ ಒಳಿತಿಗಾಗಿ ನೀವು ಮಾಡಿದ ಕೆಲಸಗಳು ಸಾಕಷ್ಟು ಫಲವನ್ನು ಕೊಡುತ್ತವೆ. ನಿವೇಶನ ಅಥವಾ ಸ್ಥಿರಾಸ್ತಿಯನ್ನು ಖರೀದಿ ಮಾಡುವ ಯೋಗವಿದೆ. ದಿನನಿತ್ಯದ ವ್ಯವಹಾರಗಳು ಎಂದಿನಂತೆ ನಡೆಯಲಿವೆ. ಆರ್ಥಿಕ ಸ್ಥಿತಿಯು ನಿಮ್ಮ ನಿರೀಕ್ಷೆಯಷ್ಟು ಇದ್ದೇ ಇರುತ್ತದೆ. ವಿದ್ಯಾರ್ಥಿಗಳಿಗೆ ಸಾಮಾನ್ಯವಾದ ಯಶಸ್ಸು ಇರುತ್ತದೆ. ಉದ್ದಿಮೆದಾರರು ಯಂತ್ರೋಪಕರಣಗಳ ಖರೀದಿಗಾಗಿ ಬಂಡವಾಳವನ್ನು ಹೂಡುವರು. ಸಾಲ ನೀಡುವುದು, ಜಾಮೀನು ಕೊಡುವುದು ಸಂಕಷ್ಟಕ್ಕೆ ದಾರಿಯಾಗಬಹುದು. ಸಾರಿಗೆ ವ್ಯವಸ್ಥೆಯನ್ನು ನಡೆಸುತ್ತಿರುವವರಿಗೆ ಹೆಚ್ಚು ಆದಾಯ ಬರುತ್ತದೆ. ಕೃಷಿಕರ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತದೆ ಮತ್ತು ನವೀನ ರೀತಿಯ ಕೃಷಿಯನ್ನು ಅಳವಡಿಸಿಕೊಳ್ಳಲು ಆಸಕ್ತಿಯನ್ನು ತೋರುವಿರಿ. ಹಣಕಾಸಿನ ಸಂಸ್ಥೆಗಳನ್ನು ನಡೆಸುವವರಿಗೆ ಅಭಿವೃದ್ಧಿ ಇರುತ್ತದೆ.

ಮೀನ ರಾಶಿ:
ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಸಾಕಷ್ಟು ಯಶಸ್ಸು ಇರುತ್ತದೆ. ಹಣದ ಒಳಹರಿವು ಉತ್ತಮವಾಗಿರುತ್ತದೆ. ಒಡಹುಟ್ಟಿದವರಿಂದ ನಿಮ್ಮ ಅಪೇಕ್ಷೆಯ ಸಹಾಯಗಳು ದೊರೆಯುತ್ತವೆ. ಮಹಿಳೆಯರಿಗೆ ಸಾಮಾಜಿಕ ಸ್ಥಾನಮಾನ ದೊರಕುವ ಸಾಧ್ಯತೆ ಇದೆ. ಲೇವಾದೇವಿ ವ್ಯವಹಾರವನ್ನು ಮಾಡುವವರಿಗೆ ನಿರೀಕ್ಷಿತ ಆದಾಯ ಬರುತ್ತದೆ. ನಿಮ್ಮ ಸಹೋದ್ಯೋಗಿಗಳೊಡನೆ ಉತ್ತಮ ಸಹಕಾರವನ್ನು ಇಟ್ಟುಕೊಂಡಲ್ಲಿ ಉದ್ಯೋಗ ಸ್ಥಳದಲ್ಲಿ ನಿರೀಕ್ಷಿತ ಯಶಸ್ಸನ್ನು ಖಂಡಿತ ಕಾಣಬಹುದು. ಇನ್ನೊಬ್ಬರ ಬಗ್ಗೆ ಹಗುರವಾದ ಮಾತನಾಡುವ ಬದಲು ತೂಕವಾದ ಮಾತನಾಡಿ ಗೌರವ ಪಡೆಯಬಹುದು. ಮೂಳೆ ಸಂಬಂಧಿತ ನೋವು ಸ್ವಲ್ಪ ಹೆಚ್ಚಬಹುದು.

Leave a Comment

Your email address will not be published. Required fields are marked *