Ad Widget .

ಹಿಂದೂಗಳ ಬಗ್ಗೆ ಮಾತನಾಡುವ ಮೊದಲು ಎಚ್ಚರವಿರಲಿ – ಯಶಪಾಲ್ ಸುವರ್ಣ

ಸಮಗ್ರ ನ್ಯೂಸ್: ಮಂಗಳೂರು ಮಳಲಿ ಮಸೀದಿ ವಿವಾದ ಕುರಿತು ಎಸ್​ಡಿಪಿಐ ಮುಖಂಡ ಹೇಳಿಕೆಗೆ ಯಶ್ಪಾಲ್ ಸುವರ್ಣ ತಿರುಗೇಟು ಕೊಟ್ಟಿದ್ದು, ಎಸ್​ಡಿಪಿಐ ತನ್ನ ಅಂತಿಮಯಾತ್ರೆಯ ಸಭಾ ಕಾರ್ಯಕ್ರಮ ಮಾಡಿದೆ. ಆ ಕಾರ್ಯಕ್ರಮದಲ್ಲಿ ಎಸ್​ಡಿಪಿಐ ಗೂಂಡಾಗಳು ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಹಿಂದುಗಳ ಬಗ್ಗೆ ಮಾತನಾಡುವ ಮೊದಲು ಎಚ್ಚರ ವಹಿಸಿ ಎಂದು ಹೇಳಿದ್ದಾರೆ

Ad Widget . Ad Widget .

ಈ ಬಗ್ಗೆ ಉಡುಪಿಯಲ್ಲಿ ಮಾತನಾಡಿದ ಯಶ್ಪಾಲ್ ಸುವರ್ಣ ಎಲ್ಲಾ ಮತಗಳು ಹಿಂದೂ ಸಂಸ್ಕೃತಿಯ ಹಿನ್ನೆಲೆಯಿಂದಲೇ ಬೆಳೆದುಬಂದಿವೆ. ಮಳಲಿಯ ಮಸೀದಿ ಆದರೂ ಹಿಂದುಗಳ ಧಾರ್ಮಿಕ ಕ್ಷೇತ್ರ. ನಿನ್ನೆ ಯಾರೋ ಒಬ್ಬ ಒಂದು ಹಿಡಿ ಮಣ್ಣು ಕೂಡ ಬಿಡುವುದಿಲ್ಲ ಎಂದಿದ್ದಾನೆ. ಹಿಂದುಗಳು ಮನಸ್ಸು ಮಾಡಿದರೆ ನೀವೆಲ್ಲ ನಾಮ ಹಾಕಿಕೊಂಡು ಕೇಸರಿ ಶಾಲು ಧರಿಸಿ ಓಡಾಡಬೇಕಾಗುತ್ತದೆ. ನೀವು ಒಂದು ಹಿಡಿ ಮಣ್ಣು ಕೊಡುವುದಲ್ಲ ನಿಮ್ಮಿಂದಲೇ ನಮ್ಮ ದೇವಸ್ಥಾನಗಳಿಗೆ ಮಣ್ಣು ಹೊರಿಸುತ್ತೇವೆ. ಈ ರೀತಿಯ ಹಾಸ್ಯಾಸ್ಪದ ಹೇಳಿಕೆ ಕೊಡುವುದನ್ನು ನಿಲ್ಲಿಸಿದರೆ ಉತ್ತಮ, ಇಲ್ಲದಿದ್ದರೆ ನಿಮ್ಮ ಸಮುದಾಯದಲ್ಲಿರುವ ಅಮಾಯಕ ಜನರು ಕೂಡ ಇದಕ್ಕೆ ಬೆಲೆ ತೆರಬೇಕಾಗಬಹುದು ಎಂದು ಹೇಳಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *