ಸಮಗ್ರ ನ್ಯೂಸ್: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಮಣ್ಣಗುಂಡಿ ಎಂಬಲ್ಲಿ ಕಾರು ಮತ್ತು ಟಿಪ್ಪರ್ ಢಿಕ್ಕಿ ಹೊಡೆದು ಕಾರು ಚಾಲಕ ನೆಲ್ಸನ್ (42) ಸಾವನ್ನಪ್ಪಿ ಇನ್ನೋರ್ವ ಪ್ರಯಾಣಿಕ ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ಸಾಯಂಕಾಲ ಸಂಭವಿಸಿದೆ.
ಪೆರಿಯಶಾಂತಿ ಕಡೆಯಿಂದ ನೆಲ್ಯಾಡಿಯತ್ತ ಸಂಚರಿಸುತ್ತಿದ್ದ ಕಾರು ಕಲ್ಲಿದ್ದಲು ಸಾಗಾಟದ ಲಾರಿಯನ್ನು ಹಿಂದಿಕ್ಕುವ ಭರದಲ್ಲಿ ಎದುರುಗಡೆಯಿಂದ ಬಂದ ಟಿಪ್ಪರ್ ಲಾರಿಗೆ ಢಿಕ್ಕಿ ಹೊಡೆಯಿತು.
ಪರಿಣಾಮ ಕಾರು ಚಾಲಕ ನೆಲ್ಸನ್ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದರು. ಕಾರಿನಲ್ಲಿದ್ದ ಪ್ರಯಾಣಿಕ ಫೆಲಿಕ್ಸ್ ಅವರಿಗೂ ಗಂಭೀರ ಗಾಯಗಳಾಗಿದ್ದು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ನೆಲ್ಸನ್ ಹಾಗೂ ಗಾಯಾಳು ಫೆಲಿಕ್ಸ್ ಶಿರಾಡಿ ಪರಿಸರದ ನಿವಾಸಿಗರು ಎಂದು ತಿಳಿದುಬಂದಿದೆ.